Sign In

By signing in or creating an account, you agree with Associated Broadcasting Company's Terms & Conditions and Privacy Policy.

Vivekananda Reddy Murder Case: ಸಿಬಿಐನಿಂದ ಆಂಧ್ರ ಸಿಎಂ ಜಗನ್​ಮೋಹನ್​ ರೆಡ್ಡಿ ಚಿಕ್ಕಪ್ಪನ ಬಂಧನ

ಮಾಜಿ ಸಂಸದ ವಿವೇಕಾನಂದರೆಡ್ಡಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್​ಮೋಹನ್​ ರೆಡ್ಡಿ (Jaganmohan Reddy) ಅವರ ಚಿಕ್ಕಪ್ಪ ಭಾಸ್ಕರ್​ ರೆಡ್ಡಿ( Bhaskar Reddy) ಯವರನ್ನು ಬಂಧಿಸಲಾಗಿದೆ.

Vivekananda Reddy Murder Case: ಸಿಬಿಐನಿಂದ ಆಂಧ್ರ ಸಿಎಂ ಜಗನ್​ಮೋಹನ್​ ರೆಡ್ಡಿ ಚಿಕ್ಕಪ್ಪನ ಬಂಧನ
ಭಾಸ್ಕರ್ ರೆಡ್ಡಿ
Follow us
ನಯನಾ ರಾಜೀವ್
|

Updated on: Apr 16, 2023 | 11:26 AM

ಮಾಜಿ ಸಂಸದ ವಿವೇಕಾನಂದರೆಡ್ಡಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್​ಮೋಹನ್​ ರೆಡ್ಡಿ (Jaganmohan Reddy) ಅವರ ಚಿಕ್ಕಪ್ಪ ಭಾಸ್ಕರ್​ ರೆಡ್ಡಿ( Bhaskar Reddy) ಯವರನ್ನು ಬಂಧಿಸಲಾಗಿದೆ. ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣದಲ್ಲಿ ವೈಎಸ್​ಆರ್​ಪಿ ಕಡಪ ಸಂಸದ ವೈ.ಎಸ್ ಅವಿನಾಶ್ ರೆಡ್ಡಿ ಅವರ ತಂದೆ ಭಾಸ್ಕರ್ ರೆಡ್ಡಿಯವರನ್ನು ಸಿಬಿಐ ಬಂಧಿಸಿದೆ. 2019ರ ಮಾರ್ಚ್‌ 15 ರಂದು ವಿವೇಕಾನಂದ ರೆಡ್ಡಿ ಆಂಧ್ರಪ್ರದೇಶದ ಪುಲಿವೆಂದುಲದಲ್ಲಿರುವ ತಮ್ಮ ನಿವಾಸದಲ್ಲೇ ಹತ್ಯೆಯಾಗಿದ್ದರು. ರಾಜ್ಯ ವಿಧಾನಸಭಾ ಚುನಾವಣೆಗೂ ಕೆಲ ದಿನಗಳ ಹಿಂದೆ ಈ ಘಟನೆ ನಡೆದಿತ್ತು.

ರಾಜ್ಯದ ಅಪರಾಧ ತನಿಖಾ ದಳದ ವಿಶೇಷ ತನಿಖಾ ತಂಡ ಈ ಪ್ರಕರಣದ ಪ್ರಾಥಮಿಕ ವಿಚಾರಣೆ ನಡೆಸಿತ್ತು. ನಂತರ 2020ರ ಜುಲೈನಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಭಾಸ್ಕರ್ ರೆಡ್ಡಿ ಅವರ ಬಂಧನ 48 ಗಂಟೆಗಳಲ್ಲಿ ಸಿಬಿಐ ಬಂಧಿಸಿದ ಎರಡನೇ ವ್ಯಕ್ತಿ ಇವರಾಗಿದ್ದಾರೆ. ಕಡಪ ಸಂಸದ ವೈಎಸ್ ಅವಿನಾಶ್ ರೆಡ್ಡಿ ಅವರ ಆಪ್ತ ಗಜ್ಜಲ ಉದಯ್ ಕುಮಾರ್ ರೆಡ್ಡಿ ಅವರನ್ನು ಸಿಬಿಐ ಶುಕ್ರವಾರ ಬಂಧಿಸಿದ್ದರು.

ಭಾನುವಾರ ಬೆಳಗ್ಗೆ ಎರಡು ವಾಹನಗಳಲ್ಲಿ ಪುಲಿವೆಂದುಲದಲ್ಲಿರುವ ಭಾಸ್ಕರ್ ರೆಡ್ಡಿ ಅವರ ನಿವಾಸಕ್ಕೆ ಆಗಮಿಸಿದ ಸಿಬಿಐ ಅಧಿಕಾರಿಗಳು ಭಾಸ್ಕರ್ ರೆಡ್ಡಿಯನ್ನು ವಶಕ್ಕೆ ಪಡೆದು ಅವರ ಕುಟುಂಬ ಸದಸ್ಯರಿಗೆ ಅರೆಸ್ಟ್​ ವಾರೆಂಟ್​ ಅನ್ನು ನೀಡಿದೆ.

ಮತ್ತಷ್ಟು ಓದಿ: Jagan Mohan Reddy: ಆಂಧ್ರ ಸಿಎಂ ಜಗನ್​ಮೋಹನ್​ ರೆಡ್ಡಿ ಪೋಸ್ಟರ್​ ಹರಿದಿದ್ದಕ್ಕೆ ನಾಯಿ ವಿರುದ್ಧ ದೂರು ದಾಖಲು

ಭಾಸ್ಕರ್ ರೆಡ್ಡಿ ಬಂಧನದ ವಿಷಯ ತಿಳಿಯುತ್ತಿದ್ದಂತೆ ವೈಎಸ್​ಆರ್​ಪಿ ಕಾರ್ಯಕರ್ತರು ಹಾಗೂ ಸಂಸದರ ಅನುಯಾಯಿಗಳು ಅವರ ನಿವಾಸದೆದುರು ಜಮಾಯಿಸಿದ್ದರು.

ಸಿಬಿಐ ಚಾರ್ಜ್‌ಶೀಟ್ ಪ್ರಕಾರ, ಕೊಲೆಯಾದ ವಿವೇಕಾನಂದ ರೆಡ್ಡಿ ಅವರು ಕಡಪಾ ಲೋಕಸಭೆಯಿಂದ ಹಾಲಿ ಸಂಸದನಾಗಿರುವ ಅವಿನಾಶ್ ರೆಡ್ಡಿ ಬದಲಿಗೆ ತನಗೆ ಅಥವಾ ವೈಎಸ್ ಶರ್ಮಿಳಾ ಅಥವಾ ವೈಎಸ್ ವಿಜಯಮ್ಮ ಅವರಿಗೆ ಟಿಕೆಟ್ ಬಯಸಿದ್ದರು.  ವಿವೇಕಾನಂದರೆಡ್ಡಿ ಆಂಧ್ರಪ್ರದೇಶದ ದಿ. ಮುಖ್ಯಮಂತ್ರಿ ವೈಎಸ್ ರಾಜಶೇಖರ ರೆಡ್ಡಿ ಅವರ ಸಹೋದರ ಹಾಗೂ ಹಾಲಿ ಆಂಧ್ರ ಸಿಎಂ ಜಗನ್​ಮೋಹನ್ ರೆಡ್ಡಿ ಅವರ ಚಿಕ್ಕಪ್ಪ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

KSRTC ಬಸ್​​ನಲ್ಲಿ ಅಕ್ರಮ ಗೋಮಾಂಸ ಸಾಗಿಸುತ್ತಿದ್ದ ಶಕೀರಾ ವಶಕ್ಕೆ
KSRTC ಬಸ್​​ನಲ್ಲಿ ಅಕ್ರಮ ಗೋಮಾಂಸ ಸಾಗಿಸುತ್ತಿದ್ದ ಶಕೀರಾ ವಶಕ್ಕೆ
ಇಂಜಿನಿಯರಿಂಗ್​​ಗೆ ಯಾವ ಕಾಲೇಜು, ಯಾವ ಕೋರ್ಸ್ ಬೆಸ್ಟ್?
ಇಂಜಿನಿಯರಿಂಗ್​​ಗೆ ಯಾವ ಕಾಲೇಜು, ಯಾವ ಕೋರ್ಸ್ ಬೆಸ್ಟ್?
ಮಾಜಿ ಪ್ರಧಾನಿಯ ಮಗನಾಗಿ ಸರ್ಕಾರಿ ಜಮೀನು ಒತ್ತುವರಿ ಮಾಡ್ತೀನಾ? ಕುಮಾರಸ್ವಾಮಿ
ಮಾಜಿ ಪ್ರಧಾನಿಯ ಮಗನಾಗಿ ಸರ್ಕಾರಿ ಜಮೀನು ಒತ್ತುವರಿ ಮಾಡ್ತೀನಾ? ಕುಮಾರಸ್ವಾಮಿ
ಪಂದ್ಯವಾಡು ಫೈನ್ ಕಟ್ಟು: ಬ್ಯಾಕ್ ಟು ಬ್ಯಾಕ್ ದಂಡ ಕಟ್ಟಿದ ದಿಗ್ವೇಶ್ ರಾಠಿ
ಪಂದ್ಯವಾಡು ಫೈನ್ ಕಟ್ಟು: ಬ್ಯಾಕ್ ಟು ಬ್ಯಾಕ್ ದಂಡ ಕಟ್ಟಿದ ದಿಗ್ವೇಶ್ ರಾಠಿ
ಪೊಲೀಸರನ್ನು ಸ್ವತಂತ್ರವಾಗಿ ಕೆಲಸ ಮಾಡಲು ಬಿಡಿ: ಪ್ರತಾಪ್ ಸಿಂಹ
ಪೊಲೀಸರನ್ನು ಸ್ವತಂತ್ರವಾಗಿ ಕೆಲಸ ಮಾಡಲು ಬಿಡಿ: ಪ್ರತಾಪ್ ಸಿಂಹ
ಗ್ಲೋಬಲ್ ಕನ್ನಡಿಗನಿಗೆ ಯೂಟ್ಯೂಬ್​ನಿಂದ ಬರ್ತಿರೋದೆಷ್ಟು?
ಗ್ಲೋಬಲ್ ಕನ್ನಡಿಗನಿಗೆ ಯೂಟ್ಯೂಬ್​ನಿಂದ ಬರ್ತಿರೋದೆಷ್ಟು?
ಹಾರ್ದಿಕ್ ಪಾಂಡ್ಯ ನಿರ್ಧಾರಕ್ಕೆ ಅಸಮಾಧಾನ ಹೊರಹಾಕಿದ ಸೂರ್ಯಕುಮಾರ್ ಯಾದವ್
ಹಾರ್ದಿಕ್ ಪಾಂಡ್ಯ ನಿರ್ಧಾರಕ್ಕೆ ಅಸಮಾಧಾನ ಹೊರಹಾಕಿದ ಸೂರ್ಯಕುಮಾರ್ ಯಾದವ್
ಪೊಲೀಸರಿಗೆ ದೂರು ನೀಡುವುದು ಸಹ ಗೊತ್ತಿರದ ಮಹಿಳೆಯ ಕುಟುಂಬ
ಪೊಲೀಸರಿಗೆ ದೂರು ನೀಡುವುದು ಸಹ ಗೊತ್ತಿರದ ಮಹಿಳೆಯ ಕುಟುಂಬ
ನಿವೇದಿತಾ ಕಥೆ ಕೇಳಿ ಗಟ್ಟಿ ಮನಸ್ಸಿನ ವ್ಯಕ್ತಿಗಳ ಕಣ್ಣಲ್ಲೂ ಬಂತು ನೀರು
ನಿವೇದಿತಾ ಕಥೆ ಕೇಳಿ ಗಟ್ಟಿ ಮನಸ್ಸಿನ ವ್ಯಕ್ತಿಗಳ ಕಣ್ಣಲ್ಲೂ ಬಂತು ನೀರು
ಶಿವನಿಗೆ ಪೂಜಾ ಸಮಯದಲ್ಲಿ ಇಡಬಾರದ ವಸ್ತು ಯಾವುದು ಗೊತ್ತಾ?
ಶಿವನಿಗೆ ಪೂಜಾ ಸಮಯದಲ್ಲಿ ಇಡಬಾರದ ವಸ್ತು ಯಾವುದು ಗೊತ್ತಾ?