Mann Ki Baat: ಪ್ರಧಾನಿ ಮೋದಿ ಮನ್ ಕೀ ಬಾತ್ ರೇಡಿಯೋ ಟಾಕ್ ಶೋ ಇಂದು

PM Narendra Modi Radio Talk Show- ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಪ್ರಧಾನಿಯಾದ ವರ್ಷದಲ್ಲೇ ಮನ್ ಕೀ ಬಾತ್ ಕಾರ್ಯಕ್ರಮ ಆರಂಭಿಸಿದರು. 2014 ಅಕ್ಟೋಬರ್ 3ರಂದು ಮನ್ ಕೀ ಬಾತ್​ನ ಮೊದಲ ಎಪಿಸೋಡ್ ಪ್ರಸಾರವಾಯಿತು. ಇವತ್ತು ನಡೆಯಲಿರುವುದು 97ನೇ ಕಾರ್ಯಕ್ರವಾಗಲಿದೆ.

Mann Ki Baat: ಪ್ರಧಾನಿ ಮೋದಿ ಮನ್ ಕೀ ಬಾತ್ ರೇಡಿಯೋ ಟಾಕ್ ಶೋ ಇಂದು
ನರೇಂದ್ರ ಮೋದಿImage Credit source: narendramodi.in
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on:Jan 29, 2023 | 8:02 AM

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯ ರೇಡಿಯೋ ಟಾಕ್ ಶೋ ಎನಿಸಿರುವ ಮನ್ ಕೀ ಬಾತ್ ಕಾರ್ಯಕ್ರಮ (Mann Ki Baat) ಇಂದು ನಡೆಯಲಿದೆ. ಇಂದು ಭಾನುವಾರ ಬೆಳಗ್ಗೆ 11 ಗಂಟೆಗೆ ಆಕಾಶವಾಣಿ, ದೂರದರ್ಶನದಲ್ಲಿ ಇದು ಪ್ರಸಾರವಾಗಲಿದೆ. ಆಲ್ ಇಂಡಿಯಾ ರೇಡಿಯೋದ ನ್ಯೂಸ್ ವೆಬ್ ಸೈಟ್ (AIR News Website), ನ್ಯೂಸ್ ಆನ್ ಏರ್ ಮೊಬೈಲ್ ಆ್ಯಪ್​ನಲ್ಲೂ (Newsonair Mobile App) ಕಾರ್ಯಕ್ರಮವನ್ನು ವೀಕ್ಷಿಸಬಹುದು. ಅಲ್ಲದೇ ಎಐಆರ್ ನ್ಯೂಸ್, ಡಿಡಿ ನ್ಯೂಸ್, ಪಿಎಂಒ ಮತ್ತು ಐಬಿ ಸಚಿವಾಲಯಗಳ ಯೂಟ್ಯೂಬ್ ವಾಹಿನಿಗಳಲ್ಲೂ ಮನ್ ಕೀ ಬಾತ್ ಕಾರ್ಯಕ್ರಮದ ನೇರ ವೀಕ್ಷಣೆ ಮಾಡಬಹುದು.

ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಪ್ರಧಾನಿಯಾದ ವರ್ಷದಲ್ಲೇ ಮನ್ ಕೀ ಬಾತ್ ಕಾರ್ಯಕ್ರಮ ಆರಂಭಿಸಿದರು. 2014 ಅಕ್ಟೋಬರ್ 3ರಂದು ಮನ್ ಕೀ ಬಾತ್​ನ ಮೊದಲ ಎಪಿಸೋಡ್ ಪ್ರಸಾರವಾಯಿತು. ಇವತ್ತು ನಡೆಯಲಿರುವುದು (Mann ki Baat 97th Episode) 97ನೇ ಕಾರ್ಯಕ್ರವಾಗಲಿದೆ. ಮನ್ ಕೀ ಬಾತ್ ಕಾರ್ಯಕ್ರಮದ ಮೂಲಕ ಪ್ರಧಾನಿಗಳು ತಮ್ಮ ಮನದಾಳದ ಮಾತುಗಳನ್ನು ಆಡುವುದಿದೆ. ಅಲ್ಲದೇ, ದೇಶದ ಕೆಲ ಎಲೆಮರೆಕಾಯಿಯಂಥ ವ್ಯಕ್ತಿತ್ವಗಳನ್ನು ಗುರುತಿಸಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾರೆ.

ಇಂದು ಬೆಳಗ್ಗೆ 11 ಗಂಟೆಗೆ ಪ್ರಧಾನಿಗಳು ಹಿಂದಿಯಲ್ಲಿ ಭಾಷಣ ಮಾಡುತ್ತಾರೆ. ಆ ಬಳಿಕ ಪ್ರಾದೇಶಿಕ ಭಾಷೆಗಳಲ್ಲಿ ಅದರ ಅನುವಾದವಾಗಿ ಪ್ರಸಾರ ಆಗುತ್ತದೆ.

100ನೇ ಆವೃತ್ತಿಗೆ ಲೋಗೋ ಮತ್ತು ಜಿಂಗಲ್

ಇದೇ ವೇಳೆ, ಏಪ್ರಿಲ್ 30ರಂದು ಪ್ರಸಾರವಾಗಲಿರುವ 100ನೇ ಎಪಿಸೋಡ್​ನ ಮನ್ ಕೀ ಬಾತ್ ಕಾರ್ಯಕ್ರಮಕ್ಕೆ ವಿಶೇಷ ಮೆರಗು ಕೊಡುವ ಯೋಜನೆ ಇದೆ. ಆ ವಿಶೇಷ ಎಪಿಸೋಡ್​ಗಾಗಿ ಲೋಗೋ ಮತ್ತು ಜಿಂಗಲ್​ಗಳನ್ನು (Logo and Jingles) ಮಾಡಿಕೊಡುವಂತೆ ಸಾರ್ವತ್ರಿಕವಾಗಿ ಆಹ್ವಾನ ಕೊಡಲಾಗಿದೆ. ಕೇಂದ್ರ ಸರ್ಕಾರದ ಮೈ ಗವ್ ಡಾಟ್ ಇನ್ ವೆಬ್​ಸೈಟ್​ನಲ್ಲಿ (MyGov.In) ಯಾರು ಬೇಕಾದರೂ ಲೋಗೋ ಮತ್ತು ಜಿಂಗಲ್​ಗಳನ್ನು ಅಪ್​ಲೋಡ್ ಮಾಡಬಹುದು. ಲೋಗೋ ಗಾತ್ರ ಇತ್ಯಾದಿ ವಿವರವನ್ನು ನೀವು ಅದೇ ಜಾಲತಾಣದಲ್ಲಿ ಕಾಣಬಹುದು. ಲೋಗೋಗಳನ್ನು ಸಲ್ಲಿಸಲು ಫೆಬ್ರುವರಿ 1ರ ಒಳಗಾಗಿ ಸಲ್ಲಿಸಬೇಕೆಂದು ಸೂಚಿಸಲಾಗಿದೆ. ಇಲ್ಲಿ ಸೂಕ್ತ ಲೋಗೋಗಳಿಗೆ 1 ಲಕ್ಷ ರೂ ಬಹುಮಾನವೂ ಇದೆ.

ಇನ್ನು, ಜಿಂಗಲ್​ಗಳಿಗೂ (ಸಂಗೀತ ತುಣುಕು) ಅವಕಾಶ ಇದೆ. 25ರಿಂದ 30 ಪದಗಳ ಸ್ಕ್ರಿಪ್ಟ್ ಇರುವ ಜಿಂಗಲ್​ಗಳಾಗಿರಬೇಕು. ಮಾಧುರ್ಯಭರಿತ ಜಿಂಗಲ್​ಗಳು ಆಯ್ಕೆಯಾದರೆ 11,000 ರೂ ಬಹುಮಾನ ನೀಡಲಾಗುತ್ತದೆ. ಸೌಂಡ್ ಕ್ಲೌಡ್, ಯೂಟ್ಯೂಬ್, ಗೂಗಲ್ ಡ್ರೈವ್, ಡ್ರಾಪ್ ಬಾಕ್ಸ್ ಇತ್ಯಾದಿಗೆ ಜಿಂಗಲ್​ನ ಆಡಿಯೋ ಫೈಲ್ ಅಪ್​ಲೋಡ್ ಮಾಡಿ ಅದರ ಲಿಂಕ್ ಅನ್ನು ಫೆಬ್ರುವರಿ 28ರ ಒಳಗಾಗಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.

Published On - 8:02 am, Sun, 29 January 23

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್