ತ್ರಿವಳಿ ತಲಾಖ್ ಅನ್ನು ಬೆಂಬಲಿಸುವವರು ಮುಸ್ಲಿಂ ಹೆಣ್ಣು ಮಕ್ಕಳಿಗೆ ಅನ್ಯಾಯ ಮಾಡುತ್ತಿದ್ದಾರೆ: ಮೋದಿ

ತ್ರಿವಳಿ ತಲಾಖ್ ಅನ್ನು ಇಸ್ಲಾಂಗೆ ಸಂಬಂಧಿಸಿದ್ದು ಆಗಿದ್ದರೆ, ಯಾವುದೇ ಮುಸ್ಲಿಂ ಬಹುಸಂಖ್ಯಾತ ದೇಶವು ಅದನ್ನು ರದ್ದುಗೊಳಿಸುವುದಿಲ್ಲ. ಏಕರೂಪ ನಾಗರಿಕ ಸಂಹಿತೆ (UCC) ಕುರಿತು ಮಾತನಾಡಿದ ಅವರು, ಯುಸಿಸಿ ಹೆಸರಿನಲ್ಲಿ ಜನರನ್ನು ಪ್ರಚೋದಿಸಲಾಗುತ್ತಿದೆ ಎಂದು ಮೋದಿ ಹೇಳಿದ್ದಾರೆ.

ತ್ರಿವಳಿ ತಲಾಖ್ ಅನ್ನು ಬೆಂಬಲಿಸುವವರು ಮುಸ್ಲಿಂ ಹೆಣ್ಣು ಮಕ್ಕಳಿಗೆ ಅನ್ಯಾಯ ಮಾಡುತ್ತಿದ್ದಾರೆ: ಮೋದಿ
ನರೇಂದ್ರ ಮೋದಿ

Updated on: Jun 27, 2023 | 3:29 PM

ಭೋಪಾಲ್: ತ್ರಿವಳಿ ತಲಾಖ್ (triple talaq) ಅನ್ನು ಪ್ರತಿಪಾದಿಸುವವರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ (Narendra Modi)ಅವರು ಮಂಗಳವಾರ ವಾಗ್ದಾಳಿ ನಡೆಸಿದ್ದು ವೋಟ್ ಬ್ಯಾಂಕ್​​ಗಾಗಿ ಜನರು ಮುಸ್ಲಿಂ ಹೆಣ್ಣು ಮಕ್ಕಳಿಗೆ ಅನ್ಯಾಯ ಮಾಡುತ್ತಿದ್ದಾರೆ. ಈ ಪದ್ಧತಿಯು ಇಡೀ ಕುಟುಂಬವನ್ನು ನಾಶಪಡಿಸುತ್ತದೆ ಎಂದು ಹೇಳಿದ್ದಾರೆ. ಭೋಪಾಲ್‌ನಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಪ್ರಶ್ನೋತ್ತರ ವೇಳೆ ಮಾತನಾಡಿದ ಮೋದಿ, ಮುಸ್ಲಿಂ ಬಹುಸಂಖ್ಯಾತ ದೇಶಗಳು ತ್ರಿವಳಿ ತಲಾಖ್ ಅನ್ನು ನಿಷೇಧಿಸಿವೆ. ನಾನು ಈಜಿಪ್ಟ್‌ನಲ್ಲಿದ್ದೆ, ಅಲ್ಲಿ ಅವರು ಸುಮಾರು 80-90 ವರ್ಷಗಳ ಹಿಂದೆ ಅದನ್ನು ರದ್ದುಗೊಳಿಸಿದರು.

ತ್ರಿವಳಿ ತಲಾಖ್ ಅನ್ನು ಇಸ್ಲಾಂಗೆ ಸಂಬಂಧಿಸಿದ್ದು ಆಗಿದ್ದರೆ, ಯಾವುದೇ ಮುಸ್ಲಿಂ ಬಹುಸಂಖ್ಯಾತ ದೇಶವು ಅದನ್ನು ರದ್ದುಗೊಳಿಸುವುದಿಲ್ಲ.
ಏಕರೂಪ ನಾಗರಿಕ ಸಂಹಿತೆ (UCC) ಕುರಿತು ಮಾತನಾಡಿದ ಅವರು, ಯುಸಿಸಿ ಹೆಸರಿನಲ್ಲಿ ಜನರನ್ನು ಪ್ರಚೋದಿಸಲಾಗುತ್ತಿದೆ.


ಎರಡು ಕಾನೂನು ಮೇಲೆ ದೇಶವನ್ನು ಹೇಗೆ ನಡೆಸಬಹುದು? ಸಂವಿಧಾನವು ಸಮಾನ ಹಕ್ಕುಗಳ ಬಗ್ಗೆಯೂ ಮಾತನಾಡುತ್ತದೆ, ಸುಪ್ರೀಂಕೋರ್ಟ್ ಕೂಡಾ ಯುಸಿಸಿಯನ್ನು ಜಾರಿಗೆ ತರಲು ಕೇಳಿದೆ. ವಿರೋಧ ಪಕ್ಷದ ಜನರು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ