ಮನ್ ಕಿ ಬಾತ್ನಲ್ಲಿನ ವಿಷಯಗಳನ್ನು ಬಿಂಬಿಸಿದ ‘ಜನ ಶಕ್ತಿ’ ಕಲಾ ಪ್ರದರ್ಶನಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ
ನಾನು ದೆಹಲಿ ಎನ್ಜಿಎಂಎಗೆ ಭೇಟಿ ನೀಡಿದ್ದೆ. ಮನ್ ಕಿ ಬಾತ್ ಸಂಚಿಕೆಗಳಲ್ಲಿನ ಕೆಲವು ವಿಷಯಗಳನ್ನು ಆಧರಿಸಿದ ಅದ್ಭುತ ಕಲಾಕೃತಿಗಳ ಪ್ರದರ್ಶನ ಇದಾಗಿದೆ. ಪ್ರದರ್ಶನವನ್ನು ತಮ್ಮ ಸೃಜನಶೀಲತೆಯಿಂದ ಶ್ರೀಮಂತಗೊಳಿಸಿದ ಎಲ್ಲಾ ಕಲಾವಿದರನ್ನು ನಾನು ಅಭಿನಂದಿಸುತ್ತೇನೆ. ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ (Narendra Modi) ಭಾನುವಾರ ದೆಹಲಿಯ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ (NGMA) ಗೆ ಭೇಟಿ ನೀಡಿದ್ದು, ಜನ ಶಕ್ತಿ (Jana Shakti)ಪ್ರದರ್ಶನವನ್ನು ವೀಕ್ಷಿಸಿದರು. ಮೋದಿಯವರ ಮಾಸಿಕ ರೇಡಿಯೊ ಕಾರ್ಯಕ್ರಮ ಮನ್ ಕಿ ಬಾತ್‌ನಲ್ಲಿ ಅವರು ಹೇಳಿದ್ದ ಸ್ವಚ್ಛತೆ, ಜಲ ಸಂರಕ್ಷಣೆ, ಕೃಷಿ, ಬಾಹ್ಯಾಕಾಶ, ಈಶಾನ್ಯ ಪ್ರದೇಶ, ಮಹಿಳಾ ಸಬಲೀಕರಣ, ಯೋಗ ಮತ್ತು ಆಯುರ್ವೇದ ವಿಷಯದ ಕುರಿತು ಭಾರತದ ಪ್ರಸಿದ್ಧ ಕಲಾವಿದರ ಕಲಾಕೃತಿಗಳು ಇಲ್ಲಿ ಪ್ರದರ್ಶನಗೊಂಡಿವೆ.ಕಲಾವಿದೆ ಮಾಧವಿ ಪಾರೇಖ್, ಅತುಲ್ ದೋಡಿಯಾ, ಪದ್ಮಶ್ರೀ ಪುರಸ್ಕೃತ ಪರೇಶ್ ಮೈತಿ, ಸಮಕಾಲೀನ ಕಲಾವಿದ ಈರಣ್ಣ ಜಿಆರ್ ಮತ್ತು ಜಗನ್ನಾಥ ಪಾಂಡಾ ಸೇರಿದಂತೆ ಹಲವಾರು ಕಲಾವಿದರು ಜನ ಶಕ್ತಿಗೆ ತಮ್ಮ ಕೃತಿಗಳನ್ನು ನೀಡಿದ್ದಾರೆ.
ನಾನು ದೆಹಲಿ ಎನ್ಜಿಎಂಎಗೆ ಭೇಟಿ ನೀಡಿದ್ದೆ. ಮನ್ ಕಿ ಬಾತ್ ಸಂಚಿಕೆಗಳಲ್ಲಿನ ಕೆಲವು ವಿಷಯಗಳನ್ನು ಆಧರಿಸಿದ ಅದ್ಭುತ ಕಲಾಕೃತಿಗಳ ಪ್ರದರ್ಶನ ಇದಾಗಿದೆ. ಪ್ರದರ್ಶನವನ್ನು ತಮ್ಮ ಸೃಜನಶೀಲತೆಯಿಂದ ಶ್ರೀಮಂತಗೊಳಿಸಿದ ಎಲ್ಲಾ ಕಲಾವಿದರನ್ನು ನಾನು ಅಭಿನಂದಿಸುತ್ತೇನೆ. ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಏಪ್ರಿಲ್ 30 ರಂದು ಪ್ರಧಾನಿ ಮೋದಿ ಅವರು ಮನ್ ಕಿ ಬಾತ್ ನ 100 ನೇ ಸಂಚಿಕೆಯನ್ನು ಉದ್ದೇಶಿಸಿ ಮಾತನಾಡಿದ್ದರು. ಇದು ನನ್ನ ಆಧ್ಯಾತ್ಮಿಕ ಪ್ರಯಾಣ ಎಂದಿದ್ದರು. ಕಾರ್ಯಕ್ರಮದಲ್ಲಿ ಅವರು ಮನ್ ಕಿ ಬಾತ್ ಒಂದು ಮಾಧ್ಯಮವಾಗಿದ್ದು, ಜನರು ಇತರ ನಾಗರಿಕರ ಕೆಲಸಗಳನ್ನು ಕಲಿಯಲು ಮತ್ತು ಪ್ರೇರೇಪಿಸಲು ಮತ್ತು ಜೀವನದಲ್ಲಿ ಏಳಿಗೆ ಹೊಂದಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮನ್ ಕಿ ಬಾತ್ ಮೂಲಕ ಬೆಳೆದ ಚಳುವಳಿಗಳು ಮತ್ತು ಸಣ್ಣ ಉದ್ಯಮಗಳ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿಸ್ವಚ್ಛ ಭಾರತ್, ಖಾದಿ ಮತ್ತು ಆಜಾದಿ ಕಾ ಅಮೃತ್ ಮಹೋತ್ಸವಕ್ಕೆ ಸಂಬಂಧಿಸಿದ ಯೋಜನೆಗಳ ಬಗ್ಗೆಯೂ ಚರ್ಚಿಸಿದ್ದಾರೆ.
ಮನ್ ಕಿ ಬಾತ್ ಸಕಾರಾತ್ಮಕತೆಯನ್ನು ಹರಡಲು ಮತ್ತು ತಳಮಟ್ಟದ ಬದಲಾವಣೆ ಮಾಡುವವರನ್ನು ಗುರುತಿಸಲು ಅತ್ಯುತ್ತಮ ವೇದಿಕೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.ಈ ಕಾರ್ಯಕ್ರಮವು ಜನರೊಂದಿಗೆ ಸಂಪರ್ಕದಲ್ಲಿರಲು ಸಹಾಯ ಮಾಡುತ್ತದೆ.. ಮನ್ ಕಿ ಬಾತ್ ಕೇವಲ ಕಾರ್ಯಕ್ರಮವಲ್ಲ ಎಂದು ಹೇಳಿದ ಪ್ರಧಾನಿ ಇದು ನಾಗರಿಕರ ಮನ್ ಕಿ ಬಾತ್ನ ಪ್ರತಿಬಿಂಬ. ಜನರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಮಾಧ್ಯಮವಾಗಿದೆ ಎಂದು ಹೇಳಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:52 pm, Sun, 14 May 23