Mann Ki Baat: 11 ಗಂಟೆಗೆ ನರೇಂದ್ರ ಮೋದಿ ಮನ್​ ಕಿ ಬಾತ್ ಭಾಷಣ: ವಿಧಾನಸಭೆ ಚುನಾವಣೆಗಳ ಗೆಲುವಿನ ಹರ್ಷದಲ್ಲಿ ಮೋದಿ ಮಾತು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 27, 2022 | 9:47 AM

ಉತ್ತರ ಪ್ರದೇಶ, ಉತ್ತರಾಖಂಡ್, ಮಣಿಪುರ, ಗೋವಾ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿರುವ ಹಿನ್ನೆಲೆಯಲ್ಲಿ ಇಂದಿನ ಭಾಷಣ ಮಹತ್ವ ಪಡೆದಿದೆ.

Mann Ki Baat: 11 ಗಂಟೆಗೆ ನರೇಂದ್ರ ಮೋದಿ ಮನ್​ ಕಿ ಬಾತ್ ಭಾಷಣ: ವಿಧಾನಸಭೆ ಚುನಾವಣೆಗಳ ಗೆಲುವಿನ ಹರ್ಷದಲ್ಲಿ ಮೋದಿ ಮಾತು
ಪ್ರಧಾನಿ ನರೇಂದ್ರ ಮೋದಿ
Follow us on

ದೆಹಲಿ: ಪ್ರತಿ ತಿಂಗಳಿಗೊಮ್ಮೆ ರೇಡಿಯೊ ಮೂಲಕ ದೇಶದ ಜನರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಮಾಡುವ ‘ಮನ್ ಕಿ ಬಾತ್’ (Mann Ki Baat) ಭಾಷಣ ಇಂದು (ಮಾರ್ಚ್ 27) ಬೆಳಿಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಎಲ್ಲ ಕಾರ್ಯಕರ್ತರೂ ಭಾಷಣ ಆಲಿಸಲಿದ್ದಾರೆ. ಉತ್ತರ ಪ್ರದೇಶ, ಉತ್ತರಾಖಂಡ್, ಮಣಿಪುರ, ಗೋವಾ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿರುವ ಹಿನ್ನೆಲೆಯಲ್ಲಿ ಇಂದಿನ ಭಾಷಣ ಮಹತ್ವ ಪಡೆದಿದೆ. ಗೆಲುವಿನ ಬಗ್ಗೆ ಮೋದಿ ಏನು ಹೇಳಬಹುದು ಎಂಬ ಕುತೂಹಲ ವ್ಯಕ್ತವಾಗಿದೆ. ದೆಹಲಿಯ ಯುಮುನಾ ವಿಹಾರ್ ಮಂಡಲದ 59ನೇ ಬೂತ್​ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೊಂದಿಗೆ ಮೋದಿ ಅವರ ಮನ್​ ಕಿ ಬಾತ್ ಕೇಳಲು ಬಿಜೆಪಿ ಕಾರ್ಯಕರ್ತರು ಸಿದ್ಧತೆ ಮಾಡಿಕೊಂಡಿದ್ದಾರೆ.

ಕಳೆದ ತಿಂಗಳು, ಅಂದರೆ ಫೆಬ್ರುವರಿ 27ರಂದು ಮನ್​ ಕಿ ಬಾತ್​ನಲ್ಲಿ ಮಾತನಾಡುವ ಮೊದಲು ಟ್ವೀಟ್ ಮಾಡಿದ್ದ ಮೋದಿ, ‘ಮನ್ ಕೀ ಬಾತ್​ನಲ್ಲಿ ಪಾಲ್ಗೊಳ್ಳಿ. ಇತರರ ಜೀವನವನ್ನು ಪರಿವರ್ತಿಸುವ ಅಸಾಧಾರಣ ಜನರ ಜೀವನ ಪ್ರಯಾಣವನ್ನು ಪ್ರದರ್ಶಿಸಲು ಮತ್ತು ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ನಮ್ಮ ನಾಗರಿಕರ ಅಭಿಪ್ರಾಯಗಳನ್ನು ಎತ್ತಿ ತೋರಿಸಲು ಯಾವಾಗಲೂ ಸಂತೋಷವಾಗುತ್ತದೆ’ ಎಂದು ಹೇಳಿದ್ದರು.

‘ಮೊದಲಿನಂತೆ ನಿಮ್ಮ ಸಲಹೆಗಳಿಗಾಗಿ ನಾನು ಉತ್ಸುಕನಾಗಿದ್ದೇನೆ. ಅವುಗಳನ್ನು MyGov, NaMo ಅಪ್ಲಿಕೇಶನ್‌ನಲ್ಲಿ ಬರೆಯಿರಿ ಅಥವಾ 1800-11-7800 ಗೆ ಡಯಲ್ ಮಾಡಿ. ನಿಮ್ಮ ಸಂದೇಶವನ್ನು ರೆಕಾರ್ಡ್ ಮಾಡಿ’ ಎಂದು ಅವರು ಹೇಳಿದ್ದರು. ಪ್ರಧಾನ ಮಂತ್ರಿಯವರ ಮಾಸಿಕ ರೇಡಿಯೋ ಭಾಷಣ ‘ಮನ್ ಕೀ ಬಾತ್’ ಪ್ರತಿ ತಿಂಗಳ ಕೊನೆಯ ಭಾನುವಾರದಂದು ಪ್ರಸಾರವಾಗುತ್ತದೆ. ಕಾರ್ಯಕ್ರಮವನ್ನು AIR ಮತ್ತು ದೂರದರ್ಶನದ ಸಂಪೂರ್ಣ ನೆಟ್‌ವರ್ಕ್‌ನಲ್ಲಿ ಮತ್ತು ಎಐಆರ್ ನ್ಯೂಸ್ ಮತ್ತು ಮೊಬೈಲ್ ಅಪ್ಲಿಕೇಶನ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ. ಕಾರ್ಯಕ್ರಮದ ಮೊದಲ ಕಂತು ಅಕ್ಟೋಬರ್ 3, 2014 ರಂದು ಪ್ರಸಾರವಾಗಿತ್ತು.

ಕೆಲವು ದಿನಗಳ ಹಿಂದೆ ಕಾಶಿಯಿಂದ ಕಳವಾಗಿದ್ದ ಮಾ ಅನ್ನಪೂರ್ಣ ದೇವಿಯ ವಿಗ್ರಹವನ್ನು ಮರಳಿ ತರಲಾಗಿದೆ ಎಂಬುದನ್ನು ನೀವು ಗಮನಿಸಿರಬೇಕು. ಇದು ಭಾರತದೆಡೆಗಿನ ಜಾಗತಿಕ ದೃಷ್ಟಿಕೋನ ಬದಲಾಗುತ್ತಿರುವುದಕ್ಕೆ ಉದಾಹರಣೆಯಾಗಿದೆ. 2013 ರ ತನಕ ಸುಮಾರು 13 ವಿಗ್ರಹಗಳು ಹೊಂದಿದ್ದವು. ಆದರೆ, ಕಳೆದ ಏಳು ವರ್ಷಗಳಲ್ಲಿ ಭಾರತವು 200ಕ್ಕೂ ಹೆಚ್ಚು ಅಮೂಲ್ಯ ಮೂರ್ತಿಗಳನ್ನು ಮರಳಿ ತಂದಿದೆ.ಅಮೆರಿಕಾ, ಬ್ರಿಟನ್, ಹಾಲೆಂಡ್, ಫ್ರಾನ್ಸ್, ಕೆನಡಾ, ಜರ್ಮನಿ, ಸಿಂಗಾಪುರದಂತಹ ಹಲವು ದೇಶಗಳು ಭಾರತದ ಈ ಭಾವನೆಯನ್ನು ಅರ್ಥಮಾಡಿಕೊಂಡು ನೆರವಾದವು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಾನು ಅಮೆರಿಕಕ್ಕೆ ಹೋದಾಗ ಅಲ್ಲಿ ಸಾಕಷ್ಟು ಹಳೆಯ ವಿಗ್ರಹಗಳು ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯ ಅನೇಕ ಕಲಾಕೃತಿಗಳು ಕಣ್ಣಿಗೆ ಬಿದ್ದವು. ಒಬ್ಬ ಭಾರತೀಯನಾಗಿ, ಇತಿಹಾಸ ಮತ್ತು ಪುರಾತತ್ತ್ವ ಶಾಸ್ತ್ರದ ಬಗ್ಗೆ ಗೌರವವನ್ನು ಹೊಂದಿರುವವನಾಗಿ, ನಂಬಿಕೆ ಮತ್ತು ಸಂಸ್ಕೃತಿಯೊಂದಿಗೆ ಸಂಪರ್ಕ ಹೊಂದಿದವನಾಗಿ ಯಾವುದೇ ಅಮೂಲ್ಯ ಪರಂಪರೆಯು ದೇಶಕ್ಕೆ ಮರಳಿದಾಗ, ಅದು ಸ್ವಾಭಾವಿಕವಾಗಿ ಹೆಚ್ಚಿನ ತೃಪ್ತಿಯ ವಿಷಯವಾಗಿದೆ ಎಂದು ಕಳೆದ ತಿಮಗಳ ಭಾಷಣದಲ್ಲಿ ಮೋದಿ ಹೇಳಿದ್ದರು.

ಇದನ್ನೂ ಓದಿ: Mann ki Baat ಅಮೂಲ್ಯವಾದ ಕಲಾಕೃತಿಗಳನ್ನು ಮರಳಿ ತರುವಲ್ಲಿ ಭಾರತ ಯಶಸ್ವಿಯಾಗಿದೆ: ಪ್ರಧಾನಿ ನರೇಂದ್ರ ಮೋದಿ

ಇದನ್ನೂ ಓದಿ: Mann Ki Baat: ಪ್ರತಿಯೊಬ್ಬ ನಾಗರಿಕನೂ ಒಂದು ಬಾರಿಯಾದರೂ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ಕೊಡಬೇಕು: ಪ್ರಧಾನಿ ಮೋದಿ