ನವದೆಹಲಿ: ಪೋಸ್ಟ್ ಬಜೆಟ್ ವೆಬಿನಾರ್ನ 5ನೇ ದಿನವಾದ ಇಂದು (ಫೆ.28) ಪ್ರಧಾನಿ ನರೇದ್ರ ಮೋದಿ (PM Narendra Modi) ಅವರು “ಅನ್ ಲೀಸಿಂಗ್ ದ ಪೊಟೆನ್ಶಿಯಲ್ ಈಸಿ ಆಫ್ ಲಿವಿಂಗ್ ಯೂಸಿಂಗ್ ಟೆಕ್ನಾಲಜಿ” (Unleashing the potential: Ease of living using technology) ವಿಷಯದ ಕುರಿತು ಬೆಳಿಗ್ಗೆ 10 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ. ಈ ವೆಬಿನಾರ್ನಲ್ಲಿ ಡಿಜಿಲಾಕರ್ ಘಟಕ, ರಾಷ್ಟ್ರೀಯ ಡೇಟಾ ಆಡಳಿತ, ವಿಳಾಸ ಅಪ್‌ಡೇಟ್ ಸೌಲಭ್ಯ, ಫಿನ್‌ಟೆಕ್ ಸೇವೆಗಳು, ಕೃತಕ ಬುದ್ಧಿಮತ್ತೆ (Artificial Intelligence) ಮತ್ತು ಮಿಷನ್ ಕರ್ಮಯೋಗಿ, ಇ-ಕೋರ್ಟ್‌ಗಳು, 5G ಮತ್ತು ವ್ಯವಹಾರವನ್ನು ಸುಲಭಗೊಳಿಸುವ ಬಗ್ಗೆ ಬಜೆಟ್ನಲ್ಲಿ ಘೋಷಿಸಲಾದ ವಿಷಯಗಳ ಕುರಿತು ಚರ್ಚಿಸುತ್ತಾರೆ. ಹಾಗೇ ಕೆಐಸಿ, ಸಾಮಾನ್ಯ ವ್ಯಾಪಾರ ಗುರುತಿಸುವಿಕೆ, ಏಕೀಕೃತ ಫೈಲಿಂಗ್ ಪ್ರಕ್ರಿಯೆಗಳನ್ನು ಸರಳೀಕೃತಗೊಳಿಸುವುದರ ಕುರಿತು ಮಾತನಾಡಲಿದ್ದಾರೆ.
ಈ ವೆಬಿನಾರ್ನ್ನು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಕೈಗಾರಿಕಾ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ ನೇತೃತ್ವದಲ್ಲಿ ಆಯೋಜಿಸಲಾಗಿದೆ. ಈ ವೆಬಿನಾರ್ನಲ್ಲಿ ಕೇಂದ್ರ ಐಟಿ ಸಚಿವಾಲಯ, ಡಿಪಿಐಐಟಿ, ನ್ಯಾಯಾಂಗ ಇಲಾಖೆ, ಟೆಲಿಕಾಂ ಇಲಾಖೆ, ಹಣಕಾಸು ಇಲಾಖೆ ಮತ್ತು ವಾಣಿಜ್ಯ ಇಲಾಖೆ ಅಧಿಕಾರಿಗಳು ಭಾಗಿಯಾಗುತ್ತಾರೆ.
ಹಾಗೇ ರಾಜ್ಯ ಸರ್ಕಾರಗಳು, ಕೈಗಾರಿಕೆಗಳು, ಸ್ಟಾರ್ಟ್‌ಅಪ್‌ಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಸಂಘಸಂಸ್ಥೆಗಳು ಮತ್ತು ತಜ್ಞರು ಪ್ರಮುಖ ಬಜೆಟ್ ಘೋಷಣೆಗಳಿಗೆ ಸಂಬಂಧಿಸಿದ ಮೈಲಿಗಲ್ಲುಗಳು ಮತ್ತು ಯೋಜನೆಗಳ ಅನುಷ್ಠಾನ ಬಗ್ಗೆ ಚರ್ಚಿಸುತ್ತಾರೆ. ವೆಬಿನಾರ್ನಲ್ಲಿ ದೇಬ್ಜಾನಿ ಘೋಷ್, ನಾಸ್ಕಾಮ್, ನ್ಯಾಯಮೂರ್ತಿ ಎ. ಮುಹಮ್ಮದ್ ಮುಸ್ತಾಕ್, ಪವನ್ ಗೋಯೆಂಕಾ,ಮಹೀಂದ್ರಾ ಲಿಮಿಟೆಡ್, ಆಕಾಶ್ ಅಂಬಾನಿ, ರಿಲಯನ್ಸ್ ಜಿಯೋ ಇನ್ಫೋಕಾಮ್ ಮುಂತಾದ ಹಲವಾರು ಗಣ್ಯ ವ್ಯಕ್ತಿಗಳು ಭಾಗಿಯಾಗುತ್ತಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ