Mission 90 Meet: ತೆಲಂಗಾಣ ಬಿಜೆಪಿ ನಾಯಕರೊಂದಿಗೆ ಅಮಿತ್ ಶಾ ತುರ್ತು ಸಭೆ; ಕುತೂಹಲ ಮೂಡಿಸಿದ ಶಾ ಆಂಧ್ರ ನಡೆ
ಮಂಗಳವಾರ(ಫೆ.28) ದೆಹಲಿಯಲ್ಲಿ ತೆಲಂಗಾಣದ ಬಿಜೆಪಿ ಪಕ್ಷದ ನಾಯಕರೊಂದಿಗೆ ಅಮಿತ್ ಶಾ ತುರ್ತು ಸಭೆ ನಡೆಸಲಿದ್ದು ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಹೈದರಾಬಾದ್: ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಅವರು ಮಂಗಳವಾರ(ಫೆ.28) ದೆಹಲಿಯಲ್ಲಿ ತೆಲಂಗಾಣದ ಬಿಜೆಪಿ ಪಕ್ಷದ ನಾಯಕರೊಂದಿಗೆ ‘ವಿಷನ್ 90’ ಸಭೆ(Mission 90 Meet) ನಡೆಸಲಿದ್ದಾರೆ. ಈ ಸಭೆಯಲ್ಲಿ ಮುಂಬರುವ ರಾಜ್ಯ ಚುನಾವಣೆಯಲ್ಲಿ 90 ವಿಧಾನಸಭಾ ಸ್ಥಾನಗಳನ್ನು ಗೆಲ್ಲುವ ಪಕ್ಷದ ಗುರಿಯ ಬಗ್ಗೆ ಹಾಗೂ ಅದರ ಸ್ಟ್ರಾಟಜಿ ಬಗ್ಗೆ ಚರ್ಚೆ ನಡೆಸಲಾಗುತ್ತದೆ.
ಮೂಲಗಳು ಪ್ರಕಾರ, ಸೋಮವಾರ(ಫೆ.27) ಅಮಿತ್ ಶಾ ಅವರ ಕಚೇರಿಯಿಂದ ಕಾರ್ಯಕಾರಿ ಸದಸ್ಯರಿಗೆ ಕರೆ ಬಂದಿದ್ದು, ತುರ್ತು ಸಭೆಗೆ ಅವರನ್ನು ಕರೆಯಲಾಗಿದೆ. ಅಮಿತ್ ಶಾ ಅವರು ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗಿನ ಪಕ್ಷದ ಚಟುವಟಿಕೆಗಳ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ ಮತ್ತು ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಬಲಪಡಿಸುವ ಹಾಗೂ ಪರಿಶೀಲಿಸುವ ಸಾಧ್ಯತೆಯಿದೆ. ಹೀಗಾಗಿ ಮಂಗಳವಾರ ಶಾ ಬಿಜೆಪಿ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಕರೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: PM Narendra Modi: ಇಂದು ಪೋಸ್ಟ್ ಬಜೆಟ್ ವೆಬಿನಾರ್ನ 5ನೇ ದಿನ ಕುರಿತು ಮಾತನಾಡಲಿರುವ ಪ್ರಧಾನಿ ಮೋದಿ
ಮದ್ಯ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಬಂಧನದ ಬಗ್ಗೆಯೂ ಬಿಜೆಪಿ ಸಭೆಯಲ್ಲಿ ಚರ್ಚಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಏಕೆಂದರೆ ಹಲವಾರು ತೆಲುಗು ನಾಯಕರು ಈ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಅಮಿತ್ ಶಾ ಅವರು ಸಭೆಯಲ್ಲಿ ಈ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ. ಹಾಗೂ ರಾಜ್ಯದಲ್ಲಿ ಬಂಧನ ಪ್ರಕರಣಗಳ ವಿವಿಧ ಸನ್ನಿವೇಶಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು.
ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿ ಸೇರಿದಂತೆ ಹಿರಿಯ ಮುಖಂಡರು, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಡಿ.ಕೆ. ಅರುಣಾ, ಈಟಾಳ ರಾಜೇಂದರ್, ಡಾ.ಕೆ.ಲಕ್ಷ್ಮಣ್ ಮತ್ತು ವಿಜಯಶಾಂತಿ ಸೇರಿದಂತೆ ಇತರರು ಪಾಲ್ಗೊಳ್ಳುವ ಸಾಧ್ಯತೆ ಇದೆ.
ಆಂಧ್ರಪ್ರದೇಶದ ತಿರುಪತಿ ಪ್ರವಾಸದಲ್ಲಿರುವ ಹಿರಿಯ ಬಿಜೆಪಿ ನಾಯಕ ಜಿ.ವಿವೇಕ್ ವೆಂಕಟಸ್ವಾಮಿ ಅವರು, ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಪುತ್ರಿ ಮತ್ತು ಎಂಎಲ್‌ಸಿ ಕೆ.ಕವಿತಾ ಅವರನ್ನು ಸಿಬಿಐ ಬಂಧಿಸಲಿದೆ ಎಂದು ಹೇಳಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:54 am, Tue, 28 February 23