AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PM Narendra Modi: ಇಂದು ಪೋಸ್ಟ್​​​​ ಬಜೆಟ್​​​ ವೆಬಿನಾರ್​​ನ 5ನೇ ದಿನ ಕುರಿತು ಮಾತನಾಡಲಿರುವ ಪ್ರಧಾನಿ ಮೋದಿ

ಪೋಸ್ಟ್​​​​ ಬಜೆಟ್​​​ ವೆಬಿನಾರ್​​ನ 5ನೇ ದಿನವಾದ ಇಂದು ಪ್ರಧಾನಿ ನರೇದ್ರ ಮೋದಿ ಅವರು "ಅನ್ ಲೀಸಿಂಗ್ ದ ಪೊಟೆನ್ಶಿಯಲ್ ಈಸಿ ಆಫ್ ಲಿವಿಂಗ್ ಯೂಸಿಂಗ್ ಟೆಕ್ನಾಲಜಿ" ವಿಷಯದ ಕುರಿತು ಬೆಳಿಗ್ಗೆ 10 ಗಂಟೆಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ​ ಮಾತನಾಡಲಿದ್ದಾರೆ.

PM Narendra Modi: ಇಂದು ಪೋಸ್ಟ್​​​​ ಬಜೆಟ್​​​ ವೆಬಿನಾರ್​​ನ 5ನೇ ದಿನ ಕುರಿತು ಮಾತನಾಡಲಿರುವ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ
ವಿವೇಕ ಬಿರಾದಾರ
|

Updated on: Feb 28, 2023 | 7:35 AM

Share

ನವದೆಹಲಿ: ಪೋಸ್ಟ್​​​​ ಬಜೆಟ್​​​ ವೆಬಿನಾರ್​​ನ 5ನೇ ದಿನವಾದ ಇಂದು (ಫೆ.28) ಪ್ರಧಾನಿ ನರೇದ್ರ ಮೋದಿ (PM Narendra Modi) ಅವರು “ಅನ್ ಲೀಸಿಂಗ್ ದ ಪೊಟೆನ್ಶಿಯಲ್ ಈಸಿ ಆಫ್ ಲಿವಿಂಗ್ ಯೂಸಿಂಗ್ ಟೆಕ್ನಾಲಜಿ” (Unleashing the potential: Ease of living using technology) ವಿಷಯದ ಕುರಿತು ಬೆಳಿಗ್ಗೆ 10 ಗಂಟೆಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ​ ಮಾತನಾಡಲಿದ್ದಾರೆ. ಈ ವೆಬಿನಾರ್​​​ನಲ್ಲಿ ಡಿಜಿಲಾಕರ್ ಘಟಕ, ರಾಷ್ಟ್ರೀಯ ಡೇಟಾ ಆಡಳಿತ, ವಿಳಾಸ ಅಪ್‌ಡೇಟ್ ಸೌಲಭ್ಯ, ಫಿನ್‌ಟೆಕ್ ಸೇವೆಗಳು, ಕೃತಕ ಬುದ್ಧಿಮತ್ತೆ (Artificial Intelligence) ಮತ್ತು ಮಿಷನ್ ಕರ್ಮಯೋಗಿ, ಇ-ಕೋರ್ಟ್‌ಗಳು, 5G ಮತ್ತು ವ್ಯವಹಾರವನ್ನು ಸುಲಭಗೊಳಿಸುವ ಬಗ್ಗೆ ಬಜೆಟ್​​ನಲ್ಲಿ ಘೋಷಿಸಲಾದ ವಿಷಯಗಳ ಕುರಿತು ಚರ್ಚಿಸುತ್ತಾರೆ. ಹಾಗೇ ಕೆಐಸಿ, ಸಾಮಾನ್ಯ ವ್ಯಾಪಾರ ಗುರುತಿಸುವಿಕೆ, ಏಕೀಕೃತ ಫೈಲಿಂಗ್ ಪ್ರಕ್ರಿಯೆಗಳನ್ನು ಸರಳೀಕೃತಗೊಳಿಸುವುದರ ಕುರಿತು ಮಾತನಾಡಲಿದ್ದಾರೆ.

ಈ ವೆಬಿನಾರ್​ನ್ನು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಕೈಗಾರಿಕಾ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ ನೇತೃತ್ವದಲ್ಲಿ ಆಯೋಜಿಸಲಾಗಿದೆ. ಈ ವೆಬಿನಾರ್​ನಲ್ಲಿ ಕೇಂದ್ರ ಐಟಿ ಸಚಿವಾಲಯ, ಡಿಪಿಐಐಟಿ, ನ್ಯಾಯಾಂಗ ಇಲಾಖೆ, ಟೆಲಿಕಾಂ ಇಲಾಖೆ, ಹಣಕಾಸು ಇಲಾಖೆ ಮತ್ತು ವಾಣಿಜ್ಯ ಇಲಾಖೆ ಅಧಿಕಾರಿಗಳು ಭಾಗಿಯಾಗುತ್ತಾರೆ.

ಹಾಗೇ ರಾಜ್ಯ ಸರ್ಕಾರಗಳು, ಕೈಗಾರಿಕೆಗಳು, ಸ್ಟಾರ್ಟ್‌ಅಪ್‌ಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಸಂಘಸಂಸ್ಥೆಗಳು ಮತ್ತು ತಜ್ಞರು ಪ್ರಮುಖ ಬಜೆಟ್ ಘೋಷಣೆಗಳಿಗೆ ಸಂಬಂಧಿಸಿದ ಮೈಲಿಗಲ್ಲುಗಳು ಮತ್ತು ಯೋಜನೆಗಳ ಅನುಷ್ಠಾನ ಬಗ್ಗೆ ಚರ್ಚಿಸುತ್ತಾರೆ. ವೆಬಿನಾರ್​​ನಲ್ಲಿ ದೇಬ್ಜಾನಿ ಘೋಷ್, ನಾಸ್ಕಾಮ್, ನ್ಯಾಯಮೂರ್ತಿ ಎ. ಮುಹಮ್ಮದ್ ಮುಸ್ತಾಕ್, ಪವನ್ ಗೋಯೆಂಕಾ,ಮಹೀಂದ್ರಾ ಲಿಮಿಟೆಡ್, ಆಕಾಶ್ ಅಂಬಾನಿ, ರಿಲಯನ್ಸ್ ಜಿಯೋ ಇನ್ಫೋಕಾಮ್ ಮುಂತಾದ ಹಲವಾರು ಗಣ್ಯ ವ್ಯಕ್ತಿಗಳು ಭಾಗಿಯಾಗುತ್ತಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!