ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನಾಳೆ (ಶುಕ್ರವಾರ) ಸಂಜೆ 7.30ಕ್ಕೆ ದೆಹಲಿಯಲ್ಲಿ ಜಹಾನ್-ಎ-ಖುಸ್ರೌ ಎಂಬ ಹೆಸರಿನ ಸೂಫಿ ಸಂಗೀತ ಉತ್ಸವದಲ್ಲಿ ಭಾಗವಹಿಸಲಿದ್ದಾರೆ. ಖ್ಯಾತ ಚಲನಚಿತ್ರ ನಿರ್ಮಾಪಕ ಮತ್ತು ನಟ ಮುಜಾಫರ್ ಅಲಿ ಅವರು ಆರಂಭಿಸಿದ್ದ ಈ ಉತ್ಸವವು ಫೆಬ್ರವರಿ 28ರಿಂದ ಮಾರ್ಚ್ 2ರವರೆಗೆ ಸುಂದರ್ ನರ್ಸರಿಯಲ್ಲಿ ನಡೆಯಲಿದೆ ಎಂದು ಪ್ರಧಾನಿ ಸಚಿವಾಲಯ ತಿಳಿಸಿದೆ.
“ಪ್ರಧಾನಿ ಮೋದಿ ದೇಶದ ವೈವಿಧ್ಯಮಯ ಕಲೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವ ಪ್ರತಿಪಾದಕರಾಗಿದ್ದಾರೆ. ಇದೀಗ ಅವರು ಸೂಫಿ ಸಂಗೀತ, ಕಾವ್ಯ ಮತ್ತು ನೃತ್ಯಕ್ಕೆ ಮೀಸಲಾಗಿರುವ ಅಂತಾರಾಷ್ಟ್ರೀಯ ಉತ್ಸವವಾದ ಜಹಾನ್-ಎ-ಖುಸ್ರೌನಲ್ಲಿ ನಾಳೆ ಭಾಗವಹಿಸಲಿದ್ದಾರೆ” ಎಂದು ಪಿಎಂಒ ತಿಳಿಸಿದೆ. ಅಮೀರ್ ಖುಸ್ರೌ ಅವರ ಪರಂಪರೆಯನ್ನು ಆಚರಿಸಲು ಈ ಉತ್ಸವವು ಪ್ರಪಂಚದಾದ್ಯಂತದ ಕಲಾವಿದರನ್ನು ಒಂದೆಡೆ ಸೇರಿಸುತ್ತದೆ. ಈ ವರ್ಷ ಭವ್ಯ ಸೂಫಿ ಸಂಗೀತ ಉತ್ಸವವು ತನ್ನ 25ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ.
ಇದನ್ನೂ ಓದಿ: ತೊಂದರೆಯಾಗಿದ್ದರೆ ಕ್ಷಮಿಸಿ; ಮಹಾಕುಂಭದ ಮುಕ್ತಾಯದ ವೇಳೆ ಭಕ್ತರಿಗೆ ಪ್ರಧಾನಿ ಮೋದಿ ಸಂದೇಶ
ರೂಮಿ ಫೌಂಡೇಶನ್ ಆಯೋಜಿಸಿರುವ ಈ ಉತ್ಸವವು, 2001ರಲ್ಲಿ ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಮತ್ತು ಕಲಾವಿದ ಮುಜಾಫರ್ ಅಲಿ ಅವರಿಂದ ಪ್ರಾರಂಭವಾಯಿತು. ಇದು ನಾಳೆ ತನ್ನ 25ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಈ ಉತ್ಸವದ ಸಮಯದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ TEH ಬಜಾರ್ (TEH – ಕೈಯಿಂದ ಮಾಡಿದ ಕರಕುಶಲಗಳು)ಗೆ ಭೇಟಿ ನೀಡಲಿದ್ದಾರೆ. ಇದು ಒಂದು ಜಿಲ್ಲೆ-ಒಂದು ಉತ್ಪನ್ನ ಕರಕುಶಲ ವಸ್ತುಗಳು ಮತ್ತು ದೇಶಾದ್ಯಂತದ ವಿವಿಧ ಸೊಗಸಾದ ಕಲಾಕೃತಿಗಳು, ಕರಕುಶಲ ವಸ್ತುಗಳು ಮತ್ತು ಕೈಮಗ್ಗಗಳ ಕುರಿತು ಕಿರುಚಿತ್ರಗಳು ಸೇರಿದಂತೆ ಇತರ ವಿಷಯಗಳನ್ನು ಒಳಗೊಂಡಿರುತ್ತದೆ.
Prime Minister Narendra Modi will participate in the grand Sufi music festival, Jahan-e-Khusrau 2025, on 28th February, at around 7:30 PM, at Sunder Nursery, New Delhi: Prime Minister’s Office
(file photo) pic.twitter.com/DYaRrZrFuz
— ANI (@ANI) February 27, 2025
ಕಳೆದ 25 ವರ್ಷಗಳಲ್ಲಿ ಜಹಾನ್-ಎ-ಖುಸ್ರೌ ವಿಶ್ವಾದ್ಯಂತ 30 ಆವೃತ್ತಿಗಳನ್ನು ಆಯೋಜಿಸಿದೆ. ಇದು ಸಾಂಸ್ಕೃತಿಕ ಚಳುವಳಿಯಾಗಿ ಮಾರ್ಪಟ್ಟಿದೆ. ರೂಮಿ, ಅಮೀರ್ ಖುಸ್ರೌ, ಬಾಬಾ ಬುಲ್ಲೆಹ್ ಶಾ, ಲಲ್ಲೇಶ್ವರಿ ಮತ್ತು ಇತರ ಸೂಫಿ ಸಂತರ ಸಂಪ್ರದಾಯಗಳನ್ನು ಇದು ಪುನರುಜ್ಜೀವನಗೊಳಿಸುತ್ತದೆ ಮತ್ತು ಮರು ವ್ಯಾಖ್ಯಾನಿಸುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ