ದೆಹಲಿ ಫೆಬ್ರುವರಿ 05: ಸಂಸತ್ತಿನಲ್ಲಿ ಬಜೆಟ್ ಅಧಿವೇಶನದ ಮೊದಲ ದಿನವಾದ ಜನವರಿ 31 ರಂದು ರಾಷ್ಟ್ರಪತಿಗಳ ಭಾಷಣದ ಮೇಲಿನ ‘ವಂದನಾ ನಿರ್ಣಯ’ಕ್ಕೆ (Motion of Thanks) ಪ್ರಧಾನಿ ನರೇಂದ್ರ ಮೋದಿ (Narendra Modi) ಸೋಮವಾರ ಉತ್ತರಿಸಲಿದ್ದಾರೆ. ವರದಿಗಳ ಪ್ರಕಾರ, ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಲೋಕಸಭೆ ಚುನಾವಣೆಯ ಕಾರ್ಯಸೂಚಿಯನ್ನು ನಿಗದಿಪಡಿಸುವ ಸಾಧ್ಯತೆಯಿದೆ.
ನಡೆಯುತ್ತಿರುವ ಬಜೆಟ್ ಅಧಿವೇಶನದ ನಾಲ್ಕನೇ ದಿನದಂದು ಕೆಳಮನೆಗೆ ಹಾಜರಾಗುವಂತೆ ಬಿಜೆಪಿ(BJP) ಲೋಕಸಭೆಯಲ್ಲಿನ ತನ್ನ ಎಲ್ಲಾ ಸಂಸದರಿಗೆ ಮೂರು ಸಾಲಿನ ವಿಪ್ ನೀಡಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಪ್ರಧಾನಿ ಮೋದಿಯವರ ಭಾಷಣವನ್ನು “ಚುನಾವಣಾ ಭಾಷಣ” ಎಂದು ಹೇಳಿದರು.
‘ವಂದನಾ ನಿರ್ಣಯ’ದಲ್ಲಿ ಪ್ರತಿಪಕ್ಷದ ನಾಯಕರು ಮೊದಲು ಮಾತನಾಡುತ್ತಾರೆ ಮತ್ತು ನಂತರ ಪ್ರಧಾನ ಮಂತ್ರಿ ಅದಕ್ಕೆ ಉತ್ತರಿಸುತ್ತಾರೆ. ಇದು ಚುನಾವಣಾ ಭಾಷಣವಾಗಿರುತ್ತದೆ. ಪ್ರಧಾನಿಯಿಂದ ನಾನು ಏನನ್ನೂ ನಿರೀಕ್ಷಿಸುವುದಿಲ್ಲ. ಅವರು ಕಾಂಗ್ರೆಸ್‌ಗೆ ಮಾನಹಾನಿ ಮಾಡುತ್ತಾರೆ. ಮಣಿಪುರ, ಚೀನಾ, ಹೆಚ್ಚುತ್ತಿರುವ ನಿರುದ್ಯೋಗ, ಹಣದುಬ್ಬರ, Paytm ಬಗ್ಗೆ ಏನನ್ನೂ ಹೇಳುವುದಿಲ್ಲ … ಅವರು ತಮ್ಮನ್ನು ತಾವು ಹೊಗಳಿಕೊಳ್ಳುತ್ತಲೇ ಇರುತ್ತಾರೆ ”ಎಂದು ಎಎನ್ಐ ಜತೆ ಮಾತನಾಡಿದ ಜೈರಾಮ್ ರಮೇಶ್ ಹೇಳಿದ್ದಾರೆ.
ವಂದನಾ ನಿರ್ಣಯಕ್ಕೆ ಪ್ರಧಾನಿ ಮೋದಿಯವರ ಉತ್ತರ ಮತ್ತು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ 2024-25ರ ಜಮ್ಮು ಮತ್ತು ಕಾಶ್ಮೀರದ ಅಂದಾಜು ಖರ್ಚು ಮತ್ತು ವೆಚ್ಚಗಳ ಬಗ್ಗೆಯೂ ಮಾತನಾಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಇದಲ್ಲದೆ, ಸಾರ್ವಜನಿಕ ಪರೀಕ್ಷೆಗಳ (ಅನ್ಯಾಯ ವಿಧಾನಗಳ ತಡೆಗಟ್ಟುವಿಕೆ) ಕುರಿತ ಮಹತ್ವದ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗುವುದು. ಸದನದ ವ್ಯವಹಾರಗಳ ಪಟ್ಟಿಯ ಪ್ರಕಾರ, ಲೋಕಸಭೆಯ ಸಂಸದರಾದ ರವನೀತ್ ಸಿಂಗ್ ಮತ್ತು ರಾಮಶಿರೋಮಣಿ ವರ್ಮಾ ಅವರು ಡಿಸೆಂಬರ್ 14, 2023 ರಂದು ನಡೆದ ಸದನದ ಸಭೆಗಳಿಗೆ ಸದಸ್ಯರ ಗೈರುಹಾಜರಿಯ ಸಮಿತಿಯ ಹನ್ನೆರಡನೇ ಅಧಿವೇಶನದ ಮಿನಿಟ್ಸ್ ಮಂಡಿಸಲಿದ್ದಾರೆ.
ಸಂಸದರಾದ ಪಿ.ಪಿ.ಚೌಧರಿ ಮತ್ತು ಎನ್.ಕೆ.ಪ್ರೇಮಚಂದ್ರನ್ ಅವರು ‘ಪ್ರಾದೇಶಿಕ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಜಾಗತಿಕ ಭಯೋತ್ಪಾದನೆಯನ್ನು ಎದುರಿಸುವ’ ವಿಷಯದ ಕುರಿತು ವಿದೇಶಾಂಗ ವ್ಯವಹಾರಗಳ ಸಮಿತಿಯ 28ನೇ ವರದಿಯನ್ನು ಮಂಡಿಸಲಿದ್ದಾರೆ. ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಕಾರ್ಮಿಕ, ಜವಳಿ ಮತ್ತು ಕೌಶಲ್ಯ ಅಭಿವೃದ್ಧಿ ಸ್ಥಾಯಿ ಸಮಿತಿಯ 49 ನೇ ವರದಿಯಲ್ಲಿನ ‘ತರಬೇತಿ ಮಹಾನಿರ್ದೇಶನಾಲಯದ ಕಾರ್ಯನಿರ್ವಹಣೆ’ಯಲ್ಲಿ ಒಳಗೊಂಡಿರುವ ಶಿಫಾರಸುಗಳ ಅನುಷ್ಠಾನದ ಸ್ಥಿತಿಯ ಕುರಿತು ಹೇಳಿಕೆ ನೀಡಲಿದ್ದಾರೆ.
ಇದನ್ನೂ ಓದಿ: ಸ್ವಾತಂತ್ರ್ಯದ ನಂತರ ಅಧಿಕಾರದಲ್ಲಿದ್ದವರು ನಮ್ಮ ಸಂಸ್ಕೃತಿಯ ಬಗ್ಗೆ ನಾಚಿಕೆ ಪಡುತ್ತಿದ್ದರು: ಪ್ರಧಾನಿ ಮೋದಿ
ರಾಜ್ಯಸಭೆಯಲ್ಲಿ, ಕೇಂದ್ರ ಸಚಿವ ಭೂಪೇಂದ್ರ ಯಾದವ್ ಅವರು ನೀರು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯಿದೆ, 1974 ಅನ್ನು ತಿದ್ದುಪಡಿ ಮಾಡಲು ನೀರು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ, 2024 ಮಸೂದೆಯನ್ನು ಮಂಡಿಸಲಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ