ಕೆನಡಾದ ಮಾರ್ಕಾಮ್‌ನಲ್ಲಿ ಸರ್ದಾರ್ ಪಟೇಲ್ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಇಂದು ರಾತ್ರಿ 9ಕ್ಕೆ ಮೋದಿ ಭಾಷಣ

| Updated By: ರಶ್ಮಿ ಕಲ್ಲಕಟ್ಟ

Updated on: May 01, 2022 | 4:28 PM

ಇಂದು ಸಂಜೆ ಸುಮಾರು 9 ಗಂಟೆಗೆ, ಕೆನಡಾದ ಮಾರ್ಕಮ್‌ನಲ್ಲಿ ಸನಾತನ ಮಂದಿರದ ಸಾಂಸ್ಕೃತಿಕ ಕೇಂದ್ರದಲ್ಲಿ ಸರ್ದಾರ್ ಪಟೇಲ್ ಅವರ ಪ್ರತಿಮೆಯನ್ನು ಅನಾವರಣಗೊಳಿಸುವ ಕಾರ್ಯಕ್ರಮದಲ್ಲಿ ನಾನು ನನ್ನ ಮಾತುಗಳನ್ನು ಹಂಚಿಕೊಳ್ಳುತ್ತೇನೆ..

ಕೆನಡಾದ ಮಾರ್ಕಾಮ್‌ನಲ್ಲಿ ಸರ್ದಾರ್ ಪಟೇಲ್ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಇಂದು ರಾತ್ರಿ 9ಕ್ಕೆ ಮೋದಿ ಭಾಷಣ
ಪ್ರಧಾನಿ ನರೇಂದ್ರ ಮೋದಿ
Follow us on

ದೆಹಲಿ: ಭಾನುವಾರ ರಾತ್ರಿ ಕೆನಡಾದ (Canada) ಮಾರ್ಕಾಮ್‌ನಲ್ಲಿ ಸನಾತನ ಮಂದಿರದ ಸಾಂಸ್ಕೃತಿಕ ಕೇಂದ್ರದಲ್ಲಿ(Sanatan Mandir Cultural Centre)  ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಯನ್ನು ಅನಾವರಣಗೊಳಿಸುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ. ಪ್ರತಿಮೆಯ ಅನಾವರಣವನ್ನು ಭಾರತದೊಂದಿಗಿನ ಸಾಂಸ್ಕೃತಿಕ ಸಂಬಂಧವನ್ನು ಗಾಢವಾಗಿಸಲು ಭಾರತೀಯರ ಒಂದು ದೊಡ್ಡ ಉಪಕ್ರಮ ಎಂದು ಮೋದಿ ಶ್ಲಾಘಿಸಿದರು. ಇಂದು ಸಂಜೆ ಸುಮಾರು 9 ಗಂಟೆಗೆ, ಕೆನಡಾದ ಮಾರ್ಕಾಮ್‌ನಲ್ಲಿ ಸನಾತನ ಮಂದಿರದ ಸಾಂಸ್ಕೃತಿಕ ಕೇಂದ್ರದಲ್ಲಿ ಸರ್ದಾರ್ ಪಟೇಲ್ ಅವರ ಪ್ರತಿಮೆಯನ್ನು ಅನಾವರಣಗೊಳಿಸುವ ಕಾರ್ಯಕ್ರಮದಲ್ಲಿ ನಾನು ನನ್ನ ಮಾತುಗಳನ್ನು ಹಂಚಿಕೊಳ್ಳುತ್ತೇನೆ. ಭಾರತದೊಂದಿಗೆ ಸಾಂಸ್ಕೃತಿಕ ಸಂಬಂಧಗಳನ್ನು ಗಾಢವಾಗಿಸಲು ಭಾರತೀಯರಿಂದ ಇದು ಉತ್ತಮ ಉಪಕ್ರಮವಾಗಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.


ಸನಾತನ ಮಂದಿರ ಕಲ್ಚರಲ್ ಸೆಂಟರ್ (SMCC) ದೇವಾಲಯವಾಗಿದ್ದು, ಗ್ರೇಟರ್ ಟೊರೊಂಟೊ ಪ್ರದೇಶದ ಹಿಂದೂ ಸಮುದಾಯಕ್ಕೆ ಸೇವೆ ಸಲ್ಲಿಸುವ ಸಾಂಸ್ಕೃತಿಕ ಕೇಂದ್ರವಾಗಿದೆ. ಎಸ್ಎಂಸಿಸಿ ಪ್ರಕಾರ ಗುಜರಾತಿ ಮತ್ತು ಸಂಸ್ಕೃತಿಗೆ ಸಹಾಯ ಮಾಡಲು, ಉತ್ತೇಜಿಸಲು ಮತ್ತು ಸಂರಕ್ಷಿಸಲು 1985 ರಲ್ಲಿ ಟೊರೊಂಟೊದ ಗುಜರಾತ್ ಸಮಾಜದಿಂದ SMCC ಯೋಜನೆಯನ್ನು ಪ್ರಾರಂಭಿಸಲಾಯಿತು.ಮುಂದಿನ ಪೀಳಿಗೆಗೆ ನಮ್ಮ ಮೌಲ್ಯಗಳು ಮತ್ತು ಸಂಪ್ರದಾಯಗಳನ್ನು ಸಂರಕ್ಷಿಸಲು, ಎಲ್ಲಾ ವಯಸ್ಸಿನವರಿಗೆ ಶಿಕ್ಷಣ, ಧಾರ್ಮಿಕ ಆರಾಧನೆ ಮತ್ತು ಸಾಮಾಜಿಕ ಕಾರ್ಯಗಳಿಗೆ ಸನಾತನ ಮಂದಿರ ಕಲ್ಚರಲ್ ಸೆಂಟರ್ ಸೌಲಭ್ಯಗಳನ್ನು ಒದಗಿಸುತ್ತದೆ ಎಂದು ಅದರ ವೆಬ್‌ಸೈಟ್​​ನಲ್ಲಿದೆ.

ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:43 pm, Sun, 1 May 22