Narendra Modi Bihar Visit: ಇಂದು ಬಿಹಾರದ ನಳಂದ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಲಿದ್ದಾರೆ ಮೋದಿ

|

Updated on: Jun 19, 2024 | 9:28 AM

ಪ್ರಧಾನಿ ನರೇಂದ್ರ ಮೋದಿ ಇಂದು ಬಿಹಾರಕ್ಕೆ ಭೇಟಿ ನೀಡಲಿದ್ದು, ನಳಂದ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್​ ಉದ್ಘಾಟಿಸಲಿದ್ದಾರೆ. ಮಂಗಳವಾರ ವಾರಾಣಸಿಗೆ ಭೇಟಿ ನೀಡಿದ್ದ ಮೋದಿ ಇಂದು ಬಿಹಾರಕ್ಕೆ ಭೇಟಿ ನೀಡಲಿದ್ದಾರೆ.

Narendra Modi Bihar Visit: ಇಂದು ಬಿಹಾರದ ನಳಂದ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಲಿದ್ದಾರೆ ಮೋದಿ
ನರೇಂದ್ರ ಮೋದಿ
Follow us on

ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಇಂದು ಮೊದಲ ಬಾರಿಗೆ ಬಿಹಾರಕ್ಕೆ ಭೇಟಿ ನೀಡಲಿದ್ದಾರೆ. ವಿಶೇಷ ಸೇನಾ ವಿಮಾನದ ಮೂಲಕ ಇಲ್ಲಿಗೆ ಬರಲಿದ್ದಾರೆ. ಇದಾದ ಬಳಿಕ ಪ್ರಧಾನಿ ರಾಜಗಿರಿಗೆ ತೆರಳಲಿದ್ದಾರೆ. ಅಲ್ಲಿ ಅವರು ರಾಜಗೀರ್ ಅಂತರಾಷ್ಟ್ರೀಯ ನಳಂದ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅವರು ನಳಂದ ವಿಶ್ವವಿದ್ಯಾಲಯದ ನೂತನವಾಗಿ ನಿರ್ಮಿಸಿರುವ ಕ್ಯಾಂಪಸ್ ಅನ್ನು ಉದ್ಘಾಟಿಸಲಿದ್ದಾರೆ.

ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಆಗಮನದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸರು ಸಂಪೂರ್ಣ ಕಟ್ಟೆಚ್ಚರ ವಹಿಸಿದ್ದಾರೆ. ಇದರೊಂದಿಗೆ ಗಯಾ ವಿಮಾನ ನಿಲ್ದಾಣದ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಮೂಲೆ ಮೂಲೆಗಳಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಮಂಗಳವಾರ ಗಯಾದ ಹಿರಿಯ ಎಸ್ಪಿ ಆಶಿಶ್ ಭಾರ್ತಿ ಅವರು ಗಯಾ ವಿಮಾನ ನಿಲ್ದಾಣಕ್ಕೆ ಆಗಮಿಸಿ ಎಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಯೋಧರೊಂದಿಗೆ ಭದ್ರತಾ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಲು ಸಭೆ ನಡೆಸಿದರು ಮತ್ತು ಎಲ್ಲಾ ಪರಿಸ್ಥಿತಿಗಳನ್ನು ನಿಭಾಯಿಸಲು ಸೂಚನೆಗಳನ್ನು ನೀಡಿದರು.

ಮತ್ತಷ್ಟು ಓದಿ: In Pics: ವಾರಾಣಸಿಯಲ್ಲಿ ಮೋದಿ, ಗಂಗಾ ಆರತಿ, ಕ್ರೀಡಾ ಸಂಕೀರ್ಣ ಭೇಟಿ ಸೇರಿದಂತೆ ಹಲವು ಚಿತ್ರಗಳು ಇಲ್ಲಿವೆ

ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಗಯಾಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಹಾಗೂ ಜಿಲ್ಲಾಡಳಿತದ ಜತೆಗೆ ಆರೋಗ್ಯ ಇಲಾಖೆಯೂ ಕಟ್ಟೆಚ್ಚರ ವಹಿಸಿದೆ.

ಪ್ರಧಾನಿ ಮೋದಿಯವರ ರಾಜಗೀರ್ ಭೇಟಿಯು ಬನಾರಸ್‌ನಿಂದ ಪ್ರಾರಂಭವಾಗಲಿದೆ. ಹೆಲಿಕಾಪ್ಟರ್ 10.50 ಕ್ಕೆ ನಳಂದ ಜಿಲ್ಲೆಯ ರಾಜ್‌ಗೀರ್‌ನಲ್ಲಿರುವ ಅಂತಾರಾಷ್ಟ್ರೀಯ ನಳಂದಾ ವಿಶ್ವವಿದ್ಯಾಲಯದ ಆವರಣದಲ್ಲಿ ನಿರ್ಮಿಸಲಾದ ಹೆಲಿಪ್ಯಾಡ್‌ನಲ್ಲಿ ಇಳಿಯಲಿದೆ.

ಒಟ್ಟು ಒಂದೂವರೆ ಗಂಟೆಗಳ ಕಾಲ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಮಾಹಿತಿ ಪ್ರಕಾರ, ಅವರು ನಳಂದಾ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಭಾರತ ಮತ್ತು ವಿದೇಶಗಳ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಮಾರಂಭದ ನಂತರ ಪ್ರಧಾನಿ ಮೋದಿ ಅವರು 11.45 ಕ್ಕೆ ಹೆಲಿಕಾಪ್ಟರ್ ಮೂಲಕ ಗಯಾಗೆ ತೆರಳಲಿದ್ದಾರೆ.

ಇದಕ್ಕಾಗಿಯೇ ಮಂಗಳವಾರ ಸಂಜೆ ಜಿಲ್ಲೆಯ ವಿವಿಧ ಹೋಟೆಲ್‌ಗಳಲ್ಲಿ ತಪಾಸಣೆ ನಡೆಸಲಾಯಿತು. ಅಲ್ಲದೆ, ಹೋಟೆಲ್‌ನಲ್ಲಿ ತಂಗಿರುವವರ ವಿಚಾರಣೆ ಆರಂಭಿಸಲಾಗಿದೆ. ಭದ್ರತಾ ಪಡೆಗಳು ರಸ್ತೆಗಳಲ್ಲಿ ಧ್ವಜ ಮೆರವಣಿಗೆಯನ್ನೂ ನಡೆಸಿದರು.

21 ನೇ ಶತಮಾನದಲ್ಲಿ ಹೊಸ ನಳಂದ ವಿಶ್ವವಿದ್ಯಾಲಯಕ್ಕೆ ಹಿಂದಿನ (800 ನೂರು ವರ್ಷಗಳ ಹಿಂದೆ) ಅದೇ ಸ್ಥಾನವನ್ನು ನೀಡುವುದು ಭಾರತ ಸರ್ಕಾರದ ಪ್ರಯತ್ನವಾಗಿದೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಹೊಸ ಕ್ಯಾಂಪಸ್ ಶಿಕ್ಷಣ ಕ್ಷೇತ್ರದಲ್ಲಿ ಪ್ರಮುಖ ಕೇಂದ್ರವಾಗಿ ಸ್ಥಾಪಿಸುವ ಸರ್ಕಾರದ ಉದ್ದೇಶವನ್ನು ಪ್ರತಿಬಿಂಬಿಸುತ್ತದೆ. 2010 ರಲ್ಲಿ, ಭಾರತ ಸರ್ಕಾರವು ಕಾನೂನನ್ನು ಮಾಡುವ ಮೂಲಕ ನಳಂದಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಿತ್ತು ಆದರೆ ಇದುವರೆಗೆ ಅದು ತಾತ್ಕಾಲಿಕ ಕ್ಯಾಂಪಸ್‌ನಲ್ಲಿ ನಡೆಯುತ್ತಿತ್ತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ