PM Modi: ಇಟಲಿಯ ಜಿ7 ಶೃಂಗಸಭೆಗೆ ತೆರಳಿದ ನರೇಂದ್ರ ಮೋದಿ; 3ನೇ ಅವಧಿಯ ಮೊದಲ ವಿದೇಶ ಪ್ರವಾಸ
G7 Summit 2024: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಆಹ್ವಾನದ ಮೇರೆಗೆ ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಇಂದು ಇಟಲಿಗೆ ತೆರಳಿದ್ದಾರೆ. ಸತತ ಮೂರನೇ ಅವಧಿಗೆ ಅಧಿಕಾರ ವಹಿಸಿಕೊಂಡ ನಂತರ ಇದು ಅವರ ಮೊದಲ ಅಂತಾರಾಷ್ಟ್ರೀಯ ಪ್ರವಾಸವಾಗಿದೆ. ಉನ್ನತ ಮಟ್ಟದ ನಿಯೋಗದ ಜೊತೆಗೆ ಪ್ರಧಾನಿ ಮೋದಿ ಜೂನ್ 14ರಂದು ಜಿ7 ಔಟ್ರೀಚ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
ನವದೆಹಲಿ: ಇಟಲಿಯ ಅಪುಲಿಯಾ ಪ್ರದೇಶದಲ್ಲಿ ನಾಳೆ (ಜೂನ್ 14) ನಡೆಯಲಿರುವ ಜಿ7 ಶೃಂಗಸಭೆಯಲ್ಲಿ (G7 Summit) ಪಾಲ್ಗೊಳ್ಳಲು ತಮ್ಮ ನಿಯೋಗದ ಜೊತೆ ಇಂದು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ದೆಹಲಿಯಿಂದ ವಿಮಾನದಲ್ಲಿ ಇಟಲಿಗೆ ತೆರಳಿದ್ದಾರೆ. 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಸತತ ಮೂರನೇ ಅವಧಿಗೆ ಅಧಿಕಾರದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಪ್ರಧಾನಿಯವರ ಮೊದಲ ವಿದೇಶಿ ಭೇಟಿ ಇದಾಗಿದೆ. ಇಟಲಿಗೆ ಹೊರಡುವ ಮುನ್ನ ಮಾತನಾಡಿದ ಪ್ರಧಾನಿ ಮೋದಿ, G7 ಔಟ್‌ರೀಚ್ ಶೃಂಗಸಭೆಯು ಜಾಗತಿಕವಾಗಿ ನಿರ್ಣಾಯಕ ವಿಷಯಗಳ ಕುರಿತು ಚರ್ಚಿಸಲು ಒಂದು ಅವಕಾಶವಾಗಿದೆ ಎಂದು ಹೇಳಿದ್ದಾರೆ.
ಸತತ ಮೂರನೇ ಅವಧಿಗೆ ಅಧಿಕಾರ ವಹಿಸಿಕೊಂಡ ನಂತರ ಅವರ ಮೊದಲ ವಿದೇಶಿ ಭೇಟಿಯನ್ನು ಇಟಲಿಗೆ ನೀಡುತ್ತಿರುವುದು ಸಂತೋಷವಾಗಿದೆ. ಜಿ7 ಶೃಂಗಸಭೆಯಲ್ಲಿ ನಡೆಯುವ ಚರ್ಚೆಯ ಸಮಯದಲ್ಲಿ ಕೃತಕ ಬುದ್ಧಿಮತ್ತೆ, ಶಕ್ತಿ, ಆಫ್ರಿಕಾ ಮತ್ತು ಮೆಡಿಟರೇನಿಯನ್ ಬಗ್ಗೆ ಗಮನ ಹರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಟಲಿಯ ಅಪುಲಿಯಾ ಪ್ರದೇಶದಲ್ಲಿ G7 ಎಂದು ಕರೆಯಲ್ಪಡುವ ಗ್ರೂಪ್ ಆಫ್ ಸೆವೆನ್‌ನ ಶೃಂಗಸಭೆ ಶುಕ್ರವಾರ ನಡೆಯಲಿದೆ.
Delhi: Prime Minister Narendra Modi departs for Italy.
At the invitation of Italian PM Giorgia Meloni, PM Modi is travelling to Apulia, Italy to participate in G7 Outreach Summit on 14th June. The two leaders will have a bilateral meeting on the sidelines of the Summit. pic.twitter.com/sL8ZJ4Ihkf
— ANI (@ANI) June 13, 2024
ಇದನ್ನೂ ಓದಿ: ಎನ್‌ಎಸ್‌ಎ ಆಗಿ ಅಜಿತ್ ದೋವಲ್ ಮರುನೇಮಕ; ಮೋದಿ ಪ್ರಧಾನ ಕಾರ್ಯದರ್ಶಿಯಾಗಿ ಪಿಕೆ ಮಿಶ್ರಾ ಮುಂದುವರಿಕೆ
“ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಆಹ್ವಾನದ ಮೇರೆಗೆ, ನಾನು ಜೂನ್ 14ರಂದು ನಡೆಯುವ G7 ಔಟ್ರೀಚ್ ಶೃಂಗಸಭೆಯಲ್ಲಿ ಭಾಗವಹಿಸಲು ಇಟಲಿಯ ಅಪುಲಿಯಾ ಪ್ರದೇಶಕ್ಕೆ ಪ್ರಯಾಣಿಸುತ್ತಿದ್ದೇನೆ. ಸತತ ಮೂರನೇ ಅವಧಿಯಲ್ಲಿ ಇಟಲಿಗೆ ನನ್ನ ಮೊದಲ ಭೇಟಿಯು ಜಿ- 7 ಶೃಂಗಸಭೆಗೆ ಆಗಿದೆ” ಎಂದು ಮೋದಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಈ ಹೇಳಿಕೆಯು G7 ಅಥವಾ ಇತರ ನಾಯಕರೊಂದಿಗಿನ ಯಾವುದೇ ನಿರ್ದಿಷ್ಟ ದ್ವಿಪಕ್ಷೀಯ ಸಭೆಗಳಲ್ಲಿ ಭಾಗವಹಿಸುವ ಬಗ್ಗೆ ಉಲ್ಲೇಖಿಸಿಲ್ಲ. ಆದರೂ ಇಟಲಿಯ ಭೇಟಿಯ ಸಮಯದಲ್ಲಿ ಪಿಎಂ ಮೋದಿ ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಅವರನ್ನು ಭೇಟಿಯಾಗುತ್ತಾರೆ ಎನ್ನಲಾಗಿದೆ.
PM Shri @narendramodi departs for Italy to attend the G7 Summit, following an official invitation from Italian PM @GiorgiaMeloni.
PM Modi will also hold meetings with various global leaders during the Summit. pic.twitter.com/hlLJeSCqy8
— BJP (@BJP4India) June 13, 2024
ಇದನ್ನೂ ಓದಿ: ಜಿ7 ಶೃಂಗಸಭೆಗಾಗಿ ಭಾರತದಿಂದ ಇಟಲಿಗೆ ಹೊರಟ ಪ್ರಧಾನಿ ಮೋದಿ; ಇಲ್ಲಿದೆ ವಿಡಿಯೋ
ಹಾಗೇ, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ಕೂಡ ನರೇಂದ್ರ ಮೋದಿ ದ್ವಿಪಕ್ಷೀಯ ಸಭೆ ನಡೆಸುವ ನಿರೀಕ್ಷೆಯಿದೆ. ಇನ್ನು ಕೆಲವು ನಾಯಕರೊಂದಿಗೆ ಮೋದಿ ದ್ವಿಪಕ್ಷೀಯ ಸಭೆ ನಡೆಸುವ ಸಾಧ್ಯತೆ ಇದೆ. ಪ್ರಧಾನಮಂತ್ರಿ ಅವರು ಝೆಲೆನ್ಸ್ಕಿ ಅವರೊಂದಿಗೆ ಯಾವುದಾದರೂ ದ್ವಿಪಕ್ಷೀಯ ಸಭೆ ನಡೆಸುತ್ತಾರೆಯೇ ಎಂಬ ಪ್ರಶ್ನೆಗೆ ವಿದೇಶಾಂಗ ಇಲಾಖೆಯ ಅಧಿಕಾರಿಗಳು ನೇರ ಉತ್ತರವನ್ನು ನೀಡಿಲ್ಲ.
ಕಳೆದ ವರ್ಷ ಮೇ ತಿಂಗಳಲ್ಲಿ ಹಿರೋಷಿಮಾದಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಕೂಡ ನರೇಂದ್ರ ಮೋದಿ ಭಾಗವಹಿಸಿದ್ದರು. ಈ ಬಾರಿಯ ಇಟಲಿಯ ಶೃಂಗಸಭೆಯು ಜೂನ್ 15ರವರೆಗೆ ನಡೆಯುತ್ತದೆ. ಆದರೆ ಯುಎಸ್ ಅಧ್ಯಕ್ಷ ಜೋ ಬಿಡೆನ್ ಜೂನ್ 14ರ ರಾತ್ರಿ ತಮ್ಮ ದೇಶಕ್ಕೆ ವಾಪಾಸ್ ತೆರಳುತ್ತಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ