ಎನ್‌ಎಸ್‌ಎ ಆಗಿ ಅಜಿತ್ ದೋವಲ್‌ ಮರುನೇಮಕ; ಮೋದಿ ಪ್ರಧಾನ ಕಾರ್ಯದರ್ಶಿಯಾಗಿ ಪಿಕೆ ಮಿಶ್ರಾ ಮುಂದುವರಿಕೆ

ನರೇಂದ್ರ ಮೋದಿ 3ನೇ ಅವಧಿಗೆ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಅದೇರೀತಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರದಲ್ಲಿ ಸತತ ಮೂರನೇ ಅವಧಿಗೆ ಅಜಿತ್ ದೋವಲ್ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ನೇಮಕಗೊಂಡಿದ್ದಾರೆ.

ಎನ್‌ಎಸ್‌ಎ ಆಗಿ ಅಜಿತ್ ದೋವಲ್‌ ಮರುನೇಮಕ; ಮೋದಿ ಪ್ರಧಾನ ಕಾರ್ಯದರ್ಶಿಯಾಗಿ ಪಿಕೆ ಮಿಶ್ರಾ ಮುಂದುವರಿಕೆ
ಅಜಿತ್ ದೋವಲ್
Follow us
|

Updated on: Jun 13, 2024 | 5:39 PM

ನವದೆಹಲಿ: ಕೇಂದ್ರ ಸರ್ಕಾರವು ಅಜಿತ್ ದೋವಲ್ (Ajit Doval) ಅವರನ್ನು ಎನ್‌ಎಸ್‌ಎ (ರಾಷ್ಟ್ರೀಯ ಭದ್ರತಾ ಸಲಹೆಗಾರ) ಆಗಿ 3ನೇ ಬಾರಿಗೆ ಮರುನೇಮಕ ಮಾಡಿದ್ದಾರೆ. ಹಾಗೇ, ಪಿಕೆ ಮಿಶ್ರಾ (PK Mishra) ಅವರನ್ನು ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ಪ್ರಧಾನ ಕಾರ್ಯದರ್ಶಿಯಾಗಿ ಮರುನೇಮಕ ಮಾಡಲಾಗಿದೆ. ಹಾಗೇ, ಜೂನ್ 10ರಿಂದ ಜಾರಿಗೆ ಬರುವಂತೆ ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿಯಾಗಿ ಡಾ. ಪಿ.ಕೆ. ಮಿಶ್ರಾ ಅವರನ್ನು ನೇಮಕ ಮಾಡಲಾಗಿದೆ.

ಡಾ. ಪಿ.ಕೆ. ಮಿಶ್ರಾ ಅವರನ್ನು ನೇಮಕ ಮಾಡಲು ಕ್ಯಾಬಿನೆಟ್ ನೇಮಕಾತಿ ಸಮಿತಿಯು ಅನುಮೋದನೆ ನೀಡಿದೆ. ಅವರ ನೇಮಕಾತಿಯು ಪ್ರಧಾನ ಮಂತ್ರಿಯ ಅವಧಿ ಮುಗಿಯುವವರೆಗೆ ಅಥವಾ ಮುಂದಿನ ಆದೇಶದವರೆಗೆ ವ್ಯಾಲಿಡ್ ಆಗಿರುತ್ತದೆ. ಅವರ ಕಛೇರಿಯ ಅವಧಿಯಲ್ಲಿ ಅವರಿಗೆ ಕ್ಯಾಬಿನೆಟ್ ಸಚಿವರ ಶ್ರೇಣಿಯನ್ನು ನೀಡಲಾಗುವುದು.

ಅಮಿತ್ ಖರೆ ಮತ್ತು ತರುಣ್ ಕಪೂರ್ ಅವರನ್ನು ಪ್ರಧಾನ ಮಂತ್ರಿಗಳ ಸಲಹೆಗಾರರಾಗಿ ನೇಮಕ ಮಾಡಲಾಗಿದೆ. ಪ್ರಧಾನ ಮಂತ್ರಿಗಳ ಕಛೇರಿಯಲ್ಲಿ, ಭಾರತ ಸರ್ಕಾರದ ಕಾರ್ಯದರ್ಶಿಯ ಶ್ರೇಣಿಯಲ್ಲಿ 2 ವರ್ಷಗಳ ಅವಧಿಗೆ ಜೂನ್ 10ರಿಂದ ಜಾರಿಗೆ ಬರುವಂತೆ ಅಥವಾ ಮುಂದಿನ ಆದೇಶದವರೆಗೆ ಈ ನೇಮಕ ಮಾಡಲಾಗಿದೆ.

ಇದನ್ನೂ ಓದಿ: Rahul Gandhi: ವಾರಾಣಸಿಯಲ್ಲಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿದ್ದರೆ ಮೋದಿ ಸೋಲುತ್ತಿದ್ದರು; ರಾಹುಲ್ ಗಾಂಧಿ

ಅಜಿತ್ ದೋವಲ್ ಅವರನ್ನು ಗುರುವಾರ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಮರು ನೇಮಕ ಮಾಡಲಾಗಿದೆ ಎಂದು ಸರ್ಕಾರ ಖಚಿತಪಡಿಸಿದೆ. ಸಂಪುಟದ ನೇಮಕಾತಿ ಸಮಿತಿಯು ಪಿ.ಕೆ. ಮಿಶ್ರಾ ಅವರನ್ನು ಪ್ರಧಾನಿ ನರೇಂದ್ರ ಮೋದಿಯವರ ಪ್ರಧಾನ ಕಾರ್ಯದರ್ಶಿಯಾಗಿ ಮರು ನೇಮಕ ಮಾಡಿದೆ. ಪಿಎಂ ನರೇಂದ್ರ ಮೋದಿಯವರು ಡಾ. ಪಿ.ಕೆ. ಮಿಶ್ರಾ ಅವರನ್ನು ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಅಜಿತ್ ದೋವಲ್ ಅವರನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಮರುನೇಮಕಗೊಳಿಸುವುದರೊಂದಿಗೆ ಇಬ್ಬರು ನಿವೃತ್ತ ಅಧಿಕಾರಿಗಳು ಪ್ರಧಾನ ಮಂತ್ರಿಗಳಿಗೆ ಸುದೀರ್ಘ ಸೇವೆ ಸಲ್ಲಿಸಿದ ಪ್ರಧಾನ ಸಲಹೆಗಾರರಾಗಿದ್ದಾರೆ.

ಡಾ. ಪಿ.ಕೆ. ಮಿಶ್ರಾ ಅವರು ಪಿಎಂಒದಲ್ಲಿ ಆಡಳಿತಾತ್ಮಕ ವಿಷಯಗಳು ಮತ್ತು ನೇಮಕಾತಿಗಳನ್ನು ನಿರ್ವಹಿಸುತ್ತಿದ್ದರೆ, ಅಜಿತ್ ದೋವಲ್ ರಾಷ್ಟ್ರೀಯ ಭದ್ರತೆ, ಮಿಲಿಟರಿ ವ್ಯವಹಾರಗಳು ಮತ್ತು ಗುಪ್ತಚರವನ್ನು ನಿರ್ವಹಿಸಲಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಪ್ರಮಾಣವಚನ ಸಮಾರಂಭದಲ್ಲಿ ಕಾಣಿಸಿಕೊಂಡ ನಿಗೂಢ ಪ್ರಾಣಿ ಯಾವುದು? ದೆಹಲಿ ಪೊಲೀಸ್ ಹೇಳಿದ್ದೇನು?

1968ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿರುವ ಅಜಿತ್ ದೋವಲ್ ಹೆಸರಾಂತ ಭಯೋತ್ಪಾದನಾ ನಿಗ್ರಹ ತಜ್ಞರು ಮತ್ತು ಪರಮಾಣು ವಿಷಯಗಳ ಬಗ್ಗೆ ಪರಿಣಿತರಾಗಿದ್ದಾರೆ. ಡಾ. ಪಿ.ಕೆ. ಮಿಶ್ರಾ ಅವರು 1972ರ ಬ್ಯಾಚ್‌ನ ನಿವೃತ್ತ ಅಧಿಕಾರಿಯಾಗಿದ್ದು, ಅವರು ಭಾರತ ಸರ್ಕಾರದ ಕೃಷಿ ಕಾರ್ಯದರ್ಶಿಯಾಗಿ ನಿವೃತ್ತರಾದ ನಂತರ ಕಳೆದ ಒಂದು ದಶಕದಿಂದ ಪಿಎಂ ಮೋದಿಯವರೊಂದಿಗೆ ಇದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ