ವಿಮಾನ ದರ ಇಳಿಕೆ ಬಗ್ಗೆ ಸುಳಿವು ನೀಡಿದ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು

ನಾನು ಪರಿಶೀಲನಾ ಸಭೆಗಳನ್ನು ನಡೆಸಲಿದ್ದೇನೆ. ಖಂಡಿತವಾಗಿ, ನನ್ನ ಉದ್ದೇಶವು (ಟಿಕೆಟ್) ಬೆಲೆಗಳನ್ನು ಕಡಿಮೆ ಮಾಡುವುದು. ಏಕೆಂದರೆ ಅದು ಸಾಮಾನ್ಯ ಜನರಿಗೆ ಸವಾಲಾಗಿದೆ. ವಿಮಾನ ಪ್ರಯಾಣವನ್ನು ಸಾಮಾನ್ಯ ಜನರಿಗೆ ತಲುಪಿಸುವುದು ನಮ್ಮ ಉದ್ದೇಶವಾಗಿದೆ, ದರ ಕೈಗೆಟುಕುವಂತೆ ಮಾಡದಿದ್ದರೆ ಅದು ಆಗುವುದಿಲ್ಲ ಎಂದಿದ್ದಾರೆ ಸಚಿವರು.

ವಿಮಾನ ದರ ಇಳಿಕೆ ಬಗ್ಗೆ ಸುಳಿವು ನೀಡಿದ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು
ರಾಮ್ ಮೋಹನ್ ನಾಯ್ಡು
Follow us
|

Updated on: Jun 13, 2024 | 4:52 PM

ದೆಹಲಿ ಜೂನ್ 13: ಕೇಂದ್ರ ನಾಗರಿಕ ವಿಮಾನಯಾನ ಸಚಿವರಾಗಿ (Union Civil Aviation minister) ಗುರುವಾರ ಅಧಿಕಾರ ಸ್ವೀಕರಿಸಿದ ಕಿಂಜರಾಪು ರಾಮ್ ಮೋಹನ್ ನಾಯ್ಡು (Kinjarapu Ram Mohan Naidu) ಅವರು ವಿಮಾನ ದರವನ್ನು (Airfare) ಕಡಿಮೆ ಮಾಡುವ ಸುಳಿವು ನೀಡಿದ್ದಾರೆ. ಪ್ರತಿಯೊಬ್ಬರಿಗೂ ವಿಮಾನಯಾನ ಸೌಲಭ್ಯ ಕಲ್ಪಿಸುವುದು ಸರ್ಕಾರದ ಗುರಿಯಾಗಿದ್ದು, ಕೈಗೆಟಕುವ ದರದಲ್ಲಿ ವಿಮಾನ ಟಿಕೆಟ್ ನೀಡಿದರೇ ಮಾತ್ರ ಇದನ್ನು ಸಾಧಿಸಲು ಸಾಧ್ಯ ಎಂದರು. ನಾನು ನಾಗರಿಕ ವಿಮಾನಯಾನ ಸಚಿವ ಎಂದು ಘೋಷಿಸಿದ ಸಮಯದಿಂದ, ನಾನು ಎಲ್ಲಿಗೆ ಹೋದರೂ, ಕಳೆದ ಕೆಲವು ವರ್ಷಗಳಿಂದ, ವಿಶೇಷವಾಗಿ ಕೋವಿಡ್ ನಂತರ ದರ ಹೆಚ್ಚಳದ ಬಗ್ಗೆಯೇ ಜನ ಮಾತನಾಡುತ್ತಾರೆ. ನನಗೆ ಈ ವಿಷಯದ ಬಗ್ಗೆ ಸಂಪೂರ್ಣ ತಿಳುವಳಿಕೆ ಬೇಕು ಅದಕ್ಕಾಗಿ ನಾನು ಮಧ್ಯಸ್ಥಗಾರರ ಜೊತೆ ಮಾತುಕತೆ ನಡೆಸಲಿದ್ದೇನೆ ಎಂದು ರಾಮ್ ಮೋಹನ್ ನಾಯ್ಡು ಪಿಟಿಐಗೆ ತಿಳಿಸಿದ್ದಾರೆ.

ನಾನು ಪರಿಶೀಲನಾ ಸಭೆಗಳನ್ನು ನಡೆಸಲಿದ್ದೇನೆ. ಖಂಡಿತವಾಗಿ, ನನ್ನ ಉದ್ದೇಶವು (ಟಿಕೆಟ್) ಬೆಲೆಗಳನ್ನು ಕಡಿಮೆ ಮಾಡುವುದು. ಏಕೆಂದರೆ ಅದು ಸಾಮಾನ್ಯ ಜನರಿಗೆ ಸವಾಲಾಗಿದೆ. ವಿಮಾನ ಪ್ರಯಾಣವನ್ನು ಸಾಮಾನ್ಯ ಜನರಿಗೆ ತಲುಪಿಸುವುದು ನಮ್ಮ ಉದ್ದೇಶವಾಗಿದೆ, ದರ ಕೈಗೆಟುಕುವಂತೆ ಮಾಡದಿದ್ದರೆ ಅದು ಆಗುವುದಿಲ್ಲ ಎಂದಿದ್ದಾರೆ ಸಚಿವರು.

ಕಿಂಜರಾಪು ರಾಮ್ ಮೋಹನ್ ನಾಯ್ಡು ಅವರು ಕೇಂದ್ರದ ನರೇಂದ್ರ ಮೋದಿ 3.0 ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು. 36 ವರ್ಷ ವಯಸ್ಸಿನ ನಾಯಕ ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭೆ ಚುನಾವಣೆಯಲ್ಲಿ ಉತ್ತರ ಆಂಧ್ರಪ್ರದೇಶದ ಶ್ರೀಕಾಕುಳದಿಂದ ಮೂರನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಅವರು ವೈಎಸ್‌ಆರ್‌ಸಿಪಿಯ ತಿಲಕ್ ಪೆರಡಾ ಅವರನ್ನು 3.2 ಲಕ್ಷ ಮತಗಳ ಅಂತರದಿಂದ ಸೋಲಿಸಿದರು.

ಥಾಮಸ್ ಕುಕ್ (ಭಾರತ) ಮತ್ತು ಎಸ್‌ಒಟಿಸಿ ಟ್ರಾವೆಲ್‌ನ ಅಂಕಿಅಂಶಗಳ ಪ್ರಕಾರ, ಕೋಲ್ಕತ್ತಾ-ಬಾಗ್ಡೋಗ್ರಾ, ದೆಹಲಿ-ಬೆಂಗಳೂರು ಮತ್ತು ದೆಹಲಿ-ಮುಂಬೈನಂತಹ ಪ್ರಮುಖ ದೇಶೀಯ ಮಾರ್ಗಗಳಲ್ಲಿನ ವಿಮಾನ ದರಗಳು ಈ ವರ್ಷದ ಮೇ ತಿಂಗಳಲ್ಲಿ 12.7% ವರೆಗೆ ವರ್ಷದಿಂದ ವರ್ಷಕ್ಕೆ ಏರಿಕೆ ಕಂಡಿವೆ.

ಹೆಚ್ಚಿದ ವಾಯುಯಾನ ಟರ್ಬೈನ್ ಇಂಧನ ಬೆಲೆಗಳು, ರೂಪಾಯಿ ಮೌಲ್ಯ ಕುಸಿತ, ಪ್ರಮುಖ ಸಂಸ್ಥೆಗಳಿಂದ ಕಡಿಮೆಯಾದ ವಿಮಾನಗಳು ಮತ್ತು ಎಂಜಿನ್ ಪೂರೈಕೆ ಸಮಸ್ಯೆಗಳು ಇತ್ತೀಚಿನ ವಿಮಾನ ದರಗಳಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಏವಿಯೇಷನ್ ಉದ್ಯಮದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಸರಣಿ ಭಯೋತ್ಪಾದಕ ದಾಳಿ, ಜಮ್ಮು-ಕಾಶ್ಮೀರದ ಭದ್ರತಾ ಪರಿಸ್ಥಿತಿ ಬಗ್ಗೆ ಪರಿಶೀಲಿಸಿದ ಪ್ರಧಾನಿ ಮೋದಿ

ನಾಗರಿಕ ವಿಮಾನಯಾನ ನಿಯಂತ್ರಕ, ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (DGCA), ಮಾರ್ಚ್‌ನಲ್ಲಿ ಬೇಸಿಗೆ ವೇಳಾಪಟ್ಟಿಗಾಗಿ ಡೊಮೆಸ್ಟಿಕ್ ವೀಕ್ಲಿ ಡಿಪಾರ್ಚರ್ಸ್ ಅನುಮೋದಿಸಿದೆ, ಇದು ಕಳೆದ ವರ್ಷ ಇದೇ ಅವಧಿಗಿಂತ ಸುಮಾರು 6% ಹೆಚ್ಚಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.ಬೇಸಿಗೆಯ ಗರಿಷ್ಠ ಪ್ರಯಾಣದಲ್ಲಿನ ಬೇಡಿಕೆಯನ್ನು ನೋಡಿದರೆ, ಇದು 14 ದೇಶೀಯ ವಿಮಾನಯಾನ ಸಂಸ್ಥೆಗಳಲ್ಲಿ 24,275 ಸಾಪ್ತಾಹಿಕ ದೇಶೀಯ ನಿರ್ಗಮನಗಳನ್ನು ಅನುಮೋದಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ