ಕೆಲವು ಮಾರ್ಗಗಳಲ್ಲಿ ವಿಮಾನ ದರ ಶೇ.61ರಷ್ಟು ಇಳಿಕೆ: ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ
ಮಾರುಕಟ್ಟೆ ನಿಯಂತ್ರಿತ ವಿಮಾನಯಾನ ದರಗಳನ್ನು ನಿಗದಿಪಡಿಸಲು ಏರ್‌ಲೈನ್‌ಗಳಿಗೆ ಹಕ್ಕನ್ನು ನೀಡಲಾಗಿದೆ. ದೇಶದಲ್ಲಿ ವಿಮಾನಯಾನ ಮಾರುಕಟ್ಟೆಯು ಸೀಸನ್ ಆಧಾರಿತವಾಗಿದೆ. ದರಗಳನ್ನು ಸಹ ಅದಕ್ಕೆ ಅನುಗುಣವಾಗಿ ನಿಗದಿಪಡಿಸಲಾಗಿದೆ
ದೆಹಲಿ: ಜೂನ್ 6 ರಂದು ನಡೆದ ವಿಮಾನಯಾನ ಸಂಸ್ಥೆಗಳ ಸಲಹಾ ಗುಂಪಿನ ಸಭೆಯ ನಂತರ ದೆಹಲಿಯಿಂದ ಹೊರಡುವ ಕೆಲವು ಮಾರ್ಗಗಳಲ್ಲಿ ವಿಮಾನ ದರವನ್ನು ಗಣನೀಯವಾಗಿ ಶೇ 14 ರಿಂದ ಶೇ61 ರಷ್ಟು ಕಡಿಮೆ ಮಾಡಲಾಗಿದೆ ಎಂದು ನಾಗರಿಕ ವಿಮಾನಯಾನ(Civil Aviation) ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (Jyotiraditya Scindia)ಹೇಳಿದ್ದಾರೆ. ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (DGCA) ಮತ್ತು ಸಚಿವಾಲಯದ ಮೇಲ್ವಿಚಾರಣಾ ಪ್ರಯತ್ನಗಳ ಬಗ್ಗೆ ಹೇಳಿದ ಸಿಂಧಿಯಾ, ದೆಹಲಿಯಿಂದ ಶ್ರೀನಗರ, ಲೇಹ್, ಪುಣೆ ಮತ್ತು ಮುಂಬೈಯಂತಹ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ವಿಮಾನಗಳ ಗರಿಷ್ಠ ದರಗಳಲ್ಲಿ ಕಡಿತದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.
ಜೂನ್ 6 ರಂದು ದೆಹಲಿಗೆ ಶ್ರೀನಗರ, ಲೇಹ್, ಪುಣೆ ಮತ್ತು ಮುಂಬೈಗೆ ಸಂಪರ್ಕ ಕಲ್ಪಿಸುವ ವಿಮಾನಗಳ ಗರಿಷ್ಠ ದರವನ್ನು ಶೇಕಡಾ 14-61 ರಷ್ಟು ಕಡಿಮೆ ಮಾಡಲಾಗಿದೆ ಎಂದು ಹೇಳಲು ನಾನು ಖುಷಿಪಡುತ್ತೇನೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಮತ್ತು ಸಚಿವಾಲಯವು ದೈನಂದಿನ ದರಗಳ ಮೇಲ್ವಿಚಾರಣೆ ನಡೆಸುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಂಧಿಯಾ ಹೇಳಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಅಡಿಯಲ್ಲಿ ಕಳೆದ ಒಂಬತ್ತು ವರ್ಷಗಳಲ್ಲಿ ವಿಮಾನಯಾನ ಕ್ಷೇತ್ರವು ಮಾಡಿದ ಕಾರ್ಯಗಳನ್ನು ಸಿಂಧಿಯಾಹೈಲೈಟ್ ಮಾಡಿದ್ದಾರೆ.ದರಗಳಿಗೆ ಸಂಬಂಧಿಸಿದಂತೆ ವಿಮಾನಯಾನ ವಲಯವು ಅಲ್ಗಾರಿದಮ್ ಅನ್ನು ಅನುಸರಿಸುತ್ತದೆ ಎಂದು ವಿಮಾನಯಾನ ಸಚಿವರು ಹೇಳಿದರು.
ವಿಮಾನಯಾನ ಸಂಸ್ಥೆಗಳು ವಿಮಾನ ದರಗಳನ್ನು ನಿರ್ಧರಿಸುವ ಅಧಿಕಾರವನ್ನು ಹೊಂದಿವೆ. ಇವು ಮಾರುಕಟ್ಟೆ ಡೈನಾಮಿಕ್ಸ್ ಮತ್ತು ಸೀಸನ್ ಸೇರಿದಂತೆ ವಿವಿಧ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ವಿಮಾನಯಾನ ಉದ್ಯಮವು ಬೆಲೆ ನಿರ್ಧಾರಗಳಿಗಾಗಿ ಅಲ್ಗಾರಿದಮ್ ಅನ್ನು ಬಳಸಿಕೊಳ್ಳುತ್ತದೆ.
ಮಾರುಕಟ್ಟೆ ನಿಯಂತ್ರಿತ ವಿಮಾನಯಾನ ದರಗಳನ್ನು ನಿಗದಿಪಡಿಸಲು ಏರ್‌ಲೈನ್‌ಗಳಿಗೆ ಹಕ್ಕನ್ನು ನೀಡಲಾಗಿದೆ. ದೇಶದಲ್ಲಿ ವಿಮಾನಯಾನ ಮಾರುಕಟ್ಟೆಯು ಸೀಸನ್ ಆಧಾರಿತವಾಗಿದೆ. ದರಗಳನ್ನು ಸಹ ಅದಕ್ಕೆ ಅನುಗುಣವಾಗಿ ನಿಗದಿಪಡಿಸಲಾಗಿದೆ. ಸಾಮರ್ಥ್ಯ ಕಡಿಮೆ ಮತ್ತು ಬೇಡಿಕೆ ಹೆಚ್ಚಿದ್ದರೆ ಮತ್ತು ಇನ್‌ಪುಟ್ ವೆಚ್ಚಗಳು ಕಡಿಮೆಯಾಗದಿದ್ದರೆ, ದರಗಳು ಹೆಚ್ಚಾಗಿರುತ್ತದೆ. ದರವನ್ನು ನಿರ್ಧರಿಸಲು ಅಲ್ಗಾರಿದಮ್ ಇದೆ ಎಂದು ಸಚಿವರು ಹೇಳಿದ್ದಾರ.
ಖಾಸಗಿ ವಿಮಾನಯಾನ ಸಂಸ್ಥೆಗಳೂ ತಮ್ಮದೇ ಆದ ಸಾಮಾಜಿಕ ಹೊಣೆಗಾರಿಕೆಯನ್ನು ಹೊಂದಿದ್ದು, ವಲಯಗಳಾದ್ಯಂತ ದರವನ್ನು ಹೆಚ್ಚಿಸುವುದಕ್ಕೆ ಮಿತಿ ಇರಬೇಕು. ಅದೇ ವೇಳೆ ಸಚಿವಾಲಯದ ಪಾತ್ರವು ಕೊಡುವುದಷ್ಟೇ ಮತ್ತು ನಿಯಂತ್ರಿಸುವುದಲ್ಲ ಎಂದು ಹೇಳಿದರು.
ಸಿಂಧಿಯಾ ಅವರು ಸೋಮವಾರ ಏರ್‌ಲೈನ್ಸ್ ಸಲಹಾ ಗುಂಪು ಕರೆದ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು, ಅಲ್ಲಿ ಅವರು ವಿಮಾನಯಾನ ಸಂಸ್ಥೆಗಳು ವಿಮಾನ ದರಗಳನ್ನು ಸ್ವಯಂ-ನಿಯಂತ್ರಿಸಲು ಮತ್ತು ಸಮಂಜಸವಾದ ಬೆಲೆ ಮಟ್ಟವನ್ನು ಕಾಯ್ದುಕೊಳ್ಳುವಂತೆ ಒತ್ತಾಯಿಸಿದರು.
ಇದನ್ನೂ ಓದಿ: Most Expensive City: ಭಾರತದಲ್ಲಿ ವಲಸಿಗರಿಗೆ ದುಬಾರಿ ನಗರ ಮುಂಬೈ; ನಂತರದ ಸ್ಥಾನದಲ್ಲಿದೆ ದೆಹಲಿ, ಬೆಂಗಳೂರು
ಮಣಿಪುರದಲ್ಲಿ ಕೆಲವು ಅನಿರೀಕ್ಷಿತ ಘಟನೆಗಳು ನಡೆದಿವೆ. ಈಗ ಒಡಿಶಾದಲ್ಲಿ. ಪ್ರಯಾಣ ದರಗಳ ಬಗ್ಗೆ ಕಾಳಜಿ ವಹಿಸಬೇಕು. ಇವುಗಳ ಹೊರತಾಗಿ, ದೆಹಲಿಯಿಂದ ಶ್ರೀನಗರ, ಲೇಹ್, ಮುಂಬೈ, ಪುಣೆ, ಅಹಮದಾಬಾದ್ ಮತ್ತು ಬೆಂಗಳೂರಿನಂತಹ ನಗರಗಳಿಗೆ ಪ್ರಯಾಣ ದರವು ಗರಿಷ್ಠವಾಗಿ ಉಳಿದಿದೆ ಎಂದು ಸಚಿವರು ಹೇಳಿದ್ದಾರೆ. ದೇಶೀಯ ವಿಮಾನ ಟಿಕೆಟ್‌ಗಳ ಬೆಲೆಗಳು ಗಗನಕ್ಕೇರುತ್ತಿರುವುದು ಪ್ರಯಾಣಿಕರ ಸಂಕಷ್ಟವನ್ನು ಹೆಚ್ಚಿಸುತ್ತಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ