AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kuwait Fire tragedy: ಸಾವಿಗೀಡಾದ 43 ಭಾರತೀಯರಲ್ಲಿ 24 ಮಂದಿ ಕೇರಳದವರು; ಕುವೈತ್​​ಗೆ ತೆರಳಲಿದ್ದಾರೆ ಆರೋಗ್ಯ ಸಚಿವೆ ವೀಣಾ ಜಾರ್ಜ್

ಕುವೈತ್ ಮೂಲಗಳ ಪ್ರಕಾರ, ಸಾವಿನ ಸಂಖ್ಯೆ ಇನ್ನೂ ಹೆಚ್ಚಿರಬಹುದು. ಕಟ್ಟಡದಲ್ಲಿ ವಾಸವಿದ್ದ ಸುಮಾರು 18 ಮಂದಿ ನೌಕರರು ಮುಂಜಾನೆ 4 ಗಂಟೆ ಸುಮಾರಿಗೆ ಕಟ್ಟಡದಿಂದ ಹೊರಬಂದಿದ್ದರಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಅವರಲ್ಲಿ ಹೆಚ್ಚಿನವರು ಮಲಗುವ ಮುನ್ನ ಅವರೊಂದಿಗೆ ಮಾತನಾಡಿದ್ದರಿಂದ ಅಲ್ಲಿ ಹೀಗೊಂದು ದುರಂತ ಸಂಭವಿಸಿ ಆತ್ಮೀಯರನ್ನು ಕುಟುಂಬದವರನ್ನು ಕಳೆದಕೊಂಡಿದ್ದೇವೆ ಎಂದು ಊರಲ್ಲಿರುವ ಕುಟುಂಬ ನಂಬುತ್ತಿಲ್ಲ

Kuwait Fire tragedy: ಸಾವಿಗೀಡಾದ 43 ಭಾರತೀಯರಲ್ಲಿ 24 ಮಂದಿ ಕೇರಳದವರು; ಕುವೈತ್​​ಗೆ ತೆರಳಲಿದ್ದಾರೆ ಆರೋಗ್ಯ ಸಚಿವೆ ವೀಣಾ ಜಾರ್ಜ್
ಕುವೈತ್ ಅಗ್ನಿ ಅವಘಡ
ರಶ್ಮಿ ಕಲ್ಲಕಟ್ಟ
|

Updated on:Jun 14, 2024 | 2:11 PM

Share

ತಿರುವನಂತಪುರಂ ಜೂನ್ 13: ದಕ್ಷಿಣ ಕುವೈತ್‌ನ (Kuwait) ಅಹ್ಮದಿ ಗವರ್ನರೇಟ್‌ನಲ್ಲಿ ಜೂನ್ 12 ರಂದು ಮಂಗಾಫ್ ಪ್ರದೇಶದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 43 ಭಾರತೀಯರು ಸಾವಿಗೀಡಾಗಿದ್ದಾರೆ. ಇದರಲ್ಲಿ 24 ಮಂದಿ ಕೇರಳದವರು. ಇದೀಗ ಕೇರಳದ (Kerala) ಆರೋಗ್ಯ ಸಚಿವೆ ವೀಣಾ ಜಾರ್ಜ್ (Veena George) ಕುವೈತ್‌ಗೆ ತೆರಳಲಿದ್ದಾರೆ. ಕುವೈತ್‌ನಲ್ಲಿ ಸಾವಿಗೀಡಾದವರ ಪಾರ್ಥೀವ ಶರೀರವನ್ನು ತಮ್ಮ ಊರಿಗೆ ತ್ವರಿತವಾಗಿ ಸ್ಥಳಾಂತರಿಸುವುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಸಚಿವರು ಮತ್ತು ಅವರ ಅಧಿಕಾರಿಗಳ ತಂಡವು ಭಾರತೀಯ ಮತ್ತು ಕುವೈತ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲಿದೆ.

ಇದೇ ವೇಳೆ ಕೇರಳದ ಚಾವಕ್ಕಾಡ್ ಮೂಲದ ಬಿನೋಯ್ ಎಂಬ ವ್ಯಕ್ತಿ ನಾಪತ್ತೆಯಾಗಿದ್ದಾರೆ. ಮೂಲಗಳ ಪ್ರಕಾರ ದುರ್ಘಟನೆ ನಡೆದ ಕಟ್ಟಡದೊಳಗೆ ಬಿನೋಯ್ ಸಿಲುಕಿಕೊಂಡಿದ್ದಾರೆ ಎಂದು ನಂಬಲಾಗಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರ ಕುಟುಂಬಕ್ಕೆ 1 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲು ನಿರ್ಧರಿಸಲಾಗಿದೆ.

ಲುಲು ಗ್ರೂಪ್‌ನ ಅಧ್ಯಕ್ಷ ಯೂಸಫಲಿ ಅವರು 5 ಲಕ್ಷ ರೂ. ಹಾಗೂ ಕೇರಳ ಮೂಲದ ಉದ್ಯಮಿ ರವಿ ಪಿಳ್ಳೈ ಅವರು ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂ.ಗಳನ್ನು ಹಸ್ತಾಂತರಿಸಲಿದ್ದಾರೆ.

ಆತ್ಮೀಯರನ್ನು ಕಳೆದುಕೊಂಡ ಕುಟುಂಬಗಳಿಗೆ ರಾಜ್ಯ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ. ಆರೋಗ್ಯ ಸಚಿವರು ಇಲ್ಲಿ ಸಹಾಯ ಮಾಡುವ ಅಧಿಕಾರಿಗಳ ತಂಡವನ್ನು ಹೊಂದಿರುತ್ತಾರೆ. ಬೆಂಕಿ ಅವಘಡದಲ್ಲಿ 24 ಮಲಯಾಳಿಗಳು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ನಮಗೆ ಸಿಕ್ಕಿದೆ ಎಂದು ಕೇರಳದ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಪಿ ರಾಜೀವ್ ಹೇಳಿದ್ದಾರೆ.

ಕುವೈತ್ ಮೂಲಗಳ ಪ್ರಕಾರ, ಸಾವಿನ ಸಂಖ್ಯೆ ಇನ್ನೂ ಹೆಚ್ಚಿರಬಹುದು. ಕಟ್ಟಡದಲ್ಲಿ ವಾಸವಿದ್ದ ಸುಮಾರು 18 ಮಂದಿ ನೌಕರರು ಮುಂಜಾನೆ 4 ಗಂಟೆ ಸುಮಾರಿಗೆ ಕಟ್ಟಡದಿಂದ ಹೊರಬಂದಿದ್ದರಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಅವರಲ್ಲಿ ಹೆಚ್ಚಿನವರು ಮಲಗುವ ಮುನ್ನ ಅವರೊಂದಿಗೆ ಮಾತನಾಡಿದ್ದರಿಂದ ಅಲ್ಲಿ ಹೀಗೊಂದು ದುರಂತ ಸಂಭವಿಸಿ ಆತ್ಮೀಯರನ್ನು ಕುಟುಂಬದವರನ್ನು ಕಳೆದಕೊಂಡಿದ್ದೇವೆ ಎಂದು ಊರಲ್ಲಿರುವ ಕುಟುಂಬ ನಂಬುತ್ತಿಲ್ಲ. ಸಾವಿಗೀಡಾದವರಲ್ಲಿ ಹೆಚ್ಚಿನವರು ದುರಂತ ಸಂಭವಿಸುವ ಮೊದಲು ವಿಡಿಯೊ ಕರೆ ಅಥವಾ ನೇರ ಫೋನ್‌ಗಳ ಮೂಲಕ ಅವರ ಆತ್ಮೀಯ ವ್ಯಕ್ತಿಗಳೊಂದಿಗೆ ಮಾತನಾಡಿದ್ದರು.

ಅವನು ಮನೆಗೆ ಬರುವವನಿದ್ದ, ಈಗ ಈ ಸುದ್ದಿ ಕೇಳುತ್ತಿದ್ದೇವೆ. ಸ್ಥಳೀಯ ಸಮಸ್ಯೆಗಳಲ್ಲಿ ಭಾಗಿಯಾಗುತ್ತಿದ್ದ ಅವರು ಇಲ್ಲಿನ ಸ್ಥಳೀಯರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಇಲ್ಲಿ ನಮಗೆಲ್ಲರಿಗೂ ಇದು ಅತ್ಯಂತ ನೋವಿನ ಕ್ಷಣವಾಗಿದೆ ”ದುರಂತದಲ್ಲಿ ಸಾವಿಗೀಡಾದ ಕಾಸರಗೋಡಿನ ತ್ರಿಕ್ಕರಿಪ್ಪೂರಿನ ಕೆ ರಂಜಿತ್ ಅವರ ಆತ್ಮೀಯ ಸ್ನೇಹಿತ ಶಿವ ಪ್ರಸಾದ್ ಹೇಳಿದ್ದಾರೆ.

ಇದನ್ನೂ ಓದಿ: ಮುಂಜಾನೆ ರಾಷ್ಟ್ರಗೀತೆಯೊಂದಿಗೆ ಶಾಲೆಗಳನ್ನು ಆರಂಭಿಸಲು ಜಮ್ಮು ಕಾಶ್ಮೀರ ಸರ್ಕಾರ ಸೂಚನೆ

ಸುದ್ದಿ ತಿಳಿದ ರಂಜಿತ್ ಪೋಷಕರು ಮನೆಯಿಂದ ಹೊರಗೆ ಕಾಲಿಟ್ಟಿರಲಿಲ್ಲ. ಒಂದು ವರ್ಷದ ಹಿಂದೆ ರಜೆಗೆಂದು ರಂಜಿತ್ ಬಂದಿದ್ದ ಮನೆಯ ಬಳಿ ನೀರವ ಮೌನ ಆವರಿಸಿತ್ತು. ಕುವೈತ್‌ನಲ್ಲಿ ತಮ್ಮ ಆತ್ಮೀಯರನ್ನು ಕಳೆದುಕೊಂಡ ಇತರ ಮನೆಗಳಲ್ಲಿ ಇದೇ ರೀತಿಯ ವಾತಾವರಣವಿದೆ. 40 ವರ್ಷದ ಲ್ಯೂಕಾಸ್ ಸಾವಿನ ಸುದ್ದಿ ಕೇಳಿ ಕೊಲ್ಲಂನ ಆದಿಚನಲ್ಲೂರಿನಲ್ಲಿ ಸ್ನೇಹಿತರು ಮತ್ತು ಸ್ಥಳೀಯರು ಆಘಾತದಲ್ಲಿದ್ದಾರೆ. ಜೂನ್ 12 ರಂದು ಬಂದ ಸುದ್ದಿಯ ನಂತರ ಅವರು ಅನುಭವಿಸುತ್ತಿರುವ ಮಾನಸಿಕ ಆಘಾತದಿಂದ ಹೊರಬರಲು ಸಾಧ್ಯವಾಗದ ಕಾರಣ ಟಿವಿ9 ಅವರನ್ನು ಸಂಪರ್ಕಿಸಿದಾಗ ಮೃತರ ಕುಟುಂಬದ ಹೆಚ್ಚಿನ ಸದಸ್ಯರು ಮಾತನಾಡಲು ಸಿದ್ಧರಿಲ್ಲ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:29 pm, Thu, 13 June 24

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!