ಪ್ರಧಾನಿ ಮೋದಿ ಪ್ರಮಾಣವಚನ ಸಮಾರಂಭದಲ್ಲಿ ಕಾಣಿಸಿಕೊಂಡ ನಿಗೂಢ ಪ್ರಾಣಿ ಯಾವುದು? ದೆಹಲಿ ಪೊಲೀಸ್ ಹೇಳಿದ್ದೇನು?

ಪ್ರಧಾನಿ ನರೇಂದ್ರ ಮೋದಿ ಪ್ರಮಾಣವಚನ ಸಮಾರಂಭದಲ್ಲಿ ವೇದಿಕೆಯ ಹಿಂಭಾಗ ಪ್ರಾಣಿಯೊಂದು ಗೋಚರವಾಗಿದ್ದು, ಕೆಲವರು ಅದನ್ನು ಬೆಕ್ಕು ಎಂದರೆ ಕೆಲವರು ನಾಯಿ, ಚಿರತೆ ಇರಬಹುದು ಎಂದು ಊಹಿಸಿದ್ದರು ಅದಕ್ಕೆ ದೆಹಲಿ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಪ್ರಧಾನಿ ಮೋದಿ ಪ್ರಮಾಣವಚನ ಸಮಾರಂಭದಲ್ಲಿ ಕಾಣಿಸಿಕೊಂಡ ನಿಗೂಢ ಪ್ರಾಣಿ ಯಾವುದು? ದೆಹಲಿ ಪೊಲೀಸ್ ಹೇಳಿದ್ದೇನು?
Follow us
|

Updated on: Jun 11, 2024 | 10:10 AM

ಪ್ರಧಾನಿ ನರೇಂದ್ರ ಮೋದಿ(Narendra Modi) ಪ್ರಮಾಣವಚನ ಕಾರ್ಯಕ್ರಮದಂದು ವೇದಿಕೆ ಹಿಂಭಾಗ ಕಾಣಿಸಿಕೊಂಡ ನಿಗೂಢ ಪ್ರಾಣಿಯ ಕುರಿತು ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಜೂನ್​ 9ರಂದು ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ವಿಡಿಯೋವೊಂದರಲ್ಲಿ ಸಚಿವರು ಪ್ರಮಾಣವಚನ ಸ್ವೀಕರಿಸುವಾಗ ವೇದಿಕೆ ಹಿಂಭಾಗ ಪ್ರಾಣಿಯೊಂದು ಹಾದು ಹೋಗುವುದನ್ನು ಕಾಣಬಹುದು. ಆ ಪ್ರಾಣಿ ಚಿರತೆಯಾಗಿರಬಹುದಾ ಎಂದು ಹಲವು ಮಂದಿ ಪ್ರಶ್ನೆ ಮಾಡಿದ್ದರು ಆದರೆ ಅದಕ್ಕೆ ದೆಹಲಿ ಪೊಲೀಸ್​ ಸ್ಪಷ್ಟನೆ ನೀಡಿದೆ.

ದೆಹಲಿ ಪೊಲೀಸರು ಈ ಸುದ್ದಿಯನ್ನು ವದಂತಿ ಎಂದು ಕರೆದಿದ್ದಾರೆ ವರದಿಗಳನ್ನು ನಿರಾಕರಿಸಿದ ದೆಹಲಿ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ದೆಹಲಿ ಪೊಲೀಸರು ತನ್ನ ಎರಡನೇ ಪೋಸ್ಟ್‌ನಲ್ಲಿ , ಕೆಲವು ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳು ನಿನ್ನೆ ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣವಚನ ಸಮಾರಂಭದ ನೇರ ಪ್ರಸಾರದಲ್ಲಿ ತೆಗೆದ ಪ್ರಾಣಿಯ ಚಿತ್ರವನ್ನು ತೋರಿಸುತ್ತಿವೆ ಮತ್ತು ಅದು ಕಾಡು ಪ್ರಾಣಿ ಎಂದು ಹೇಳುತ್ತಿದೆ. ಅದು ಸಂಪೂರ್ಣ ಸುಳ್ಳು ಎಂದು ಹೇಳಿದೆ.

ದುರ್ಗಾದಾಸ್​ ಪ್ರಮಾಣವಚನ ತೆಗೆದುಕೊಳ್ಳುತ್ತಿರುವ ಸಂದರ್ಭ ದುರ್ಗಾದಾಸ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದ ಸಂದರ್ಭ. ಈ ವೇಳೆ ರಾಷ್ಟ್ರಪತಿ ಭವನದ ಹಿಂದೆ ಯಾವುದೋ ಪ್ರಾಣಿ ನಡೆದುಕೊಂಡು ಬರುತ್ತಿರುವುದು ಕ್ಯಾಮರಾದಲ್ಲಿ ಕಂಡುಬಂದಿದೆ. ವಿಡಿಯೋದಲ್ಲಿ ಕಾಣಸಿಗುವ ಈ ಪ್ರಾಣಿಯನ್ನು ಕೆಲವರು ಚಿರತೆ ಎಂದು ಕರೆದರೆ ಕೆಲವರು ಬೆಕ್ಕು ಎಂದು ಕರೆದಿದ್ದಾರೆ.

ಮತ್ತಷ್ಟು ಓದಿ: Modi 3.0 Cabinet: ಮೋದಿ 3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ತೆಗೆದುಕೊಂಡ ಮೊದಲ ನಿರ್ಧಾರ ಇದು

ಇದು ಯಾವ ಪ್ರಾಣಿ ಎಂದು ತಿಳಿಯಲು ಜನರು ಕಾತುರರಾಗಿದ್ದರು ಮತ್ತು ಇಷ್ಟು ಭದ್ರತೆಯ ನಡುವೆ ಚಿರತೆ ರಾಷ್ಟ್ರಪತಿ ಭವನವನ್ನು ಹೇಗೆ ತಲುಪಿತು? ದೇಶಾದ್ಯಂತ ಮಾಧ್ಯಮ ಚಾನೆಲ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತು ವಿವಿಧ ರೀತಿಯ ಸುದ್ದಿಗಳನ್ನು ಹರಡಲಾಯಿತು. ಆದರೆ, ಇದೀಗ ದೆಹಲಿ ಪೊಲೀಸರು ಅಧಿಕೃತವಾಗಿ ಆ ಪ್ರಾಣಿ ನಿಗೂಢ ಪ್ರಾಣಿಯಲ್ಲ, ರಾಷ್ಟ್ರಪತಿ ಭವನದ ಸಾಕು ಬೆಕ್ಕು ಎಂದು ಖಚಿತಪಡಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ತಾಜಾ ಸುದ್ದಿ
ಲೋಫರ್ ಫ್ರೆಂಡ್ಸ್​ನಿಂದ ದರ್ಶನ್ ಹಾಳಾದ, ಶಿಕ್ಷಣದ ಕೊರತೆ ಇದೆ; ಅಡ್ಡಂಡ
ಲೋಫರ್ ಫ್ರೆಂಡ್ಸ್​ನಿಂದ ದರ್ಶನ್ ಹಾಳಾದ, ಶಿಕ್ಷಣದ ಕೊರತೆ ಇದೆ; ಅಡ್ಡಂಡ
‘ನಟ ದರ್ಶನ್​​​ ಗ್ರಹಗತಿ ಸರಿಯಾಗಿಲ್ಲ, ಅಪಾಯಗಳು ಬರುತ್ತಿವೆ’ ಅರ್ಚಕರ ಹೇಳಿಕ
‘ನಟ ದರ್ಶನ್​​​ ಗ್ರಹಗತಿ ಸರಿಯಾಗಿಲ್ಲ, ಅಪಾಯಗಳು ಬರುತ್ತಿವೆ’ ಅರ್ಚಕರ ಹೇಳಿಕ
ಇಟಲಿ ಶೃಂಗಸಭೆಯಲ್ಲಿ ಭಾರತದ ದೃಷ್ಟಿಕೋನ ಪ್ರಸ್ತುತಪಡಿಸಿದ ಮೋದಿ
ಇಟಲಿ ಶೃಂಗಸಭೆಯಲ್ಲಿ ಭಾರತದ ದೃಷ್ಟಿಕೋನ ಪ್ರಸ್ತುತಪಡಿಸಿದ ಮೋದಿ
‘ದರ್ಶನ್ ಶಾಂತವಾಗಿದ್ರೂ ಕಿರಿಕಿರಿ ಮಾಡ್ತಾರೆ’; ಪೂಜೆ ಸಲ್ಲಿಸಿ ಬಾವನ ಮಾತು
‘ದರ್ಶನ್ ಶಾಂತವಾಗಿದ್ರೂ ಕಿರಿಕಿರಿ ಮಾಡ್ತಾರೆ’; ಪೂಜೆ ಸಲ್ಲಿಸಿ ಬಾವನ ಮಾತು
ಮತ್ತೊಂದು ಸಾವಿಗೆ ಕಾರಣವಾದ ದರ್ಶನ್; ಕುಟುಂಬದವರ ಆಕ್ರೋಶ
ಮತ್ತೊಂದು ಸಾವಿಗೆ ಕಾರಣವಾದ ದರ್ಶನ್; ಕುಟುಂಬದವರ ಆಕ್ರೋಶ
Daily Horoscope: ಈ ರಾಶಿಯವರಿಗೆ ಪರಿಚಿತ ವ್ಯಕ್ತಿಯೊಡನೆಯೇ ಕಲಹವಾಗಲಿದೆ
Daily Horoscope: ಈ ರಾಶಿಯವರಿಗೆ ಪರಿಚಿತ ವ್ಯಕ್ತಿಯೊಡನೆಯೇ ಕಲಹವಾಗಲಿದೆ
ನಿಮ್ಮ ಗೋತ್ರ ತಿಳಿದುಕೊಳ್ಳುವುದು ಬಹಳ ಸುಲಭ, ವಿಡಿಯೋ ನೋಡಿ
ನಿಮ್ಮ ಗೋತ್ರ ತಿಳಿದುಕೊಳ್ಳುವುದು ಬಹಳ ಸುಲಭ, ವಿಡಿಯೋ ನೋಡಿ
‘ಎಷ್ಟೇ ದಿನವಾದ್ರೂ ಶವ ಎತ್ತಲ್ಲ’: ದರ್ಶನ್​ ಸಹಚರ ಅನು ತಂದೆ ನಿಧನ
‘ಎಷ್ಟೇ ದಿನವಾದ್ರೂ ಶವ ಎತ್ತಲ್ಲ’: ದರ್ಶನ್​ ಸಹಚರ ಅನು ತಂದೆ ನಿಧನ
ರೇಣುಕಾಸ್ವಾಮಿ ಕೊಲೆ ಕೇಸ್​: ನಟ ದರ್ಶನ್ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ರೇಣುಕಾಸ್ವಾಮಿ ಕೊಲೆ ಕೇಸ್​: ನಟ ದರ್ಶನ್ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ಬಕ್ರೀದ್‌ ಶಾಂತಿ ಸಭೆಯಲ್ಲಿ ಪೊಲೀಸ್ರ ಮುಂದೇ ರೆಡ್ಡಿ, ಅನ್ಸಾರಿ ಬಣ ಜಟಾಪಟಿ
ಬಕ್ರೀದ್‌ ಶಾಂತಿ ಸಭೆಯಲ್ಲಿ ಪೊಲೀಸ್ರ ಮುಂದೇ ರೆಡ್ಡಿ, ಅನ್ಸಾರಿ ಬಣ ಜಟಾಪಟಿ