ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮಿಳುನಾಡು ಮತ್ತು ಕೇರಳಕ್ಕೆ ಭೇಟಿ ನೀಡಲಿದ್ದಾರೆ. ಎರಡೂ ರಾಜ್ಯಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಿ ಮೋದಿ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಇದೇ ವೇಳೆ ಹಲವು ಪ್ರಮುಖ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಜೊತೆಗೆ ಅರ್ಜುನ್ ಮಾರ್ಕ್ 1a ಯುದ್ಧ ಟ್ಯಾಂಕ್ arjun mark 1a tank ಅನ್ನು ಸೈನ್ಯಕ್ಕೆ ಹಸ್ತಾಂತರಿಸಲಿದ್ದಾರೆ. ಇಂದು ಬೆಳಗ್ಗೆ 10.35ಕ್ಕೆ ಚೆನ್ನೈಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ.
ಪ್ರಧಾನಿ ಮೋದಿ ಇಂದು ಸುಮಾರು ₹8,126 ಕೋಟಿಯ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ವನ್ನಾರ್‌ಪೇಟೆ-ವಿಮ್ಕೋ ನಗರ್ ಮೆಟ್ರೋ ರೈಲಿಗೆ ಚಾಲನೆ ಸಿಗಲಿದೆ. ಬಳಿಕ ತಮಿಳುನಾಡು ಸಿಎಂ ಸೇರಿ ಕೆಲ ಮುಖಂಡರ ಜತೆ ಚರ್ಚೆ ನಡೆಸಲಿದ್ದಾರೆ. ಈ ವೇಳೆ ಚುನಾವಣಾ ಮೈತ್ರಿ, ವಿ.ಕೆ.ಶಶಿಕಲಾ ಚೆನ್ನೈಗೆ ಬಂದಿರುವ ವಿಚಾರ, ಸದ್ಯದ ತಮಿಳುನಾಡಿನ ರಾಜಕೀಯ ಬೆಳವಣಿಗೆಗಳ ಸಂಬಂಧ ಮಾತುಕಥೆ ನಡೆಸಲಿದ್ದಾರೆ. ಪ್ರಧಾನಿ ಮೋದಿ ಮಧ್ಯಾಹ್ನ 1.35ಕ್ಕೆ ಕೊಚ್ಚಿಗೆ ತೆರಳಲಿದ್ದಾರೆ.
Leaving for Chennai and Kochi. pic.twitter.com/bSImPnGphD
— Narendra Modi (@narendramodi) February 14, 2021
ಇಂದು ತಮಿಳುನಾಡು ಮತ್ತು ಕೇರಳದಲ್ಲಿ ಅನೇಕ ಬೆಳವಣೆಗೆಗಳು ನಡೆಯಲಿವೆ. ಆತ್ಮ ನಿರ್ಭರ ಭಾರತ ಯೋಜನೆಯ ಮಹತ್ವವನ್ನು ಈಡೇರಿಸುವ ವೇಗವನ್ನು ಹೆಚ್ಚಿಸುವ ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಸಿಗಲಿದೆ. ಈ ಯೋಜನೆಗಳು ನಮ್ಮ ನಾಗರಿಕರಿಗೆ ‘Ease of Living’ ಅನ್ನು ಹೆಚ್ಚಿಸುತ್ತದೆ ಎಂದು ಮೋದಿ ತಮಿಳು, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಟ್ವೀಟ್ ಮಾಡಿದ್ದಾರೆ.
Tomorrow, 14th February, will be in Chennai (Tamil Nadu) and Kochi (Kerala). Numerous development works would be launched that would add speed to fulfilling the vision of Aatmanirbhar Bharat. The projects will boost ‘Ease of Living’ for our citizens. https://t.co/NZUT66cjrt
— Narendra Modi (@narendramodi) February 13, 2021
ಇದನ್ನೂ ಓದಿ: ತಮಿಳುನಾಡು ಪಟಾಕಿ ಕಾರ್ಖಾನೆ ಸ್ಫೋಟ: ಮೃತರ ಸಂಖ್ಯೆ 15ಕ್ಕೆ ಏರಿಕೆ, ಪ್ರಧಾನಿ ನರೇಂದ್ರ ಮೋದಿ ಸಂತಾಪ
Published On - 8:49 am, Sun, 14 February 21