ದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ನೇತಾಜಿ ಸುಭಾಷ ಚಂದ್ರ ಬೋಸ್ ಪ್ರತಿಮೆ ಅನಾವರಣ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 08, 2022 | 9:21 PM

ನೇತಾಜಿ ಸುಭಾಸ ಚಂದ್ರ ಬೋಸ್ ಅವರ ತೋರಿಸಿದ ಮಾರ್ಗದಲ್ಲಿ ಭಾರತವೇನಾದರೂ ಸಾಗಿದ್ದರೆ ಅದು ಒಂದು ಹೊಸ ಉತ್ತುಂಗವನ್ನು ತಲುಪಿರುತಿತ್ತು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೇಳಿದರು.

ದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ನೇತಾಜಿ ಸುಭಾಷ ಚಂದ್ರ ಬೋಸ್ ಪ್ರತಿಮೆ ಅನಾವರಣ
ನೇತಾಜಿ ಸುಭಾಷ ಚಂದ್ರ ಬೋಸ್ ಪ್ರತಿಮೆ
Follow us on

ನವದೆಹಲಿ:  ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ದೆಹಲಿಯ ಇಂಡಿಯಾ ಗೇಟ್ (India Gate) ಬಳಿ ಪ್ರತಿಷ್ಠಾಪಿಸಲಾಗಿರುವ ನೇತಾಜಿ ಸುಭಾಷ ಚಂದ್ರ (Subhash Chandra Bose) ಪ್ರತಿಮೆಯನ್ನು ಅನಾವರಣಗೊಳಿಸಿದರು. 28 ಅಡಿ ಎತ್ತರವಿರುವ ಬೋಸ್ ಪ್ರತಿಮೆಯನ್ನು ಮೈಸೂರಿನ ಶಿಲ್ಪಿ ಅರುಣ್ ಯೋಗರಾಜ ಅವರು ಕೆತ್ತಿದ್ದಾರೆ. ಈ ಮೊದಲು ಕೇದಾರನಾಥನಲ್ಲಿ ಪ್ರತಿಷ್ಠಾಪಿಸಲಾದ ಆದಿಗುರು ಶಂಕರಾಚಾರ್ಯರ ಪ್ರತಿಮೆಯನ್ನು ಸಹ ಅರುಣ್ ಯೋಗರಾಜ ಅವರೇ ಕೆತ್ತಿದ್ದರು ಎಂಬ ಅಂಶವನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಅಧಿಕೃತ ಹೇಳಿಕೆಯೊಂದರ ಪ್ರಕಾರ, ನೇತಾಜಿಯವರ ಭವ್ಯ ಪ್ರತಿಮೆಯನ್ನು 280 ಮೆಟ್ರಿಕ್ ಟನ್ ತೂಕದ ಏಕಶಿಲೆಯ ಗ್ರಾನೈಟ್ ಬ್ಲಾಕ್ ನಲ್ಲಿ ಕೆತ್ತಲಾಗಿದೆ. 26,000 ಮಾನವ-ಗಂಟೆಗಳ ತೀವ್ರ ಕಲಾತ್ಮಕತೆಯ ಪ್ರಯತ್ನಗಳ ನಂತರ, ಗ್ರಾನೈಟ್ ಏಕಶಿಲೆಯನ್ನು ಕತ್ತರಿಸಿ, ಕೆತ್ತಿ 65 ಮೆಟ್ರಿಕ್ ಟನ್ ತೂಕದ ಪ್ರತಿಮೆಯನ್ನು ತಯಾರಿಸಲಾಗಿದೆ. ಪ್ರತಿಮೆಯನ್ನು ಸಾಂಪ್ರದಾಯಿಕ ತಂತ್ರ ಮತ್ತು ಆಧುನಿಕ ಉಪಕರಣಗಳನ್ನು ಬಳಸಿಕೊಂಡು ಸಂಪೂರ್ಣವಾಗಿ ಕೈಯಿಂದಲೇ ಕೆತ್ತಲಾಗಿದೆ. ಆಗಲೇ ಹೇಳಿದಂತೆ ಅರುಣ್ ಯೋಗರಾಜ್ ನೇತೃತ್ವದ ಶಿಲ್ಪಿಗಳ ತಂಡವು ಪ್ರತಿಮೆಯನ್ನು ನಿರ್ವಿುಸಿದೆ.

‘28 ಅಡಿ ಎತ್ತರದ ನೇತಾಜಿಯ ಪ್ರತಿಮೆಯು ಭಾರತದ ಅತ್ಯಂತ ಎತ್ತರ, ನೈಜ್ಯ ಏಕಶಿಲೆಯಲ್ಲಿ ಕೈಯಿಂದ ಕೆತ್ತಿದ ಶಿಲ್ಪಗಳಲ್ಲಿ ಒಂದಾಗಿದೆ. 2022, ಜನವರಿ 21 ರಂದು ಪ್ರಧಾನಿ ಮೋದಿಯವರು ನೇತಾಜಿ ಅವರಿಗೆ ರಾಷ್ಟ್ರದ ಋಣಿಯಾಗಿ ಇಂಡಿಯಾ ಗೇಟ್‌ನಲ್ಲಿ ಗ್ರಾನೈಟ್‌ನಿಂದ ಮಾಡಿದ ಅವರ ಭವ್ಯ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಎಂಬ ಭರವಸೆ ನೀಡಿದ್ದರು,’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸುಭಾಷ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ ಬಳಿಕ ಮಾತಾಡಿದ ಪ್ರಧಾನಿ ಮೋದಿಯವರು, ‘ಇಂಡಿಯಾ ಗೇಟ್ ಬಳಿ ಇಂದು ನೇತಾಜಿ ಸುಭಾಸ ಚಂದ್ರ ಬೋಸ್ ಅವರ ಬೃಹತ್ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ಅನಾವರಣಗೊಳಿಸಲಾಗಿದೆ. ಬ್ರಿಟಿಷರು ಭಾರತದಲ್ಲಿ ರಾಜ್ಯಭಾರ ನಡೆಸುತ್ತಿದ್ದಾಗ ಆ ಸಾಮ್ರಾಜ್ಯದ ಪ್ರತಿನಿಧಿಯ ಪ್ರತಿಮೆ ಇಲ್ಲಿ ಪ್ರತಿಷ್ಠಾಪಿಸಲಾಗಿತ್ತು. ನೇತಾಜಿಯರ ಪ್ರತಿಮೆಯನ್ನು ಪ್ರತಿಷ್ಠಾಪಿಸುವ ಮೂಲಕ ನಾವು ಸದೃಢ ಭಾರತಕ್ಕೆ ಒಂದು ಹೊಸ ದಿಶೆಯನ್ನು ನೀಡಿದ್ದೇವೆ,’ ಎಂದು ಹೇಳಿದರು.

ನೇತಾಜಿ ಸುಭಾಸ ಚಂದ್ರ ಬೋಸ್ ಅವರ ತೋರಿಸಿದ ಮಾರ್ಗದಲ್ಲಿ ಭಾರತವೇನಾದರೂ ಸಾಗಿದ್ದರೆ ಅದು ಒಂದು ಹೊಸ ಉತ್ತುಂಗವನ್ನು ತಲುಪಿರುತಿತ್ತು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೇಳಿದರು. ಅವರ ಮಾರ್ಗವನ್ನು ನಾವು ಮರೆತಿದ್ದು ದುರದೃಷ್ಟಕರ ಎಂದು ಪ್ರಧಾನಿ ವಿಷಾದ ವ್ಯಕ್ತಪಡಿಸಿದರು.

ಇದಕ್ಕೆ ಮೊದಲು ಪ್ರಧಾನಿಗಳು ನವದೆಹಲಿಯಲ್ಲಿ ರಾಜಪಥ್ ಅನ್ನು ನೂತನವಾಗಿ ಕರ್ತವ್ಯಪಥ್ ಆಗಿ ಅಭಿವೃದ್ಧಿಗೊಳಿಸಿರುವ ಮಾರ್ಗವನ್ನು ಉದ್ಘಾಟಿಸಿದರು

ಈ ರಸ್ತೆಯು ವಿಜಯ್ ಚೌಕ್ ಅನ್ನು ಇಂಡಿಯಾ ಗೇಟ್ ಗೆ ಸಂಪರ್ಕಿಸುತ್ತದೆ ಮತ್ತು ಇದರ ಉದ್ದ ಸುಮಾರು 3.20 ಕಿ.ಮೀ ಆಗಿದೆ. ಹಿಂದೆ ಸದರಿ ರಸ್ತೆಯನ್ನು ರಾಜಪಥ್ ಎಂದು ಕರೆಯಲಾಗುತಿತ್ತು.

ಕರ್ತವ್ಯಪಥ್​ ಉದ್ಘಾಟಿಸಿದ ನಂತರ ಮಾತಾಡಿದ ಪ್ರಧಾನಿಯವರು, ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ ನಡುವೆ ರಾಜಪಥ್ ಹೆಸರಿನಲ್ಲಿದ್ದ ಮೊದಲಿನ ಮಾರ್ಗವನ್ನು ಪುನರ್ ನಾಮಕರಣ ಮಾಡುವ ಮೂಲಕ ದೇಶಕ್ಕೆ ಒಂದು ಹೊಸ ಶಕ್ತಿ ಮತ್ತು ಪ್ರೇರಣೆ ಸಿಕ್ಕಿದೆ ಎಂದು ಹೇಳಿದರು.

ರಾಜಮಾರ್ಗ ಅಥವಾ ರಾಜಪಥ ಅನ್ನೋದು ಗುಲಾಮಗಿರಿಯ ಸಂಕೇತವಾಗಿದೆ, ಈಗ ಅದನ್ನು ಇತಿಹಾಸದ ಪುಟಗಳಿಗೆ ದೂಡಿ ನಮ್ಮ ಸ್ಮೃತಿಪಟಲದಿಂದ ಶಾಶ್ವತವಾಗಿ ಅಳಿಸಲಾಗಿದೆ ಎಂದು ಪ್ರಧಾನಿಗಳು ಹೇಳಿದರು.

ಸೆಂಟ್ರಲ್ ವಿಸ್ತಾ ಯೋಜನೆಯ ಮರು ಅಭಿವೃದ್ಧಿಗಾಗಿ ದುಡಿದ ಎಲ್ಲಾ ಶ್ರಮಜೀವಿಗಳಿಗೆ  ಜನೆವರಿ 26 ರಂದು ಗಣರಾಜ್ಯೋತ್ಸವ ಸಮಾರಂಭಕ್ಕೆ ಆಹ್ವಾನಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Published On - 8:09 pm, Thu, 8 September 22