ಯಾವ ರಾಜ್ಯದಲ್ಲಿ ಹೂಡಿಕೆ ಮಾಡಬೇಕೆಂದು ಹೂಡಿಕೆದಾರರಲ್ಲಿ ಗೊಂದಲ ಮೂಡುವಂತೆ ರಾಜ್ಯಗಳು ಬೆಳೀಬೇಕು: ಮೋದಿ

ಯಾವ ರಾಜ್ಯದಲ್ಲಿ ಹೂಡಿಕೆ ಮಾಡಬೇಕೆಂದು ಹೂಡಿಕೆದಾರರಲ್ಲಿ ಗೊಂದಲ ಮೂಡುವಷ್ಟರ ಮಟ್ಟಿಗೆ ಭಾರತದ ಎಲ್ಲಾ ರಾಜ್ಯಗಳು ಅಭಿವೃದ್ಧಿ ಕಾಣಬೇಕು ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ಗುಜರಾತ್​​ನಲ್ಲಿ ಮಾತನಾಡಿದ ಅವರು, ಇಂದು ಇಡೀ ಜಗತ್ತು ಭಾರತದತ್ತ ನೋಡುತ್ತಿದೆ, ಇಂಥಾ ಸಮಯದಲ್ಲಿ ಯಾವುದೇ ರಾಜ್ಯವು ಹಿಂದುಳಿಯಬಾರದು.

ಯಾವ ರಾಜ್ಯದಲ್ಲಿ ಹೂಡಿಕೆ ಮಾಡಬೇಕೆಂದು ಹೂಡಿಕೆದಾರರಲ್ಲಿ ಗೊಂದಲ ಮೂಡುವಂತೆ ರಾಜ್ಯಗಳು ಬೆಳೀಬೇಕು: ಮೋದಿ
ನರೇಂದ್ರ ಮೋದಿ
Image Credit source: PTI

Updated on: Aug 26, 2025 | 2:17 PM

ಅಹಮದಾಬಾದ್, ಆಗಸ್ಟ್​ 26: ಯಾವ ರಾಜ್ಯದಲ್ಲಿ ಹೂಡಿಕೆ ಮಾಡಬೇಕೆಂದು ಹೂಡಿಕೆದಾರರಲ್ಲಿ ಗೊಂದಲ ಮೂಡುವಷ್ಟರ ಮಟ್ಟಿಗೆ ಭಾರತದ ಎಲ್ಲಾ ರಾಜ್ಯಗಳು ಅಭಿವೃದ್ಧಿ ಕಾಣಬೇಕು ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ಗುಜರಾತ್​​ನಲ್ಲಿ ಮಾತನಾಡಿದ ಅವರು, ಇಂದು ಇಡೀ ಜಗತ್ತು ಭಾರತದತ್ತ ನೋಡುತ್ತಿದೆ, ಇಂಥಾ ಸಮಯದಲ್ಲಿ ಯಾವುದೇ ರಾಜ್ಯವು ಹಿಂದುಳಿಯಬಾರದು.

ಪ್ರತಿಯೊಂದು ರಾಜ್ಯವೂ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳಬೇಕು.ನಾನು ಈ ರಾಜ್ಯಕ್ಕೆ ಹೋಗಬೇಕೇ ಅಥವಾ ಆ ರಾಜ್ಯಕ್ಕೆ ಹೋಗಬೇಕೇ ಎನ್ನುವ ಗೊಂದಲವನ್ನು ಹೂಡಿಕೆದಾರರಲ್ಲಿ ಹುಟ್ಟುಹಾಕುವಷ್ಟರ ಮಟ್ಟಿಗೆ ರಾಜ್ಯಗಳು ಬೆಳೀಬೇಕು ಎಂದರು.

ಪ್ರಧಾನಿ ಮೋದಿ ಮಾತು

ಇಡೀ ಜಗತ್ತು ಭಾರತದತ್ತ ನೋಡುತ್ತಿರುವ ಈ ಸಮಯದಲ್ಲಿ, ಅಭಿವೃದ್ಧಿ ಪರ ನೀತಿಗಳು, ಉತ್ತಮ ಆಡಳಿತದ ಮೂಲಕ ದೇಶದ ಸುಧಾರಣೆ ಮಾಡೋಣ ಎಂದು ಪ್ರಧಾನಿ ಕರೆ ನೀಡಿದ್ದಾರೆ.ಈ ಕಾರ್ಯಕ್ರಮದಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಜಪಾನಿನ ರಾಯಭಾರಿ ಕೀಚಿ ಒನೊ ಭಾಗವಹಿಸಿದ್ದರು.

ಮತ್ತಷ್ಟು ಓದಿ: Japan-India: ಮೋದಿ ಭೇಟಿ ವೇಳೆ 6 ಲಕ್ಷ ಕೋಟಿ ರೂ ಹೂಡಿಕೆ ಪ್ರಕಟಿಸಲಿದೆ ಜಪಾನ್

ಸ್ವದೇಶಿ ನಮ್ಮ ಮಂತ್ರವಾಗಬೇಕು
ಸ್ವದೇಶಿ ಪ್ರತಿಯೊಬ್ಬರ ಜೀವನ ಮಂತ್ರವಾಗಿರಬೇಕು ಎಂದು ಹೇಳಿದ ಪ್ರಧಾನಿ, ಮೇಕ್ ಇನ್ ಇಂಡಿಯಾ ಉಪಕ್ರಮವು ಜಾಗತಿಕ ಮತ್ತು ದೇಶೀಯ ಉತ್ಪಾದಕರಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಿದೆ ಎಂದು ಹೇಳಿದರು.ಪ್ರಧಾನಿ ಮೋದಿ ಜನರು ಸ್ವದೇಶಿ ಉತ್ಪನ್ನಗಳನ್ನು ಮಾತ್ರ ಖರೀದಿಸುವಂತೆ ಕೇಳಿದರು.

ಯಾರು ಹೂಡಿಕೆ ಮಾಡುತ್ತಾರೆ ಎಂಬುದು ಮುಖ್ಯವಲ್ಲ, ಆದರೆ ಉತ್ಪನ್ನವನ್ನು ತಯಾರಿಸುತ್ತಿರುವ ಭಾರತೀಯರ ಶ್ರಮ ಮುಖ್ಯ ಎಂಬುದು ಮುಖ್ಯ ಎಂದು ಹೇಳಿದರು. ಭಾರತವು ಜಾಗತಿಕವಾಗಿ ತನ್ನ ಪಾಲುದಾರರು ಮತ್ತು ಕೈಗಾರಿಕೆಗಳಿಗೆ ಸೂಕ್ತವಾದ ಹೂಡಿಕೆ ಮತ್ತು ಉತ್ಪಾದನಾ ಸ್ಥಳವನ್ನು ಹೊಂದಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ