Video: ಮಹಿಳೆ ಬಳಿ ರಾತ್ರಿ 12 ಗಂಟೆ ಬಳಿಕ ಈ ರೀತಿ ಸುತ್ತಿದ್ರೆ ಯಾರಾದ್ರೂ ಕಿರುಕುಳ ಕೊಡ್ಬಹುದು ಎಂದ ಪೊಲೀಸ್ ಅಧಿಕಾರಿ
ರಾತ್ರಿ 12 ಗಂಟೆಯ ಬಳಿಕ ಈ ರೀತಿ ಬೀದಿ ಬೀದಿ ಸುತ್ತಿದರೆ ನಿಮಗೆ ಯಾರಾದ್ರೂ ಲೈಂಗಿಕ ಕಿರುಕುಳ ನೀಡಬಹುದು ಎಂದು ಮಹಿಳೆಯೊಬ್ಬರ ಬಳಿ ಪೊಲೀಸ್ ಅಧಿಕಾರಿ ನೀಡಿರುವ ಹೇಳಿಕೆ ಈಗ ಎಲ್ಲೆಡೆ ವೈರಲ್ ಆಗಿದೆ. ಈ ಹೇಳಿಕೆ ಜನರಲ್ಲಿ ಕೋಪವನ್ನು ಹುಟ್ಟುಹಾಕಿದ್ದಲ್ಲದೆ, ಪೊಲೀಸ್ ಇಲಾಖೆಯ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಮಹಿಳೆ ಕಳೆದ 20 ವರ್ಷಗಳಿಂದ ಮಧ್ಯರಾತ್ರಿ ನಾಯಿಗಳಿಗೆ ಆಹಾರ ನೀಡುತ್ತಾ ಬಂದಿದ್ದಾರೆ. ಇಬ್ಬರು ಪೊಲೀಸರು ತಡರಾತ್ರಿ ಆಕೆಯನ್ನು ತಡೆದು ಈ ಕೆಲಸಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಚೆನ್ನೈ, ಆಗಸ್ಟ್ 26: ರಾತ್ರಿ 12 ಗಂಟೆಯ ಬಳಿಕ ಈ ರೀತಿ ಬೀದಿ ಬೀದಿ ಸುತ್ತಿದರೆ ನಿಮಗೆ ಯಾರಾದ್ರೂ ಲೈಂಗಿಕ ಕಿರುಕುಳ ನೀಡಬಹುದು ಎಂದು ಮಹಿಳೆಯೊಬ್ಬರ ಬಳಿ ಪೊಲೀಸ್ ಅಧಿಕಾರಿ ನೀಡಿರುವ ಹೇಳಿಕೆ ಈಗ ಎಲ್ಲೆಡೆ ವೈರಲ್ ಆಗಿದೆ. ಈ ಹೇಳಿಕೆ ಜನರಲ್ಲಿ ಕೋಪವನ್ನು ಹುಟ್ಟುಹಾಕಿದ್ದಲ್ಲದೆ, ಪೊಲೀಸ್ ಇಲಾಖೆಯ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಈ ಮಹಿಳೆ ಕಳೆದ 20 ವರ್ಷಗಳಿಂದ ಮಧ್ಯರಾತ್ರಿ ನಾಯಿಗಳಿಗೆ ಆಹಾರ ನೀಡುತ್ತಾ ಬಂದಿದ್ದಾರೆ. ಇಬ್ಬರು ಪೊಲೀಸರು ತಡರಾತ್ರಿ ಆಕೆಯನ್ನು ತಡೆದು ಈ ಕೆಲಸಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ನೀವು 12 ಗಂಟೆಯ ನಂತರ ಹೀಗೆ ತಿರುಗಾಡುವುದರಿಂದ ನಿಮಗೆ ಯಾರಾದರೂ ಕಿರುಕುಳ ನೀಡಬಹುದು ಎಂದು ಮಹಿಳೆಗೆ ಪೊಲೀಸ್ ಅಧಿಕಾರಿ ಹೇಳಿದ್ದು ವಿಡಿಯೋದಲ್ಲಿ ಸ್ಪಷ್ಟವಾಗಿದೆ.
ಅವರ ಹೇಳಿಕೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬಳಿಕ ಪೊಲೀಸ್ ಅಧಿಕಾರಿ ಕಾರ್ತಿಕ್ ಮಾತನಾಡಿ, ನಾನು ಕಿರುಕುಳ ಎಂಬ ಪದವನ್ನು ಬಳಸಿಲ್ಲ, ಬಂಧನ ಎಂಬ ಪದ ಬಳಸಿದ್ದೇನೆ ಎಂದು ಸಮಜಾಯಿಷಿ ನೀಡಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

