ದೆಹಲಿ: ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಐತಿಹಾಸಿಕ ಗುರುದ್ವಾರ ರಕಬ್ ಗಂಜ್ ಸಾಹಿಬ್ಗೆ ಇಂದು ಬೆಳಗ್ಗೆ ಭೇಟಿ ನೀಡಿ, ಸಿಖ್ ಸಮುದಾಯದ 10 ಗುರುಗಳಲ್ಲಿ ಒಂಭತ್ತನೆಯವರಾದ ಗುರು ತೇಜ್ ಬಹದ್ದೂರ್ ಅವರ ತ್ಯಾಗವನ್ನು ಸ್ಮರಿಸಿಕೊಂಡರು.
ಗುರುದ್ವಾರ ರಕಬ್ ಗಂಜ್ ಸಾಹಿಬ್ನಲ್ಲಿ ಪ್ರಾರ್ಥನೆ ಸಲ್ಲಿಸಿದ ಮೋದಿ, ಗುರು ತೇಜ್ ಬಹದ್ದೂರ್ ಅವರ ಆಶೀರ್ವಾದ ಪಡೆದುಕೊಂಡಿದ್ದೇನೆ. ಅವರಿಂದ ಸ್ಪೂರ್ತಿಗೊಂಡಿದ್ದೇನೆ ಎಂದು ಹೇಳಿದ್ದಾರೆ.
1975ರಲ್ಲಿ ಮೊಘಲ್ ದೊರೆ ಔರಂಗಜೇಬ್ ಗುರು ತೇಜ್ ಸಿಂಗ್ ಬಹದ್ದೂರ್ರನ್ನು ಸಾರ್ವಜನಿಕವಾಗಿ ಹತ್ಯೆ ಮಾಡಿದ. ಅಂದಿನಿಂದ ಗುರು ತೇಜ್ ಬಹದ್ದೂರ್ ಹುತಾತ್ಮರಾದ ದಿನವನ್ನು ‘ಶಹೀದ್ ದಿವಸ್’ ಎಂದು ಸಿಖ್ ಸಮುದಾಯ ಆಚರಿಸುತ್ತದೆ.
ನಿನ್ನೆ ಗುರು ತೇಜ್ ಬಹದ್ದೂರ್ ಅವರ ಹುತಾತ್ಮ ದಿನವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಟ್ವೀಟ್ ಮಾಡಿದ್ದರು. ‘ತೇಜ್ ಬಹದ್ದೂರ್ ಅವರ ತತ್ವಗಳನ್ನು ಇಂದಿನ ಸಮಾಜ ಅಳವಡಿಸಿಕೊಳ್ಳಬೇಕಿದೆ’ ಎಂದು ಸ್ಮರಿಸಿಕೊಂಡಿದ್ದರು.
This morning, I prayed at the historic Gurudwara Rakab Ganj Sahib, where the pious body of Sri Guru Teg Bahadur Ji was cremated. I felt extremely blessed. I, like millions around the world, am deeply inspired by the kindnesses of Sri Guru Teg Bahadur Ji: PM Narendra Modi pic.twitter.com/PPts7BrkJn
— ANI (@ANI) December 20, 2020
Published On - 11:15 am, Sun, 20 December 20