ಟ್ವಿಟರ್​​ನಲ್ಲಿ 9 ಕೋಟಿ ದಾಟಿದ ಫಾಲೋಯರ್​​ಗಳ ಸಂಖ್ಯೆ; ಜೋ ಬೈಡನ್, ರಿಷಿ ಸುನಕ್​​ನ್ನು ಹಿಂದಿಕ್ಕಿದ ಮೋದಿ

|

Updated on: Jul 19, 2023 | 7:21 PM

ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ 2009 ರಲ್ಲಿ ಟ್ವಿಟರ್‌ನಲ್ಲಿ ಖಾತೆ ಆರಂಭಿಸಿದ್ದರು. ಒಂದು ವರ್ಷದೊಳಗೆ ಅವರಿಗೆ ಒಂದು ಲಕ್ಷ ಫಾಲೋವರ್ಸ್ ಆದರು. ಜುಲೈ 2020 ರಲ್ಲಿ ಪ್ರಧಾನಿಯವರ ಟ್ವಿಟರ್ ಫಾಲೋಯರ್​​ಗಳ ಸಂಖ್ಯೆ 60 ಮಿಲಿಯನ್ ತಲುಪಿತ್ತು.

ಟ್ವಿಟರ್​​ನಲ್ಲಿ 9 ಕೋಟಿ ದಾಟಿದ ಫಾಲೋಯರ್​​ಗಳ ಸಂಖ್ಯೆ; ಜೋ ಬೈಡನ್, ರಿಷಿ ಸುನಕ್​​ನ್ನು ಹಿಂದಿಕ್ಕಿದ ಮೋದಿ
ಪ್ರಧಾನಿ ಮೋದಿ
Follow us on

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಈಗ ಟ್ವಿಟರ್‌ನಲ್ಲಿ (Twitter) 9 ಕೋಟಿಗಿಂತಲೂ ಹೆಚ್ಚು ಫಾಲೋಯರ್​​ಗಳನ್ನು ಹೊಂದಿದ್ದು, ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಜಗತ್ತಿನಾದ್ಯಂತ ಹೆಚ್ಚು ಫಾಲೋಯರ್​​ಗಳಿರುವ ರಾಜಕಾರಣಿಯಾಗಿದ್ದಾರೆ. ಪ್ರಧಾನಿ ಮೋದಿ ಅವರಿಗೆ ಟ್ವಿಟರ್‌ನಲ್ಲಿ 90.2 ಮಿಲಿಯನ್ ಫಾಲೋಯರ್​​ಗಳಿದ್ದು, ಟ್ವಿಟರ್ ಸಿಇಒ ಎಲಾನ್ ಮಸ್ಕ್ (Elon Musk) ಕೂಡಾ ಇವರನ್ನು ಫಾಲೋ ಮಾಡುತ್ತಿದ್ದಾರೆ. ಅತಿ ಹೆಚ್ಚು ಫಾಲೋಯರ್​​ಗಳನ್ನು ಹೊಂದಿರುವ ಮಸ್ಕ್ ಒಟ್ಟು 195 ವ್ಯಕ್ತಿಗಳನ್ನು ಫಾಲೋ ಮಾಡುತ್ತಾರೆ. ಏತನ್ಮಧ್ಯೆ, ಪ್ರಧಾನಿ ಮೋದಿ ಟ್ವಿಟರ್‌ನಲ್ಲಿ 2,589 ಜನರನ್ನು ಫಾಲೋ ಮಾಡುತ್ತಿದ್ದಾರೆ.

ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ 2009 ರಲ್ಲಿ ಟ್ವಿಟರ್‌ನಲ್ಲಿ ಖಾತೆ ಆರಂಭಿಸಿದ್ದರು. ಒಂದು ವರ್ಷದೊಳಗೆ ಅವರಿಗೆ ಒಂದು ಲಕ್ಷ ಫಾಲೋವರ್ಸ್ ಆದರು. ಜುಲೈ 2020 ರಲ್ಲಿ ಪ್ರಧಾನಿಯವರ ಟ್ವಿಟರ್ ಫಾಲೋಯರ್​​ಗಳ ಸಂಖ್ಯೆ 60 ಮಿಲಿಯನ್ ತಲುಪಿತ್ತು. ಜುಲೈ 9 ರಂದು ವರ್ಲ್ಡ್ ಆಫ್ ಸ್ಟ್ಯಾಟಿಸ್ಟಿಕ್ಸ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಬಿಡುಗಡೆ ಮಾಡಿದ ಪಟ್ಟಿಯ ಪ್ರಕಾರ, ವಿಶ್ವದಲ್ಲಿ ಟ್ವಿಟರ್‌ನಲ್ಲಿ ಅತೀಹೆಚ್ಚು ಫಾಲೋಯರ್ಸ್ ಹೊಂದಿರುವ ಟಾಪ್ 10 ವ್ಯಕ್ತಿಗಳಲ್ಲಿ ಪಿಎಂ ಮೋದಿ ಏಕೈಕ ಭಾರತೀಯರಾಗಿದ್ದಾರೆ.

86.6 ಮಿಲಿಯನ್ ಫಾಲೋಯರ್ಸ್ ಹೊಂದಿರುವ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು 84.1 ಮಿಲಿಯನ್ ಫಾಲೋವರ್ಸ್ ಹೊಂದಿರುವ ಅಮೆರಿಕದ ಗಾಯಕಿ ಮತ್ತು ನಟಿ ಲೇಡಿ ಗಾಗಾ ಅವರನ್ನು ಹಿಂದಿಕ್ಕಿ ಪಿಎಂ ಮೋದಿ ಎಂಟನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಅಮೆರಿಕದಲ್ಲಿದ್ದ 105 ಪುರಾತನ ವಸ್ತುಗಳು ಮರಳಿ ಭಾರತಕ್ಕೆ, US​ ಸರ್ಕಾರಕ್ಕೆ ಧನ್ಯವಾದ ತಿಳಿಸಿದ ಮೋದಿ

ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ 147 ಮಿಲಿಯನ್ ಅನುಯಾಯಿಗಳೊಂದಿಗೆ ಎಲೋನ್ ಮಸ್ಕ್ ಅಗ್ರಸ್ಥಾನದಲ್ಲಿದ್ದಾರೆ, ನಂತರ ಯುಎಸ್ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ 132.1 ಮಿಲಿಯನ್, ಗಾಯಕ ಜಸ್ಟಿನ್  ಬೀಬರ್ 11 ಮಿಲಿಯನ್ ಮತ್ತು ಫುಟ್‌ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ 108.9 ಮಿಲಿಯನ್ ಫಾಲೋಯರ್​​​ಗಳನ್ನು ಹೊಂದಿದ್ದಾರೆ.

ಅದೇ ವೇಳೆ ಅಮೆರಿಕ ಅಧ್ಯಕ್ಷ ಜೋ ಬೈಡನ್ 37.3 ಮಿಲಿಯನ್ ಮತ್ತು ಬ್ರಿಟನ್ ಪ್ರಧಾನಿ ರಿಷಿ ಸುನಕ್ 2 ಮಿಲಿಯನ್ ಫಾಲೋಯರ್ಸ್ ಹೊಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ