ಅಮೆರಿಕದಲ್ಲಿದ್ದ 105 ಪುರಾತನ ವಸ್ತುಗಳು ಮರಳಿ ಭಾರತಕ್ಕೆ, US ಸರ್ಕಾರಕ್ಕೆ ಧನ್ಯವಾದ ತಿಳಿಸಿದ ಮೋದಿ
ಭಾರತದ 105 ಪುರಾತನ ವಸ್ತುಗಳನ್ನು ಹಿಂದಿರುಗಿಸಿರುವ ಅಮೆರಿಕ ಸರಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಜು.19) ಟ್ವಿಟರ್ ಮೂಲಕ ಧನ್ಯವಾದ ತಿಳಿಸಿದ್ದಾರೆ.
ದೆಹಲಿ, ಜು.19: ಕಳ್ಳಸಾಗಣೆ ಮೂಲಕ ಅಮೆರಿಕ ಪಾಲಾಗಿದ್ದ ಭಾರತದ 105 ಪುರಾತನ ವಸ್ತುಗಳನ್ನು ಹಿಂದಿರುಗಿಸಿರುವ ಅಮೆರಿಕ ಸರಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ (narendra modi) ಅವರು ಇಂದು (ಜು.19) ಟ್ವಿಟರ್ ಮೂಲಕ ಧನ್ಯವಾದ ತಿಳಿಸಿದ್ದಾರೆ. ಈ ಪುರಾತನ ವಸ್ತುಗಳನ್ನು ಈಗಾಗಲೇ ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಹಸ್ತಾಂತರಿಸಲಾಗಿದೆ.
ಈ ಬಗ್ಗೆ ಅಮೆರಿಕ ಸರ್ಕಾರ ಮಾಡಿದ ಟ್ವೀಟ್ಗೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ ಅವರು, “ಇದು ಪ್ರತಿಯೊಬ್ಬ ಭಾರತೀಯನು ಸಂತೋಷ ಪಡುವ ವಿಷಯ. ಇದಕ್ಕಾಗಿ ನಾನು ಯುಎಸ್ಎಗೆ ಕೃತಜ್ಞನಾಗಿದ್ದೇನೆ. ಈ ಅಮೂಲ್ಯ ಕಲಾಕೃತಿಗಳು ಅಪಾರ ಸಾಂಸ್ಕೃತಿಕ ಮತ್ತು ಧಾರ್ಮಿಕ ಮಹತ್ವವನ್ನು ಹೊಂದಿವೆ. ಇದೀಗ ಮತ್ತೆ ಈ ಪುರಾತನ ವಸ್ತುಗಳು ನಮ್ಮ ಮನೆಗೆ ಮರುಳುತ್ತಿದೆ. ನಮ್ಮ ಸಂರಕ್ಷಿಸುವ ನಮ್ಮ ಬದ್ಧತೆಗೆ ಪ್ರಮುಖ ಅಡಿಪಾಯ. ಇದು ನಮ್ಮ ಪರಂಪರೆ ಮತ್ತು ಶ್ರೀಮಂತ ಇತಿಹಾಸಕ್ಕೆ ಸಾಕ್ಷಿ” ಎಂದು ಹೇಳಿದ್ದಾರೆ. ಸೋಮವಾರ ನ್ಯೂಯಾರ್ಕ್‌ನ ಕಾನ್ಸುಲೇಟ್‌ನಲ್ಲಿ ನಡೆದ ಸಮಾರಂಭದಲ್ಲಿ ಅಮೆರಿಕದ ಅಧಿಕಾರಿಗಳು ಭಾರತದ ಪುರಾತನ ವಸ್ತುಗಳನ್ನು ಅಮೆರಿಕದಲ್ಲಿರುವ ಭಾರತದ ರಾಯಭಾರ ಕಚೇರಿ ಅಧಿಕಾರಿಗಳಿಗೆ ಹಸ್ತಾಂತರಿಸಿದರು. ಜೂನ್‌ನಲ್ಲಿ ಮೋದಿ ಅವರ ಅಮೆರಿಕ ಪ್ರವಾಸದ ನಂತರ ಈ ಕ್ರಮವನ್ನು ಕೈಗೊಳ್ಳಲಾಗಿದೆ.
This will make every Indian happy. Grateful to USA for this. These precious artefacts hold immense cultural and religious significance. Their homecoming is a testament to our commitment to preserving our heritage and rich history. https://t.co/uUpIalYNga
— Narendra Modi (@narendramodi) July 19, 2023
ಭಾರತದ ವೈವಿಧ್ಯಮಯ ಪ್ರದೇಶಗಳು ಮತ್ತು ಸಂಪ್ರದಾಯಗಳನ್ನು ಪ್ರತಿನಿಧಿಸುವ 105 ಪ್ರಾಚೀನ ವಸ್ತುಗಳು, ಮತ್ತೆ ಸ್ವದೇಶಕ್ಕೆ ಹಿಂದಿರುಗುತ್ತಿವೆ! ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಐತಿಹಾಸಿಕ ಅಮೆರಿಕ ಭೇಟಿಯ ಅನುಸರಣೆಯಾಗಿ US ಕಡೆಯಿಂದ ಈ ಪ್ರಾಚೀನ ಕಲಾಕೃತಿಗಳನ್ನು ಹಸ್ತಾಂತರಿಸಲಾಗುತ್ತಿದೆ. ಈ ಪ್ರಾಚೀನ ವಸ್ತುಗಳು, ಕ್ರಿ.ಶ. 2 ನೇ ಶತಮಾನದಷ್ಟು ಹಿಂದಿನದು. ಮತ್ತು ಇದು ಹಳೆಯ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯನ್ನು ಒಳಗೊಂಡಿದೆ ಎಂದು ಅಮೆರಿಕದ ರಾಯಭಾರಿ ಕಚೇರಿ ಮಂಗಳವಾರ ಟ್ವೀಟ್‌ನಲ್ಲಿ ತಿಳಿಸಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ಅಮೆರಿಕ ಭೇಟಿ: ಉಭಯ ದೇಶಗಳ ನಡುವೆ ಹೊಸ ಒಪ್ಪಂದಗಳ ಭರವಸೆ
ಇನ್ನೂ ಈ ಕೆಲವು ಪುರಾತನ ವಸ್ತುಗಳಲ್ಲಿ 14-15ನೇ ಶತಮಾನದ್ದು ಎಂದು ಹೇಳಲಾಗಿದೆ. ರಾಜಸ್ಥಾನದ 12-13ನೇ ಶತಮಾನದ ಅಮೃತಶಿಲೆಯ ಕಮಾನು ಎಂಬುದನ್ನು ಕೂಡ ಗುರುತಿಸಲಾಗಿದೆ. ಮಧ್ಯ ಭಾರತದ ಅಪ್ಸರಾ, ದಕ್ಷಿಣ ಭಾರತದ 14-15 ನೇ ಶತಮಾನದ ಸಂಬಂದರ್ ಮತ್ತು ದಕ್ಷಿಣ ಭಾರತದ 17-18 ನೇ ಶತಮಾನದ ಕಂಚಿನ ನಟರಾಜ ಕಲಾಕೃತಿಯನ್ನು ಗುರುತಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:04 pm, Wed, 19 July 23