AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Siachen glacier: ಸಿಯಾಚಿನ್​ನಲ್ಲಿ ಅಗ್ನಿ ಅವಘಡ; ಸೇನಾಧಿಕಾರಿ ಹುತಾತ್ಮ, ಮೂವರಿಗೆ ಗಾಯ

ಹುತಾತ್ಮ ಸೇನಾ ಅಧಿಕಾರಿಯನ್ನು ಕ್ಯಾಪ್ಟನ್ ಅಂಶುಮಾನ್ ಸಿಂಗ್ ಎಂದು ಗುರುತಿಸಲಾಗಿದೆ. ಅವರು ರೆಜಿಮೆಂಟಲ್ ಮೆಡಿಕಲ್ ಆಫೀಸರ್ ಆಗಿದ್ದರು.

Siachen glacier: ಸಿಯಾಚಿನ್​ನಲ್ಲಿ ಅಗ್ನಿ ಅವಘಡ; ಸೇನಾಧಿಕಾರಿ ಹುತಾತ್ಮ, ಮೂವರಿಗೆ ಗಾಯ
ಸಿಯಾಚಿನ್Image Credit source: Twitter
ಗಣಪತಿ ಶರ್ಮಾ
|

Updated on: Jul 19, 2023 | 8:10 PM

Share

ನವದೆಹಲಿ: ಸಿಯಾಚಿನ್ ಹಿಮಪರ್ವತ ಪ್ರದೇಶದಲ್ಲಿ (Siachen glacier) ಸೇನೆಯ ಮದ್ದುಗುಂಡುಗಳ ಬಂಕರ್‌ನಲ್ಲಿ ಬುಧವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ಸೇನಾಧಿಕಾರಿಯೊಬ್ಬರು ಹುತಾತ್ಮರಾಗಿದ್ದು, ಮೂವರು ಗಾಯಗೊಂಡಿದ್ದಾರೆ. ಮುಂಜಾನೆ 3.30 ರ ಸುಮಾರಿಗೆ ಘಟನೆ ಸಂಭವಿಸಿತ್ತು ಎನ್ನಲಾಗಿದೆ. ಗಾಯಗೊಂಡ ಅಧಿಕಾರಿಗಳನ್ನು ಹೆಲಿಕಾಪ್ಟರ್ ಮೂಲಕ ಚಂಡೀಗಢದ ಆಸ್ಪತ್ರೆಗೆ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು ಎಂದು ಭಾರತೀಯ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

ಹುತಾತ್ಮ ಸೇನಾ ಅಧಿಕಾರಿಯನ್ನು ಕ್ಯಾಪ್ಟನ್ ಅಂಶುಮಾನ್ ಸಿಂಗ್ ಎಂದು ಗುರುತಿಸಲಾಗಿದೆ. ಅವರು ರೆಜಿಮೆಂಟಲ್ ಮೆಡಿಕಲ್ ಆಫೀಸರ್ ಆಗಿದ್ದರು. ಇತರ ಮೂವರಿಗೆ ಹೊಗೆಯಿಂದಾಗಿ ಉಸಿರಾಟ ಸಮಸ್ಯೆ ಮತ್ತು ಸುಟ್ಟ ಗಾಯಗಳಾಗಿವೆ. ಅವರ ಸ್ಥಿತಿ ಈಗ ಸ್ಥಿರವಾಗಿದೆ ಎಂದು ವರದಿಯಾಗಿದೆ.

ಮೂಲಗಳ ಪ್ರಕಾರ, ಶಾರ್ಟ್ ಸರ್ಕ್ಯೂಟ್‌ನಿಂದ ಮದ್ದುಗುಂಡುಗಳ ಟೆಂಟ್‌ನಲ್ಲಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ.

ಸಿಯಾಚಿನ್ ಗ್ಲೇಸಿಯರ್, 76 ಕಿಮೀ ಪ್ರದೇಶದಲ್ಲಿ ಹರಡಿಕೊಂಡಿದೆ, ಇದು ಕಾಶ್ಮೀರದ ವಿವಾದಿತ ಪ್ರದೇಶದ ಉತ್ತರ ಭಾಗದಲ್ಲಿದೆ. ಸಿಯಾಚಿನ್ ಭೂಮಿಯ ಮೇಲಿನ ಅತ್ಯಂತ ಎತ್ತರದ ಯುದ್ಧಭೂಮಿ ಎಂದು ಪರಿಗಣಿಸಲ್ಪಟ್ಟಿದೆ.

ಇದನ್ನೂ ಓದಿ: ಅಮೆರಿಕದಲ್ಲಿದ್ದ 105 ಪುರಾತನ ವಸ್ತುಗಳು ಮರಳಿ ಭಾರತಕ್ಕೆ, US​ ಸರ್ಕಾರಕ್ಕೆ ಧನ್ಯವಾದ ತಿಳಿಸಿದ ಮೋದಿ

ಭಾರತವು ಪಾಕಿಸ್ತಾನ ಮತ್ತು ಚೀನಾದಿಂದ ಅವಳಿ ಸೇನಾ ಬೆದರಿಕೆಗಳನ್ನು ಎದುರಿಸುತ್ತಿದೆ. ಆದಾಗ್ಯೂ, ಯಾವುದೇ ಗುಂಡಿನ ಕಾಳಗಕ್ಕಿಂತಲೂ ಸಿಯಾಚಿನ್ ಹಿಮಪರ್ವತದಲ್ಲಿನ ಹವಾಮಾನ ವೈಪರೀತ್ಯಗಳು ಮತ್ತು ಹಿಮಕುಸಿತಗಳೇ ಹೆಚ್ಚು ಸೈನಿಕರನ್ನು ಬಲಿಪಡೆದಿವೆ.

ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಹಿಮಪಾತಕ್ಕೆ ಸಿಲುಕಿ 2019 ರಲ್ಲಿ ನಾಲ್ವರು ಸೇನಾ ಯೋಧರು ಮತ್ತು ಇಬ್ಬರು ನಾಗರಿಕ ಪೋರ್ಟರ್‌ಗಳು ಸೇರಿದಂತೆ ಕನಿಷ್ಠ ಆರು ಜನರು ಪ್ರಾಣ ಕಳೆದುಕೊಂಡಿದ್ದರು. ಇಂಡಿಯಾ ಟುಡೇ ವರದಿಯ ಪ್ರಕಾರ, ಹವಾಮಾನ ವೈಪರೀತ್ಯ ಮತ್ತು ಹಿಮಕುಸಿತದಿಂದಾಗಿ 800ಕ್ಕೂ ಹೆಚ್ಚು ಸೇನಾ ಯೋಧರು ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಗಣಪತಿ ಶರ್ಮಾ
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್