Sign In

By signing in or creating an account, you agree with Associated Broadcasting Company's Terms & Conditions and Privacy Policy.

PM Modi Foreign Visit: 6 ದಿನ, 3 ದೇಶ, 20ಕ್ಕೂ ಹೆಚ್ಚು ನಾಯಕರ ಭೇಟಿ; ಪ್ರಧಾನಿ ಮೋದಿ ಐತಿಹಾಸಿಕ ವಿದೇಶ ಪ್ರವಾಸದ ವಿವರ ಇಲ್ಲಿದೆ

ಪ್ರಧಾನಿ ನರೇಂದ್ರ ಮೋದಿ ಶುಕ್ರವಾರದಿಂದ 6 ದಿನಗಳ (ಮೇ19 - 24) ಕಾಲ 3 ದೇಶಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಸಮಯದಲ್ಲಿ, ಅವರು ಮೂರು ಜಿ-7, ಕ್ವಾಡ್ ಮತ್ತು ಎಫ್​ಐಪಿಐಸಿ ಶೃಂಗಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಮೋದಿ ವಿದೇಶ ಪ್ರವಾಸದ ಪೂರ್ಣ ವಿವರ ಇಲ್ಲಿದೆ.

PM Modi Foreign Visit: 6 ದಿನ, 3 ದೇಶ, 20ಕ್ಕೂ ಹೆಚ್ಚು ನಾಯಕರ ಭೇಟಿ; ಪ್ರಧಾನಿ ಮೋದಿ ಐತಿಹಾಸಿಕ ವಿದೇಶ ಪ್ರವಾಸದ ವಿವರ ಇಲ್ಲಿದೆ
ನರೇಂದ್ರ ಮೋದಿ (ಸಂಗ್ರಹ ಚಿತ್ರ)Image Credit source: PTI
Follow us
Ganapathi Sharma
|

Updated on:May 18, 2023 | 10:24 PM

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಶುಕ್ರವಾರದಿಂದ 6 ದಿನಗಳ (ಮೇ19 – 24) ಕಾಲ 3 ದೇಶಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಸಮಯದಲ್ಲಿ, ಅವರು ಮೂರು ಜಿ-7, ಕ್ವಾಡ್ ಮತ್ತು ಎಫ್​ಐಪಿಐಸಿ ಶೃಂಗಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಮೊದಲನೆಯದಾಗಿ, ಅವರು ಜಪಾನ್‌ಗೆ ಭೇಟಿ ನೀಡಲಿದ್ದು, ಜಿ -7 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಿ ಮೋದಿ ಸೇರಿದಂತೆ ಹಲವು ದೇಶಗಳ ನಾಯಕರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಎಲ್ಲಾ ಮೂರು ಸಮಾವೇಶಗಳಲ್ಲಿ, ಪ್ರಧಾನಿ ಮೋದಿ ಸುಮಾರು 20ಕ್ಕೂ ಹೆಚ್ಚು ನಾಯಕರನ್ನು ಭೇಟಿಯಾಗಲಿದ್ದಾರೆ. ಪ್ರಧಾನಿ ಮೋದಿ ಅವರ ಐತಿಹಾಸಿಕ ವಿದೇಶ ಪ್ರವಾಸ ಇದಾಗಿರಲಿದೆ.

ಇದೇ ವೇಳೆ ಪ್ರಧಾನಿ ಮೋದಿ ಹಲವು ನಾಯಕರ ಜತೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಆರು ದಿನಗಳ ಭೇಟಿಯಲ್ಲಿ ಪ್ರಧಾನಿ ಮೋದಿ ಅವರು ಉದ್ಯಮಿಗಳು, ಗಣ್ಯ ವ್ಯಕ್ತಿಗಳು, ವಿದ್ವಾಂಸರು ಮತ್ತು ಭಾರತೀಯ ಸಮುದಾಯದ ಸದಸ್ಯರನ್ನು ಭೇಟಿ ಮಾಡಲಿದ್ದಾರೆ. ಇದಲ್ಲದೆ ಸಿಡ್ನಿಯಲ್ಲಿ ಸಾಗರೋತ್ತರ ಭಾರತೀಯರನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ.

ಮೋದಿಯವರ ಪ್ರವಾಸದ ವೇಳಾಪಟ್ಟಿ

ಪ್ರಧಾನಿ ಮೋದಿಯವರ ಆರು ದಿನಗಳ ವಿದೇಶ ಪ್ರವಾಸ ಜಪಾನ್‌ನಿಂದ ಆರಂಭವಾಗಲಿದೆ. ಜಪಾನ್​ನ ಹಿರೋಷಿಮಾದಲ್ಲಿ ಜಿ-7 ಶೃಂಗಸಭೆ ನಡೆಯಲಿದೆ. 1974 ರಲ್ಲಿ ನಡೆಸಿದ ಪೋಖ್ರಾನ್ ಪರಮಾಣು ಪರೀಕ್ಷೆಯ ನಂತರ ಭಾರತದ ಪ್ರಧಾನಿಯೊಬ್ಬರು ಹಿರೋಷಿಮಾಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. 1945 ರಲ್ಲಿ ಪರಮಾಣು ಬಾಂಬ್‌ನಿಂದ ನಾಶವಾದ ಹಿರೋಷಿಮಾ ನಗರಕ್ಕೆ ಭೇಟಿ ನೀಡಿದ ಕೊನೆಯ ಭಾರತೀಯ ಪ್ರಧಾನಿ ಜವಾಹರಲಾಲ್ ನೆಹರು. ಇದೀಗ ಅವರ ನಂತರ ಅಲ್ಲಿಗೆ ಭೇಟಿ ನೀಡುತ್ತಿರುವ ಪ್ರಧಾನಿಯಾಗಿದ್ದಾರೆ ಮೋದಿ. ಪ್ರಧಾನಿ ಅವರು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ ಅವರೊಂದಿಗೆ ದ್ವಿಪಕ್ಷೀಯ ಚರ್ಚೆ ನಡೆಸಲಿದ್ದಾರೆ.

ಜಿ-7 ಶೃಂಗಸಭೆಯ ನಂತರ ಮೇ 22ರಂದು ಪಪುವಾ ನ್ಯೂಗಿನಿಯಾಗೆ ತೆರಳಲಿದ್ದಾರೆ. ಅಲ್ಲಿನ ಪ್ರಧಾನಿ ಜೇಮ್ಸ್ ಮರಾಪೆ ಜತೆ ಮಾತುಕತೆ ನಡೆಸಲಿದ್ದಾರೆ. ಜಂಟಿಯಾಗಿ ಭಾರತ-ಪೆಸಿಫಿಕ್ ದ್ವೀಪಗಳ ಸಹಕಾರಕ್ಕೆ ಸಂಬಂಧಿಸಿದ (ಎಫ್‌ಪಿಐಸಿ III ಶೃಂಗಸಭೆ) ಮೂರನೇ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಅದೇ ದಿನ ಅವರು ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ. ಪ್ರಧಾನಿ ಮೋದಿ ಮೇ 22-24ರ ನಡುವೆ ಆಸ್ಟ್ರೇಲಿಯಾದಲ್ಲಿ ಇರಲಿದ್ದಾರೆ. ಆ ಬಳಿಕ ಭಾರತಕ್ಕೆ ಮರಳಲಿದ್ದಾರೆ. ಮೇ 23 ರಂದು ಅವರು ಸಿಡ್ನಿಯಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಇದನ್ನೂ ಓದಿ: G7 Summit: ನಾಳೆ ಹಿರೋಷಿಮಾಕ್ಕೆ ಮೋದಿ, ನೆಹರು ನಂತರ ಭೇಟೆ ನೀಡುತ್ತಿರುವ ಮೊದಲ ಪ್ರಧಾನಿ

ಜಿ-7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿರುವುದು ವಿಶೇಷ ಎಂದು ಜಪಾನ್ ರಾಯಭಾರಿ ಹಿರೋಶಿ ಸುಜುಕಿ ಬಣ್ಣಿಸಿದ್ದಾರೆ. ಈ ಸಮಾವೇಶದಲ್ಲಿ ‘ಗ್ಲೋಬಲ್ ಸೌತ್’ ವಿಷಯದ ಬಗ್ಗೆ ಪ್ರಧಾನಿ ಮೋದಿ ಮಾತನಾಡುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:22 pm, Thu, 18 May 23

Daily Devotional: ಪೂಜೆ ಸಮಯದಲ್ಲಿ ಅಗರಬತ್ತಿ ಬಳಕೆಯ ಮಹತ್ವ ತಿಳಿಯಿರಿ
Daily Devotional: ಪೂಜೆ ಸಮಯದಲ್ಲಿ ಅಗರಬತ್ತಿ ಬಳಕೆಯ ಮಹತ್ವ ತಿಳಿಯಿರಿ
ಸುನಿತಾ ವಿಲಿಯಮ್ಸ್, ವಿಲ್ಮೋರ್ ಲ್ಯಾಂಡಿಂಗ್: ಅದ್ಭುತ ವಿಡಿಯೋ ಇಲ್ಲಿದೆ ನೋಡಿ
ಸುನಿತಾ ವಿಲಿಯಮ್ಸ್, ವಿಲ್ಮೋರ್ ಲ್ಯಾಂಡಿಂಗ್: ಅದ್ಭುತ ವಿಡಿಯೋ ಇಲ್ಲಿದೆ ನೋಡಿ
Daily Horoscope: ಮಿಥುನ ರಾಶಿಯವರಿಗೆ ಆರು ಗ್ರಹಗಳ ಶುಭಫಲವಿದೆ
Daily Horoscope: ಮಿಥುನ ರಾಶಿಯವರಿಗೆ ಆರು ಗ್ರಹಗಳ ಶುಭಫಲವಿದೆ
ಪುನೀತ್ ರಾಜ್​ಕುಮಾರ್ ಬಗ್ಗೆ ಅರ್ಧಗಂಟೆ ಮಾತನಾಡಿದ ರಶ್ಮಿಕಾ ಮಂದಣ್ಣ
ಪುನೀತ್ ರಾಜ್​ಕುಮಾರ್ ಬಗ್ಗೆ ಅರ್ಧಗಂಟೆ ಮಾತನಾಡಿದ ರಶ್ಮಿಕಾ ಮಂದಣ್ಣ
ಪತಿಯೊಂದಿಗೆ ಜಗಳವಾಡಿ ವಿದ್ಯುತ್ ಟವರ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಪತ್ನಿ
ಪತಿಯೊಂದಿಗೆ ಜಗಳವಾಡಿ ವಿದ್ಯುತ್ ಟವರ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಪತ್ನಿ
ಕೋರ್ಟ್​ ಆದೇಶ ಹಾಗೂ ವ್ಯಕ್ತಿ ಪ್ರಾಣಕ್ಕೂ ಬೆಲೆ ಕೊಡದ KSRTC, ಬಸ್ ಜಪ್ತಿ!
ಕೋರ್ಟ್​ ಆದೇಶ ಹಾಗೂ ವ್ಯಕ್ತಿ ಪ್ರಾಣಕ್ಕೂ ಬೆಲೆ ಕೊಡದ KSRTC, ಬಸ್ ಜಪ್ತಿ!
ಚಂದನ್ ಶೆಟ್ಟಿ ಜೊತೆ ಮದುವೆ ಗಾಸಿಪ್, ಸ್ಪಷ್ಟನೆ ಕೊಟ್ಟ ಸಂಜನಾ
ಚಂದನ್ ಶೆಟ್ಟಿ ಜೊತೆ ಮದುವೆ ಗಾಸಿಪ್, ಸ್ಪಷ್ಟನೆ ಕೊಟ್ಟ ಸಂಜನಾ
ಕುಮಾರಸ್ವಾಮಿ ನನ್ನನ್ನು ಬಯ್ಯದೆ ಬೇರೆ ಯಾರನ್ನು ಬಯ್ಯಲು ಸಾಧ್ಯ? ಶಿವಕುಮಾರ್
ಕುಮಾರಸ್ವಾಮಿ ನನ್ನನ್ನು ಬಯ್ಯದೆ ಬೇರೆ ಯಾರನ್ನು ಬಯ್ಯಲು ಸಾಧ್ಯ? ಶಿವಕುಮಾರ್
ಜಾರ್ಖಂಡ್‌ನ ದಿಯೋಘರ್‌ನಲ್ಲಿ ಇಂಡಿಯನ್ ಆಯಿಲ್ ಸ್ಥಾವರದಲ್ಲಿ ಬೆಂಕಿ ಅವಘಡ
ಜಾರ್ಖಂಡ್‌ನ ದಿಯೋಘರ್‌ನಲ್ಲಿ ಇಂಡಿಯನ್ ಆಯಿಲ್ ಸ್ಥಾವರದಲ್ಲಿ ಬೆಂಕಿ ಅವಘಡ
ಕರ್ನಾಟಕ ಮೊದಲು ತಮಿಳುನಾಡು ಚರ್ಚೆ ಮಾಡಬೇಕಾದ ಅವಶ್ಯಕತೆ ಸ್ಪಷ್ಟವಾಗುತ್ತಿದೆ
ಕರ್ನಾಟಕ ಮೊದಲು ತಮಿಳುನಾಡು ಚರ್ಚೆ ಮಾಡಬೇಕಾದ ಅವಶ್ಯಕತೆ ಸ್ಪಷ್ಟವಾಗುತ್ತಿದೆ