ಮಾಸ್ಕ್ ಧರಿಸಿಲ್ಲವೆಂದು ಮೇಕೆಯನ್ನೆ ಬಂಧಿಸಿದ ಪೊಲೀಸರು, ಎಲ್ಲಿ?

| Updated By:

Updated on: Jul 28, 2020 | 12:38 AM

ಮೇಕೆಯೊಂದು ಮಾಸ್ಕ್ ಧರಿಸದೆ ಬೀದಿಯಲ್ಲಿ ಓಡಾಡುತ್ತಿದ್ದನ್ನು ಕಂಡ ಬಿಕಾನ್ ಗಂಜ್ ನಗರದ ಪೊಲೀಸರು ಮೇಕೆಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿರುವ ಘಟನೆ ನಡೆದಿದ್ದು ಈಗ ಎಲ್ಲೆಡೆ ಸುದ್ದಿಯಲ್ಲಿದೆ. ವಿಷಯ ತಿಳಿದು ಪೊಲೀಸ್ ಠಾಣೆಗೆ ಬಂದ ಮೇಕೆಯ ಯಜಮಾನ ಪೊಲೀಸರನ್ನು ಕಾಡಿ ಬೇಡಿದ ನಂತರ, ಪೊಲೀಸರು ಒಡೆಯನಿಗೆ ಮೇಕೆಯನ್ನು ಬೀದಿಯಲ್ಲಿ ಅಲೆಯಲು ಬಿಡಬಾರದೆಂದು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಈ ವಿಚಾರ ಎಲ್ಲೆಡೆ ಸುದ್ದಿಯಾದ ಬಳಿಕ ಎಚ್ಚೆತ್ತುಕೊಂಡ ಅನ್ವರ್ ಗಂಜ್ ಪೊಲೀಸ್ ಠಾಣೆಯ ಸರ್ಕಲ್ ಆಫೀಸರ್ ಸೈಫುದ್ದಿನ್ ಬೇಗ್ ಹೇಳಿರುವ […]

ಮಾಸ್ಕ್ ಧರಿಸಿಲ್ಲವೆಂದು ಮೇಕೆಯನ್ನೆ ಬಂಧಿಸಿದ ಪೊಲೀಸರು, ಎಲ್ಲಿ?
Follow us on

ಮೇಕೆಯೊಂದು ಮಾಸ್ಕ್ ಧರಿಸದೆ ಬೀದಿಯಲ್ಲಿ ಓಡಾಡುತ್ತಿದ್ದನ್ನು ಕಂಡ ಬಿಕಾನ್ ಗಂಜ್ ನಗರದ ಪೊಲೀಸರು ಮೇಕೆಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿರುವ ಘಟನೆ ನಡೆದಿದ್ದು ಈಗ ಎಲ್ಲೆಡೆ ಸುದ್ದಿಯಲ್ಲಿದೆ.

ವಿಷಯ ತಿಳಿದು ಪೊಲೀಸ್ ಠಾಣೆಗೆ ಬಂದ ಮೇಕೆಯ ಯಜಮಾನ ಪೊಲೀಸರನ್ನು ಕಾಡಿ ಬೇಡಿದ ನಂತರ, ಪೊಲೀಸರು ಒಡೆಯನಿಗೆ ಮೇಕೆಯನ್ನು ಬೀದಿಯಲ್ಲಿ ಅಲೆಯಲು ಬಿಡಬಾರದೆಂದು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ಈ ವಿಚಾರ ಎಲ್ಲೆಡೆ ಸುದ್ದಿಯಾದ ಬಳಿಕ ಎಚ್ಚೆತ್ತುಕೊಂಡ ಅನ್ವರ್ ಗಂಜ್ ಪೊಲೀಸ್ ಠಾಣೆಯ ಸರ್ಕಲ್ ಆಫೀಸರ್ ಸೈಫುದ್ದಿನ್ ಬೇಗ್ ಹೇಳಿರುವ ಪ್ರಕಾರ ಮೇಕೆಯನ್ನು ಯುವಕನೊಬ್ಬ ಎತ್ತಿಕೊಂಡು ಹೋಗುತ್ತಿದ್ದು, ಪೊಲೀಸರನ್ನು ಕಂಡ ಬಳಿಕ ಸ್ಥಳದಲ್ಲಿಯೇ ಮೇಕೆಯನ್ನು ಬಿಟ್ಟು ಪರಾರಿಯಾಗಿದ್ದಾನೆ. ಹೀಗಾಗಿ ಮೇಕೆಯನ್ನು ಪೊಲೀಸ್ ಠಾಣೆಗೆ ತಂದು ರಕ್ಷಣೆ ನೀಡಿದೆವು ಎಂದಿದ್ದಾರೆ.

ಮೇಕೆಯನ್ನು ಠಾಣೆಗೆ ಕರೆತಂದ ಪೊಲೀಸ್ ಒಬ್ಬರು ಮೇಕೆ ಮಾಸ್ಕ್ ಧರಿಸದೆ ಬೀದಿಯಲ್ಲಿ ಓಡಾಡಿ ಲಾಕ್ ಡೌನ್ ನಿಯಮ ಉಲ್ಲಂಘಿಸಿದೆ. ಹಾಗಾಗಿ ಠಾಣೆಗೆ ಕರೆದುಕೊಂಡು ಬಂದಿದ್ದೇವೆ ಎಂದಿದ್ದರು. ಜೊತೆಗೆ ಇತ್ತೀಚಿನ ದಿನಗಳಲ್ಲಿ ನಾಯಿಗಳ ಮಾಲೀಕರು ತಮ್ಮ ನಾಯಿಗಳಿಗೆ ಮಾಸ್ಕ್ ವ್ಯವಸ್ಥೆ ಮಾಡಲಾಗಿದ್ದು, ಮೇಕೆಗಳಿಗ್ಯಾಕೆ ಮಾಸ್ಕ್ ವ್ಯವಸ್ಥೆ ಮಾಡಬಾರದು ಎಂದು ಪ್ರಶ್ನೆ ಮಾಡಿದ್ದರು. ಆದರೆ ಸಾಮಾಜಿಕ ತಾಣಗಳಲ್ಲಿ ಇದು ವೈರಲ್ ಆದ ಕಾರಣ ಈಗ ತಮ್ಮ ಹೇಳಿಕೆಯನ್ನು ಬದಲಾಯಿಸಿದ್ದಾರೆ.

Published On - 3:31 pm, Mon, 27 July 20