ಉಮೇಶ್ ಪಾಲ್(Umesh Pal) ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ, ಹತ್ಯೆಗೀಡಾದ ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್ ಸಹಾಯಕ ಗುಡ್ಡು ಮುಸ್ಲಿಂ( Guddu Muslim) ಮನೆಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಎಸಿಪಿ (ಧುಮಂಗಂಜ್) ವರುಣ್ ಕುಮಾರ್ ಪ್ರಕಾರ, ಆರೋಪಿಗೆ ಸೇರಿದ ಮನೆ ಮತ್ತು ಅಲ್ಲಿ ಇರಿಸಲಾಗಿದ್ದ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಈ ಹಿಂದೆಯೂ ಸಹ ಪೊಲೀಸ್ ತಂಡ ಅಲ್ಲಿಗೆ ಹೋಗಿತ್ತು, ಆದರೆ ಮನೆಗೆ ಪ್ರಯಾಗ್ರಾಜ್ ಅಭಿವೃದ್ಧಿ ಪ್ರಾಧಿಕಾರ (ಪಿಡಿಎ) ಸೀಲ್ ಮಾಡಿರುವುದು ಕಂಡುಬಂದಿದೆ. ಇಂದು ಪಿಡಿಎ ತಂಡದ ಸಮನ್ವಯದಲ್ಲಿ ಮನೆ ತೆರೆಯಲಾಗಿದೆ ಎಂದರು.
ಇಲ್ಲಿಯವರೆಗೆ, ನಾಲ್ವರು ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿದ್ದು, ಇತರ ಇಬ್ಬರು ಆರೋಪಿಗಳಾದ ಅತೀಕ್ ಅಹ್ಮದ್ ಅವರ ಪತ್ನಿ ಶೈಸ್ತಾ ಪರ್ವೀನ್ ಮತ್ತು ಅರ್ಮಾನ್ ವಿರುದ್ಧ ಮೂರ್ನಾಲ್ಕು ದಿನಗಳಲ್ಲಿ ವಿಚಾರಣೆಯನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಉಮೇಶ್ ಪಾಲ್ ಅವರ ಮೇಲೆ ನಡೆದ ಮಾರಣಾಂತಿಕ ದಾಳಿಯ ವೇಳೆ ಗುಡ್ಡು ಮುಸ್ಲಿಂ ಬಾಂಬ್ ಎಸೆದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ . ಬಿಎಸ್ಪಿ ಶಾಸಕ ರಾಜುಪಾಲ್ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿ ಉಮೇಶ್ ಪಾಲ್ ಅವರನ್ನು ಫೆಬ್ರವರಿ 25, 2023 ರಂದು ಹಾಡಹಗಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಘಟನೆಯಿಂದ ಗುಡ್ಡು ಮುಸ್ಲಿಂ ತಲೆಮರೆಸಿಕೊಂಡಿದ್ದಾನೆ.
ಮತ್ತಷ್ಟು ಓದಿ: ಗುಡ್ಡು ಮುಸ್ಲಿಂ, ಅತಿಕ್ ಅಹ್ಮದ್ ಪತ್ನಿ ಶೈಸ್ತಾರನ್ನು ಶೀಘ್ರದಲ್ಲೇ ಬಂಧಿಸಲಾಗುವುದು: ಯುಪಿ ಪೊಲೀಸ್
ಉಮೇಶ್ ಪಾಲ್ ಅವರ ಪತ್ನಿ ಜಯಪಾಲ್ ಅವರ ದೂರಿನ ಮೇರೆಗೆ ಧುಮನಗಂಜ್ ಪೊಲೀಸ್ ಠಾಣೆಯಲ್ಲಿ ಮಾಫಿಯಾ ಅತೀಕ್ ಅಹ್ಮದ್, ಆತನ ಸಹೋದರ ಅಶ್ರಫ್, ಶೈಸ್ತಾ ಪರ್ವೀನ್, ಅತೀಕ್ ಅವರ ಇಬ್ಬರು ಪುತ್ರರು, ಗುಡ್ಡು ಮುಸ್ಲಿಂ, ಗುಲಾಮ್ ಮತ್ತು ಇತರ ಒಂಬತ್ತು ಸಹಚರರ ವಿರುದ್ಧ ಪ್ರಕರಣ ದಾಖಲಾಗಿದೆ.
ಉಮೇಶ್ ಪಾಲ್ ಕೊಲೆ ಪ್ರಕರಣ ಸೇರಿದಂತೆ 100 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ಹೆಸರಿಸಲಾದ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅವರನ್ನು ಈ ವರ್ಷದ ಏಪ್ರಿಲ್ 15 ರಂದು ಪ್ರಯಾಗರಾಜ್‌ನ ಕ್ಯಾಲ್ವಿನ್ ಆಸ್ಪತ್ರೆಯ ಹೊರಗೆ ಗುಂಡಿಕ್ಕಿ ಕೊಲ್ಲಲಾಯಿತು. ಅತೀಕ್ ಅವರ ಪತ್ನಿ ಶಾಹಿಸ್ತಾ ಪರ್ವೀನ್ ಮತ್ತು ಅಶ್ರಫ್ ಅವರ ಪತ್ನಿ ಜೈನಾಬ್ ತಲೆಮರೆಸಿಕೊಂಡಿರುವವರಲ್ಲಿ ಸೇರಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ