ಗುಡ್ಡು ಮುಸ್ಲಿಂ, ಅತಿಕ್ ಅಹ್ಮದ್ ಪತ್ನಿ ಶೈಸ್ತಾರನ್ನು ಶೀಘ್ರದಲ್ಲೇ ಬಂಧಿಸಲಾಗುವುದು: ಯುಪಿ ಪೊಲೀಸ್
ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಅತೀಕ್ ಅಹ್ಮದ್ ಕುಟುಂಬದ ನಾಲ್ವರ ಪೈಕಿ ಮೂವರು ಸಾವನ್ನಪ್ಪಿದ್ದಾರೆ. ಅತೀಕ್‌ನ ಮಗ ಅಸಾದ್‌ನ್ನು ಯುಪಿ ಪೊಲೀಸರು ಎನ್‌ಕೌಂಟರ್‌ನಲ್ಲಿ ಕೊಂದಿದ್ದರು.
ಗ್ಯಾಂಗ್‌ಸ್ಟರ್ ರಾಜಕಾರಣಿ ಅತಿಕ್ ಅಹ್ಮದ್ (Atiq Ahmad) ಹತ್ಯೆಯ ನಂತರ ಗುಡ್ಡು ಮುಸ್ಲಿಂ (Guddu Muslim) ಎಂಬಾತನನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ, ಆದರೆ ಪ್ರಯತ್ನಗಳು ನಡೆಯುತ್ತಿವೆ ಎಂದು ಉತ್ತರ ಪ್ರದೇಶ (Uttar Pradesh) ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಡಿಐಜಿ ಅನಂತ್ ದೇವ್ ತಿವಾರಿ ಹೇಳಿದ್ದಾರೆ. ಮೊನ್ನೆ ಮಂಗಳವಾರ ಎಸ್‌ಟಿಎಫ್ ಐಜಿ ಅಮಿತಾಭ್ ಯಶ್ ಅವರು ಗುಡ್ಡು ಅತ್ಯಂತ ಭಯಾನಕ ಕ್ರಿಮಿನಲ್ ಮತ್ತು ವೃತ್ತಿಪರ ಶೂಟರ್ ಕೂಡ ಆಗಿದ್ದ ಎಂದು ಹೇಳಿದ್ದರು. 1999ರಲ್ಲಿ ಮಾದಕ ವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಗುಡ್ಡು ಬಂಧನವಾಗಿತ್ತು .ಆದರೆ ಆತ ಅತೀಕ್‌ನ ವಕೀಲರ ಸಹಾಯದಿಂದ ಜಾಮೀನು ಪಡೆದಿದ್ದಾನೆ. ಅವನು ಬಾಂಬ್ ತಯಾರಕ. ಉಮೇಶ್ ಪಾಲ್ ಕೊಲೆಯಾದಾಗ, ನಾನು ಗುಡ್ಡು ಮುಸ್ಲಿಂನ್ನು ಸಿಸಿಟಿವಿಯಲ್ಲಿ ಸುಲಭವಾಗಿ ಗುರುತಿಸಿದೆ ಎಂದಿದ್ದಾರೆ ಯಶ್.
ಅತೀಕ್ ಮತ್ತು ಅಶ್ರಫ್ ಅವರನ್ನು ಕಳೆದ ಶನಿವಾರ ತಪಾಸಣೆಗಾಗಿ ಪ್ರಯಾಗ್‌ರಾಜ್‌ನಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಪತ್ರಕರ್ತರ ಸೋಗಿನಲ್ಲಿ ಬಂದ ಮೂವರು ವ್ಯಕ್ತಿಗಳು ಅವರನ್ನು ಪಾಯಿಂಟ್-ಬ್ಲಾಂಕ್ ರೇಂಜ್‌ನಲ್ಲಿ ಗುಂಡಿಕ್ಕಿ ಕೊಂದರು. ಮೈನ್ ಬಾತ್ ಯೇ ಹೈ ಕಿ ಗುಡ್ಡು ಮುಸ್ಲಿಂ… (ಮುಖ್ಯ ಅಂಶವೆಂದರೆ ಗುಡ್ಡು ಮುಸ್ಲಿಂ)” ಎಂಬುದು ಗುಂಡು ಹಾರಿಸುವ ಮುನ್ನ ಅಶ್ರಫ್ ಆಡಿದ ಕೊನೆಯ ಮಾತಾಗಿತ್ತು.
ಮಾಫಿಯಾಗಳು ಇನ್ನು ಮುಂದೆ ರಾಜ್ಯದಲ್ಲಿ ಯಾರಿಗೂ ಬೆದರಿಕೆ ಹಾಕುವಂತಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮಂಗಳವಾರ ಹೇಳಿದ್ದಾರೆ. ಈ ಹಿಂದೆ ಯುಪಿಗೆ ಬೆದರಿಕೆಯೊಡ್ಡಿದವರಿಗೆ ಈಗ ಯುಪಿ ಬೆದರಿಕೆಯಾಗಿದೆ ಎಂದು ಯೋಗಿ ಹೇಳಿದ್ದಾರೆ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, 2017ರ ಮೊದಲು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿರಲಿಲ್ಲ, ಆದರೆ ನಂತರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಜಾರಿಯಲ್ಲಿದೆ. 2017 ರಿಂದ 2023 ರವರೆಗೆ ಉತ್ತರ ಪ್ರದೇಶದಲ್ಲಿ ಯಾವುದೇ ಗಲಭೆಗಳು ನಡೆದಿಲ್ಲ. ಕರ್ಫ್ಯೂ ಅಗತ್ಯವಿಲ್ಲ ಎಂದು ಆದಿತ್ಯನಾಥ ಹೇಳಿದ್ದಾರೆ.
We have not been able to arrest Guddu Muslim and Shaista Parveen so far. Efforts are underway. All teams are at it, we will arrest them soon: DIG Anant Dev Tiwari, Special Task Force (STF), Uttar Pradesh pic.twitter.com/sf65IMXoXf
— ANI (@ANI) April 18, 2023
ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಅತೀಕ್ ಅಹ್ಮದ್ ಕುಟುಂಬದ ನಾಲ್ವರ ಪೈಕಿ ಮೂವರು ಸಾವನ್ನಪ್ಪಿದ್ದಾರೆ. ಅತೀಕ್‌ನ ಮಗ ಅಸಾದ್‌ನ್ನು ಯುಪಿ ಪೊಲೀಸರು ಎನ್‌ಕೌಂಟರ್‌ನಲ್ಲಿ ಕೊಂದಿದ್ದರು.
ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್ ಅವರ ಪತ್ನಿ ಶೈಸ್ತಾ ಪರ್ವೀನ್ ಕಳೆದ ವಾರ ತನ್ನ ಮಗ ಮತ್ತು ಪತಿ ಸಾವಿನ ನಂತರ ಇಂದು ಶರಣಾಗುವ ಸಾಧ್ಯತೆಯಿದೆ. ಟಿವಿ ವರದಿಗಳ ಪ್ರಕಾರ, ಆಕೆಯ ಸನ್ನಿಹಿತ ಶರಣಾಗತಿಯನ್ನು ನಿರೀಕ್ಷಿಸಿ, ಪ್ರಯಾಗ್‌ರಾಜ್‌ನಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಉಮೇಶ್ ಪಾಲ್ ಕೊಲೆ ಪ್ರಕರಣದ ಆರೋಪಿ ಎಂದು ಹೆಸರಿಸಲಾದ ಶೈಸ್ತಾ ಪರ್ವೀನ್ ಪರಾರಿಯಾಗಿದ್ದಾಳೆ. ಕಳೆದ ವಾರ, ಯುಪಿ ಸರ್ಕಾರವು ಆಕೆಯನ್ನು ಪತ್ತೆ ಹಚ್ಚಿದರೆ ನೀಡುವ ನಗದು ಬಹುಮಾನವನ್ನು 25,000 ರೂಪಾಯಿಗಳಿಂದ 50,000 ರೂಪಾಯಿಗಳಿಗೆ ಹೆಚ್ಚಿಸಿದೆ. ಅಲಹಾಬಾದ್ ಸಂಸದ/ಶಾಸಕ ನ್ಯಾಯಾಲಯ ಈ ಹಿಂದೆ ಆಕೆಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.
2005 ರ ಬಿಎಸ್‌ಪಿ ಶಾಸಕ ರಾಜು ಪಾಲ್ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿ ವಕೀಲ ಉಮೇಶ್ ಪಾಲ್ ಮತ್ತು ಅವರ ಇಬ್ಬರು ಪೊಲೀಸ್ ಗನ್ನರ್‌ಗಳನ್ನು ಫೆಬ್ರವರಿಯಲ್ಲಿ ಸುಲೇಮ್‌ಸರಾಯ್‌ನಲ್ಲಿರುವ ಅವರ ಮನೆಯ ಹೊರಗೆ ಕೊಲ್ಲಲಾದ ಗುಂಡಿನ ದಾಳಿಯ ಘಟನೆಯಲ್ಲಿ ಆರೋಪಿ ಎಂದು ಹೆಸರಿಸಲ್ಪಟ್ಟಾಗಿನಿಂದ ಶೈಸ್ತಾ ತಲೆಮರೆಸಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಈಗ ಮಾಫಿಯಾ ಯಾರನ್ನೂ ಹೆದರಿಸಲು ಸಾಧ್ಯವಿಲ್ಲ: ಅತೀಕ್, ಅಶ್ರಫ್ ಹತ್ಯೆ ಬಳಿಕ ಸಿಎಂ ಯೋಗಿ ಮಾತು ಉಮೇಶ್ ಪಾಲ್ ಅವರ ಪತ್ನಿ ಜಯಪಾಲ್ ನೀಡಿದ ದೂರಿನ ಆಧಾರದ ಮೇಲೆ ಫೆಬ್ರವರಿ 25 ರಂದು ಅತೀಕ್ ಅಹ್ಮದ್, ಅವರ ಸಹೋದರ ಅಶ್ರಫ್, ಪತ್ನಿ ಶಾಯಿಸ್ತಾ ಪರ್ವೀನ್, ಇಬ್ಬರು ಪುತ್ರರು, ಸಹಾಯಕರಾದ ಗುಡ್ಡು ಮುಸ್ಲಿಂ ಮತ್ತು ಗುಲಾಮ್ ಮತ್ತು ಇತರ ಒಂಬತ್ತು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:00 pm, Tue, 18 April 23