Vikram Mandavi: ಛತ್ತೀಸ್‌ಗಢ ಕಾಂಗ್ರೆಸ್ ಶಾಸಕರ ಬೆಂಗಾವಲು ವಾಹನದ ಮೇಲೆ ಮಾವೋವಾದಿಗಳಿಂದ ಗುಂಡಿನ ದಾಳಿ

ಶಾಸಕರ ಬೆಂಗಾವಲು ವಾಹನದ ಮೇಲೆ ಮಾವೋವಾದಿಗಳು ಗುಂಡಿನ ದಾಳಿ ನಡೆಸಿರುವ ಘಟನೆ ಛತ್ತೀಸ್‌ಗಢನಲ್ಲಿ ನಡೆದಿದೆ.

Vikram Mandavi: ಛತ್ತೀಸ್‌ಗಢ ಕಾಂಗ್ರೆಸ್ ಶಾಸಕರ ಬೆಂಗಾವಲು ವಾಹನದ ಮೇಲೆ ಮಾವೋವಾದಿಗಳಿಂದ ಗುಂಡಿನ ದಾಳಿ
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on:Apr 18, 2023 | 6:22 PM

ರೈಪುರ್: ಶಾಸಕರ ಬೆಂಗಾವಲು ವಾಹನದ ಮೇಲೆ ಮಾವೋವಾದಿಗಳು ಗುಂಡಿನ ದಾಳಿ ನಡೆಸಿರುವ ಘಟನೆ ಛತ್ತೀಸ್‌ಗಢನಲ್ಲಿ ನಡೆದಿದೆ. ಯಾರಿಗೂ ಗಾಯವಾಗಿಲ್ಲ ಎಂದು ವರದಿ ತಿಳಿಸಿದೆ. ಛತ್ತೀಸ್ ಗಢದ ನಕ್ಸಲ್ ಪೀಡಿತ ಬಿಜಾಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕ ವಿಕ್ರಮ್ ಮಾಂಡವಿ ಅವರ ಬೆಂಗಾವಲು ವಾಹನದ ಮೇಲೆ ನಕ್ಸಲರು ದಾಳಿ ನಡೆಸಿದ್ದಾರೆ. ಬೆಂಗಾವಲು ಪಡೆಯಲ್ಲಿ ಸೇರಿದ್ದ ಜಿಲ್ಲಾ ಪಂಚಾಯಿತಿ ಸದಸ್ಯೆ ಪಾರ್ವತಿ ಕಶ್ಯಪ್ ಅವರ ವಾಹನದ ಮೇಲೂ ನಕ್ಸಲೀಯರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಜಿಲ್ಲೆಯ ನಕ್ಸಲ್ ಪೀಡಿತ ಪ್ರದೇಶವಾದ ಗಂಗಲೂರು ಹಾತ್ ಮಾರುಕಟ್ಟೆಯಲ್ಲಿ ಶಾಸಕರು ಬೀದಿ ಬದಿ ಸಭೆ ನಡೆಸಿ ಕೇಂದ್ರ ಕಚೇರಿಗೆ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಇದೇ ವೇಳೆ ಪಾಡೇದ ಗ್ರಾಮದ ಬಳಿ ನಕ್ಸಲೀಯರು ಬೆಂಗಾವಲು ಪಡೆಯ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

ನಕ್ಸಲೀಯರ ಗುಂಡಿನ ದಾಳಿಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ, ಬೆಂಗಾವಲು ಕಾರಿನಲ್ಲಿದ್ದವರು ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಹೇಳಲಾಗಿದೆ. ಈ ಘಟನೆಯ ನಂತರ, ಪೊಲೀಸರು ಈ ಪ್ರದೇಶದಲ್ಲಿ ಶೋಧವನ್ನು ಪ್ರಾರಂಭಿಸಿದ್ದಾರೆ. ಶಾಸಕರ ಜೊತೆಗೆ ಹೆಚ್ಚಿನ ಪೊಲೀಸ್​​ಗಳು ಇದ್ದರು, ಈ ಘಟನೆ ನಡೆದಿದೆ. ಆದರೆ, ಈ ದಾಳಿಯನ್ನು ಯಾವ ನಕ್ಸಲ್​​ ಮಾಡಿದ್ದಾರೆ. ಅವರು ಯಾವ ಪ್ರದೇಶದಿಂದ ಬಂದಿದ್ದಾರೆ ಎಂದು ತಿಳಿದು ಬಂದಿಲ್ಲ.

ಇದನ್ನೂ ಓದಿ: Bathinda: ಮಿಲಿಟರಿ ಸ್ಟೇಷನ್ ಮೇಲೆ ಗುಂಡಿನ ದಾಳಿ ಪ್ರಕರಣ: ತಪ್ಪೊಪ್ಪಿಕೊಂಡ ಯೋಧನ ಬಂಧನ

ಇದಕ್ಕೂ ಮೊದಲು, 2019 ರಲ್ಲಿ, ದಾಂತೇವಾಡದ ಬಿಜೆಪಿ ಶಾಸಕ ಭೀಮಾ ಮಾಂಡವಿ ಅವರ ಮೇಲೆ ನಕ್ಸಲ್​​ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಬಿಜೆಪಿ ಶಾಸಕ ಭೀಮಾ ಮಾಂಡವಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅದೇ ಸಮಯದಲ್ಲಿ, ಬಿಜಾಪುರದಲ್ಲಿ, ಬಿಜೆಪಿಯ ಮಾಜಿ ಅರಣ್ಯ ಸಚಿವ ಮತ್ತು ಶಾಸಕ ಮಹೇಶ್ ಗಾಗ್ಡಾ ಅವರ ಬೆಂಗಾವಲು ವಾಹನದ ಮೇಲೂ ನಕ್ಸಲೀಯರು ದಾಳಿ ನಡೆಸಿದ್ದು, ಮಾಜಿ ಶಾಸಕ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಇಂದು ನಕ್ಸಲೀಯರು ಮತ್ತೊಮ್ಮೆ ಕಾಂಗ್ರೆಸ್ ಶಾಸಕ ವಿಕ್ರಮ್ ಮಾಂಡವಿ ಅವರ ಬೆಂಗಾವಲು ಪಡೆಯನ್ನು ಗುರಿಯಾಗಿಟ್ಟುಕೊಂಡು ಗುಂಡಿನ ದಾಳಿ ನಡೆಸಿದ್ದಾರೆ. ಅವರು ಕೂಡ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಇದೀಗ ಈ ಬಗ್ಗೆ ತನಿಖೆ ನಡೆಯುತ್ತಿದೆ.

Published On - 6:19 pm, Tue, 18 April 23

ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ಬಾತ್​ ರೂಮ್​ನಲ್ಲೂ ನಡೆಯುತ್ತಿದೆ ಬಿಗ್ ಬಾಸ್​ ಆಟ; ಅನುಮಾನದ ಕಣ್ಣು
ಬಾತ್​ ರೂಮ್​ನಲ್ಲೂ ನಡೆಯುತ್ತಿದೆ ಬಿಗ್ ಬಾಸ್​ ಆಟ; ಅನುಮಾನದ ಕಣ್ಣು