ದೆಹಲಿ: ಇಸ್ರೇಲ್​ ರಾಯಭಾರಿ ಕಚೇರಿ ಬಳಿ ಭಾರೀ ಸದ್ದು, ಸ್ಥಳದಲ್ಲಿ ಪತ್ತೆಯಾಯ್ತು ಪತ್ರ

ದೆಹಲಿಯ ಹೈ ಸೆಕ್ಯುರಿಟಿ ಪ್ರದೇಶದಲ್ಲಿರುವ ಇಸ್ರೇಲ್ ರಾಯಭಾರಿ ಕಚೇರಿ ಬಳಿ ಸ್ಫೋಟ ಸಂಭವಿಸಿದ ಬಳಿಕ ಪೊಲೀಸರು ದಿಗ್ಭ್ರಮೆಗೊಂಡಿದ್ದಾರೆ. ಇಲ್ಲಿ ನಿಯೋಜಿಸಲಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರಕಾರ, ಸಂಜೆ ಐದು ಗಂಟೆಯ ಸುಮಾರಿಗೆ ಭಾರೀ ಶಬ್ದ ಕೇಳಿಸಿತು.

ದೆಹಲಿ: ಇಸ್ರೇಲ್​ ರಾಯಭಾರಿ ಕಚೇರಿ ಬಳಿ ಭಾರೀ ಸದ್ದು, ಸ್ಥಳದಲ್ಲಿ ಪತ್ತೆಯಾಯ್ತು ಪತ್ರ
ಇಸ್ರೇಲ್Image Credit source: Amarujala.com
Follow us
ನಯನಾ ರಾಜೀವ್
|

Updated on: Dec 27, 2023 | 7:56 AM

ದೆಹಲಿಯ ಹೈ ಸೆಕ್ಯುರಿಟಿ ಪ್ರದೇಶದಲ್ಲಿರುವ ಇಸ್ರೇಲ್ ರಾಯಭಾರಿ ಕಚೇರಿ ಬಳಿ ಸ್ಫೋಟ ಸಂಭವಿಸಿದ ಬಳಿಕ ಪೊಲೀಸರು ದಿಗ್ಭ್ರಮೆಗೊಂಡಿದ್ದಾರೆ. ಇಲ್ಲಿ ನಿಯೋಜಿಸಲಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರಕಾರ, ಸಂಜೆ ಐದು ಗಂಟೆಯ ಸುಮಾರಿಗೆ ಭಾರೀ ಶಬ್ದ ಕೇಳಿಸಿತು.

ರಾಯಭಾರಿಗೆ ಈ ಪತ್ರ ಬರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ. ವಿಧಿವಿಜ್ಞಾನ ತಂಡವು ಬೆರಳಚ್ಚು ತಿಳಿಯಲು ಪತ್ರವನ್ನು ತೆಗೆದುಕೊಂಡಿದೆ. ಅಧಿಕಾರಿಗಳು ಪತ್ರದ ಫೋಟೋ ತೆಗೆದು ಇಟ್ಟುಕೊಂಡಿದ್ದಾರೆ. ಪತ್ರದ ಮೇಲೆ ಬಾವುಟವನ್ನೂ ಇರಿಸಲಾಗಿತ್ತು.

ಇಸ್ರೇಲ್ ಹೇಳಿದ್ದೇನು? ಭಾರತದಲ್ಲಿನ ಇಸ್ರೇಲಿ ಮಿಷನ್‌ನ ಉಪ ಮುಖ್ಯಸ್ಥ ಓಹದ್ ನಕಾಶ್ ಕಯ್ನಾರ್ ಮಾತನಾಡಿ, ಮ್ಮ ಎಲ್ಲಾ ರಾಜತಾಂತ್ರಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದಾರೆ.

ನಮ್ಮ ಭದ್ರತಾ ತಂಡವು ದೆಹಲಿಯ ಸ್ಥಳೀಯ ಭದ್ರತಾ ತಂಡದೊಂದಿಗೆ ಸಂಪೂರ್ಣ ಸಹಕಾರದಲ್ಲಿ ಕೆಲಸ ಮಾಡುತ್ತಿದೆ ಮತ್ತು ಅವರು ಈ ವಿಷಯವನ್ನು ಮತ್ತಷ್ಟು ತನಿಖೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಇಸ್ರೇಲ್ ರಾಯಭಾರ ಕಚೇರಿಯ ವಕ್ತಾರ ಗೈ ನಿರ್ ಮಾತನಾಡಿ, ರಾಯಭಾರ ಕಚೇರಿಯ ಬಳಿ ಸ್ಫೋಟ ಸಂಭವಿಸಿದೆ. ದೆಹಲಿ ಪೊಲೀಸರು ಮತ್ತು ಭದ್ರತಾ ತಂಡವು ಇನ್ನೂ ಪರಿಸ್ಥಿತಿಯ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಹೇಳಿದ್ದಾರೆ.

ಸ್ಥಳದಿಂದ ನಮಗೆ ಏನೂ ಪತ್ತೆಯಾಗಿಲ್ಲ ಎಂದು ವಿಧಿವಿಜ್ಞಾನ ತಂಡದ ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿ ಅಗ್ನಿಶಾಮಕ ದಳದ ಸಿಬ್ಬಂದಿಯೊಬ್ಬರು ಕೂಡ ನಮಗೆ ಏನೂ ಸಿಗಲಿಲ್ಲ ಎಂದು ಹೇಳಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

ಸಂಜೆ 5.53ಕ್ಕೆ ನಮಗೆ ಕರೆ ಬಂದಿತ್ತು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಪ್ರದೇಶದ ಸೂಕ್ಷ್ಮತೆಯನ್ನು ಪರಿಗಣಿಸಿ ಹಿರಿಯ ಅಧಿಕಾರಿಗಳು ಮತ್ತು ತಂಡ ತಕ್ಷಣ ಸ್ಥಳಕ್ಕೆ ತಲುಪಿತು. ಪ್ರದೇಶವನ್ನು ಸುತ್ತುವರಿದ ನಂತರ ಶೋಧ ಮುಂದುವರಿದಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ಓದಿ: ದೆಹಲಿಯಲ್ಲಿರುವ ಇಸ್ರೇಲ್ ರಾಯಭಾರಿ ಕಚೇರಿ ಬಳಿ ಕೇಳಿ ಬಂತು ಭಾರೀ ಸದ್ದು; ಏನೂ ಪತ್ತೆಯಾಗಿಲ್ಲ ಎಂದ ಪೊಲೀಸ್

ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಪ್ರಾರಂಭವಾದಾಗಿನಿಂದ ರಾಯಭಾರ ಕಚೇರಿಯ ಸುತ್ತಲಿನ ಭದ್ರತಾ ಸಿಬ್ಬಂದಿ ಹೆಚ್ಚಿನ ಜಾಗರೂಕರಾಗಿದ್ದಾರೆ.

ಯುದ್ಧ ಪ್ರಾರಂಭವಾದಾಗಿನಿಂದ ಪ್ಯಾಲೆಸ್ತೀನ್‌ನ 20 ಸಾವಿರದ 915 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದರಲ್ಲಿ ಇಸ್ರೇಲ್ ನ 1 ಸಾವಿರದ 139 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

2021ರಲ್ಲಿ ಇಸ್ರೇಲಿ ರಾಯಭಾರಿ ಕಚೇರಿ ಬಳಿ ಸ್ಫೋಟ ಸಂಭವಿಸಿತ್ತು. ಹಾಗೆಯೇ ಫೆಬ್ರವರಿ 2012 ರಲ್ಲಿ, ಇಲ್ಲಿನ ರಾಯಭಾರ ಕಚೇರಿಯಲ್ಲಿ ಕಾರಿನ ಕೆಳಗೆ ಬಾಂಬ್ ಇರಿಸಲಾಗಿತ್ತು, ಇದರಲ್ಲಿ ರಾಜತಾಂತ್ರಿಕರ ಪತ್ನಿ ಗಾಯಗೊಂಡಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ