ಮಹಾರಾಷ್ಟ್ರ ಮಾಜಿ ಸಚಿವ ಬಾಬಾ ಸಿದ್ದಿಕಿ(Baba Siddique) ಹಂತಕರಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಶಸ್ತ್ರಾಸ್ತ್ರ ಪೂರೈಸಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಾಬಾ ಸಿದ್ದಿಕಿ ಹತ್ಯೆಯ ಹೊಣೆಯನ್ನು ಶುಭಂ ಲೋಂಕರ್ ಹೊತ್ತುಕೊಂಡಿದ್ದಾರೆ, ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಶುಭಂ ಪೋಷ್ಟ್ ಮಾಡಿದ್ದಾರೆ. ಲಾರೆನ್ಸ್ ಬಿಷ್ಣೋಯ್ ಪರವಾಗಿ ಶುಭಂ ಕೊಲೆ ಹೊಣೆ ಹೊತ್ತುಕೊಂಡಿದ್ದಾರೆ.
ಶುಭಂ ಅವರ ಸಹೋದರ ಪ್ರವೀಣ್ ಲೋಂಕರ್ ಅವರು ಶೂಟರ್‌ಗಳಿಗೆ ಆರ್ಥಿಕ ಮತ್ತು ಲಾಜಿಸ್ಟಿಕಲ್ ಬೆಂಬಲವನ್ನು ನೀಡಿದ್ದಾರೆ. ಇಬ್ಬರು ಸಹೋದರರು, ಹಲವಾರು ಸಹಚರರೊಂದಿಗೆ, ಕೊಲೆ ಕುರಿತು ಸಂಚು ರೂಪಿಸಲು ಹಲವು ಸಭೆಗಳನ್ನು ನಡೆಸಿದ್ದರು.
ಶನಿವಾರ ರಾತ್ರಿ ಬಾಬಾ ಸಿದ್ದಿಕಿ ಬಾಂದ್ರಾ ವೆಸ್ಟ್ನಲ್ಲಿರುವ ತಮ್ಮ ನಿವಾಸಕ್ಕೆ ಕಚೇರಿಯಿಂದ ಹೊರಟ ಸಂದರ್ಭದಲ್ಲಿ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು. ಒಟ್ಟು ಆರು ಸುತ್ತು ಗುಂಡು ಹಾರಿಸಲಾಗಿತ್ತು, ಮೂರು ಗುಂಡುಗಳು ಸಿದ್ದಿಕಿ ದೇಹವನ್ನು ಹೊಕ್ಕಿದ್ದವು. ಆಸ್ಪತ್ರೆಗೆ ಕರೆದೊಯ್ದ ಬಳಿಕ ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.
ಶೂಟರ್ಸ್ ಬಂದಿದ್ದು ಸೆಪ್ಟೆಂಬರ್ನಲ್ಲಿ
ಶೂಟರ್ಗಳು ಸೆಪ್ಟೆಂಬರ್ನಲ್ಲಿ ಮುಂಬೈಗೆ ಬಂದಿದ್ದರು, ಧರ್ಮರಾಜ್ ಮತ್ತು ಶಿವಕುಮಾರ್ ಮೊದಲು ಬಂದರು ಮತ್ತು ನಂತರ ಹರಿಯಾಣದಿಂದ ಗುರ್ಮೈಲ್ ಸಿಂಗ್ ಅವರೊಂದಿಗೆ ಸೇರಿಕೊಂಡಿದ್ದರು. ಆರರಿಂದ ಏಳು ಮೀಟರ್ ದೂರದಿಂದ ಗುಂಡು ಹಾರಿಸಲಾಗಿತ್ತು.
ಮತ್ತಷ್ಟು ಓದಿ: ಬಾಬಾ ಸಿದ್ದಿಕ್ ಹತ್ಯೆ ಪ್ರಕರಣ: ಹಂತಕರ ಪತ್ತೆಗೆ ದೇಶದಾದ್ಯಂತ ಬಲೆ ಬೀಸಿದ ಪೊಲೀಸ್
ಸಿದ್ದಿಕಿಗೆ ಗುಂಡು ಹಾರಿಸಿದ ಬಳಿಕ ಪೆಪ್ಪರ್ ಸ್ಪ್ರೇ ಬಳಸಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದರು ಆರಂಭದಲ್ಲಿ ಯಶಸ್ವಯಾದರೂ ಕೂಡ ಬಳಿಕ ಪೊಲೀಸರು ಸೆರೆಹಿಡಿದಿದ್ದಾರೆ. ಇನ್ನೂ ತಲೆಮರೆಸಿಕೊಂಡಿರುವ ಮತ್ತೊಬ್ಬ ಶಂಕಿತ ಶಿವ ಮತ್ತು ಆಪಾದಿತ ಮಾಸ್ಟರ್‌ಮೈಂಡ್ ಮೊಹಮ್ಮದ್ ಜೀಶನ್ ಅಖ್ತರ್‌ಗಾಗಿ ಅಧಿಕಾರಿಗಳು ಶೋಧ ನಡೆಸಲಾಗುತ್ತಿದೆ.
ಹಿಟ್ ಲಿಸ್ಟ್‌ನಲ್ಲಿ ಜೀಶನ್ ಸಿದ್ದಿಕಿ
ಮಾಜಿ ಸಚಿವ ಮತ್ತು ಅಜಿತ್ ಪವಾರ್ ಬಣದ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದ ವಿಚಾರಣೆಯಲ್ಲಿ ಮಹತ್ವದ ಅಂಶಗಳು ಬಹಿರಂಗವಾಗಿವೆ. ಹತ್ಯೆ ಆರೋಪ ಹೊತ್ತಿರುವ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಹಿಟ್ ಲಿಸ್ಟ್‌ನಲ್ಲಿ ಬಾಬಾ ಸಿದ್ದಿಕಿ ಅವರ ಮಗ ಮತ್ತು ಕಾಂಗ್ರೆಸ್ ಶಾಸಕ ಜೀಶನ್ ಸಿದ್ದಿಕಿ ಕೂಡ ಇದ್ದ ಎಂಬುದು ಗೊತ್ತಾಗಿದೆ.
ಬಿಷ್ಣೋಯ್ ಗ್ಯಾಂಗ್ ಬಾಬಾ ಸಿದ್ದಿಕಿ ಜೊತೆಗೆ ಜೀಶನ್ ಸಿದ್ದಿಕಿಯನ್ನು ಕೊಲ್ಲಲು ನಿರ್ಧರಿಸಿತ್ತು. ಸಿದ್ಧಿಕಿ ಹತ್ಯೆ ದಿನದಂದು ಇಬ್ಬರನ್ನು ಅಥವಾ ಯಾರು ಸಿಗುತ್ತಾರೋ ಅವರನ್ನು ಕೊಲ್ಲುವಂತೆ ಆರೋಪಿಗಳಿಗೆ ಗ್ಯಾಂಗ್ ಸೂಚಿಸಿತ್ತು ಎಂದು ತಿಳಿದು ಬಂದಿದೆ.
ಆರೋಪಿ ಶಿವಕುಮಾರ್ ಶಾಸಕನ ಮೇಲೆ ಐದಾರು ಸುತ್ತು ಗುಂಡು ಹಾರಿಸಿ ಜನರಲ್ಲಿ ನುಸುಳಿ ಪರಾರಿಯಾಗಿದ್ದಾನೆ. ಸಿಂಗ್ ಮತ್ತು ಧರ್ಮರಾಜ್ ಕಶ್ಯಪ್ ಮಾತ್ರ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳು ಓಡುತ್ತಿರುವುದು ಕಂಡ ಫೋನ್ ಕಳ್ಳರು ಎಂದು ಜನರು ಭಾವಿಸಿದ್ದರು. ಶಾಸಕನ ಕೊಲೆಗೆ ಮೊದಲೇ ಪೂರ್ವನಿಯೋಜಿತ ಸಂಚು ರೂಪಿಸಲಾಗಿತ್ತು. 25 ಲಕ್ಷ ಸುಪಾರಿಯಲ್ಲಿ ಮೂವರು ಆರೋಪಿಗಳಿಗೆ 50 ಸಾವಿರ ರೂಪಾಯಿ ಮುಂಗಡ ನೀಡಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ