ರಾಜಕೀಯ ಪಕ್ಷಗಳು ಚುನಾವಣಾ ಸಭೆಗಳಿಗೆ ಶಾಲಾ, ಕಾಲೇಜು ಮೈದಾನಗಳನ್ನು ಬಳಸುವಂತಿಲ್ಲ: ಮುಖ್ಯ ಚುನಾವಣಾಧಿಕಾರಿ

|

Updated on: Sep 22, 2024 | 8:48 AM

ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿ ಚುನಾವಣೆಗೆ ಸಂಬಂಧಿಸಿದ ಸಭೆಗಳನ್ನು ನಡೆಸಲು ಶಾಲಾ, ಕಾಲೇಜು ಮೈದಾನವನ್ನು ಬಳಕೆ ಮಾಡುವಂತಿಲ್ಲ ಎಂದು ಹರ್ಯಾಣದ ಮುಖ್ಯ ಚುನಾವಣಾಧಿಕಾರಿ ಪಂಕಜ್ ಅಗರ್ವಾಲ್ ಹೇಳಿದ್ದಾರೆ. ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಚುನಾವಣಾ ರ್ಯಾಲಿಗಳಿಗೆ ಶಾಲಾ ಮತ್ತು ಕಾಲೇಜು ಆಟದ ಮೈದಾನಗಳನ್ನು ಬಳಸಲು ಚುನಾವಣಾ ಆಯೋಗವು ಅನುಮತಿ ನೀಡುವುದಿಲ್ಲ ಎಂದು ಹೇಳಿದ್ದಾರೆ.

ರಾಜಕೀಯ ಪಕ್ಷಗಳು ಚುನಾವಣಾ ಸಭೆಗಳಿಗೆ ಶಾಲಾ, ಕಾಲೇಜು ಮೈದಾನಗಳನ್ನು ಬಳಸುವಂತಿಲ್ಲ: ಮುಖ್ಯ ಚುನಾವಣಾಧಿಕಾರಿ
ರಾಜಕೀಯ ರ್ಯಾಲಿ
Image Credit source: AP News
Follow us on

ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿ ಚುನಾವಣೆಗೆ ಸಂಬಂಧಿಸಿದ ಸಭೆಗಳನ್ನು ನಡೆಸಲು ಶಾಲಾ, ಕಾಲೇಜು ಮೈದಾನವನ್ನು ಬಳಕೆ ಮಾಡುವಂತಿಲ್ಲ ಎಂದು ಹರ್ಯಾಣದ ಮುಖ್ಯ ಚುನಾವಣಾಧಿಕಾರಿ ಪಂಕಜ್ ಅಗರ್ವಾಲ್ ಹೇಳಿದ್ದಾರೆ. ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಚುನಾವಣಾ ರ್ಯಾಲಿಗಳಿಗೆ ಶಾಲಾ ಮತ್ತು ಕಾಲೇಜು ಆಟದ ಮೈದಾನಗಳನ್ನು ಬಳಸಲು ಚುನಾವಣಾ ಆಯೋಗವು ಅನುಮತಿ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಈ ನಿಷೇಧವು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ನ ತೀರ್ಪಿನ ಅನುಸಾರವಾಗಿದೆ ಎಂದು ಅವರು ಹೇಳಿದರು.
ಚುನಾವಣಾ ಪ್ರಚಾರದ ವೇಳೆ ಜಾತಿ, ಧರ್ಮ ಅಥವಾ ಸಮುದಾಯದ ಆಧಾರದಲ್ಲಿ ಮತದಾರರ ಭಾವನೆಗಳನ್ನು ದುರ್ಬಳಕೆ ಮಾಡಿಕೊಳ್ಳುವಂತಿಲ್ಲ ಎಂದು ಅಗರ್ವಾಲ್ ಹೇಳಿದ್ದಾರೆ.

ಸಂವಿಧಾನದ ಪರಿಚ್ಛೇದ 19 (1) (ಎ) ಅಡಿಯಲ್ಲಿ ಭಾರತದ ನಾಗರಿಕರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿದೆ, ಆದರೆ ಮಾದರಿ ನೀತಿ ಸಂಹಿತೆಯ ಉದ್ದೇಶವನ್ನು ಅದರ ವಿವಿಧ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ಹೇಳಿದರು.

ಮತ್ತಷ್ಟು ಓದಿ: ಅಗ್ನಿವೀರರಿಗೆ ಉದ್ಯೋಗ, ಮಹಿಳೆಯರಿಗೆ 2,100 ರೂ; ಹರಿಯಾಣ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ

ಯಾವುದೇ ಧಾರ್ಮಿಕ ಸ್ಥಳಗಳಾದ ದೇವಸ್ಥಾನಗಳು, ಮಸೀದಿಗಳು, ಚರ್ಚ್‌ಗಳು ಅಥವಾ ಗುರುದ್ವಾರಗಳನ್ನು ಪ್ರಚಾರದ ಉದ್ದೇಶಗಳಿಗಾಗಿ ಬಳಸಲಾಗುವುದಿಲ್ಲ ಮತ್ತು ಈ ಸ್ಥಳಗಳಲ್ಲಿ ಭಾಷಣಗಳು, ಪೋಸ್ಟರ್‌ಗಳು, ಹಾಡುಗಳು ಅಥವಾ ಯಾವುದೇ ಚುನಾವಣಾ ಸಂಬಂಧಿತ ವಸ್ತುಗಳನ್ನು ಬಳಸಲಾಗುವುದಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಕ್ಟೋಬರ್ 5 ರಂದು ಹರ್ಯಾಣದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 8 ರಂದು ಜಮ್ಮು ಮತ್ತು ಕಾಶ್ಮೀರದ ಮತಗಳ ಎಣಿಕೆ ನಡೆಯಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ