ಅಸ್ಸಾಂ: ಕೇಂದ್ರ ಸಚಿವರು ಭಾಗವಹಿಸಿದ ಕಾರ್ಯಕ್ರಮದ ವೇದಿಕೆಯ ಸ್ಕ್ರೀನ್​​ನಲ್ಲಿ ‘ನೀಲಿ ಚಿತ್ರ’ ಪ್ರಸಾರ; ತನಿಖೆಗೆ ಆದೇಶ

| Updated By: ರಶ್ಮಿ ಕಲ್ಲಕಟ್ಟ

Updated on: May 03, 2022 | 4:30 PM

ಯೋಜನೆಯನ್ನು ವಿವರಿಸುವ ಕ್ಲಿಪ್‌ಗಳನ್ನು ತೋರಿಸುವ ಪ್ರೊಜೆಕ್ಟರ್ ಪರದೆಯ ಮೇಲೆ ಅಶ್ಲೀಲ ವಿಡಿಯೊ ತುಣುಕು ಪ್ಲೇ ಆದ ಕೂಡಲೇ ಆಯೋಜಕರು ವಿಡಿಯೊ ನಿಲ್ಲಿಸಲು ಮುಂದಾದರು. ಆದಾಗ್ಯೂ, ಕೆಲವು ಜನರು ತಮ್ಮ...

ಅಸ್ಸಾಂ: ಕೇಂದ್ರ ಸಚಿವರು ಭಾಗವಹಿಸಿದ ಕಾರ್ಯಕ್ರಮದ ವೇದಿಕೆಯ ಸ್ಕ್ರೀನ್​​ನಲ್ಲಿ ‘ನೀಲಿ ಚಿತ್ರ’ ಪ್ರಸಾರ; ತನಿಖೆಗೆ ಆದೇಶ
ಅಸ್ಸಾಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ರಾಮೇಶ್ವರ್ ತೇಲಿ
Follow us on

ಗುವಾಹಟಿ: ಅಸ್ಸಾಂನ (Assam) ತಿನ್ಸುಕಿಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಸಚಿವ ರಾಮೇಶ್ವರ್ ತೇಲಿ (Rameshwar Teli), ಅಸ್ಸಾಂ ಕಾರ್ಮಿಕ ಸಚಿವ ಸಂಜಯ್ ಕಿಸಾನ್ ಮತ್ತು ಇಂಡಿಯನ್ ಆಯಿಲ್‌ನ (Indian Oil)ಹಲವು ಉನ್ನತ ಅಧಿಕಾರಿಗಳು ಭಾಗಿಯಾಗಿದ್ದರು. ಹೋಟೆಲ್ ಮಿರಾನಾದಲ್ಲಿ ನಡೆದ ಈ ಕಾರ್ಯಕ್ರಮವು ಇಂಡಿಯನ್ ಆಯಿಲ್‌ನಿಂದ ಮೆಥನಾಲ್ ಮಿಶ್ರಿತ ಎಂ-15 ಪೆಟ್ರೋಲ್ ಅನ್ನು ಪ್ರಾಯೋಗಿಕವಾಗಿ ಬಿಡುಗಡೆ ಮಾಡುವುದಾಗಿತ್ತು. ಆದರೆ  ಕಾರ್ಯಕ್ರಮದಲ್ಲಿ ಉಂಟಾದ ಎಡವಟ್ಟು  ಎಲ್ಲರನ್ನೂ ಮುಜುಗರಕ್ಕೀಡಾಗುವಂತೆ ಮಾಡಿದೆ.  ಕಾರ್ಯಕ್ರಮದ ವೇದಿಕೆಯ ಹಿಂದಿನ ಬೃಹತ್ ಪರದೆಯಲ್ಲಿ ಯೋಜನೆಗೆ ಸಂಬಂಧಪಟ್ಟ ವಿಡಿಯೊ,ಚಿತ್ರಗಳು ಪ್ಲೇ ಆಗುತ್ತಿತ್ತು. ಇದರ ನಡುವೇಯೇ ಸ್ಕ್ರೀನ್​​ನಲ್ಲಿ ನೀಲಿಚಿತ್ರ ಪ್ರಸಾರವಾಗಿದೆ. ಇಂಡಿಯನ್ ಆಯಿಲ್ ಅಧಿಕಾರಿಯೊಬ್ಬರು ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದಾಗ ಆಕ್ಷೇಪಾರ್ಹ ಕ್ಲಿಪ್ ಪ್ಲೇ ಆಗಿದೆ ಎಂದು ವರದಿಗಳು ತಿಳಿಸಿವೆ. ಯೋಜನೆಯನ್ನು ವಿವರಿಸುವ ಕ್ಲಿಪ್‌ಗಳನ್ನು ತೋರಿಸುವ ಪ್ರೊಜೆಕ್ಟರ್ ಪರದೆಯ ಮೇಲೆ ಅಶ್ಲೀಲ ವಿಡಿಯೊ ತುಣುಕು ಪ್ಲೇ ಆದ ಕೂಡಲೇ ಆಯೋಜಕರು ವಿಡಿಯೊ ನಿಲ್ಲಿಸಲು ಮುಂದಾದರು. ಆದಾಗ್ಯೂ, ಕೆಲವು ಜನರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಅಚಾತುರ್ಯವನ್ನು ಸೆರೆಹಿಡಿದಿದ್ದಾರೆ.

ವಿಡಿಯೊ ನಾನು ನೋಡಿಲ್ಲ
ಘಟನೆಯ ಕುರಿತು ಸಿಎನ್‌ಎನ್-ನ್ಯೂಸ್ 18 ಜೊತೆ ಮಾತನಾಡಿದ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಸಚಿವ ರಾಮೇಶ್ವರ್ ತೇಲಿ, “ನಾನು ಆ ವಿಡಿಯೊ ತುಣುಕು ಪ್ರದರ್ಶಿಸಿದಾಗ ನೋಡಲಿಲ್ಲ. ಆದರೆ ಈ ಬಗ್ಗೆ ನನ್ನ ಆಪ್ತ ಸಹಾಯಕ ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ಭಾಗಿಯಾದವರ ವಿರುದ್ಧ ತನಿಖೆ ನಡೆಸಿ ಸೂಕ್ತ ಶಿಕ್ಷೆ ನೀಡುವಂತೆ ಸೂಚಿಸಿದ್ದೇನೆ” ಎಂದು ಹೇಳಿದರು.


ಮುಂದುವರಿದ ತನಿಖೆ
ಏತನ್ಮಧ್ಯೆ, ತಿನ್ಸುಕಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಕ್ರಮವನ್ನು ಆನ್‌ಲೈನ್‌ನಲ್ಲಿ ಲೈವ್-ಸ್ಟ್ರೀಮ್ ಮಾಡಲು ಸಂಘಟಕರು ಯೋಜಿಸಿದ್ದಾರೆ. ಅದೇ ವೇಳೆ ಝೂಮ್ ಮೀಟಿಂಗ್ ಐಡಿ ಮತ್ತು ಪಾಸ್‌ಕೋಡ್ ಅನ್ನು ಇಂಡಿಯನ್ ಆಯಿಲ್ ಅಧಿಕಾರಿಗಳು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಸಿಎನ್‌ಎನ್-ನ್ಯೂಸ್ 18 ಗೆ ಮಾಹಿತಿ ನೀಡಿದ್ದಾರೆ.

“ಅಪರಾಧಿಯು ಟ್ವಿಟರ್ ಖಾತೆಯಿಂದ ಸಭೆಯ ಐಡಿ ಮತ್ತು ಪಾಸ್‌ಕೋಡ್ ಅನ್ನು ಹೆಚ್ಚಾಗಿ ಬಳಸಿರಬಹುದು. ಆತ ಝೂಮ್ ಸಭೆಯಲ್ಲಿ ಭಾಗವಹಿಸುವವನಾಗಿ ಸೇರಿಕೊಂಡಿರಬಹುದು. ನಂತರ ಅವರು ಝೂಮ್ ಸಭೆಯಲ್ಲಿ ಅಶ್ಲೀಲ ವಿಡಿಯೊ ಪ್ರಸಾರ ಮಾಡಿದ್ದಾನೆ ಎಂದು ತಿನ್ಸುಕಿಯಾ ಪೊಲೀಸ್ ಅಧೀಕ್ಷಕ ದೆಬೋಜಿತ್ ಡಿಯೋರಿ ಹೇಳಿದ್ದಾರೆ.

ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ