Gangster Lawrence Bishnoi: ತಿಹಾರ್ ಜೈಲಿನಲ್ಲಿ ಗ್ಯಾಂಗ್​ವಾರ್ ನಡೆಯುವ ಸಂಭವ, ಗ್ಯಾಂಗ್​ಸ್ಟರ್ ಲಾರೆನ್ಸ್​ ಬಿಷ್ಣೋಯ್​ ದೆಹಲಿಗೆ ಶಿಫ್ಟ್​

|

Updated on: May 25, 2023 | 9:32 AM

ತಿಹಾರ್​ ಜೈಲಿನಲ್ಲಿ ಗ್ಯಾಂಗ್​ವಾರ್ ನಡೆಯುವ ಸಾಧ್ಯತೆ ಇರುವ ಕಾರಣ ಗ್ಯಾಂಗ್​ಸ್ಟರ್ ಲಾರೆನ್ಸ್​ ಬಿಷ್ಣೋಯ್ ಅವರನ್ನು ಗುಜರಾತ್​ನ ಸಬರಮತಿ ಜೈಲಿನಿಂದ ದೆಹಲಿಯ ಮಂಡೋಲಿ ಜೈಲಿಗೆ ಕರೆತರಲಾಗಿದೆ.

Gangster Lawrence Bishnoi: ತಿಹಾರ್ ಜೈಲಿನಲ್ಲಿ ಗ್ಯಾಂಗ್​ವಾರ್ ನಡೆಯುವ ಸಂಭವ, ಗ್ಯಾಂಗ್​ಸ್ಟರ್ ಲಾರೆನ್ಸ್​ ಬಿಷ್ಣೋಯ್​ ದೆಹಲಿಗೆ ಶಿಫ್ಟ್​
ಗ್ಯಾಂಗ್​ಸ್ಟರ್ ಲಾರೆನ್ಸ್​
Image Credit source: India TV
Follow us on

ತಿಹಾರ್​ ಜೈಲಿನಲ್ಲಿ ಗ್ಯಾಂಗ್​ವಾರ್ ನಡೆಯುವ ಸಾಧ್ಯತೆ ಇರುವ ಕಾರಣ ಗ್ಯಾಂಗ್​ಸ್ಟರ್ ಲಾರೆನ್ಸ್​ ಬಿಷ್ಣೋಯ್ ಅವರನ್ನು ಗುಜರಾತ್​ನ ಸಬರಮತಿ ಜೈಲಿನಿಂದ ದೆಹಲಿಯ ಮಂಡೋಲಿ ಜೈಲಿಗೆ ಕರೆತರಲಾಗಿದೆ. ಸಿದ್ದು ಮೂಸೆವಾಲಾ ಹತ್ಯೆ ಪ್ರಕರಣದ ಆರೋಪಿ ಬಿಷ್ಣೋಯ್ ಅವರನ್ನು ಪಂಜಾಬ್ ಪೊಲೀಸರು ಕಳೆದ ವರ್ಷ ಬಂಧಿಸಿದ್ದರು. ಲಾರೆನ್ಸ್ ಬಿಷ್ಣೋಯ್ ಅವರನ್ನು ದೆಹಲಿಯ ಜೈಲಿನಲ್ಲಿ ಇರಿಸಲಾಗುವುದು. ಕುಖ್ಯಾತ ದರೋಡೆಕೋರನನ್ನು ಗುಜರಾತ್ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಪ್ರಸ್ತುತ ಆತನನ್ನು ಗುಜರಾತ್‌ನ ಅಹಮದಾಬಾದ್ ಜೈಲಿನಲ್ಲಿ ಇರಿಸಲಾಗಿತ್ತು.

ಭದ್ರತಾ ಕಾರಣಗಳಿಗಾಗಿ ದರೋಡೆಕೋರ ಬಿಷ್ಣೋಯ್ ಅವರನ್ನು ಮಂಡೋಲಿ ಜೈಲಿಗೆ ಸ್ಥಳಾಂತರಿಸಲಾಗಿದೆ. ಮೂಲಗಳ ಪ್ರಕಾರ, ಲಾರೆನ್ಸ್ ಬಿಷ್ಣೋಯ್ ಅವರನ್ನು ಹೈ-ಸೆಕ್ಯುರಿಟಿ ವಾರ್ಡ್‌ನ ಸೆಲ್ ಸಂಖ್ಯೆ 15 ರಲ್ಲಿ ಇರಿಸಲಾಗಿದೆ. ಜೈಲು ಆವರಣದಲ್ಲಿ ತಿಲ್ಲು ತಾಜ್‌ಪುರಿಯ ಹತ್ಯೆಯ ನಂತರ ತಿಹಾರ್ ಜೈಲಿನಲ್ಲಿ ಗ್ಯಾಂಗ್ ವಾರ್ ನಡೆಯುವ ಸಾಧ್ಯತೆಯ ನಡುವೆ, ಜೈಲು ಆಡಳಿತ ಈ ನಿರ್ಧಾರ ಕೈಗೊಂಡಿದೆ.

ಮತ್ತಷ್ಟು ಓದಿ: ಬೆಂಗಳೂರಿನಲ್ಲಿ ಮತ್ತೆ ಹೆಚ್ಚಾದ ನೇಪಾಳ ಮೂಲದ ಕಳ್ಳರ ಕೈಚಳಕ: ಅಪಾರ್ಟ್​ಮೆಂಟ್​ಗೆ ನುಗ್ಗಿ ಬೈಕ್​ ಕಳವು

ಪ್ರಮುಖವಾಗಿ, ಬಿಷ್ಣೋಯ್ ಅವರ ಆಪ್ತ ಸಹಾಯಕ ತಾಜ್‌ಪುರಿಯಾರನ್ನು ಮೇ 2 ರಂದು ಗೋಗಿ ಗ್ಯಾಂಗ್‌ನ ನಾಲ್ವರು ಸದಸ್ಯರಾದ ದೀಪಕ್ ಅಲಿಯಾಸ್ ಟಿಟಾರ್, ಯೋಗೇಶ್ ಅಲಿಯಾಸ್ ತುಂಡಾ, ರಾಜೇಶ್ ಮತ್ತು ರಿಯಾಜ್ ಖಾನ್ ಹತ್ಯೆ ಮಾಡಿದ್ದಾರೆ. ಅವರ ತಲೆ, ಎದೆ ಮತ್ತು ಬೆನ್ನಿನ ಮೇಲೆ ಕಂಡುಬಂದ ಗಾಯಗಳೊಂದಿಗೆ 92 ಬಾರಿ ಇರಿದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. 2021 ರ ರೋಹಿಣಿ ಕೋರ್ಟ್ ಶೂಟೌಟ್ ಪ್ರಕರಣದಲ್ಲಿ ತಾಜ್‌ಪುರಿಯ ಆರೋಪಿಯಾಗಿದ್ದರು.

ಬಿಷ್ಣೋಯ್ ಓರ್ವ ಗ್ಯಾಂಗ್​ಸ್ಟರ್ ಆಗಿದ್ದು, ವಿರುದ್ಧ ಹತ್ತಾರು ಪ್ರಕರಣಗಳು ದಾಖಲಾಗಿವೆ. ಕೊಲೆ, ಸುಲಿಗೆಯಂತಹ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ. ಪಂಜಾಬಿ ಗಾಯಕ ಮತ್ತು ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾ ಹತ್ಯೆಯ ಹಿಂದಿನ ಮಾಸ್ಟರ್ ಮೈಂಡ್ ಬಿಷ್ಣೋಯ್.
ಗುಜರಾತ್ ಎಟಿಎಸ್ ಲಾರೆನ್ಸ್‌ಗೆ 7 ದಿನಗಳ ರಿಮಾಂಡ್ ನೀಡಿದೆ. ರಿಮಾಂಡ್ ಮುಗಿದ ನಂತರ, ಲಾರೆನ್ಸ್ ಬಿಷ್ಣೋಯ್ ಅವರನ್ನು ಸಬರಮತಿ ಜೈಲಿಗೆ ಕಳುಹಿಸಲಾಯಿತು.

ಇತ್ತೀಚೆಗಷ್ಟೇ ಕೇಂದ್ರೀಯ ತನಿಖಾ ಸಂಸ್ಥೆ ಎನ್‌ಐಎ ಎದುರು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ನೀಡಿದ ತಪ್ಪೊಪ್ಪಿಗೆ ವಿಷಯ ಬಯಲಿಗೆ ಬಂದಿದೆ.
ಬಿಷ್ಣೋಯ್ ಗ್ಯಾಂಗ್ ಈಗ ದೆಹಲಿ, ಪಂಜಾಬ್, ಯುಪಿ, ಜಾರ್ಖಂಡ್, ಹರಿಯಾಣ, ರಾಜಸ್ಥಾನಕ್ಕೂ ವ್ಯಾಪಿಸಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ