ಚಂದ್ರನ ಮೇಲೆ ಸುತ್ತಾಡುತ್ತಿರುವ ಪ್ರಗ್ಯಾನ್ ರೋವರ್ ವಿಡಿಯೋ; ಚಂದಮಾಮ ಕಥೆಗೆ ಹೋಲಿಸಿದ ಇಸ್ರೋ

ವಿಕ್ರಮ್ ಲ್ಯಾಂಡರ್ ಪ್ರಗ್ಯಾನ್ ರೋವರ್ ಚಿತ್ರವನ್ನು ಹಂಚಿಕೊಂಡ ಒಂದು ದಿನದ ನಂತರ ಚಂದ್ರನಿಂದ ಈ ಅಪ್‌ಡೇಟ್ ಬಂದಿದೆ. NavCam ಅಥವಾ ನ್ಯಾವಿಗೇಷನ್ ಕ್ಯಾಮೆರಾ ಮನಿಯೋಜಿಸಿದ ನಂತರ ಬಂದಿರುವ ಮೊದಲ ವಿಡಿಯೋ ಇದು.

ಚಂದ್ರನ ಮೇಲೆ ಸುತ್ತಾಡುತ್ತಿರುವ ಪ್ರಗ್ಯಾನ್ ರೋವರ್ ವಿಡಿಯೋ; ಚಂದಮಾಮ ಕಥೆಗೆ ಹೋಲಿಸಿದ ಇಸ್ರೋ
ಚಂದ್ರನ ಮೇಲೆ ಪ್ರಗ್ಯಾನ್ ರೋವರ್

Updated on: Aug 31, 2023 | 3:00 PM

ಪ್ರಗ್ಯಾನ್ ರೋವರ್ (Pragyan Rover) ಚಂದ್ರನ ಮೇಲೆ ಚಲಿಸುತ್ತಿರುವ ವಿಡಿಯೋವನ್ನು ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ (ISRO) ಪೋಸ್ಟ್ ಮಾಡಿದೆ. ಚಂದ್ರನ ಮೇಲ್ಮೈಯ ಈ ವಿಡಿಯೋವನ್ನು ಬೆಂಗಳೂರಿನ ನಿಯಂತ್ರಣ ಕೇಂದ್ರದಲ್ಲಿ ನೋಡಲಾಗಿದೆ. ಈ ವಿಡಿಯೋದಲ್ಲಿ ಪ್ರಗ್ಯಾನ್ ರೋವರ್ ಚಂದ್ರನ ಮೇಲೆ ರಂಧ್ರಗಳು ಅಥವಾ ಬಂಡೆಗಳಿಲ್ಲದ ಸುರಕ್ಷಿತ ಮಾರ್ಗವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದೆ.

ಭೂಮಿಯ ದಿನಗಳಿಗೆ ಹೋಲಿಸಿದರೆ ಚಂದ್ರನಲ್ಲಿನ ಒಂದು ದಿನ ಭೂಮಿಯ 14 ದಿನಕ್ಕೆ ಸಮವಾಗಿದೆ. ಇನ್ನು ಒಂದು ವಾರದಲ್ಲಿ ಚಂದ್ರನಲ್ಲಿ ಹಗಲು ಕಳೆದು ರಾತ್ರಿ ಬರಲಿದೆ, ಆ ಕಾರಣದಿಂದ ಪ್ರಗ್ಯಾನ್ ರೋವರ್ ಮತ್ತು ಅದರ ಸವಾರಿ, ವಿಕ್ರಮ್ ಲ್ಯಾಂಡರ್, ರಾತ್ರಿಯಾಗುವ ಮೊದಲು ತಮ್ಮ ಪರೀಕ್ಷೆಗಳನ್ನು ಪೂರ್ಣಗೊಳಿಸಲು ತ್ವರಿತವಾಗಿ ಕೆಲಸ ಮಾಡುತ್ತಿದೆ.

ಪ್ರಗ್ಯಾನ್ ರೋವರ್ ಸುರಕ್ಷಿತ ಮಾರ್ಗವನ್ನು ಹುಡುಕ್ಕುತ್ತಿದೆ. ಈ ಓಡಾಟವನ್ನು ಲ್ಯಾಂಡರ್ ತನ್ನ ಕ್ಯಾಮೆರಾದಿಂದ ಸೆರೆಹಿಡಿದಿದೆ. ಇದನ್ನು ನೋಡುತ್ತಿದ್ದರೆ ಚಂದಮಾಮನ ಬೆಳಕಿನಲ್ಲಿ ಓಡಾಡುತ್ತಿರುವ ಮಗುವನ್ನು ಅಕ್ಕರೆಯಿಂದ ನೋಡುವ ತಾಯಿಯ ನೆನಪಾಗುತ್ತದೆ” ಎಂದು ಇಸ್ರೋ X ನಲ್ಲಿ(ಹಿಂದಿನ ಟ್ವಿಟರ್) ಪೋಸ್ಟ್ ಮಾಡಿದೆ.

ವಿಕ್ರಮ್ ಲ್ಯಾಂಡರ್ ಪ್ರಗ್ಯಾನ್ ರೋವರ್ ಚಿತ್ರವನ್ನು ಹಂಚಿಕೊಂಡ ಒಂದು ದಿನದ ನಂತರ ಚಂದ್ರನಿಂದ ಈ ಅಪ್‌ಡೇಟ್ ಬಂದಿದೆ. NavCam ಅಥವಾ ನ್ಯಾವಿಗೇಷನ್ ಕ್ಯಾಮೆರಾ ಮನಿಯೋಜಿಸಿದ ನಂತರ ಬಂದಿರುವ ಮೊದಲ ವಿಡಿಯೋ ಇದು. ಲ್ಯಾಂಡರ್ ಸೆರೆಹಿಡಿದ ಚಿತ್ರಗಳನ್ನು ಇಸ್ರೋ ವಿಜ್ಞಾನಿಗಳು ಎಕ್ಸ್‌ನಲ್ಲಿ “ಮಿಷನ್‌ನ ಚಿತ್ರಗಳು” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದಾರೆ.

ಪ್ರಗ್ಯಾನ್ ರೋವರ್​ನ “ಮೂನ್ ವಾಕ್” ವಿಡಿಯೋ

ಸೋಮವಾರ ಕೂಡ, ಇಸ್ರೋ ಚಂದ್ರನ ಮೇಲಿನ ನವೀಕರಣವನ್ನು ಹಂಚಿಕೊಂಡಿದೆ. ಪ್ರಗ್ಯಾನ್ ರೋವರ್ ಅನ್ನು ವಿಭಿನ್ನ ಮತ್ತು ಸುರಕ್ಷಿತ ಮಾರ್ಗವನ್ನು ತೆಗೆದುಕೊಳ್ಳಲು ನಿರ್ದೇಶಿಸಲಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ರೋವರ್ ತನ್ನ ದಾರಿಯಲ್ಲಿ ಸುಮಾರು ನಾಲ್ಕು ಮೀಟರ್ ಅಗಲದ ದೊಡ್ಡ ರಂಧ್ರವನ್ನು ಎದುರಿಸಿದ್ದರಿಂದ ಇದು ಸಂಭವಿಸಿದೆ.

ಪ್ರಗ್ಯಾನ್ ಚಂದ್ರನ ದಕ್ಷಿಣ ಧ್ರುವದ ಬಳಿ ಸಲ್ಫರ್ ಇರುವಿಕೆಯನ್ನು ದೃಢಪಡಿಸಿದೆ

ಪ್ರಗ್ಯಾನ್ ರೋವರ್ ಚಂದ್ರನ ದಕ್ಷಿಣ ಧ್ರುವದ ಬಳಿ ಸಲ್ಫರ್ ಅನ್ನು ಕಂಡುಹಿಡಿದಿದೆ. ಲೇಸರ್-ಇಂಡ್ಯೂಸ್ಡ್ ಬ್ರೇಕ್‌ಡೌನ್ ಸ್ಪೆಕ್ಟ್ರೋಸ್ಕೋಪ್ ಎಂದು ಕರೆಯಲ್ಪಡುವ ಪ್ರಗ್ಯಾನ್ ರೋವರ್​ನ ಒಂದು ಸಾಧನವು ಚಂದ್ರನ ಮೇಲ್ಮೈಯಲ್ಲಿ ಗಂಧಕವಿದೆ ಎಂದು ತೋರಿಸಿದೆ. ಅಲ್ಯೂಮಿನಿಯಂ, ಕ್ಯಾಲ್ಸಿಯಂ, ಕಬ್ಬಿಣ, ಕ್ರೋಮಿಯಂ, ಟೈಟಾನಿಯಂ, ಮ್ಯಾಂಗನೀಸ್, ಸಿಲಿಕಾನ್ ಮತ್ತು ಆಮ್ಲಜನಕದಂತಹ ಇತರ ವಸ್ತುಗಳನ್ನು ಸಹ ಪ್ರಗ್ಯಾನ್ ಕಂಡುಹಿಡಿದಿದೆ ಎಂದು ಇಸ್ರೋ ಉಲ್ಲೇಖಿಸಿದೆ.

ನೇರ ಮಾಪನಗಳನ್ನು ಬಳಸಿಕೊಂಡು ಚಂದ್ರನ ಮೇಲ್ಮೈಯಲ್ಲಿ ಗಂಧಕವನ್ನು ಕಂಡುಕೊಂಡಿದ್ದೇವೆ ಎಂದು ಇಸ್ರೋ ಉಲ್ಲೇಖಿಸಿದೆ. ಚಂದ್ರನ ಸುತ್ತ ಹಾರುವ ಬಾಹ್ಯಾಕಾಶ ನೌಕೆಯ ಉಪಕರಣಗಳಿಗಿಂತ ಭಿನ್ನವಾಗಿ ರೋವರ್‌ನಲ್ಲಿರುವ ಉಪಕರಣಗಳಿಂದ ಇದು ಸಾಧ್ಯವಾಯಿತು. ಈಗ ಪ್ರಗ್ಯಾನ್ ರೋವರ್ ಹೈಡ್ರೋಜನ್ ಹುಡುಕಲು ಪ್ರಯತ್ನಿಸುತ್ತಿದೆ ಎಂದು ಇಸ್ರೋ ತಿಳಿಸಿದೆ.

ಇದನ್ನೂ ಓದಿ: ಮುಂದಿನ 7 ದಿನಗಳಲ್ಲಿ ಮುಗಿಯಲಿದೆ ಭಾರತದ ಚಂದ್ರಯಾನ-3; ಇಲ್ಲಿಯವರೆಗೆ ಯಾವೆಲ್ಲ ಚಟುವಟಿಕೆ ನಡೆದಿದೆ?

ಭಾರತವು ಬಾಹ್ಯಾಕಾಶ ಮೈಲಿಗಲ್ಲು ಸಾಧಿಸಿದೆ

ಭಾರತವು ಆಗಸ್ಟ್ 23 ರಂದು ಜಗತ್ತೇ ಮೆಚ್ಚಿವ ಉತ್ತಮ ಸಾಧನೆಯನ್ನು ಮಾಡಿದೆ. ವಿಕ್ರಮ್ ಎಂದು ಕರೆಯಲ್ಪಡುವ ಚಂದ್ರಯಾನ-3 ರ ಲ್ಯಾಂಡರ್ ಭಾಗವು ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಯಿತು. ಭಾರತವು ಯುನೈಟೆಡ್ ಸ್ಟೇಟ್ಸ್, ಚೀನಾ ಮತ್ತು ರಷ್ಯಾ ನಂತರ ಚಂದ್ರನ ಮೇಲೆ ಮೃದುವಾಗಿ ಇಳಿಯುವ ವಿಶ್ವದ ನಾಲ್ಕನೇ ದೇಶವಾಯಿತು. ಅದಲ್ಲದೆ, ಭಾರತವು ಚಂದ್ರನ ದಕ್ಷಿಣ ಧ್ರುವಕ್ಕೆ ಹತ್ತಿರವಾದ ಮೊದಲ ದೇಶವಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:51 pm, Thu, 31 August 23