7 ಲಕ್ಷ ಅಲಂಕಾರಿಕ ಸಸ್ಯಗಳು, ರಸ್ತೆ ಬದಿಯಲ್ಲಿ ಲಂಗೂರ್ ಕಟೌಟ್: ಜಿ20 ಶೃಂಗಸಭೆಗೆ ದೆಹಲಿ ಹೇಗೆ ಸಿದ್ಧತೆ ನಡೆಸುತ್ತಿದೆ?

G20 Summit: ರಾಷ್ಟ್ರ ರಾಜಧಾನಿಯಲ್ಲಿಶೃಂಗಸಭೆ ನಡೆಯುತ್ತಿರುವುದು ದೆಹಲಿ ಮತ್ತು ದೇಶ ಎರಡಕ್ಕೂ ಹೆಮ್ಮೆಯ ಸಂಗತಿ. ಜಿ 20 ಶೃಂಗಸಭೆಯ ಸಿದ್ಧತೆಗಳು ದೆಹಲಿಯಾದ್ಯಂತ ಭರದಿಂದ ಸಾಗುತ್ತಿವೆ. ಸೌಂದರ್ಯೀಕರಣದ ಪ್ರಯತ್ನಗಳು ಸಹ ನಡೆಯುತ್ತಿವೆ. ಇಂದು ನಾನು ಶೃಂಗಸಭೆಯ ಸಮಯದಲ್ಲಿ ಅನೇಕ ಪ್ರತಿನಿಧಿಗಳು ಮತ್ತು ರಾಷ್ಟ್ರಗಳ ಮುಖ್ಯಸ್ಥರು ಭೇಟಿ ನೀಡುವ ಸ್ಥಳವಾದ ರಾಜ್‌ಘಾಟ್‌ಗೆ ಭೇಟಿ ನೀಡಿದ್ದೇನೆ ಎಂದು ಸಚಿವೆ ಅತಿಶಿ ಹೇಳಿದ್ದಾರೆ.

7 ಲಕ್ಷ ಅಲಂಕಾರಿಕ ಸಸ್ಯಗಳು, ರಸ್ತೆ ಬದಿಯಲ್ಲಿ ಲಂಗೂರ್ ಕಟೌಟ್: ಜಿ20 ಶೃಂಗಸಭೆಗೆ ದೆಹಲಿ ಹೇಗೆ ಸಿದ್ಧತೆ ನಡೆಸುತ್ತಿದೆ?
ಜಿ 20 ಶೃಂಗಸಭೆ
Follow us
ರಶ್ಮಿ ಕಲ್ಲಕಟ್ಟ
|

Updated on:Aug 31, 2023 | 3:44 PM

ದೆಹಲಿ ಆಗಸ್ಟ್ 31:  ಜಿ20 ಶೃಂಗಸಭೆಗಾಗಿ (G20 Summit) ಅಧಿಕಾರಿಗಳು ಮತ್ತು ದೆಹಲಿಯ (Delhi) ಜನರು ಸಾಮಾನ್ಯ ಮತ್ತು ಅಸಾಮಾನ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ರಾಷ್ಟ್ರ ರಾಜಧಾನಿಯನ್ನು ಸುಮಾರು 7 ಲಕ್ಷ ಅಲಂಕಾರಿಕ ಸಸ್ಯಗಳೊಂದಿಗೆ ಅಲಂಕರಿಸುವುದರಿಂದ ಹಿಡಿದು ಮಂಗಗಳನ್ನು ಹೆದರಿಸಲು ಲಂಗೂರ್ ಕಟೌಟ್ (Langur Cutouts) ಇರಿಸಿ ಅವುಗಳ ಶಬ್ದಗಳನ್ನು ಅನುಕರಿಸುವ ಜನರನ್ನು ನೇಮಕ ಮಾಡುವ ಮೂಲಕ ದೆಹಲಿ ಮುನ್ಸಿಪಲ್ ಕೌನ್ಸಿಲ್ ಭರ್ಜರಿ ಸಿದ್ಧತೆ ನಡೆಸುತ್ತಿದೆ. ವಿದೇಶಿ ಪ್ರತಿನಿಧಿಗಳು ಮತ್ತು ಅವರ ಜೊತೆಗಿರುವ ಜನರ ಭೇಟಿಯನ್ನು ನಿರೀಕ್ಷಿಸಿ, ಚಾಂದಿನಿ ಚೌಕ್‌ನಲ್ಲಿರುವ ಅಂಗಡಿಯವರು ಮತ್ತು ಫುಡ್ ಸ್ಟಾಲ್ ಮಾಲೀಕರು ಸಹ ಅನುವಾದಕರನ್ನು ನೇಮಿಸಿಕೊಳ್ಳುತ್ತಿದ್ದಾರೆ. ಕೆಲವರು ಇಂಗ್ಲಿಷ್ ಬಲ್ಲ ತಮ್ಮ ಮಕ್ಕಳನ್ನು ಸೆಪ್ಟೆಂಬರ್ 8ರಿಂದ ಕೆಲವು ದಿನಗಳ ಕಾಲ ಅಂಗಡಿಯಲ್ಲಿ ಇರುವಂತೆ ಕೇಳಿಕೊಳ್ಳುತ್ತಿದ್ದಾರೆ, ಹಾಗಾಗಿ ಭಾಷೆಯ ಅಡಚಣೆಯು ವ್ಯವಹಾರಕ್ಕೆ ಅಡ್ಡಿಯಾಗುವುದಿಲ್ಲ. ಸೆಪ್ಟೆಂಬರ್ 9 ಮತ್ತು 10 ರಂದು ಶೃಂಗಸಭೆ ನಡೆಯಲಿದೆ.

ಹೂವಿನ ಶೃಂಗಾರ, ನಳನಳಿಸುತ್ತಿವೆ ಅಲಂಕಾರಿಕ ಸಸ್ಯಗಳು

ಕೇಂದ್ರ ಸರ್ಕಾರಿ ಸಂಸ್ಥೆಗಳು ಮತ್ತು ದೆಹಲಿ ಸರ್ಕಾರವು ನಗರವನ್ನು ಸುಂದರಗೊಳಿಸಲು ಮತ್ತು ಅಲಂಕರಿಸಲು 6.75 ಲಕ್ಷ ಹೂ ಗಿಡಗಳನ್ನು ನೆಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಿಟಿಐ ಸುದ್ದಿಸಂಸ್ಥೆಯಯ ವರದಿಯ ಪ್ರಕಾರ ವಿವಿಧ ರೀತಿಯ ಹೂವಿನ ಗಿಡಗಳು ಮತ್ತ ಹೂಕುಂಡಗಳಲ್ಲಿ ಅನೇಕ ಅಲಂಕಾರಿಕ ಗಿಡಗಳನ್ನು ರಸ್ತೆಗಳು ಮತ್ತು ವೃತ್ತಗಳ ಉದ್ದಕ್ಕೂ ನೆಡಲಾಗಿದೆ. G20-ಸಂಬಂಧಿತ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಶೃಂಗಸಭೆ ನಡೆಯುವ ಸ್ಥಳಗಳು, ಹೋಟೆಲ್‌ಗಳು ಮತ್ತು ಇತರ ಪ್ರದೇಶಗಳಲ್ಲಿಯೂ ಹೂ ಗಿಡಗಳು ಕಂಗೊಳಿಸುತ್ತಿವೆ.

ಸುಮಾರು 7 ಲಕ್ಷ ಗಿಡಗಳಲ್ಲಿ ಅರಣ್ಯ ಇಲಾಖೆ ಮತ್ತು ದೆಹಲಿ ಪಾರ್ಕ್ಸ್ ಮತ್ತು ಗಾರ್ಡನ್ ಸೊಸೈಟಿ 3.75 ಲಕ್ಷ, ನವದೆಹಲಿ ಮುನ್ಸಿಪಲ್ ಕೌನ್ಸಿಲ್ 1 ಲಕ್ಷ ಮತ್ತು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ 50,000 ಹೂಕುಂಡಗಳನ್ನು ಇರಿಸಿದೆ.

ರಾಜ್‌ಘಾಟ್‌ನಲ್ಲಿ 115 ಅಡಿ ತ್ರಿವರ್ಣ ಧ್ವಜ

ರಾಜ್‌ಘಾಟ್ ಸ್ಮಾರಕ ಸಂಕೀರ್ಣಕ್ಕೆ ಜಿ 20 ಶೃಂಗಸಭೆಯಲ್ಲಿ ಹಲವಾರು ಪ್ರತಿನಿಧಿಗಳು ಭೇಟಿ ನೀಡುವ ಸಾಧ್ಯತೆಯಿದೆ. ಇಲ್ಲಿ 115 ಅಡಿ ತ್ರಿವರ್ಣ ಧ್ವಜವನ್ನು ಸಹ ಸ್ಥಾಪಿಸಲಾಗಿದೆ ಎಂದು ದೆಹಲಿ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಸಚಿವೆ ಅತಿಶಿ ಹೇಳಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿಶೃಂಗಸಭೆ ನಡೆಯುತ್ತಿರುವುದು ದೆಹಲಿ ಮತ್ತು ದೇಶ ಎರಡಕ್ಕೂ ಹೆಮ್ಮೆಯ ಸಂಗತಿ. ಜಿ 20 ಶೃಂಗಸಭೆಯ ಸಿದ್ಧತೆಗಳು ದೆಹಲಿಯಾದ್ಯಂತ ಭರದಿಂದ ಸಾಗುತ್ತಿವೆ. ಸೌಂದರ್ಯೀಕರಣದ ಪ್ರಯತ್ನಗಳು ಸಹ ನಡೆಯುತ್ತಿವೆ. ಇಂದು ನಾನು ಶೃಂಗಸಭೆಯ ಸಮಯದಲ್ಲಿ ಅನೇಕ ಪ್ರತಿನಿಧಿಗಳು ಮತ್ತು ರಾಷ್ಟ್ರಗಳ ಮುಖ್ಯಸ್ಥರು ಭೇಟಿ ನೀಡುವ ಸ್ಥಳವಾದ ರಾಜ್‌ಘಾಟ್‌ಗೆ ಭೇಟಿ ನೀಡಿದ್ದೇನೆ ಎಂದು ಸಚಿವೆ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಕಳೆದ ವರ್ಷದಲ್ಲಿ, ರಾಜ್‌ಘಾಟ್‌ನಿಂದ ಕೆಂಪು ಕೋಟೆವರೆಗಿನ ರಸ್ತೆ PWD ನೇತೃತ್ವದಲ್ಲಿ ಭಾರೀ ಬದಲಾವಣೆಗೊಳಗಾಯಿತು. ಈ ಪ್ರದೇಶವು ಕಾರಂಜಿಗಳು, ಸಮಕಾಲೀನ ಸ್ಟ್ರೀಟ್ ಆರ್ಟ್, ತೆರೆದ ಆಸನ ಸ್ಥಳಗಳು, ಬೆಳಕು ಮತ್ತು ಇನ್ನೂ ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಕೂಡಿದೆ. ಮಹಾತ್ಮ ಗಾಂಧಿಯವರ ಸ್ಮಾರಕವಾದ ರಾಜ್‌ಘಾಟ್‌ಗೆ ಭೇಟಿ ನೀಡುವುದು ಯಾವಾಗಲೂ ಭಾರತಕ್ಕೆ ಬರುವ ಯಾವುದೇ ವಿದೇಶಿ ನಿಯೋಗಕ್ಕೆ ಆದ್ಯತೆಯಾಗಿದೆ ಎಂದು ಅತಿಶಿ ಹೇಳಿದ್ದಾರೆ. ಸ್ಮಾರಕವು ವಿಶಿಷ್ಟವಾದ ಭೂದೃಶ್ಯಕ್ಕೆ ಒಳಗಾಗಿದೆ. ಸುತ್ತಲೂ ಹಸಿರು, 115 ಅಡಿ ಭಾರತೀಯ ಧ್ವಜ, ದೀಪಾಲಂಕಾರ ಮಾಡಲಾಗಿದೆ ಎಂದು ಸಚಿವೆ ಹೇಳಿದ್ದಾರೆ.

ಲಂಗೂರ್ ಕಟೌಟ್

ದೆಹಲಿಯ ಹಲವಾರು ಭಾಗಗಳಲ್ಲಿ ಕೋತಿಗಳ ಸಂಖ್ಯೆ ಹೆಚ್ಚುತ್ತಿದ್ದು, ಇವು ಜನರ ಮೇಲೆ ದಾಳಿ ಮಾಡುವ ಮತ್ತು ಕಚ್ಚುವ ಹಲವಾರು ವರದಿಗಳು ಹೊರಹೊಮ್ಮುತ್ತಿವೆ. ಜಿ 20 ಶೃಂಗಸಭೆಯ ಸಮಯದಲ್ಲಿ ಇವುಗಳಿಂದ ತೊಂದರೆಯಾಗದಂತೆ ಅಧಿಕಾರಿಗಳು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

ಶೃಂಗಸಭೆಯ ಮುಖ್ಯ ಸ್ಥಳವಾದ ಪ್ರಗತಿ ಮೈದಾನದ ಭಾರತ್ ಮಂಟಪ ಮತ್ತು ವಿದೇಶಿ ಗಣ್ಯರು ಮತ್ತು ಪ್ರತಿನಿಧಿಗಳು ತಂಗುವ ಹೋಟೆಲ್‌ಗಳು ಸೇರಿದಂತೆ ಎಲ್ಲಾ ಪ್ರಮುಖ ಸ್ಥಳಗಳು ಕಾರ್ಯಕ್ರಮದ ಸಮಯದಲ್ಲಿ ಅಲ್ಲಿ ಕೋತಿಗಳ ದಂಡು ಗೋಚರಿಸದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎನ್‌ಡಿಎಂಸಿ ಉಪಾಧ್ಯಕ್ಷ ಸತೀಶ್ ಉಪಾಧ್ಯಾಯ ಮಾತನಾಡಿ, ಮಂಗಗಳನ್ನು ಹೆದರಿಸಲು ಲಂಗೂರ್ ಗಳ ಬೃಹತ್ ಕಟೌಟ್, ಅವುಗಳ ಶಬ್ದಗಳನ್ನು ಅನುಕರಿಸುವ 30-40 ತರಬೇತಿ ಪಡೆದ ವ್ಯಕ್ತಿಗಳನ್ನು ನಾಗರಿಕ ಸಂಸ್ಥೆ ನಿಯೋಜಿಸಲಿದೆ. ಕೋತಿಗಳ ಸಂಖ್ಯೆ ಹೆಚ್ಚಿರುವ ಸರ್ದಾರ್ ಪಟೇಲ್ ಮಾರ್ಗ ಸೇರಿದಂತೆ ಪ್ರದೇಶಗಳಲ್ಲಿ ಹತ್ತಕ್ಕೂ ಹೆಚ್ಚು ಲಂಗೂರ್ ಕಟೌಟ್‌ಗಳನ್ನು ಆಯಕಟ್ಟಿನ ಸ್ಥಳಗಳಲ್ಲಿ ಇರಿಸಲಾಗಿದೆ ಎಂದು ಪಿಟಿಐ ವರದಿ ತಿಳಿಸಿದೆ.

ರಸ್ತೆ ಸೌಂದರ್ಯೀಕರಣ

ಶೃಂಗಸಭೆಯ ಸಂದರ್ಭದಲ್ಲಿ ವಿದೇಶಿ ಗಣ್ಯರು ಮತ್ತು ಪ್ರತಿನಿಧಿಗಳು ಬಳಸುವ 61 ರಸ್ತೆಗಳ ಸರಿಯಾದ ನಿರ್ವಹಣೆಯನ್ನು ಏಜೆನ್ಸಿಗಳು ಖಾತ್ರಿಪಡಿಸಿಕೊಳ್ಳುತ್ತಿವೆ. ಈ ಕೆಲಸವನ್ನು ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ರಾಜ್ ನಿವಾಸ್ ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.

ವಿವಿಧ ಏಜೆನ್ಸಿಗಳಿಂದ ಸುಮಾರು 15,000 ಮೆಟ್ರಿಕ್ ಟನ್ ಘನತ್ಯಾಜ್ಯವನ್ನು ಅಂತಹ ರಸ್ತೆಗಳು ಮತ್ತು ಸ್ಥಳಗಳಿಂದ ತೆರವುಗೊಳಿಸಲಾಗಿದೆ. ದೆಹಲಿಗೆ ಸೌಂದರ್ಯದ ನೋಟವನ್ನು ನೀಡಲು ವಿವಿಧ ವಿನ್ಯಾಸಗಳೊಂದಿಗೆ 100 ಕ್ಕೂ ಹೆಚ್ಚು ಶಿಲ್ಪಗಳು ಮತ್ತು 150 ಕಾರಂಜಿಗಳನ್ನು ವಿವಿಧ ಸ್ಥಳಗಳಲ್ಲಿ ಸ್ಥಾಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಜುಲೈನಿಂದ ಸಕ್ಸೇನಾ ಅವರು ಅಧಿಕಾರಿಗಳೊಂದಿಗೆ ಎರಡು ಡಜನ್ ಉನ್ನತ ಮಟ್ಟದ ಸಭೆಗಳನ್ನು ನಡೆಸಿದ್ದಾರೆ, ಜೊತೆಗೆ ಸಿದ್ಧತೆಗಳನ್ನು ಪರಿಶೀಲಿಸಲು ಆಗಾಗ್ಗೆ ಭೇಟಿ ನೀಡುತ್ತಿದ್ದಾರೆ ಎಂದು ಪಿಟಿಐ ವರದಿ ಹೇಳಿದೆ.

ಭಾಷೆ ಸಮಸ್ಯೆ ಇರಲ್ಲ

ಎನ್​​ಡಿಟಿವಿ ಚಾಂದಿನಿ ಚೌಕ್‌ನಲ್ಲಿರುವ ಹಲವಾರು ಅಂಗಡಿಗಳಿಗೆ ಹೋಗಿದ್ದು, G20 ಶೃಂಗಸಭೆಯಲ್ಲಿ ಭಾಗವಹಿಸುವ ಪ್ರತಿನಿಧಿಗಳು ಮತ್ತು ಇತರ ಜನರು ಇಲ್ಲಿಗೆ ಭೇಟಿ ನೀಡುವ ಸಾಧ್ಯತೆಯಿದೆ. ಹಾಗಾಗಿ ಖರೀದಿ ಪ್ರಕ್ರಿಯೆಯನ್ನು ಸುಲಭಗೊಳಿಸಲು ಅಂಗಡಿಯವರು ಸೆಪ್ಟೆಂಬರ್ 8 ರಿಂದ ಇಂಗ್ಲಿಷ್ ಮಾತನಾಡುವ ಮಾರಾಟಗಾರರು ಮತ್ತು ಅನುವಾದಕರನ್ನು ನೇಮಿಸಿಕೊಳ್ಳಲು ಯೋಜಿಸುತ್ತಿದ್ದಾರೆ. ಕೆಲವರು ತಮ್ಮ ಮಕ್ಕಳನ್ನೂ ಇದಕ್ಕಾಗಿ ಅಂಗಡಿಯಲ್ಲಿ ನಿಲ್ಲಿಸಿದ್ದಾರೆ.

ಈ ಪ್ರದೇಶದ ಆಹಾರ ಮಳಿಗೆಯ ಮಾಲೀಕರು ಒಂದು ವಾರದವರೆಗೆ ಅನುವಾದಕರನ್ನು ನೇಮಿಸಿಕೊಳ್ಳುತ್ತಿದ್ದಾರೆ. ಸಂದರ್ಶಕರನ್ನು ಸರಿಯಾಗಿ ಸ್ವಾಗತಿಸಲು ಮತ್ತು ಭಾರತವನ್ನು ಹೆಮ್ಮೆಪಡುವಂತೆ ಮಾಡಲು ತನ್ನ ಎಲ್ಲಾ ಉದ್ಯೋಗಿಗಳಿಗೆ ಕೇಳಿಕೊಂಡಿದ್ದಾರೆ. ಚೇಂಬರ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿಯು ಚಾಂದಿನಿ ಚೌಕ್‌ನಲ್ಲಿರುವ ಶೇ 90 ರಷ್ಟು ಅಂಗಡಿಯವರು ಹಿಂದಿಯಲ್ಲಿ ಮಾತ್ರ ಮಾತನಾಡುತ್ತಾರೆ ಎಂದು ಸೂಚಿಸುತ್ತದೆ.

ಕೆಲವು ಅಂಗಡಿಯವರು ಇಂಗ್ಲಿಷ್ ಅನುವಾದಕರನ್ನು ನೇಮಿಸಿಕೊಂಡಿದ್ದಾರೆ. ಫ್ರೆಂಚ್, ರಷ್ಯನ್ ಮತ್ತು ಮ್ಯಾಂಡರಿನ್ ತಿಳಿದಿರುವ ಗೈಡ್‌ಗಳನ್ನು ಸಹ ನೇಮಿಸಿಕೊಂಡಿದ್ದಾರೆ. ಅವರಿಗೆ ಸಂವಹನವು ದೊಡ್ಡ ಸವಾಲಾಗಿದೆ. ಕೆಲವರು ತಮ್ಮ ಮಕ್ಕಳನ್ನೇ ಈ ರೀತಿ ಭಾಷಾ ಅನುವಾದಕ್ಕಾಗಿ ಬಳಸಿಕೊಂಡಿದ್ದಾರೆ ಎಂದು  ಚೇಂಬರ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿ ಅಧ್ಯಕ್ಷ ಬ್ರಜೇಶ್ ಗೋಯಲ್ ಹೇಳಿದ್ದಾರೆ.

ಸ್ಮರಣಾರ್ಥ ಉದ್ಯಾನವನ

ಭಾರತದ G20 ಅಧ್ಯಕ್ಷ ಸ್ಥಾನವನ್ನು ದಕ್ಷಿಣ ದೆಹಲಿಯ ಮುನ್ಸಿಪಲ್ ಪಾರ್ಕ್‌ನಲ್ಲಿ ಅದರ ಸೊಂಪಾದ ಉದ್ಯಾನಗಳಲ್ಲಿ ಸ್ಥಾಪಿಸಲಾದ 20 ಅಲಂಕಾರಿಕ ಕಂಬಗಳ ಮೇಲೆ ಸದಸ್ಯ ರಾಷ್ಟ್ರಗಳ ಗುಂಪು ಮತ್ತು ಧ್ವಜಗಳ ದೈತ್ಯ ಲೋಗೋದೊಂದಿಗೆ ಸ್ಮರಿಸಲಾಗಿದೆ. ಈ ಪಾರ್ಕ್ ಗ್ರೇಟರ್ ಕೈಲಾಶ್‌ನಲ್ಲಿದೆ. ಮುಂದಿನ ತಿಂಗಳು ಜಿ 20 ಶೃಂಗಸಭೆಗೆ ಬರುವ ರಾಜ್ಯದ ಮುಖ್ಯಸ್ಥರು ಮತ್ತು ಇತರ ಪ್ರತಿನಿಧಿಗಳು ನಗರ ಮತ್ತು ಅದರ ಜನರ ಜಿ20ಯನ್ನು ನೆನಪಿಸಿಕೊಳ್ಳಬೇಕು ಎಂದು ಪ್ರದೇಶದ ಶಾಸಕ ಸೌರಭ್ ಭಾರದ್ವಾಜ್ ಹೇಳಿದ್ದಾರೆ.

ಅನೇಕ ಸ್ಥಳೀಯ ನಿವಾಸಿಗಳು ಈಗಾಗಲೇ ಗ್ರೇಟರ್ ಕೈಲಾಶ್ -2 ರ ಎಂ ಬ್ಲಾಕ್ ಮಾರುಕಟ್ಟೆಯ ಮುಂಭಾಗದಲ್ಲಿರುವ ಉದ್ಯಾನವನ್ನು ‘ಜಿ 20 ಪಾರ್ಕ್’ ಎಂದು ಕರೆಯಲು ಪ್ರಾರಂಭಿಸಿದ್ದಾರೆ ಎಂದು ಭಾರದ್ವಾಜ್ ಹೇಳಿರುವುದಾಗಿ ಪಿಟಿಐ ವರದಿಯಲ್ಲಿ ಉಲ್ಲೇಖಿಸಿದೆ. ಮುಖ್ಯ G20 ಲಾಂಛನದ ಹಿಂದೆ ಅರ್ಧವೃತ್ತಾಕಾರದ ಆರ್ಕ್‌ನಲ್ಲಿ ಕಂಬಗಳ ಸ್ಥಾನವನ್ನು ಓಪನ್-ಅರೇನಾ ಶೈಲಿಯಲ್ಲಿ ಮಾಡಲಾಗಿದೆ. 20 ಸ್ತಂಭಗಳು, ಕಾಂಕ್ರೀಟ್ ಮಿಶ್ರಣದಿಂದ ಅವುಗಳ ಮೇಲೆ ಮರದ ವಿನ್ಯಾಸದೊಂದಿಗೆ, ಗೋಥಿಕ್ ವಿನ್ಯಾಸವನ್ನು ಹೊಂದಿದ್ದು, ಪ್ರತಿಯೊಂದೂ ಧ್ವಜವನ್ನು ಹೊಂದಿದೆ. ಗ್ರೀಕ್ ಆಂಫಿಥಿಯೇಟರ್‌ನ ನೋಟವನ್ನು ರಚಿಸುವುದು ಇದರ ಕಲ್ಪನೆ” ಎಂದು ದೆಹಲಿಯ ಮುನ್ಸಿಪಲ್ ಕಾರ್ಪೊರೇಶನ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ:  ಜಿ20 ಶೃಂಗಸಭೆ: ಮಂಗನ ಕಾಟ ತಪ್ಪಿಸಲು ಬೃಹತ್ ಗಾತ್ರದ ಲಂಗೂರ್ ಕಟೌಟ್ ಸ್ಥಾಪಿಸಿದ ದೆಹಲಿ ಮುನ್ಸಿಪಲ್ ಕೌನ್ಸಿಲ್

30.2 ಲಕ್ಷ ಸಸಿಗಳನ್ನು ನೆಡಲಾಗಿದೆ

ದೆಹಲಿಯ ಪರಿಸರ ಸಚಿವ ಗೋಪಾಲ್ ರಾಯ್ ಅವರು, G20 ಶೃಂಗಸಭೆಯನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರವು ಈಗಾಗಲೇ ತನ್ನ ವಾರ್ಷಿಕ ಗುರಿಯ 69% ಮರಗಳನ್ನು ನೆಡುವ ಗುರಿಯನ್ನು ತಲುಪಿದೆ ಎಂದು ಹೇಳಿದ್ದಾರೆ. ನಗರದ ವಿವಿಧೆಡೆ 21 ಇಲಾಖೆಗಳಿಂದ 30.2 ಲಕ್ಷ ಸಸಿಗಳನ್ನು ನೆಡಲಾಗಿದೆ ಎಂದು ರಾಯ್ ಬುಧವಾರ ತಿಳಿಸಿದ್ದಾರೆ.  ವಿವಿಧ ಇಲಾಖೆಗಳು ಯುದ್ಧೋಪಾದಿಯಲ್ಲಿ ಗಿಡಗಳನ್ನು ನೆಡುವ ಕಾರ್ಯವನ್ನು ಕೈಗೊಂಡಿವೆ. ಕಳೆದ ಎರಡು ತಿಂಗಳಲ್ಲಿ ವನ ಮಹೋತ್ಸವದ ಮೂಲಕ ಜನಜಾಗೃತಿ ಹೆಚ್ಚಿಸಿದ್ದೇವೆ. ಜಿ20 ಶೃಂಗಸಭೆಗೂ ಮುನ್ನ ಶೇ.69ರಷ್ಟು ಗುರಿ ಈಡೇರಿದೆ. ಈ 21 ಇಲಾಖೆಗಳು ನಗರದಾದ್ಯಂತ 30,20,356 ಸಸಿಗಳನ್ನು ನೆಟ್ಟಿವೆ ಎಂದು ರಾಯ್ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:43 pm, Thu, 31 August 23

ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ