ದೆಹಲಿ: ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ದುಃಖದ ವಿಚಾರ ಎಂದು ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್, ಈ ಬಗ್ಗೆ ಕಾಂಗ್ರೆಸ್ ಮರುಪರಿಶೀಲಿಸುತ್ತದೆ ಎಂದು ತಿಳಿಸಿದ್ದಾರೆ. ವಿಶೇಷ ಸ್ಥಾನಮಾನ ರದ್ದು ವೇಳೆ ಅಲ್ಲಿ ಪ್ರಜಾಪ್ರಭುತ್ವ ಇರಲಿಲ್ಲ ಎಂದು ಅವರು ಕ್ಲಬ್ ಹೌಸ್ ಚಾಟ್ನಲ್ಲಿ ಹೇಳಿದರು. ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರಿಂದ ಮೋದಿ ಆಳ್ವಿಕೆಯ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಮೋದಿ ಶಾ ಆಳ್ವಿಕೆಯ ಅಂತ್ಯಗೊಳಿಸಲು ಕಾಂಗ್ರೆಸ್ ಕಾರ್ಯಕರ್ತರ ಹೋರಾಟ ನಡೆಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ದಿಗ್ವಿಜಯ ಸಿಂಗ್ಗೆ ತಿರುಗೇಟು ನೀಡಿದ ಪ್ರಹ್ಲಾದ್ ಜೋಶಿ
ದಿಗ್ವಿಜಯ ಸಿಂಗ್ ಹೇಳಿಕೆಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ದಿಗ್ವಿಜಯ್ ಸಿಂಗ್ ನೀವು ನಿಮ್ಮ ನಿಜವಾದ ಬಣ್ಣ ತೋರಿಸಿದ್ದೀರಿ ಎಂದು ಟ್ವೀಟ್ನಲ್ಲಿ ದಿಗ್ವಿಜಯ್ ಸಿಂಗ್ಗೆ ಪ್ರಹ್ಲಾದ್ ಜೋಶಿ ಧನ್ಯವಾದ ತಿಳಿಸಿದ್ದಾರೆ.
ನಿಮ್ಮ ಪಕ್ಷ ಎಲ್ಲದರಲ್ಲೂ ಭಾರತ ವಿರೋಧಿ ನಿಲುವು ತಳೆಯುತ್ತೆ. ಈ ಕಾರಣಕ್ಕಾಗಿ ಜನರು ನಿಮಗೆ, ನಿಮ್ಮ ಪಕ್ಷಕ್ಕೆ ಮತ ನೀಡಲ್ಲ ಎಂದು ಕೇಂದ್ರದ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಷಿ ಟ್ವೀಟ್ ಮಾಡಿದ್ದಾರೆ.
Thank you @digvijaya_28 ji for once again exposing your true self. Your party takes stand on everything anti-India. This is why people never vote for you or your party. https://t.co/OZpjBYj0Oj
— Pralhad Joshi (@JoshiPralhad) June 12, 2021
ಇದನ್ನೂ ಓದಿ
ಶಿಕ್ಷಣ ಇಲಾಖೆಗೆ ಶಾಕ್ ನೀಡಲಿರುವ ಪಿಯು ಅತಿಥಿ ಉಪನ್ಯಾಸಕರು; ಬಹಿಷ್ಕಾರಕ್ಕೆ ನಿರ್ಧಾರ
ನಟ ದರ್ಶನ್ ಮನವಿಗೆ ಓಗೊಟ್ಟ ಜನತೆ; ಒಂದೇ ವಾರದಲ್ಲಿ 1 ಕೋಟಿ ರೂಪಾಯಿ ಮೃಗಾಲಯ ಪ್ರಾಧಿಕಾರದ ಖಾತೆಗೆ ಸಂದಾಯ
(Prahlad Joshi tweeted to Digvijay Singh that you have shown your true color)
Published On - 12:33 pm, Sat, 12 June 21