Covid 19 Updates: ದೇಶದಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ.4.30; 24 ಗಂಟೆಯಲ್ಲಿ 4000ಕ್ಕೂ ಅಧಿಕ ಸಾವು

24ಗಂಟೆಯಲ್ಲಿ ತಮಿಳುನಾಡಿನಿಂದಲೇ ಅತ್ಯಂತ ಹೆಚ್ಚು ಕೊರೊನಾ ಸೋಂಕಿನ ಪ್ರಕರಣಗಳು ದಾಖಲಾಗಿವೆ. 15,759 ಹೊಸ ಕೇಸ್​ಗಳು ಪತ್ತೆಯಾಗಿವೆ. ಇದನ್ನು ಹೊರತುಪಡಿಸಿದರೆ, ಮಹಾರಾಷ್ಟ್ರದಲ್ಲಿ 11,766, ಕೇರಳದಲ್ಲಿ 14,233 ಕೇಸ್​ಗಳು ದಾಖಲಾಗಿವೆ.

Covid 19 Updates: ದೇಶದಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ.4.30; 24 ಗಂಟೆಯಲ್ಲಿ 4000ಕ್ಕೂ ಅಧಿಕ ಸಾವು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Jun 12, 2021 | 10:42 AM

ದೆಹಲಿ: ಭಾರತದಲ್ಲಿ ಕೊರೊನಾ ವೈರಸ್​ ಪ್ರಮಾಣ ತುಸು ತಗ್ಗಿದಂತೆ ಗೋಚರವಾಗುತ್ತಿದೆ. 24ಗಂಟೆಯಲ್ಲಿ 84,332 ಹೊಸ ಕೇಸ್​​ಗಳು ದಾಖಲಾಗಿದ್ದು, ಇದು ಕಳೆದ 70 ದಿನಗಳಲ್ಲಿ ಅತಿಕಡಿಮೆ ದಾಖಲಾತಿಯಾಗಿದೆ ಆದರೆ ಸಾವಿನ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿಲ್ಲ. 24 ತಾಸುಗಳಲ್ಲಿ ಬರೋಬ್ಬರಿ 4002 ಮಂದಿ ಮೃತಪಟ್ಟಿದ್ದಾರೆ. ಭಾರತದಲ್ಲಿ ಪಾಸಿಟಿವಿಟಿ ದರ ಶೇ.4.30ರಷ್ಟಿದ್ದು, ಸತತ 5ನೇ ದಿನವೂ ಶೇ.5ಕ್ಕಿಂತ ಕೆಳಗೇ ಇದ್ದಂತಾಗಿದೆ.

ಇನ್ನು ಒಂದೇ ದಿನದಲ್ಲಿ 1,21,311ಮಂದಿ ಸೋಂಕಿನಿಂದ ಚೇತರಿಸಿಕೊಂಡು ಡಿಸ್​ಚಾರ್ಜ್ ಆಗಿದ್ದಾರೆ. ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 2,93,59,1555 ಆಗಿದ್ದು, ಸಕ್ರಿಯ ಪ್ರಕರಣಗಳು 10,80,690ರಷ್ಟಾಗಿದೆ. ಸಾವಿನ ಸಂಖ್ಯೆ 3,67,081ಕ್ಕೆ ಏರಿಕೆಯಾಗಿದೆ. ಇನ್ನು 24ಗಂಟೆಯಲ್ಲಿ ದಾಖಲಾದ 4000ಕ್ಕೂ ಹೆಚ್ಚು ಸಾವಿನ ಪ್ರಕರಣಗಳಲ್ಲಿ, 2213 ಮಹಾರಾಷ್ಟ್ರದಿಂದಲೇ ವರದಿಯಾಗಿದೆ.

24ಗಂಟೆಯಲ್ಲಿ ತಮಿಳುನಾಡಿನಿಂದಲೇ ಅತ್ಯಂತ ಹೆಚ್ಚು ಕೊರೊನಾ ಸೋಂಕಿನ ಪ್ರಕರಣಗಳು ದಾಖಲಾಗಿವೆ. 15,759 ಹೊಸ ಕೇಸ್​ಗಳು ಪತ್ತೆಯಾಗಿವೆ. ಇದನ್ನು ಹೊರತುಪಡಿಸಿದರೆ, ಮಹಾರಾಷ್ಟ್ರದಲ್ಲಿ 11,766, ಕೇರಳದಲ್ಲಿ 14,233, ಕರ್ನಾಟಕದಲ್ಲಿ 8249, ಆಂಧ್ರಪ್ರದೇಶದಲ್ಲಿ 8239 ಹೊಸ ಕೊರೊನಾ ಸೋಂಕಿನ ಪ್ರಕರಣಗಳು ದಾಖಲಾಗಿವೆ. ಈ ಮಧ್ಯೆ ಲಸಿಕೆ ಅಭಿಯಾನವರೂ ಭರದಿಂದ ಸಾಗುತ್ತಿದ್ದು, ಭಾರತ್ ಬಯೋಟೆಕ್​​ನ ಕೊವ್ಯಾಕ್ಸಿನ್​ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್​ ಟ್ರಯಲ್​ನ ಡಾಟಾಗಳು ಜೂ.20ರಂದು ಬಿಡುಗಡೆಯಾಗಲಿವೆ.

ಇದನ್ನೂ ಓದಿ: ದೇಶಾದ್ಯಂತ ಮುಂಗಾರು ಜೋರು: ಮುಂಗಾರು ತವರು ಕೇರಳದಲ್ಲಿ ಮಳೆ ಮಳೆ, ಮುಂಬೈನಲ್ಲಿ ಹೈಅಲರ್ಟ್​, ಈಶಾನ್ಯದಲ್ಲಿ ಚಂಡಮಾರುತ