ಎನ್ಡಿಎ ಒಕ್ಕೂಟ ತೊರೆದಿದ್ದ ಶಿರೋಮಣಿ ಅಕಾಲಿ ದಳದಿಂದ ಮಹತ್ವದ ಘೋಷಣೆ; ಮಾಯಾವತಿಯೊಂದಿಗೆ ಮೈತ್ರಿ
1996ರ ಲೋಕಸಭೆ ಚುನಾವಣೆಯಲ್ಲಿ ಪಂಜಾಬ್ನಲ್ಲಿ ಇದೆರಡೂ ಪಕ್ಷಗಳೂ ಒಟ್ಟಾಗಿ ಸ್ಪರ್ಧಿಸಿದ್ದವು. ಅದರಲ್ಲಿ ಒಟ್ಟು 13 ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷಗಳು ಕಣಕ್ಕಿಳಿದು, 11 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದವು.
ಕೃಷಿಕಾಯ್ದೆಗಳನ್ನು ವಿರೋಧಿಸಿ, ಎನ್ಡಿಎ ಒಕ್ಕೂಟದಿಂದ ಹೊರಬಿದ್ದಿದ್ದ ಶಿರೋಮಣಿ ಅಕಾಲಿ ದಳ (SAD) ಇದೀಗ ಇನ್ನೊಂದು ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಮಹತ್ವದ ಘೋಷಣೆ ಮಾಡಿದೆ. ಪಂಜಾಬ್ನಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಾರ್ಟಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಾಗಿ ಘೋಷಿಸಿದೆ. ಬಿಎಸ್ಪಿ ಮತ್ತು ಶಿರೋಮಣಿ ಅಕಾಲಿದಳ್ ಪಕ್ಷಗಳು ಸೇರಿ, ಪಂಜಾಬ್ ರಾಜಕಾರಣದಲ್ಲಿ ಹೊಸದನ್ನು ತರುತ್ತೇವೆ ಎಂದು ಎಸ್ಎಡಿ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಹೇಳಿದ್ದಾರೆ.
ಬಹುಜನ ಸಮಾಜ ಪಕ್ಷದೊಂದಿಗೆ ಸೇರಿ ಚುನಾವಣೆ ಎದುರಿಸುವ ನಿರ್ಧಾರವನ್ನು ಶಿರೋಮಣಿ ಅಕಾಲಿ ದಳ ತನ್ನ ಕೋರ್ ಕಮಿಟಿ ಸಭೆಯಲ್ಲಿ ಕೈಗೊಂಡಿದ್ದು, ಅದರ ಅನ್ವಯ ಬಿಎಸ್ಪಿ ಪಂಜಾಬ್ನಲ್ಲಿ 117 ಕ್ಷೇತ್ರಗಳಲ್ಲಿ, 20 ಸೀಟುಗಳಲ್ಲಿ ಸ್ಪರ್ಧಿಸಲಿದೆ. ಖರ್ತಾಪುರ, ಪಶ್ಚಿಮ ಜಲಂಧರ್, ಉತ್ತರ ಜಲಂಧರ್, ಉತ್ತರ ಲುಧಿಯಾನಾ, ಪಠಾಣ್ಕೋಟ್, ಅಮೃತ್ಸರ ಸೆಂಟ್ರಲ್, ಮೊಹಾಲಿಯಂಥ ಪ್ರಮುಖ ಕ್ಷೇತ್ರಗಳಲ್ಲಿ ಬಿಎಸ್ಪಿ ಸ್ಪರ್ಧೆಗೆ ಇಳಿಯಲಿದೆ. ಉಳಿದ 97 ಕ್ಷೇತ್ರಗಳಲ್ಲಿ ಅಕಾಲಿ ದಳ ಸ್ಪರ್ಧೆಗಿಳಿಯಲಿದೆ.
1996ರ ಲೋಕಸಭೆ ಚುನಾವಣೆಯಲ್ಲಿ ಪಂಜಾಬ್ನಲ್ಲಿ ಇದೆರಡೂ ಪಕ್ಷಗಳೂ ಒಟ್ಟಾಗಿ ಸ್ಪರ್ಧಿಸಿದ್ದವು. ಅದರಲ್ಲಿ ಒಟ್ಟು 13 ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷಗಳು ಕಣಕ್ಕಿಳಿದು, 11 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದವು. 13 ಕ್ಷೇತ್ರಗಳಲ್ಲಿ ಬಿಎಸ್ಪಿ ಸ್ಪರ್ಧಿಸಿದ್ದ ಮೂರೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಹಾಗೇ ಅಕಾಲಿ ದಳ 10 ಕ್ಷೇತ್ರಗಳಲ್ಲಿ ಸ್ಪರ್ಧಿಸಿ, 8ರಲ್ಲಿ ಗೆದ್ದಿತ್ತು. ಅದಾದ ಬಳಿಕ 26ವರ್ಷಗಳ ನಂತರ ಮತ್ತೊಮ್ಮೆ ಮೈತ್ರಿ ಮಾಡಿಕೊಳ್ಳುತ್ತಿವೆ.
ಇದನ್ನೂ ಓದಿ:ATM charges: ಎಟಿಎಂ ನಗದು ವಿಥ್ ಡ್ರಾ ದರ, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಶುಲ್ಕವು ಸದ್ಯದಲ್ಲೇ ಏರಿಕೆ
(Shiromani Akali Dal has formed an alliance with the Bahujan Samaj Party in Punjab)