GST Council: ಬ್ಲ್ಯಾಕ್ ಫಂಗಸ್ ಔಷಧಗಳಿಗೆ ತೆರಿಗೆ ವಿನಾಯಿತಿ; ಕೊರೊನಾ ಲಸಿಕೆಯ ಮೇಲೆ ಶೇಕಡಾ 5 ಜಿಎಸ್​ಟಿ ಮುಂದುವರಿಕೆ

ಟೋಸಿಲಿಜುಮಾಬ್, ಅಂಫೋಟೆರಿಸಿನ್ ಬಿ ಇಂಜೆಕ್ಷನ್ ಮೇಲಿನ ಜಿಎಸ್‌ಟಿಯನ್ನು ಶೂನ್ಯಕ್ಕೆ ಇಳಿಕೆ ಮಾಡಲಾಗಿದೆ. ರೆಮಿಡಿಸಿವರ್ ಇಂಜೆಕ್ಷನ್ ಮೇಲಿನ ಜಿಎಸ್‌ಟಿ ಶೇ.5 ಕ್ಕೆ ಇಳಿಕೆ ಮಾಡಲಾಗಿದೆ.

GST Council: ಬ್ಲ್ಯಾಕ್ ಫಂಗಸ್ ಔಷಧಗಳಿಗೆ ತೆರಿಗೆ ವಿನಾಯಿತಿ; ಕೊರೊನಾ ಲಸಿಕೆಯ ಮೇಲೆ ಶೇಕಡಾ 5 ಜಿಎಸ್​ಟಿ ಮುಂದುವರಿಕೆ
ದೆಹಲಿ ಆಸ್ಪತ್ರೆಯೊಂದದ ದೃಶ್ಯ
Follow us
TV9 Web
| Updated By: ganapathi bhat

Updated on:Jun 12, 2021 | 4:19 PM

ದೆಹಲಿ: ಕೊರೊನಾ ವಿರುದ್ಧ ಹೋರಾಡಲು ಬಳಕೆಯಾಗುವ ಕೆಲವು ಔಷಧಗಳು, ಆಸ್ಪತ್ರೆ ಮತ್ತು ವೈದ್ಯಕೀಯ ಉಪಕರಣಗಳ ಮೇಲೆ ತೆರಿಗೆ ಪ್ರಮಾಣವನ್ನು ಇಳಿಕೆ ಮಾಡಲಾಗಿದೆ. ಸರಕು ಮತ್ತು ಸೇವಾ ತೆರಿಗೆ ಮಂಡಳಿ (ಜಿಎಸ್​ಟಿ ಕೌನ್ಸಿಲ್) ಇಂದು (ಜೂನ್ 12) ನಡೆಸಿದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ತೆರಿಗೆ ವಿನಾಯಿತಿಯನ್ನು ಕೆಲವು ಮಂತ್ರಿಗಳ ಸಲಹೆ, ಶಿಫಾರಸಿನಂತೆ ಕೈಗೊಳ್ಳಲಾಗಿದೆ ಎಮದು ಜಿಎಸ್​ಟಿ ಮಂಡಳಿ ತಿಳಿಸಿದೆ.

ಟೋಸಿಲಿಜುಮಾಬ್, ಅಂಫೋಟೆರಿಸಿನ್ ಬಿ ಇಂಜೆಕ್ಷನ್ ಮೇಲಿನ ಜಿಎಸ್‌ಟಿಯನ್ನು ಶೂನ್ಯಕ್ಕೆ ಇಳಿಕೆ ಮಾಡಲಾಗಿದೆ. ರೆಮಿಡಿಸಿವರ್ ಇಂಜೆಕ್ಷನ್ ಮೇಲಿನ ಜಿಎಸ್‌ಟಿ ಶೇ.5 ಕ್ಕೆ ಇಳಿಕೆ ಮಾಡಲಾಗಿದೆ. ಅಲ್ಲದೆ, ಅಂಬ್ಯುಲೆನ್ಸ್ ಮೇಲಿನ ಜಿಎಸ್‌ಟಿ ದರ ಕೂಡ ಇಳಿಕೆಯಾಗಿದೆ.

ಬ್ಲ್ಯಾಕ್ ಫಂಗಸ್​ಗೆ​ ಸಂಬಂಧಿಸಿದ ಔಷಧಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಕೊವಿಡ್​ಗೆ ಸಂಬಂಧಿಸಿದ 3 ವಸ್ತುಗಳಿಗೆ ಜಿಎಸ್​ಟಿ ಇಲ್ಲ ಎಂದು ದೆಹಲಿಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ ನೀಡಿದ್ದಾರೆ. ವಿತ್ತ ಸಚಿವಾಲಯದಲ್ಲಿ ಜಿಎಸ್​ಟಿ ಮಂಡಳಿ ಸಭೆ ನಡೆದ ನಂತರ ಅವರು ಮಾತನಾಡಿದ್ದಾರೆ.

ಲಸಿಕೆ ಮೇಲಿನ ಜಿಎಸ್​ಟಿ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಕೊರೊನಾ ಲಸಿಕೆ ಮೇಲಿನ ಶೇ.5ರಷ್ಟು ಜಿಎಸ್​ಟಿ ಮುಂದುವರಿಕೆ ಆಗಲಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಶೇ.75ರಷ್ಟು ಕೊವಿಡ್​ ಲಸಿಕೆಯನ್ನು ಕೇಂದ್ರವೇ ಖರೀದಿಸುತ್ತಿದೆ. ಹೀಗಾಗಿ ಲಸಿಕೆ ಮೇಲಿನ ಜಿಎಸ್​ಟಿಯಿಂದ ಜನರಿಗೆ ಹೊರೆಯಾಗಲ್ಲ. ಕೇಂದ್ರ ಸರ್ಕಾರ ಜನರಿಗೆ ಲಸಿಕೆಯನ್ನ ಉಚಿತವಾಗಿ ನೀಡುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಌಂಬುಲೆನ್ಸ್​ ಮೇಲಿನ ಜಿಎಸ್​ಟಿ ಶೇ.28ರಿಂದ ಶೇ.12ಕ್ಕೆ ಇಳಿಕೆ ಮಾಡಲಾಗಿದೆ. ಜಿಎಸ್​ಟಿ ಮಂಡಳಿ ಕೈಗೊಂಡ ನಿರ್ಧಾರ ತಕ್ಷಣವೇ ಜಾರಿಯಾಗಲಿದೆ. ವ್ಯಾಪಾರಿಗಳಿಗೆ ರಿಲೀಫ್ ನೀಡಿಕೆ ಇಂದಿನ ಅಜೆಂಡಾದಲ್ಲಿರಲಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ.

ಮೆಡಿಕಲ್ ಗ್ರೇಡ್ ಆಕ್ಸಿಜನ್, ಆಕ್ಸಿಜನ್ ಕಾನ್ಸನ್​ಟ್ರೇಟರ್, ವೆಂಟಿಲೇಟರ್, ವೆಂಟಿಲೇಟರ್ ಮಾಸ್ಕ್, ‌BiPAP ಮೆಷಿನ್ ಮೇಲಿನ ಜಿಎಸ್‌ಟಿ ದರವನ್ನು ಶೇ. 12 ರಿಂದ ಶೇ.5 ಕ್ಕೆ ಇಳಿಕೆ ಮಾಡಲಾಗಿದೆ. ಕೊರೊನಾ ಟೆಸ್ಟಿಂಗ್ ಕಿಟ್ ಮೇಲಿನ ಜಿಎಸ್‌ಟಿ ಶೇ.12 ರಿಂದ ಶೇ.5 ಕ್ಕೆ ಇಳಿಸಲಾಗಿದೆ. ಪಲ್ಸ್ ಆಕ್ಸಿಮೀಟರ್ ಮೇಲಿನ ಜಿಎಸ್‌ಟಿ ಶೇ.12ರಿಂದ ಶೇ. 5 ಕ್ಕೆ ಇಳಿಕೆಯಾಗಿದೆ. ಹ್ಯಾಂಡ್ ಸ್ಯಾನಿಟೈಸರ್, ಉಷ್ಣಾಂಶ ಪರೀಕ್ಷಿಸುವ ಯಂತ್ರಗಳು, ಗ್ಯಾಸ್/ಎಲೆಕ್ಟ್ರಿಕ್ ಚಿತಾಗಾರಗಳ ಸಾಮಗ್ರಿ, ಆಳವಡಿಕೆಗೆ ಜಿಎಸ್‌ಟಿ ಶೇ.18 ರಿಂದ ಶೇ.5 ಕ್ಕೆ ಇಳಿಕೆ ಮಾಡಲಾಗಿದೆ. ಅಂಬ್ಯುಲೆನ್ಸ್ ಮೇಲಿನ ಜಿಎಸ್‌ಟಿ ಶೇ.28 ರಿಂದ ಶೇ.12 ಕ್ಕೆ ಇಳಿಕೆಯಾಗಿದೆ. ಈ ಜಿಎಸ್‌ಟಿ ದರ ಇಳಿಕೆಯು 2021 ರ ಸೆಪ್ಟೆಂಬರ್ ವರೆಗೆ ಜಾರಿಯಲ್ಲಿ ಇರುತ್ತದೆ ಎಂದು ಇಂದು ನಡೆದ ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಇದನ್ನೂ ಓದಿ: GST: ಮೇ ತಿಂಗಳ ಜಿಎಸ್​ಟಿ ಸಂಗ್ರಹ 1,02,709 ಕೋಟಿ; ಕಳೆದ ವರ್ಷಕ್ಕಿಂತ ಶೇ 65ರಷ್ಟು ಹೆಚ್ಚು, ಏಪ್ರಿಲ್​ಗಿಂತ ಶೇ 27ರಷ್ಟು ಕಮ್ಮಿ

Corona Vaccine: ಕೊರೊನಾ ಲಸಿಕೆ ಪಡೆಯುವ ಮೊದಲು ಮತ್ತು ನಂತರ ಪಾಲಿಸಬೇಕಾದ ಅಂಶಗಳೇನು? ಇಲ್ಲಿದೆ ವಿವರ

Published On - 4:00 pm, Sat, 12 June 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್