AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೊವಿಶೀಲ್ಡ್ ಲಸಿಕೆಯ 2 ಡೋಸ್​​ಗಳ ನಡುವಿನ ಅಂತರ ತಕ್ಷಣಕ್ಕೆ ಬದಲಾಗೋದಿಲ್ಲ, ವೈಜ್ಞಾನಿಕ ಅಧ್ಯಯನ ಅಗತ್ಯ’

Covishield: ಕೊವಿಶೀಲ್ಡ್​ ಲಸಿಕೆಯ ಡೋಸ್​​ಗಳ ನಡುವಿನ ಅಂತರವನ್ನು ಪದೇಪದೆ ಬದಲಾವಣೆ ಮಾಡಲಾಗಿದ್ದು, ಸದ್ಯ ಒಂದು ಡೋಸ್​​ನಿಂದ ಇನ್ನೊಂದು ಡೋಸ್​​ಗೆ 84 ದಿನಗಳ ಅಂದರೆ 12-16ವಾರಗಳ ಅಂತರ ಇಡಲಾಗಿದೆ.

‘ಕೊವಿಶೀಲ್ಡ್ ಲಸಿಕೆಯ 2 ಡೋಸ್​​ಗಳ ನಡುವಿನ ಅಂತರ ತಕ್ಷಣಕ್ಕೆ ಬದಲಾಗೋದಿಲ್ಲ, ವೈಜ್ಞಾನಿಕ ಅಧ್ಯಯನ ಅಗತ್ಯ’
ಕೋವಿಶೀಲ್ಡ್ ಲಸಿಕೆ
TV9 Web
| Updated By: Lakshmi Hegde|

Updated on: Jun 12, 2021 | 4:23 PM

Share

ದೆಹಲಿ: ಕೊವಿಶೀಲ್ಡ್ ಲಸಿಕೆ ಮೊದಲ ಡೋಸ್​ ಹಾಗೂ ಎರಡನೇ ಡೋಸ್​ ನಡುವಿನ ಸಮಯವನ್ನು ತಕ್ಷಣಕ್ಕೆ ಬದಲಾವಣೆ ಮಾಡುವುದಿಲ್ಲ ಎಂದು ಇಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಪ್ರಸ್ತುತ ಎರಡೂ ಡೋಸ್​ಗಳ ಮಧ್ಯೆ ನಿಗದಿಪಡಿಸಲಾದ ಸಮಯಮಿತಿಗೆ ಸಂಬಂಧಪಟ್ಟಂತೆ ಕೊವಿಡ್​ 19 ಲಸಿಕೆ ಕಾರ್ಯಭಾರದ ರಾಷ್ಟ್ರೀಯ ತಜ್ಞರ ತಂಡದೊಂದಿಗೆ ನಡೆಯಲಿರುವ ಮುಂದಿನ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ಸಮಯ ಮಿತಿಯನ್ನು ಕಡಿಮೆ ಮಾಡಬೇಕಾದರೆ ಹೇಗೆ ಮಾಡಬಹುದು? ಅದರಿಂದ ಆಗುವ ಉಪಯೋಗಗಳೇನು? ಎಂಬಿತ್ಯಾದಿ ಕುರಿತಾಗಿ ಸಭೆಯಲ್ಲಿ ಚರ್ಚಿಸಲಾಗುವುದು. ಅದಕ್ಕಾಗಿ ವೈಜ್ಞಾನಿಕ ಪುರಾವೆಗಳನ್ನೂ ಸಂಗ್ರಹಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಕೊವಿಶೀಲ್ಡ್​ ಲಸಿಕೆಯ ಡೋಸ್​​ಗಳ ನಡುವಿನ ಅಂತರವನ್ನು ಪದೇಪದೆ ಬದಲಾವಣೆ ಮಾಡಲಾಗಿದ್ದು, ಸದ್ಯ ಒಂದು ಡೋಸ್​​ನಿಂದ ಇನ್ನೊಂದು ಡೋಸ್​​ಗೆ 84 ದಿನಗಳ ಅಂದರೆ 12-16ವಾರಗಳ ಅಂತರ ಇಡಲಾಗಿದೆ. ನಿನ್ನೆ ಈ ಬಗ್ಗೆ ಮಾತನಾಡಿದ್ದ ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಪೌಲ್​, ಕೊವಿಶೀಲ್ಡ್​ ಲಸಿಕೆ ಡೋಸೇಜ್​​​ಗಳ ನಡುವಿನ ಅಂತರವನ್ನು ತಕ್ಷಣಕ್ಕೆ ಬದಲಾವಣೆ ಮಾಡುವ ವಿಚಾರದಲ್ಲಿ ಯಾರಿಗೂ ಗೊಂದಲ, ಗಾಬರಿ ಬೇಡ. ಸದ್ಯ ಇರುವ ಅಂತರವನ್ನು ಕಡಿಮೆ ಮಾಡಬೇಕೆಂದರೆ ಕೆಲವೊಂದಿಷ್ಟು ವೈಜ್ಞಾನಿಕ ಅಧ್ಯಯನಗಳ ಅಗತ್ಯವಿರುತ್ತದೆ ಎಂದು ಹೇಳಿದ್ದರು. ಕೊರೊನಾ ರೂಪಾಂತರಿ ಸೋಂಕಿನ ನಿಯಂತ್ರಣದ ದೃಷ್ಟಿಯಿಂದಾದರೂ ಕೊವಿಶೀಲ್ಡ್​ ಲಸಿಕೆಯ ಎರಡು ಡೋಸ್​​​ಗಳ ನಡುವಿನ ಅಂತರವನ್ನು ಇನ್ನೂ ಸ್ವಲ್ಪ ಕಡಿಮೆ ಮಾಡಬೇಕು ಎಂದು ಕೆಲವು ಅಧ್ಯಯನಗಳು ಉಲ್ಲೇಖಿಸುತ್ತಿವೆ ಎಂದು ಮಾಧ್ಯಮಗಳು ವರದಿ ಮಾಡಿದ ಬೆನ್ನಲ್ಲೇ ಪೌಲ್​ ಹೀಗೆಂದು ಹೇಳಿಕೆ ನೀಡಿದ್ದರು.

ಕೊವಿಶೀಲ್ಡ್​ ಲಸಿಕೆಯ ಎರಡು ಡೋಸ್​ಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಬಗ್ಗೆ ಸಲಹೆಗಳು ಬಂದಿವೆ. ಹಾಗಂತ ಈ ಬಗ್ಗೆ ಜನರು ಗಾಬರಿಪಡುವ ಅಗತ್ಯವಿಲ್ಲ. ಲಸಿಕೆ ಬಗ್ಗೆ ಈಗಾಗಲೇ ತೆಗೆದುಕೊಂಡ ನಿರ್ಧಾರಗಳನ್ನೂ ತುಂಬ ಎಚ್ಚರಿಕೆಯಿಂದ ತೆಗೆದುಕೊಳ್ಳಲಾಗಿದೆ. ಮುಂದೂ ಕೂಡ ಸಾರ್ವಜನಿಕ ಹಿತದೃಷ್ಟಿ, ಕಾಳಜಿಯಿಂದಲೇ ಮುಂದಡಿ ಇಡಲಾಗುವುದು. ತಜ್ಞರು ಯಾವುದೇ ನಿರ್ಧಾರ ತೆಗೆದುಕೊಂಡರೂ ಅದನ್ನು ಗೌರವಿಸಿ ಎಂದು ಪೌಲ್​ ಹೇಳಿದ್ದಾರೆ.

ಇದನ್ನೂ ಓದಿ: GST Council: ಬ್ಲ್ಯಾಕ್ ಫಂಗಸ್ ಔಷಧಗಳಿಗೆ ತೆರಿಗೆ ವಿನಾಯಿತಿ; ಕೊರೊನಾ ಲಸಿಕೆಯ ಮೇಲೆ ಶೇಕಡಾ 5 ಜಿಎಸ್​ಟಿ ಮುಂದುವರಿಕೆ

(At Present No Change in the gap of two doses of Covishield Vaccine)

ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಸಿಎಂ ಬದಲಾವಣೆ ವಿಷಯದಲ್ಲಿ ಸುರ್ಜೇವಾಲಾ ಚರ್ಚಿಸಿಲ್ಲ: ರಂಗನಾಥ್
ಸಿಎಂ ಬದಲಾವಣೆ ವಿಷಯದಲ್ಲಿ ಸುರ್ಜೇವಾಲಾ ಚರ್ಚಿಸಿಲ್ಲ: ರಂಗನಾಥ್
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ
ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ಸುದ್ದಿಗೋಷ್ಠಿ: ಇಲ್ಲಿದೆ ಲೈವ್​
ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ಸುದ್ದಿಗೋಷ್ಠಿ: ಇಲ್ಲಿದೆ ಲೈವ್​
ರೈಲ್ವೆ ಹಳಿ ಪಕ್ಕ ಮರಿಗೆ ಜನ್ಮ ನೀಡಿದ ಆನೆ, ಎರಡು ಗಂಟೆಗಳ ಕಾಲ ನಿಂತ ರೈಲು
ರೈಲ್ವೆ ಹಳಿ ಪಕ್ಕ ಮರಿಗೆ ಜನ್ಮ ನೀಡಿದ ಆನೆ, ಎರಡು ಗಂಟೆಗಳ ಕಾಲ ನಿಂತ ರೈಲು
ಹೃದಯಾಘಾತಗಳ ಹೆಚ್ಚಳಕ್ಕೆ ನಿಖರವಾದ ಕಾರಣ ವೈದ್ಯರಿಗೆ ಗೊತ್ತಾಗುತ್ತಿಲ್ಲ
ಹೃದಯಾಘಾತಗಳ ಹೆಚ್ಚಳಕ್ಕೆ ನಿಖರವಾದ ಕಾರಣ ವೈದ್ಯರಿಗೆ ಗೊತ್ತಾಗುತ್ತಿಲ್ಲ
ಮಾವಿನ ಹಣ್ಣೆಂದು ಬೈಕ್ ಮೇಲೆ ಮಹಿಳೆಯ ಶವ ಸಾಗಿಸುತ್ತಿದ್ದ ವ್ಯಕ್ತಿ
ಮಾವಿನ ಹಣ್ಣೆಂದು ಬೈಕ್ ಮೇಲೆ ಮಹಿಳೆಯ ಶವ ಸಾಗಿಸುತ್ತಿದ್ದ ವ್ಯಕ್ತಿ
ಟೀಮ್ ಇಂಡಿಯಾವನ್ನು ಕೂಡಿಕೊಂಡ ಮುಂಬೈ ಇಂಡಿಯನ್ಸ್ ವೇಗಿ
ಟೀಮ್ ಇಂಡಿಯಾವನ್ನು ಕೂಡಿಕೊಂಡ ಮುಂಬೈ ಇಂಡಿಯನ್ಸ್ ವೇಗಿ