Terror Attack: ಉತ್ತರ ಕಾಶ್ಮೀರದಲ್ಲಿ ಉಗ್ರರ ದಾಳಿ; ಭಯೋತ್ಪಾದಕರ ಗುಂಡಿಗೆ ಇಬ್ಬರು ಪೊಲೀಸರು, ಇಬ್ಬರು ನಾಗರಿಕರು ಸಾವು

TV9kannada Web Team

TV9kannada Web Team | Edited By: Lakshmi Hegde

Updated on: Jun 12, 2021 | 2:49 PM

ಭಯೋತ್ಪಾದಕ ಗುಂಡಿನ ದಾಳಿಗೆ ಇಬ್ಬರು ಪೊಲೀಸರು, ಇಬ್ಬರು ನಾಗರಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Terror Attack: ಉತ್ತರ ಕಾಶ್ಮೀರದಲ್ಲಿ ಉಗ್ರರ ದಾಳಿ; ಭಯೋತ್ಪಾದಕರ ಗುಂಡಿಗೆ ಇಬ್ಬರು ಪೊಲೀಸರು, ಇಬ್ಬರು ನಾಗರಿಕರು ಸಾವು
ಸಾಂದರ್ಭಿಕ ಚಿತ್ರ

ಉತ್ತರ ಕಾಶ್ಮೀರದ ಸೋಪೋರ್​ ಪಟ್ಟಣದಲ್ಲಿ ಇಂದು ಮಧ್ಯಾಹ್ನ ನಡೆದ ಉಗ್ರರ ದಾಳಿಯಲ್ಲಿ ಇಬ್ಬರು ಪೊಲೀಸರು ಹುತಾತ್ಮರಾಗಿದ್ದು, ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ. ಮೂವರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ. ಸೋಪೋರ್​​ನ ಮುಖ್ಯ ಚೌಕ್​ ಬಳಿ ಈ ಉಗ್ರ ದಾಳಿ ನಡೆದಿದ್ದು, ಅಲ್ಲಿ ದಿನದಂತೆ ಭದ್ರತಾ ಸಿಬ್ಬಂದಿ ಗಸ್ತು ತಿರುಗುತ್ತಿದ್ದರು. ಭಯೋತ್ಪಾದಕ ಗುಂಡಿನ ದಾಳಿಗೆ ಇಬ್ಬರು ಪೊಲೀಸರು, ಇಬ್ಬರು ನಾಗರಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಐಜಿಪಿ ವಿಜಯ್​ ಕುಮಾರ್​ ತಿಳಿಸಿದ್ದಾರೆ. ಸದ್ಯ ಉಗ್ರರನ್ನು ಸೆರೆ ಹಿಡಿಯಲು ಕಾರ್ಯಾಚರಣೆ ನಡೆಯುತ್ತಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಕಾಶ್ಮೀರದ ಮಾಜಿ ಸಿಎಂ, ನ್ಯಾಶನಲ್​ ಕಾನ್ಫರೆನ್ಸ್​ ಮುಖ್ಯಸ್ಥ ಓಮರ್​ ಅಬ್ದುಲ್ಲಾ, ಈ ಉಗ್ರ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ ಹಾಗೂ ಗಾಯಗೊಂಡವರು ಶೀಘ್ರವೇ ಗುಣಮುಖರಾಗಲಿ, ಮೃತರ ಕುಟುಂಬಗಳಿಗೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

ತಾಜಾ ಸುದ್ದಿ

ಇದನ್ನೂ ಓದಿ: ಕೊರೊನಾ ಅವಕೃಪೆ: ಲಾಕ್‌ಡೌನ್‌ನಿಂದ ಇಡೀ ದೇಶಕ್ಕೆ 5.4 ಲಕ್ಷ ಕೋಟಿ ರೂ ನಷ್ಟ, 3ನೇ ಅಲೆ ಬಂದರಂತೂ… ಇನ್ನೂ ನಷ್ಟ ನಷ್ಟ

(Policemen Civilians Killed In terror attack in Jammu Kashmir)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada