ಕೊರೊನಾ ಅವಕೃಪೆ: ಲಾಕ್‌ಡೌನ್‌ನಿಂದ ಇಡೀ ದೇಶಕ್ಕೆ 5.4 ಲಕ್ಷ ಕೋಟಿ ರೂ ನಷ್ಟ, 3ನೇ ಅಲೆ ಬಂದರಂತೂ… ಇನ್ನೂ ನಷ್ಟ ನಷ್ಟ

Barclays forecast: ಕೊರೊನಾ ಮೂರನೆಯ ಅಲೆ ಕನಿಷ್ಠ 8 ವಾರ ಕಾಲ ಕಾಡುತ್ತದೆ ಎಂತಾದರೂ ಆರ್ಥಿಕ ನಷ್ಟ ಇನ್ನೂ 3.1 ಲಕ್ಷ ಕೋಟಿ ರೂಪಾಯಿ ಅಧಿಕಗೊಳ್ಳಲಿದೆ. ಆಗ ಸಹಜವಾಗಿಯೇ ಭಾರತದ ಜಿಡಿಪಿ ಶೇ. 7.7 ಕ್ಕೆ ಕುಸಿಯಲಿದೆ ಎಂದು Barclays ಅಂದಾಜಿಸಿದೆ.

ಕೊರೊನಾ ಅವಕೃಪೆ: ಲಾಕ್‌ಡೌನ್‌ನಿಂದ ಇಡೀ ದೇಶಕ್ಕೆ 5.4 ಲಕ್ಷ ಕೋಟಿ ರೂ ನಷ್ಟ, 3ನೇ ಅಲೆ ಬಂದರಂತೂ... ಇನ್ನೂ ನಷ್ಟ ನಷ್ಟ
ಕೊರೊನಾ ಅವಕೃಪೆ: ಲಾಕ್‌ಡೌನ್‌ನಿಂದ ಇಡೀ ದೇಶಕ್ಕೆ 5.4 ಲಕ್ಷ ಕೋಟಿ ರೂ ನಷ್ಟ, 3ನೇ ಅಲೆ ಬಂದರಂತೂ... ಇನ್ನೂ ನಷ್ಟ ನಷ್ಟ
Follow us
| Updated By: ಸಾಧು ಶ್ರೀನಾಥ್​

Updated on: Jun 12, 2021 | 2:42 PM

ದೆಹಲಿ: ಕೊರೊನಾ ಮಾರಿಯ ಅವಕೃಪೆಯಿಂದಾಗಿ ಇಡೀ ದೇಶ ಲಾಕ್‌ಡೌನ್‌ ಕ್ರಮಕ್ಕೆ ಒಳಗಾದ ಪರಿಣಾಮ ಬರೋಬ್ಬರಿ 5.4 ಲಕ್ಷ ಕೋಟಿ (Rs. 5.4 trillion) ರೂಪಾಯಿ ನಷ್ಟವುಂಟಾಗಿದೆ. ಇದು ಮೊದಲ ಅಲೆಯ ಲೆಕ್ಕವಲ್ಲ. ಕೊರೊನಾ 2ನೇ ಅಲೆಯಿಂದ ದೇಶದಲ್ಲಿ ಲಾಕ್‌ಡೌನ್ ಬೀಗ ಬಿದ್ದಿದ್ದಕ್ಕೆ ಅಂದಾಜು ಐದೂವರೆ ಲಕ್ಷ ಕೋಟಿ ರೂಪಾಯಿ ನಷ್ಟವಾಗಿರುವ ಬಗ್ಗೆ ಬರ್ಕಲೇ ಸಂಸ್ಥೆ ಅಂದಾಜು ಮಾಡಿದೆ. 

ಇನ್ನು, 2ನೇ ಅಲೆಯಿಂದ ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಳಗೊಂಡಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಲಾಕ್‌ಡೌನ್ ಪರಿಣಾಮ 2.7 ಕೋಟಿ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಉದ್ಯೋಗ ನಷ್ಟದಿಂದ ದೇಶದಲ್ಲಿ ಜನರಿಗೆ ತೀವ್ರ ಆರ್ಥಿಕ ಸಂಕಷ್ಟ ಎದುರಾಗಿದೆ. ಉದ್ಯೋಗ ನಷ್ಟದಿಂದ ದೇಶದ ಆರ್ಥಿಕತೆಗೂ ಹೊಡೆತ ಬಿದ್ದಿದೆ.

ಈ ಮಧ್ಯೆ, ಆರ್ಥಿಕತೆ ಚೇತರಿಕೆಗೆ ಯಾವ ಪ್ಯಾಕೇಜ್ ಕೂಡ ಘೋಷಿಸಿಲ್ಲ. ಆರ್ಥಿಕತೆ ಚೇತರಿಕೆಗೆ ಜನರ ಕೈಗೆ ದುಡ್ಡು ಸಿಗುವಂತಾಗಬೇಕು. ಜನರ ಕೈಗೆ ನೇರವಾಗಿ ಹಣ ಸಿಗುವಂತಾಗಬೇಕೆಂದು ಬರ್ಕಲೇ ಸಂಸ್ಥೆ ಸಲಹೆ ಮಾಡಿದೆ.  MSME ಕೈಗಾರಿಕೆಗಳ ಪುನಃಶ್ಚೇತನಕ್ಕೆ ಪ್ಯಾಕೇಜ್ ಘೋಷಣೆ ಅತ್ಯಗತ್ಯವಾಗಿದೆ ಎಂದು ಆರ್ಥಿಕ ತಜ್ಞರು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಸರ್ಕಾರ ಹೆಚ್ಚು ಹಣ ಖರ್ಚು ಮಾಡಿದರೆ ಆರ್ಥಿಕತೆ ಚೇತರಿಕೆಯ ಹಾದಿಯಲ್ಲಿ ಸಾಗಲಿದೆ.

3ನೇ ಅಲೆ ಬಂದರಂತೂ…  ಆರ್ಥಿಕ ನಷ್ಟ ಅಧಿಕಸ್ಯ ಅಧಿಕ:

ಈ ಮಧ್ಯೆ, ಬರ್ಕಲೇ ಸಂಸ್ಥೆ (Barclays) ಭಾರತದ ಜಿಡಿಪಿ ( GDP) ಅಂಕಿಅಂಶಗಳನ್ನು ಅಧ್ಯಯನ ಮಾಡಿದೆ. ಕೊವಿಡ್​ ಎರಡನೆಯ ಅಲೆಯಿಂದಾಗಿ 2021-22 ಆರ್ಥಿಕ ವರ್ಷದಲ್ಲಿ ಜಿಡಿಪಿ ಬೆಳವಣಿಗೆ ಪ್ರಮಾಣವನ್ನು ಶೇ. 0.8 ರಷ್ಟು ಕುಗ್ಗಿಸಿದ್ದು ಶೇ. 9.2 ಪ್ರಮಾಣದಲ್ಲಿ ಆರ್ಥಿಕ ಪ್ರಗತಿ ದಾಖಲಿಸಬಹುದು ಎಂದಿದೆ.

ಆದರೆ ಕೊವಿಡ್​ ಮೂರನೆಯ ಅಲೆ ಬಂದರಂತೂ ಆರ್ಥಿಕತೆ ಹೆಚ್ಚು ಹೆಚ್ಚು ನಷ್ಟ ಅನುಭವಿಸಲಿದೆ. ಕೊರೊನಾ ಮೂರನೆಯ ಅಲೆ ಕನಿಷ್ಠ 8 ವಾರ ಕಾಲ ಕಾಡುತ್ತದೆ ಎಂತಾದರೂ ಆರ್ಥಿಕ ನಷ್ಟ ಇನ್ನೂ 3.1 ಲಕ್ಷ ಕೋಟಿ ರೂಪಾಯಿ (Rs.3.1 trillion) ಅಧಿಕಗೊಳ್ಳಲಿದೆ. ಆಗ ಸಹಜವಾಗಿಯೇ ಭಾರತದ ಜಿಡಿಪಿ ಶೇ. 7.7 ಕ್ಕೆ ಕುಸಿಯಲಿದೆ ಎಂದು Barclays ಅಂದಾಜಿಸಿದೆ.

(Barclays forecast says 5.4 lakh crore rupees loss in india due to second round lockdowns )

ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿರುವ ಕೊಡಗು ಪ್ರವಾಸಿ ತಾಣ; ಪ್ರವಾಸೋದ್ಯಮಕ್ಕೆ 2 ಕೋಟಿ ರೂಪಾಯಿ ನಷ್ಟ

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು