Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿರುವ ಕೊಡಗು ಪ್ರವಾಸಿ ತಾಣ; ಪ್ರವಾಸೋದ್ಯಮಕ್ಕೆ 2 ಕೋಟಿ ರೂಪಾಯಿ ನಷ್ಟ

ಮಳೆಗಾಲದ ಬಳಿಕ ಪ್ರವಾಸೋದ್ಯಮ ಚೇತರಿಕೆಗೆ ಏನಾದರು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲು, ಸದ್ಯ ಪರಿಸರ ಇಲಾಖೆ ಯೋಚಿಸುತ್ತಿದೆ ಎಂದು ಕೊಡಗು ಎಸಿ ಈಶ್ವರ್ ಕಂಡೂ ತಿಳಿಸಿದ್ದಾರೆ.

ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿರುವ ಕೊಡಗು ಪ್ರವಾಸಿ ತಾಣ;  ಪ್ರವಾಸೋದ್ಯಮಕ್ಕೆ 2 ಕೋಟಿ ರೂಪಾಯಿ ನಷ್ಟ
ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿರುವ ಕೊಡಗು ಪ್ರವಾಸಿ ತಾಣ
Follow us
TV9 Web
| Updated By: preethi shettigar

Updated on: Jun 02, 2021 | 12:30 PM

ಕೊಡಗು: ಕೊರೊನಾ ಹರಡುವಿಕೆ ಪ್ರಕ್ರಿಯೆ ಆರಂಭವಾದ ದಿನದಿಂದಲೂ ದೇಶದಲ್ಲಿ ಒಂದಿಲ್ಲಾ ಒಂದು ಸಮಸ್ಯೆ ಎದುರಾಗುತ್ತಲೇ ಇದೆ. ಜನರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆರ್ಥಿಕವಾಗಿ ಕೂಡ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಿರುವಾಗಲೇ ಮತ್ತೆ ಈ ಬಾರಿ ಕೊರೊನಾ ಎರಡನೇ ಅಲೆ ಕಾಣಿಸಿಕೊಂಡಿದ್ದು, ವಾಣಿಜ್ಯ, ಕೈಗಾರಿಕೆ, ಕೃಷಿ ಹೀಗೆ ನಾನಾ ಕ್ಷೇತ್ರಕ್ಕೆ ತೊಂದರೆ ಎದುರಾಗಿದೆ. ಅದರಂತೆ ಕೊರೊನಾದಿಂದಾಗಿ ಕೊಡಗು ಜಿಲ್ಲೆಯ ಪ್ರವಾಸೋದ್ಯಮ ಸಂಪೂರ್ಣ ನೆಲಕಚ್ಚಿದ್ದು, ನಷ್ಟ ಅನುಭವಿಸುವಂತಾಗಿದೆ.

ಯಾವುದೇ ಜಿಲ್ಲೆ ಅಥವಾ ಹೊರ ರಾಜ್ಯದ ಮಂದಿಗೆ ನೇಚರ್ ಟೂರ್ ಅಂದಾಕ್ಷಣ ಮೊದಲು ಮನಸ್ಸಿಗೆ ಬರುವುದು ದಕ್ಷಿಣದ ಕಾಶ್ಮೀರ ಕೊಡಗು ಜಿಲ್ಲೆ. ಹಾಗಾಗಿಯೇ ಕಳೆದ ಎರಡು ದಶಕಗಳಲ್ಲಿ ಈ ಜಿಲ್ಲೆ ದೇಶದ ಅಗ್ರಗಣ್ಯ ಟೂರಿಸ್ಟ್​ ಸ್ಥಳವಾಗಿದೆ. ಆದರೆ ಕಳೆದ ಮೂರು ವರ್ಷಗಳಿಂದ ಈ ಜಿಲ್ಲೆಯ ಪ್ರವಾಸೋದ್ಯ ಇನ್ನಿಲ್ಲದಂತೆ ತತ್ತರಿಸಿ ಹೋಗಿದ್ದು, ಪ್ರವಾಹ, ಭೂ ಕುಸಿತದಿಂದ ಕಂಗೆಟ್ಟ ಕೊಡಗಿನ ಪ್ರವಾಸೋದ್ಯಮಕ್ಕೆ ಸದ್ಯ ಕೊರೊನಾದಿಂದ ಅತಂಕ ಎದುರಾಗಿದೆ.

ಸಾಮಾನ್ಯವಾಗಿ ಮಾರ್ಚ್​, ಏಪ್ರಿಲ್, ಮೇ ತಿಂಗಳು ಪ್ರವಾಸೋದ್ಯಮಕ್ಕೆ ಪ್ರಶಸ್ತವಾದ ಸಮಯ. ಆದರೆ ಇದೇ ಸಮಯದಲ್ಲಿ ಟೂರಿಸಂ ಸೆಂಟರ್​ಗಳು ಬಾಗಿಲು ಹಾಕಿಕೊಂಡು ಕುಳಿತಿವೆ. ಇದರಿಂದಾಗಿ ಜಿಲ್ಲೆಗೆ ಪ್ರತಿನಿತ್ಯ ಎರಡರಿಂದ ಎರಡೂವರೆ ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಮಳೆಗಾಲದ ಬಳಿಕ ಪ್ರವಾಸೋದ್ಯಮ ಚೇತರಿಕೆಗೆ ಏನಾದರು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲು, ಸದ್ಯ ಪರಿಸರ ಇಲಾಖೆ ಯೋಚಿಸುತ್ತಿದೆ ಎಂದು ಕೊಡಗು ಎಸಿ ಈಶ್ವರ್ ಕಂಡೂ ತಿಳಿಸಿದ್ದಾರೆ.

ಇದೇ ಪ್ರವಾಸೋದ್ಯಮವನ್ನು ನೆಚ್ಚಿಕೊಂಡಿದ್ದ ಹೋಟೆಲ್ ಲಾಕ್​ಡೌನ್ ಆಗಿರುವುದರಿಂದ ಜನರು ಪಾರ್ಸೆಲ್ ತೆಗೆದುಕೊಳ್ಳಲೂ ಹೋಟೆಲ್​ಗಳಿಗೆ ಬರುತ್ತಿಲ್ಲ. ಹಾಗಾಗಿ ಹೋಟೆಲ್​ಗಳು ಬಾಗಿಲು ಹಾಕಿಕೊಂಡಿವೆ. ಇದರಿಂದಾಗಿ ಹೋಟೆಲ್ ಕಾರ್ಮಿಕರಿಗೆ ವೇತನ ನೀಡಲೂ ಆಗದೆ ಮಾಲೀಕರು ಪರಿತಪಿಸುತ್ತಿದ್ದಾರೆ. ಈ ಕಾರ್ಮಿಕರಿಗೂ ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಹೋಟೆಲ್ ಉದ್ಯಮಿ ಜಯಂತ್ ಪೂಜಾರಿ ಒತ್ತಾಯಿಸಿದ್ದಾರೆ.

ಈ ಎಲ್ಲಾ ಸಂಕಷ್ಟಗಳ ಬೆನ್ನಿಗೆ ಇದೀಗ ಹೊಸತೊಂದು ಸಂಕಷ್ಟ ಎದುರಾಗಿದೆ. ಕೊಡಗಿನಲ್ಲಿ ಇನ್ನು ನಾಲ್ಕು ತಿಂಗಳ ಕಾಲ ಭಾರೀ ಮಳೆಗಾಲ. ಈ ಅವಧಿಯಲ್ಲೂ ಪ್ರವಾಸೋದ್ಯಮ ಮತ್ತಷ್ಟು ಕುಂಠಿತವಾಗುತ್ತದೆ. ಅದರ ಬೆನ್ನಿಗೇ ಕೊರೊನಾ ಮೂರನೇ ಅಲೆ ಶುರುವಾಗುವುದರ ಭೀತಿ ಎದುರಾಗಿದೆ.

ಇದನ್ನೂ ಓದಿ:

ಚಿತ್ರದುರ್ಗದ ಪ್ರವಾಸಿ ತಾಣ ಬಂದ್​; ಲಾಕ್​ಡೌನ್​ನಿಂದ ಸಂಕಷ್ಟಕ್ಕೆ ಸಿಲುಕಿದ ಮಾರ್ಗದರ್ಶಿಗಳು

ಸ್ವಯಂ ಲಾಕ್ ಡೌನ್! ಚಾಮುಂಡೇಶ್ವರಿ ದರ್ಶನಕ್ಕೆ ಅವಕಾಶವಿದ್ರೂ ಜನ ಬರ್ತಿಲ್ಲ: ಪ್ರವಾಸಿ ಕೇಂದ್ರಗಳು ಬಿಕೋ ಅನ್ನುತ್ತಿವೆ!