ಚಿತ್ರದುರ್ಗದ ಪ್ರವಾಸಿ ತಾಣ ಬಂದ್​; ಲಾಕ್​ಡೌನ್​ನಿಂದ ಸಂಕಷ್ಟಕ್ಕೆ ಸಿಲುಕಿದ ಮಾರ್ಗದರ್ಶಿಗಳು

ಚಿತ್ರದುರ್ಗದ ಪ್ರವಾಸಿ ತಾಣ ಬಂದ್​; ಲಾಕ್​ಡೌನ್​ನಿಂದ ಸಂಕಷ್ಟಕ್ಕೆ ಸಿಲುಕಿದ ಮಾರ್ಗದರ್ಶಿಗಳು
ಚಿತ್ರದುರ್ಗದ ಪ್ರವಾಸಿ ತಾಣ

ರಾಜ್ಯದಾದ್ಯಂತ ಸುಮಾರು‌ 800 ಜನ ಗೈಡ್ ವೃತ್ತಿ‌ ಮಾಡುತ್ತಿದ್ದಾರೆ. ಅನೇಕರು ಸುಮಾರು 15-20 ವರ್ಷಗಳಿಂದ ಇದೇ ವೃತ್ತಿಯನ್ನೇ ನಂಬಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಆದರೆ,‌ ಲಾಕ್​ಡೌನ್ ನಂತಹ ಸಂದಿಗ್ಧ ಸಮಯದಲ್ಲಿ ಕೈಲಿ ಕೆಲಸವಿಲ್ಲದೆ ಬೇರೆ ಉದ್ಯೋಗವೂ ಮಾಡಲಾಗದೆ ಕಂಗಾಲಾಗಿದ್ದೇವೆ. ಮನೆಗೆ ತರಕಾರಿಯೂ ತರಲಾಗದ ದುಸ್ಥಿತಿ ನಿರ್ಮಾಣ ಆಗಿದೆ ಎಂದು ಗೈಡ್ ಪ್ರಕಾಶ ಸಂಕಟ ತೋಡಿಕೊಳ್ಳುತ್ತಿದ್ದಾರೆ.

preethi shettigar

|

May 28, 2021 | 3:02 PM

ಚಿತ್ರದುರ್ಗ: ಕೊರೊನಾ ಎರಡನೇ ಅಲೆ ತೀವ್ರವಾಗಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರಲು ಸರ್ಕಾರ ಲಾಕ್​ಡೌನ್ ಜಾರಿಗೊಳಿಸಿದೆ. ಆದರೆ ಇದರಿಂದಾಗಿ ದಿನಗೂಲಿಗಾರರು, ವ್ಯಾಪಾರಿಗಳು ಮತ್ತು ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಅದರಂತೆ ಚಿತ್ರದುರ್ಗ ಜಿಲ್ಲೆಯಲ್ಲೂ ಕೂಡ ಆತಂಕ ಶುರುವಾಗಿದ್ದು, ಮುಖ್ಯವಾಗಿ ಇಲ್ಲಿನ ಮಾರ್ಗದರ್ಶಿ​ಗಳು ಕೆಲಸವಿಲ್ಲದೆ ಸಂಕಷ್ಟಕ್ಕೆ ಗುರುಯಾಗಿದ್ದಾರೆ. ಕೋಟೆನಾಡು ಎಂದರೆ ನೆನಪಾಗುವುದೇ ಇಲ್ಲಿನ ಪಾಳೇಗಾರ ಮದಕರಿ ನಾಯಕ, ವೀರವನಿತೆ ಒನಕೆ ಓಬವ್ವ ಮತ್ತು ಇಲ್ಲಿನ ಒಂದಷ್ಟು ಐತಿಹಾಸಿಕ ಸ್ಥಳಗಳು. ಈ ಸ್ಥಳಗಳ ವಿಶೇಷತೆಗಳನ್ನು ಪ್ರವಾಸಿಗರಿಗೆ ಸಾರುವ ಮಾರ್ಗದರ್ಶಿಗಳು ಈಗ ಕೆಲಸ ಇಲ್ಲದೆ ಖಾಲಿ ಕೂರುವಂತಾಗಿದೆ.

ಐತಿಹಾಸಿಕ‌ ಕೋಟೆಯ ಮಾರ್ಗದರ್ಶಿಗಳಾಗಿ ಸುಮಾರು 18 ಜನ ಕಾರ್ಯ ನಿರ್ವಹಿಸುತ್ತಿದ್ದೇವೆ. ಜನರು ನೀಡುವ ಹಣದಿಂದಲೇ ಸುಮಾರು ವರ್ಷಗಳಿಂದ ಬದುಕು ನಡೆಸುತ್ತಿದ್ದೇವೆ. ಆದರೆ, ಕಳೆದ‌‌‌ ಮಾರ್ಚ್ 15ರಿಂದ ಪ್ರವಾಸಿ ತಾಣಗಳು ಬಂದ್ ಆಗಿವೆ. ಹೀಗಾಗಿ, ಕೋಟೆಯ ಮಾರ್ಗದರ್ಶಿಗಳ ಬದುಕು ಅತಂತ್ರವಾಗಿದೆ. ಕಾರ್ಮಿಕರು, ಅಸಂಘಟಿತ ಕಾರ್ಮಿಕರ ಲೆಕ್ಕದಲ್ಲೂ ನಾವಿಲ್ಲ. ಸರ್ಕಾರದಿಂದ ಯಾವುದೇ ನೆರವು ನಮ್ಮ ಪಾಲಿಗೆ ಇಲ್ಲವಾಗಿದೆ ಎಂದು ಮಾರ್ಗದರ್ಶಿ ನಾರಾಯಣ ಅಳಲು ತೋಡಿಕೊಂಡಿದ್ದಾರೆ.

ಇನ್ನು ರಾಜ್ಯದಾದ್ಯಂತ ಸುಮಾರು‌ 800 ಜನ ಗೈಡ್ ವೃತ್ತಿ‌ ಮಾಡುತ್ತಿದ್ದಾರೆ. ಅನೇಕರು ಸುಮಾರು 15-20 ವರ್ಷಗಳಿಂದ ಇದೇ ವೃತ್ತಿಯನ್ನೇ ನಂಬಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಆದರೆ,‌ ಲಾಕ್​ಡೌನ್ ನಂತಹ ಸಂದಿಗ್ಧ ಸಮಯದಲ್ಲಿ ಕೈಲಿ ಕೆಲಸವಿಲ್ಲದೆ ಬೇರೆ ಉದ್ಯೋಗವೂ ಮಾಡಲಾಗದೆ ಕಂಗಾಲಾಗಿದ್ದೇವೆ. ಮನೆಗೆ ತರಕಾರಿಯೂ ತರಲಾಗದ ದುಸ್ಥಿತಿ ನಿರ್ಮಾಣ ಆಗಿದೆ ಎಂದು ಗೈಡ್ ಪ್ರಕಾಶ ಸಂಕಟ ತೋಡಿಕೊಳ್ಳುತ್ತಿದ್ದಾರೆ.

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದಲ್ಲಿ ಲಾಕ್​ಡೌನ್​ನಿಂದಾಗಿ ಮಾರ್ಗದರ್ಶಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ,‌ ಸರ್ಕಾರ ಈ ಬಗ್ಗೆ ಗಮನಹರಿಸಿ ಸೂಕ್ತ ಪರಿಹಾರ ನೀಡಬೇಕಿದೆ.

ಇದನ್ನೂ ಓದಿ:

ದೆಹಲಿಯಲ್ಲಿ ಇನ್ನು ಮೂರೇ ದಿನ ಲಾಕ್​ಡೌನ್ , ಅಲ್ಲೀಗ ಕೊರೊನಾ ಪರಿಸ್ಥಿತಿ ಹೇಗಿದೆ? ಸಿಎಂ ಅರವಿಂದ ಕೇಜ್ರಿವಾಲ್ ಹೇಳೋದೇನು?

ಕೊರೊನಾ ಆತಂಕದ ನಡುವೆಯೂ ವ್ಯಾಪಾರಕ್ಕೆ ಅವಕಾಶ; ಕೋಲಾರದ ವಿಶ್ವ ಪ್ರಸಿದ್ಧ ಮಾವಿನ ಮಾರುಕಟ್ಟೆ ಆರಂಭ

Follow us on

Related Stories

Most Read Stories

Click on your DTH Provider to Add TV9 Kannada