VIDEO: ಅಪೀಲ್ ಮಾಡುವ ಮುನ್ನವೇ ಔಟ್ ನೀಡಿದ ಅಂಪೈರ್
IPL 2025 MI vs PBKS: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 203 ರನ್ ಕಲೆಹಾಕಿತು. ಈ ಕಠಿಣ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ಪರ ಶ್ರೇಯಸ್ ಅಯ್ಯರ್ ಅಜೇಯ 87 ರನ್ ಬಾರಿಸಿದರು. ಈ ಮೂಲಕ 19 ಓವರ್ಗಳಲ್ಲಿ ತಂಡವನ್ನು ಗುರಿ ತಲುಪಿಸಿದರು.
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಅಂಪೈರ್ ನೀಡಿದ ತರಾತುರಿಯ ತೀರ್ಪು ಇದೀಗ ಚರ್ಚೆಗೆ ಗ್ರಾಸವಾಗಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 203 ರನ್ ಕಲೆಹಾಕಿತು.
ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಇದಾಗ್ಯೂ 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಜೋಶ್ ಇಂಗ್ಲಿಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. 20 ಎಸೆತಗಳನ್ನು ಎದುರಿಸಿದ್ದ ಇಂಗ್ಲಿಸ್ 2 ಭರ್ಜರಿ ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 38 ರನ್ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದರು.
ಆದರೆ ಹಾರ್ದಿಕ್ ಪಾಂಡ್ಯ ಎಸೆದ 8ನೇ ಓವರ್ನ 5ನೇ ಎಸೆತದಲ್ಲಿ ಚೆಂಡು ಜೋಶ್ ಇಂಗ್ಲಿಸ್ ಬ್ಯಾಟ್ ಸವರಿ ವಿಕೆಟ್ ಕೀಪರ್ ಕೈ ಸೇರಿತು. ಇತ್ತ ವಿಕೆಟ್ ಕೀಪರ್ ಜಾನಿ ಬೈರ್ಸ್ಟೋವ್ ಹಾಗೂ ಹಾರ್ದಿಕ್ ಪಾಂಡ್ಯ ಚೆಂಡು ಬ್ಯಾಟ್ಗೆ ತಾಗಿದೆಯಾ ಎಂಬುದರ ಬಗ್ಗೆ ಗೊಂದಲದಲ್ಲಿದ್ದರು.
ಅತ್ತ ಚೆಂಡು ಹಿಡಿದ ಬೈರ್ಸ್ಟೋವ್ ಅಪೀಲ್ ಮಾಡ್ಬೇಕಾ ಎಂದು ಸಹ ಆಟಗಾರನತ್ತ ತಿರುಗುತ್ತಿದ್ದಂತೆ, ಇತ್ತ ಅಂಪೈರ್ ನಿತಿನ್ ಮೆನನ್ ಔಟ್ ನೀಡಿಯಾಗಿತ್ತು. ಅಂದರೆ ಮುಂಬೈ ಇಂಡಿಯನ್ಸ್ ಆಟಗಾರರು ಸರಿಯಾಗಿ ಅಪೀಲ್ ಮಾಡದಿದ್ದರೂ, ಅಂಪೈರ್ ಔಟ್ ನೀಡಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.
ಇದಾಗ್ಯೂ ಈ ತೀರ್ಪಿನ ವಿರುದ್ಧ ಜೋಶ್ ಇಂಗ್ಲಿಸ್ ಡಿಆರ್ಎಸ್ ತೆಗೆದುಕೊಂಡಿದ್ದರು. ಆದರೆ ರಿಪ್ಲೇ ಪರಿಶೀಲನೆ ವೇಳೆ ಚೆಂಡು ಬ್ಯಾಟ್ಗೆ ತಾಗಿರುವುದು ಸ್ಪಷ್ಟವಾಗಿತ್ತು. ಆದರೆ ಪರಿಪೂರ್ಣವಾದ ಮನವಿ ಸಲ್ಲಿಸದಿದ್ದರೂ ನಿತಿಕ್ ಮೆನನ್ ಔಟ್ ಎಂದು ತೀರ್ಪು ನೀಡಿರುವ ಬಗ್ಗೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 203 ರನ್ ಕಲೆಹಾಕಿತು. ಈ ಕಠಿಣ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ಪರ ಶ್ರೇಯಸ್ ಅಯ್ಯರ್ ಅಜೇಯ 87 ರನ್ ಬಾರಿಸಿದರು. ಈ ಮೂಲಕ 19 ಓವರ್ಗಳಲ್ಲಿ ತಂಡವನ್ನು ಗುರಿ ತಲುಪಿಸಿದರು.

ಸಂಜು ಬಸಯ್ಯ ಪತ್ನಿಗೆ ಯುವಕನಿಂದ ಅಶ್ಲೀಲ ಸಂದೇಶ; ಬುದ್ಧಿ ಕಲಿಸಿದ ನಟ

ಆಲ್ಕೋಹಾಲ್ ಬಾಟಲಿ ಕದಿಯಲು ಹೋಗಿ ಕಿಟಕಿ ಸರಳಲ್ಲಿ ತಲೆ ಸಿಲುಕಿಸಿಕೊಂಡ ಕುಡುಕ

ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ

ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
