IPL 2025 Prize Money: ನಾಳೆ ಆರ್ಸಿಬಿ ಗೆದ್ದರೆ ಸಿಗುವ ಹಣ ಎಷ್ಟು ಕೋಟಿ ಗೊತ್ತೇ?: ಇಲ್ಲಿದೆ ನೋಡಿ
RCB vs PBKS, IPL 2025 Final: ಕ್ವಾಲಿಫೈಯರ್-1 ರಲ್ಲಿ ಆರ್‌ಸಿಬಿ ತಂಡ ಪಂಜಾಬ್ ತಂಡವನ್ನು ಸೋಲಿಸಿ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆದ ಪರಿಣಾಮ ಶ್ರೇಯಸ್ ಅಯ್ಯರ್ ಪಡೆ ಸೇಡು ತೀರಿಸಿಕೊಳ್ಳುವತ್ತ ಗಮನ ಹರಿಸಿದೆ. ಐಪಿಎಲ್ 2025 ಫೈನಲ್‌ನಲ್ಲಿ ಗೆದ್ದ ತಂಡಕ್ಕೆ ಬಹುಮಾನವಾಗಿ ಬರೋಬ್ಬರಿ 20 ಲಕ್ಷ ರೂಪಾಯಿ ಸಿಗುತ್ತದೆ. ಅಂದರೆ ನಾಳೆ ಆರ್ಸಿಬಿ ಗೆದ್ದರೆ ಐಪಿಎಲ್ ನಿಯಮಗಳ ಪ್ರಕಾರ 20 ಕೋಟಿ ರೂ. ಸಿಗಲಿದೆ.

ಬೆಂಗಳೂರು (ಜೂ. 02): ಇಂಡಿಯನ್ ಪ್ರೀಮಿಯರ್ ಲೀಗ್ 2025 (Indian Premier League) ಟೂರ್ನಿ ಈಗ ಅಂತಿಮ ಹಂತಕ್ಕೆ ತಲುಪಿದೆ. ಪಂದ್ಯಾವಳಿಯಲ್ಲಿ ಕೊನೆಯದಾಗಿ ಎರಡು ತಂಡಗಳು ಉಳಿದುಕೊಂಡಿವೆ. ಜೂನ್ 3 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವೆ ಹೈವೋಲ್ಟೇಜ್ ಫೈನಲ್ ಪಂದ್ಯ ನಡೆಯಲಿದೆ. ಕ್ವಾಲಿಫೈಯರ್-1 ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸುವ ಮೂಲಕ ಆರ್‌ಸಿಬಿ ಫೈನಲ್‌ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿತ್ತು. ಇದರ ನಂತರ, ಎಲಿಮಿನೇಟರ್‌ನಲ್ಲಿ ಗುಜರಾತ್ ಟೈಟಾನ್ಸ್ ಅನ್ನು ಸೋಲಿಸಿ ಮುಂಬೈ ಕ್ವಾಲಿಫೈಯರ್ -2 ತಲುಪಿತು. ಇಲ್ಲಿ ಪಂಜಾಬ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ ಸೋಲನ್ನು ಎದುರಿಸಬೇಕಾಯಿತು. ಅವರು ಪಂಜಾಬ್ ವಿರುದ್ಧ ಸೋತರು. ಈಗ ಆರ್‌ಸಿಬಿ ಮತ್ತು ಪಂಜಾಬ್ ಎರಡೂ ತಂಡಗಳು ಚೊಚ್ಚಲ ಪ್ರಶಸ್ತಿ ಗೆಲ್ಲಲು ಹೋರಾಡಲಿದೆ.
ಕ್ವಾಲಿಫೈಯರ್-1 ರಲ್ಲಿ ಆರ್‌ಸಿಬಿ ತಂಡ ಪಂಜಾಬ್ ತಂಡವನ್ನು ಸೋಲಿಸಿ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆದ ಪರಿಣಾಮ ಶ್ರೇಯಸ್ ಅಯ್ಯರ್ ಪಡೆ ಸೇಡು ತೀರಿಸಿಕೊಳ್ಳುವತ್ತ ಗಮನ ಹರಿಸಿದೆ. ಐಪಿಎಲ್ 2025 ಫೈನಲ್‌ನಲ್ಲಿ ಗೆದ್ದ ತಂಡಕ್ಕೆ ಬಹುಮಾನವಾಗಿ ಬರೋಬ್ಬರಿ 20 ಲಕ್ಷ ರೂಪಾಯಿ ಸಿಗುತ್ತದೆ. ಅಂದರೆ ನಾಳೆ ಆರ್ಸಿಬಿ ಗೆದ್ದರೆ ಐಪಿಎಲ್ ನಿಯಮಗಳ ಪ್ರಕಾರ 20 ಕೋಟಿ ರೂ. ಸಿಗಲಿದೆ. ರನ್ನರ್ ಅಪ್ ತಂಡಕ್ಕೆ 13 ಕೋಟಿ ರೂ. ಸಿಗುತ್ತದೆ. ಈ ವರ್ಷದ ಒಟ್ಟು ಬಹುಮಾನದ ಮೊತ್ತ 46.5 ಕೋಟಿ ರೂ.ಗಳಾಗಿದ್ದು, ಇದನ್ನು ಪಂದ್ಯಾವಳಿಯ ನಾಲ್ಕು ಅಗ್ರ-4 ತಂಡಗಳಿಗೆ ವಿತರಿಸಲಾಗುವುದು.
ಕಳೆದ ವರ್ಷ ಮೂರನೇ ಸ್ಥಾನ ಪಡೆದ ತಂಡಕ್ಕೆ 7 ಕೋಟಿ ರೂ. ಸಿಕ್ಕಿತ್ತು. ಈ ಬಾರಿ ಮುಂಬೈ ಇಂಡಿಯನ್ಸ್ ತಂಡವು ಮೂರನೇ ಸ್ಥಾನದೊಂದಿಗೆ ಋತುವನ್ನು ಮುಗಿಸಿದೆ. ಹೀಗಿರುವಾಗ ಹಾರ್ದಿಕ್ ಪಡೆಯ ಅದ್ಭುತ ಆಟಕ್ಕೆ 7 ಕೋಟಿ ರೂ. ಬಹುಮಾನ ನೀಡಲಾಗುತ್ತದೆ.
Shreyas Iyer: ಮುಂಬೈ ಕೈಯಲ್ಲಿದ್ದ ಪಂದ್ಯವನ್ನು 3 ಎಸೆತಗಳಲ್ಲಿ ತಮ್ಮತ್ತ ತಿರುಗಿಸಿದ ಶ್ರೇಯಸ್ ಅಯ್ಯರ್: ವಿಡಿಯೋ ನೋಡಿ
ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ವಿಜೇತರಿಗೂ ದೊಡ್ಡ ಮೊತ್ತ
ಇವುಗಳಲ್ಲದೆ, ವಿವಿಧ ವೈಯಕ್ತಿಕ ಪ್ರಶಸ್ತಿಗಳನ್ನು ಸಹ ನೀಡಲಾಗುತ್ತದೆ. ಋತುವಿನಲ್ಲಿ ಹೆಚ್ಚು ರನ್ ಗಳಿಸುವ ಆಟಗಾರನಿಗೆ ಆರೆಂಜ್ ಕ್ಯಾಪ್ ಸಿಗುತ್ತದೆ. ಇದಲ್ಲದೆ 10 ಲಕ್ಷ ರೂ. ಗಳನ್ನು ಸಹ ನೀಡಲಾಗುತ್ತದೆ. ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗೆ ಪರ್ಪಲ್ ಕ್ಯಾಪ್ ನೀಡಲಾಗುತ್ತದೆ. ಆ ಬೌಲರ್‌ಗೂ 10 ಲಕ್ಷ ರೂ. ಸಿಗುತ್ತದೆ. ಈ ಎರಡು ಪ್ರಶಸ್ತಿಗಳಲ್ಲದೆ, ಇನ್ನೂ ಅನೇಕ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
ಐಪಿಎಲ್ 2025: ವೈಯಕ್ತಿಕ ಪ್ರಶಸ್ತಿಗಳು ಮತ್ತು ಮೊತ್ತ
- ಆರೆಂಜ್ ಕ್ಯಾಪ್ – 10 ಲಕ್ಷ ರೂ.
- ಪರ್ಪಲ್ ಕ್ಯಾಪ್ – 10 ಲಕ್ಷ ರೂ.
- ಋತುವಿನ ಉದಯೋನ್ಮುಖ ಆಟಗಾರ – 20 ಲಕ್ಷ ರೂ.
- ಋತುವಿನ ಅತ್ಯಂತ ಮೌಲ್ಯಯುತ ಆಟಗಾರ – 10 ಲಕ್ಷ ರೂ.
- ಋತುವಿನ ಸೂಪರ್ ಸ್ಟ್ರೈಕರ್ – 10 ಲಕ್ಷ ರೂ.
- ಪವರ್ ಪ್ಲೇಯರ್ ಆಫ್ ದಿ ಸೀಸನ್ – 10 ಲಕ್ಷ ರೂ.
- ಒಂದು ಋತುವಿನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳು – 10 ಲಕ್ಷ ರೂ.
- ಗೇಮ್ ಚೇಂಜರ್ ಆಫ್ ದಿ ಸೀಸನ್ – 10 ಲಕ್ಷ ರೂ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




