AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CricCaster ಮೊದಲ ಸೀಸನ್: ವಿಜೇತರ ಹೆಸರನ್ನು ಘೋಷಿಸಿದ Nexa-ESPNcricinfo

ESPNcricinfo ಮತ್ತು Nexa ಸಹಯೋಗದ CricCaster ಸ್ಪರ್ಧೆಯ ವಿಜೇತ ನಕುಲ್ ಶರ್ಮಾ. 700ಕ್ಕೂ ಹೆಚ್ಚು ನಮೂದುಗಳಿಂದ ಆಯ್ಕೆಯಾದ ನಾಲ್ವರ ಅಂತಿಮ ಸ್ಪರ್ಧಿಗಳ ಪೈಕಿ ನಕುಲ್ ಅವರು ತಮ್ಮ ಕ್ರಿಕೆಟ್ ಜ್ಞಾನ, ಪ್ರಸ್ತುತಿ ಕೌಶಲ್ಯದಿಂದ ಜಯ ಗಳಿಸಿದರು. ಮಾಯಂತಿ ಲ್ಯಾಂಗರ್, ಜತಿನ್ ಸಪ್ರು ಮತ್ತು ರೌನಕ್ ಕಪೂರ್ ಅವರ ತೀರ್ಪಿನ ಸಮಿತಿಯ ಮೆಚ್ಚುಗೆ ಗಳಿಸಿದ ನಕುಲ್ ಶರ್ಮಾ IPL 2025ರ ಅಂತಿಮ ಹಂತದಲ್ಲಿ ESPNcricinfo ನ ಲೈವ್ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

CricCaster ಮೊದಲ ಸೀಸನ್: ವಿಜೇತರ ಹೆಸರನ್ನು ಘೋಷಿಸಿದ Nexa-ESPNcricinfo
ESPNcricinfo Nexa CricCaster
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jun 02, 2025 | 1:14 PM

Share

ಮುಂಬೈ, ಜೂನ್ 2: ಕಾಯುವಿಕೆ ಮುಗಿದಿದೆ. ಕ್ರಿಯೇಟಿವ್ ಅಸೈನ್​​ಮೆಂಟ್, ಆಡುವಾಗಿನ ಸವಾಲುಗಳು, ಸ್ಟುಡಿಯೊ ಟ್ರಯಲ್​​ಗಳು ಹೀಗೆ ಹಲವಾರು ವಾರಗಳ ಕಾಲ ನಡೆದ ಕಠಿಣ ಪ್ರಕ್ರಿಯೆಯ ನಂತರ ‘ESPNcricinfo CricCaster’ ಉಪಕ್ರಮದ ವಿಜೇತರನ್ನು ಘೋಷಿಸಲಾಗಿದೆ. Nexa ಮತ್ತು ESPNcricinfo ಸಂಸ್ಥೆಗಳ ಸಹಭಾಗಿತ್ವದಲ್ಲಿ ಇದು CricCaster ಉಪಕ್ರಮದ ಆರಂಭಿಕ ಸೀಸನ್ ಆಗಿದೆ. ಸ್ಟುಡಿಯೋದಲ್ಲಿ ಕ್ಯಾಮೆರಾ ಮುಂದೆ ಮಾತನಾಡಲು ಬಯಸುವ ಕ್ರಿಕೆಟ್ ಅಭಿಮಾನಿಗಳಿಗೆ ಅವಕಾಶ ನೀಡುವಂತಹ ಉಪಕ್ರಮ ಇದಾಗಿದೆ. ಈ ಆರಂಭಿಕ ಸೀಸನ್​​ನ ಈ ಉಪಕ್ರಮದಲ್ಲಿ ಈ ಅದೃಷ್ಟವಂತರ ಹೆಸರನ್ನು ESPNcricinfo ಪ್ರಕಟಿಸಿದೆ.

ಚಾಂಪಿಯನ್ಸ್ ಟ್ರೋಫಿ 2025 ರ ಸಮಯದಲ್ಲಿ ಈ ಅಭಿಯಾನ ಆರಂಭವಾಗಿತ್ತು. ಕ್ರಿಕೆಟ್ ಜೊತೆ ತಮ್ಮ ಸಂಬಂಧ ಹೇಗಿದೆ ಎಂದು ವರ್ಣಿಸಿ ಒಂದು ನಿಮಿಷದ ವಿಡಿಯೋ ರೆಕಾರ್ಡ್ ಮಾಡಿ ಕಳುಹಿಸುವಂತೆ ಕ್ರಿಕೆಟ್ ಅಭಿಮಾನಿಗಳಿಗೆ ಆಹ್ವಾನ ಕೊಡಲಾಯಿತು. ಇದಕ್ಕೆ ಬಹಳ ಅದ್ಭುತ ಸ್ಪಂದನೆ ಸಿಕ್ಕಿತು. ಸೋಷಿಯಲ್ ಪ್ಲಾಟ್​​ಫಾರ್ಮ್​​ಗಳಲ್ಲಿ 700ಕ್ಕೂ ಹೆಚ್ಚು ಮಂದಿ ವಿಡಿಯೋ ಕಳುಹಿಸಿದರು.

ಈ ಅಗಾಧ ಪ್ರಮಾಣದ ಸಲ್ಲಿಕೆಗಳನ್ನು ಬಹಳ ಸೂಕ್ಷ್ಮವಾಗಿ ಪರಿಶೀಲಿಸಲಾಯಿತು. ಸ್ವಂತಿಕೆ ಇರುವ, ಕ್ರೀಡೆಯ ಬಗ್ಗೆ ಜ್ಞಾನ ಇರುವ 30 ವ್ಯಕ್ತಿಗಳನ್ನು ಶಾರ್ಟ್​​ಲಿಸ್ಟ್ ಮಾಡಲಾಯಿತು. ಈ 30 ಮಂದಿಗೆ ಮೂರು ಸರಣಿ ಕಾರ್ಯಗಳನ್ನು ನೀಡಲಾಯಿತು. ಕ್ರಿಕೆಟ್ ಬಗ್ಗೆ ಅವರಿಗೆ ಇರುವ ಅರಿವು, ಆಟವನ್ನು ವಿಶ್ಲೇಷಣಾತ್ಮಕವಾಗಿ ಅವಲೋಕಿಸುವ ಜಾಣ್ಮೆ, ಹಾಗು ದೊಡ್ಡ ಪ್ರಮಾಣದ ವೀಕ್ಷಕರಿಗೆ ಅರ್ಥವಾಗುವ ರೀತಿಯಲ್ಲಿ ಪ್ರಸ್ತುತಪಡಿಸುವ ಕಲೆ, ಇವುಗಳನ್ನು ಸ್ಪರ್ಧಿಗಳಿಗೆ ಒರೆಹಚ್ಚುವುದು ಈ ಪರೀಕ್ಷೆಯ ಉದ್ದೇಶವಾಗಿತ್ತು.

ಕ್ರಿಕೆಟ್ ನಿರೂಪಕರಾದ ಮಯಂತಿ ಲ್ಯಾಂಗರ್, ಜತಿನ್ ಸಪ್ರು ಮತ್ತು ರೌನಕ್ ಕಪೂರ್ ಅವರನ್ನು ಒಳಗೊಂಡ ತಜ್ಞರ ಸಮಿತಿಯು ಸ್ಪರ್ಧಿಗಳನ್ನು ಅವಲೋಕಿಸಿತು. ಅಂತಿಮವಾಗಿ ನಾಲ್ವರು ಸ್ಪರ್ಧಿಗಳನ್ನು ಗುರುತಿಸಿತು:

  • ಪಾಲಕ್ ಶರ್ಮಾ (ದೆಹಲಿ)
  • ಅಶ್ವಿನ್ ಮೆನನ್ (ಮುಂಬೈ)
  • ಧ್ರುವ್ ಶುಕ್ಲಾ (ಮುಂಬೈ)
  • ನಕುಲ್ ಶರ್ಮಾ (ಫರಿದಾಬಾದ್)
ESPNcricinfo Names Winner of Inaugural CricCaster Powered by Nexa

ನಾಲ್ವರು ಫಿನಾಲೆ ಸ್ಪರ್ಧಿಗಳು

ಈ ನಾಲ್ವರು ಫಿನಾಲೆ ಸ್ಪರ್ಧಿಗಳನ್ನು ಮುಂದಿನ ಸುತ್ತಿನಲ್ಲಿ ಮತ್ತಷ್ಟು ಕಠಿಣತಮ ಪರೀಕ್ಷೆಗಳಿಗೆ ಒಡ್ಡಲಾಯಿತು. ಐದು ವಿಭಿನ್ನ ಸವಾಲುಗಳನ್ನು ನೀಡಲಾಯಿತು. ಇದರಲ್ಲಿ ಸ್ಟೋರಿ ಟೆಲ್ಲಿಂಗ್ (ನಿರೂಪಣೆ), ಅಭಿಮಾನಿಗಳೊಂದಿಗೆ ಸಂವಾದ, ಕ್ರಿಕೆಟ್ ಸೆಲಬ್ರಿಟಿಯೊಬ್ಬರೊಂದಿಗೆ ಸೆಗ್ಮೆಂಟ್ ಹೀಗೆ ಬೇರೆ ಬೇರೆ ಟ್ಯಾಸ್ಕ್​​ಗಳನ್ನು ನೀಡಲಾಯಿತು. ಅಂತಿಮವಾಗಿ ಅವರನ್ನು ESPNcricinfo ಸ್ಟುಡಿಯೋಗೆ ಕರೆಸಿ, ಮಾಜಿ ಕ್ರಿಕೆಟಿಗರೊಬ್ಬರ ಜೊತೆ ನೈಜ ವಾತಾವರಣದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡಲಾಯಿತು.

ಪ್ರಾಯೋಜಕರಾದ Nexa ಈ ಅಭಿಯಾನದ ಪ್ರಮುಖ ಭಾಗವಾಗಿದೆ. ಜೊತೆಗೆ Maruti Suzuki Fronx ಈ ಸ್ಪರ್ಧೆಯ ಪ್ರಮುಖ ಹಂತದಲ್ಲಿ ಫೈನಲಿಸ್ಟ್​​​ಗಳ ಪ್ರಯಾಣದಲ್ಲಿ ಜೊತೆಯಾಗಿತ್ತು. ಈ ಸ್ಪರ್ಧಿಗಳ ಪ್ರಯಾಣ ಆಧಾರಿತ ಕಂಟೆಂಟ್​​ಗಳಲ್ಲಿ ಈ ಕಾರು ವಿಶೇಷವಾಗಿ ಕಂಡಿತ್ತು. ಸ್ಪರ್ಧಿಗಳಿಗೆ ಆರಾಮದಾಯಕ ಪ್ರಯಾಣ, ಸ್ಟೈಲ್ ಇತ್ಯಾದಿಗಳಿಗೆ ಈ ವಾಹನ ಪೂರಕವಾಗಿತ್ತು.

ಈ ಎಲ್ಲಾ ನಾಲ್ವರು ಫೈನಲಿಸ್ಟ್​​ಗಳ ಪ್ರಯಾಣವನ್ನು ಇಎಸ್​​ಪಿಎನ್ ಕ್ರಿಕ್​​ಇನ್ಫೋದ ಡಿಜಿಟಲ್ ಇಕೋಸಿಸ್ಟಂನಲ್ಲಿ ಹೈಲೈಟ್ ಮಾಡಲಾಯಿತು. ಅದರ ಪ್ರಖ್ಯಾತ ಲೈವ್ ಶೋ ಆದ TimeOut ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರಿಂದ ಹಿಡಿದು, ಸೋಷಿಯಲ್ ಮೀಡಿಯಾ ಪ್ಲಾಟ್​​ಫಾರ್ಮ್​​ಗಳಲ್ಲಿ ಕಾಣಿಸಿಕೊಳ್ಳುವವರೆಗೂ ಈ ನಾಲ್ವರಿಗೆ ಭರ್ಜರಿ ಪ್ರಚಾರ ಸಿಕ್ಕಿತು. ಈ ಯುವ ಸ್ಪರ್ಧಿಗಳ ಬೆಳವಣಿಗೆ ಕಂಡು, ಅವರಿಗೆ ಬೆಂಬಲ ನೀಡಲು ಕ್ರಿಕೆಟ್ ಫ್ಯಾನ್ಸ್​​ಗೂ ಅವಕಾಶ ಸಿಕ್ಕಂತಾಯಿತು.

ನಕುಲ್ ಶರ್ಮಾ ವಿಜೇತ

ಬಹಳ ಕಠಿಣತಮ ಆಯ್ಕೆ ಪ್ರಕ್ರಿಯೆ ಬಳಿಕ ನಕುಲ್ ಶರ್ಮಾ ಅವರನ್ನು ವಿಜೇತರನ್ನಾಗಿ ಆಯ್ಕೆ ಮಾಡಲಾಯಿತು. 2025ರ ಐಪಿಎಲ್​ನ ಫೈನಲ್ ಪಂದ್ಯ ಇರುವ ಜೂನ್ 3ರಂದು ESPNcricinfo ಲೈವ್ ಶೋನಲ್ಲಿ ನಕುಲ್ ಶರ್ಮಾ ಅವರು ಮೊದಲ ಬಾರಿ ಕಾಣಿಸಿಕೊಳ್ಳಲಿದ್ದಾರೆ.

21 ವರ್ಷದ ನಕುಲ್ ಶರ್ಮಾ ಫರೀದಾಬಾದ್​ನವರು. ಕಮ್ಯೂನಿಕೇಶನ್ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ತಾಳವಾದ್ಯ ನುಡಿಸಬಲ್ಲವರು, ವೇದಿಕೆ ನಿರೂಪಕರೂ ಆಗಿದ್ದಾರೆ. ರಂಗಭೂಮಿ, ರೇಡಿಯೋ ಮತ್ತು ಲೈವ್ ಇವೆಂಟ್​​​​ಗಳ ಹಿನ್ನೆಲೆ ಇರುವವರು ಅವರು.

ESPNcricinfo Names Winner of Inaugural CricCaster Powered by Nexa

ನಕುಲ್ ಶರ್ಮಾ, ವಿಜೇತ

ಮಾಯಂತಿ ಲ್ಯಾಂಗರ್ ಹೇಳಿದ್ದಿದು:

“ಸ್ಟುಡಿಯೋ ಪರಿಸರವು ಭಯಭೀತಗೊಳಿಸುವಂಥದ್ದಾಗಿರಬಹುದು. ಅದು ಹೀಗೇ ಇರುತ್ತೆ ಎಂದು ಅಂದಾಜಿಸುವುದಕ್ಕೂ ಆಗಲ್ಲ. ಪ್ರತಿಯೊಬ್ಬ ಫೈನಲ್ ಸ್ಪರ್ಧಾಳುಗಳು ಈ ಒತ್ತಡವನ್ನು ನಿರ್ವಹಿಸಿದ ರೀತಿ ನಿಜಕ್ಕೂ ಪ್ರಶಂಸಾರ್ಹ. ನಕುಲ್ ತಮ್ಮ ಸಹಜ ಪ್ರವೃತ್ತಿ, ಸ್ಪಷ್ಟ ವಿಚಾರ, ಆಟದ ಬಗ್ಗೆ ಒಳ್ಳೆಯ ಅರಿವು ಹಾಗೂ ತಮ್ಮ ಸ್ವಂತಿಕೆ ಮೂಲಕ ಎದ್ದು ಕಂಡರು.”

ಜತಿನ್ ಸಪ್ರು ಹೇಳಿಕೆ ಇದು:

“ಫಿನಾಲೆಯ ನಾಲ್ವರೂ ಸ್ಪರ್ಧಿಗಳು ಪ್ರತಿಯೊಂದು ಹಂತದಲ್ಲೂ ಬೆಳವಣಿಗೆ ಹೊಂದುವುದನ್ನು ನೋಡುವುದೇ ಒಂದು ಖುಷಿ ಎನಿಸಿತ್ತು. ನನ್ನ ಆರಂಭಿಕ ಪ್ರಯಾಣದ ಸಿಹಿ ನೆನಪು ಮರುಕಳುಸಿದಂತಾಗಿತ್ತು. ನಕುಲ್ ಅವರ ಆತ್ಮವಿಶ್ವಾಸ, ಆಟದ ಜ್ಞಾನ, ಪ್ರಾಮಾಣಿಕತೆ ಬಹಳ ಇಷ್ಟವಾಯಿತು.”

ರೌನಕ್ ಕಪೂರ್ ಹೇಳಿದ್ದು:

“ಎಲ್ಲಾ ನಾಲ್ವರು ಸ್ಪರ್ಧಿಗಳ ಮೂಲಕ ವಿಶೇಷ ವ್ಯಕ್ತಿತ್ವ ಮತ್ತು ತಾಜಾ ಪ್ರತಿಭೆ ಗೋಚರಿಸಿದವು. ನಕುಲ್ ಅವರಂತೂ ತಮ್ಮ ಸ್ವಂತಿಕೆ ಮೂಲಕ ಇಡೀ ಅಭಿಯಾನದಲ್ಲಿ ನಮ್ಮನ್ನು ಆವರಿಸಿದರು. ಒಬ್ಬ ವೀಕ್ಷಕರಾಗಿ ನಾವು ಅವರನ್ನು ನೋಡುವುದೇ ಒಂದು ಅದ್ಭುತ.”

ESPNcricinfo ನ ಪ್ರಧಾನ ಸಂಪಾದಕ ಸಂಬಿತ್ ಬಾಲ್ ಹೇಳಿಕೆ

“CricCaster ಅನ್ನು ಅಭಿಮಾನಿ ಬಳಗದಲ್ಲಿರುವ ಪ್ರತಿಭೆ ಮತ್ತು ಆಸಕ್ತಿಯನ್ನು ಹೆಕ್ಕುವ ಪ್ರಯತ್ನವಾಗಿ ನಿರ್ಮಿತವಾಗಿರುವ ಒಂದು ಪ್ರಯೋಗ. ಇಲ್ಲಿ ವಿಜೇತರನ್ನು ಶೋಧಿಸುವುದಕ್ಕಿಂತ ಹೆಚ್ಚಾಗಿ, ಕ್ರಿಕೆಟ್ ಮಾಧ್ಯಮ ಲೋಕಕ್ಕೆ ಹೊಸ ಮುಖಗಳನ್ನು ಪಡೆಯುವುದು, ಅವರಿಗೆ ಒಂದು ವೇದಿಕೆ ಕಲ್ಪಿಸುವುದು, ಬೆಂಬಲ ನೀಡುವುದು ಮುಖ್ಯ ಎನಿಸಿತ್ತು. ನಕುಲ್ ಅಗ್ರ ಸ್ಥಾನ ಪಡೆದರಾದರೂ ಪಲಕ್, ಅಶ್ವಿನ್ ಮತ್ತು ಧ್ರುವ್ ಅವರು ತಮ್ಮದೇ ರೀತಿಯಲ್ಲಿ ವಿಜೇತರೆನಿಸಿಕೊಂಡಿದ್ದಾರೆ.”

Nexa ಪ್ರಾಯೋಜಿತ CricCaster ಮೂಲಕ ESPNcricinfo ಸಂಸ್ಥೆ ಪ್ರೇಕ್ಷಕರನ್ನು ಹೆಚ್ಚಿ ಹಿಡಿದಿಡುಕೊಳ್ಳುವತ್ತ ಗಮನ ಹರಿಸುತ್ತದೆ. ಇಲ್ಲಿ ಪ್ರೇಕ್ಷಕರು ಸಕ್ರಿಯವಾಗಿ ಪಾಲ್ಗೊಂಡು ಕ್ರಿಕೆಟ್ ಕಂಟೆಂಟ್​​​ನ ಭವಿಷ್ಯನ್ನು ರೂಪಿಸುವ ಅವಕಾಶ ನೀಡಲಾಗುತ್ತಿದೆ.

ಐಪಿಎಲ್ 2025 ಬಗೆಗಿನ ಸಂವಾದದಲ್ಲಿ ನಕುಲ್ ಶರ್ಮಾ ಪಾಲ್ಗೊಳ್ಳುವುದನ್ನು ನೀವು ನೋಡಬೇಕೆಂದರೆ ಜೂನ್ 3, ಮಂಗಳವಾ ಸಂಜೆ 6:30ರಿಂದ ESPNcricinfo ಟೈಮ್ ಔಟ್ ಲೈವ್ ಶೋ ವೀಕ್ಷಿಸಿ.

ESPNcricinfo ಬಗ್ಗೆ

ESPNcricinfo ಕ್ರಿಕೆಟ್ ಕಂಟೆಂಟ್ ನೀಡುವ ವಿಶ್ವದ ಪ್ರಮುಖ ಡಿಜಿಟಲ್ ಪ್ಲಾಟ್​​ಫಾರ್ಮ್ ಆಗಿದೆ. ಇಲ್ಲಿ ವಿವಿಧ ಮಾದರಿಯ ಆಟಗಳನ್ನು ಸಮರ್ಪಕವಾಗಿ ಪ್ರಸ್ತುತಪಡಿಸುತ್ತದೆ. ಇದರಲ್ಲಿ ಅಗ್ರಮಾನ್ಯ ಕ್ರಿಕೆಟ್ ಪರಿಣಿತರಿಂದ ಬಹಳ ಆಳವಾದ ವಿಶ್ಲೇಷಣೆ, ರಿಯಲ್ ಟೈಮ್ ಸ್ಕೋರ್, ಬ್ರೇಕಿಂಗ್ ನ್ಯೂಸ್, ವಿಶೇಷವಾದ ಒಳನೋಟಗಳನ್ನು ನೀಡುತ್ತದೆ. 1993ರಲ್ಲಿ ಆರಂಭಗೊಂಡಾಗಿನಿಂದಲೂ ESPNcricinfo ಜಾಗತಿಕವಾಗಿ ಕ್ರಿಕೆಟ್ ಅಭಿಮಾನಿಗಳ ವಿಶ್ವಾಸಾರ್ಹತೆ ಸಂಪಾದಿಸಿದೆ. ತನ್ನ ವೆಬ್​​ಸೈಟ್, ಮೊಬೈಲ್ ಆ್ಯಪ್ ಮತ್ತು ಸೋಷಿಯಲ್ ಮೀಡಿಯಾ ಚಾನಲ್​​​ಗಳ ಮೂಲಕ ಮಲ್ಟಿ ಪ್ಲಾಟ್​​ಫಾರ್ಮ್ ಅನುಭವ ತಂದುಕೊಡುತ್ತದೆ. ಇದರೊಂದಿಗೆ, ಕ್ರಿಕೆಟ್ ಅಭಿಮಾನಿಗಳು ಎಲ್ಲಿಯೇ ಇರಲಿ ಯಾವುದೇ ಸಮಯದಲ್ಲೂ ಆಟವನ್ನು ಫಾಲೋ ಮಾಡಲು ಸಾಧ್ಯವಾಗಿಸುತ್ತದೆ. ಇಎಸ್​​ಪಿಎಲ್ ನೆಟ್ವರ್ಕ್​​ನ ಭಾಗವಾಗಿರುವ ESPNcricinfo ಕ್ರಿಕೆಟ್ ಜರ್ನಲಿಸಂ, ಸ್ಟೋರಿ ಟೆಲ್ಲಿಂಗ್ ಮತ್ತು ಫ್ಯಾನ್ ಎಂಗೇಜ್ಮೆಂಟ್​​​ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸುವುದನ್ನು ಮುಂದುವರಿಸಿದೆ.

Published On - 12:00 pm, Mon, 2 June 25

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ